Skip to content
ThuthiThuthiThuthi
2 Chronicles · chapter 5 of 36 · 14 verses

2 Chronicles 5 in Kannada

2 ಪೂರ್ವಕಾಲವೃತ್ತಾಂತ 5

  1. ಹೀಗೆ ಸೊಲೊಮೋನನು ಕರ್ತನ ಆಲಯಕ್ಕೊಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಸಿ ತನ್ನ ತಂದೆಯಾದ ದಾವೀದನು ಪ್ರತಿಷ್ಠೆ ಮಾಡಿದ್ದ ಬೆಳ್ಳಿಬಂಗಾರವನ್ನೂ ಎಲ್ಲಾ ಸಾಮಾನು ಗಳನ್ನೂ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.

    Thus all the work that Solomon made for the house of the LORD was finished: and Solomon brought in [all] the things that David his father had dedicated; and the silver, and the gold, and all the instruments, put he among the treasures of the house of God.

  2. ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಸೊಲೊಮೋನನು ಇಸ್ರಾಯೇಲಿನ ಮಕ್ಕಳ ಲ್ಲಿರುವ ಪ್ರಭುಗಳಾದ ತಂದೆಗಳಾಗಿರುವ ಇಸ್ರಾಯೇ ಲಿನ ಹಿರಿಯರನ್ನೂ ಗೋತ್ರಗಳ ಯಜಮಾನರನ್ನೂ ಯೆರೂಸಲೇಮಿಗೆ ಕೂಡಿ ಬರಮಾಡಿದನು.

    Then Solomon assembled the elders of Israel, and all the heads of the tribes, the chief of the fathers of the children of Israel, unto Jerusalem, to bring up the ark of the covenant of the LORD out of the city of David, which [is] Zion.

  3. ಆದ ದರಿಂದ ಏಳನೇ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಮನುಷ್ಯರೆಲ್ಲರೂ ಅರಸನ ಬಳಿಗೆ ಬಂದು ಕೂಡಿದರು.

    Wherefore all the men of Israel assembled themselves unto the king in the feast which [was] in the seventh month.

  4. ಇಸ್ರಾಯೇಲಿನ ಹಿರಿಯರೆಲ್ಲರು ಬಂದಾಗ ಲೇವಿ ಯರು ಮಂಜೂಷವನ್ನು ಎತ್ತಿಕೊಂಡರು.

    And all the elders of Israel came; and the Levites took up the ark.

  5. ಒಡಂಬಡಿ ಕೆಯ ಮಂಜೂಷವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಪಾತ್ರೆಗಳನ್ನೂ ತಂದರು; ಇವುಗಳನ್ನು ಯಾಜಕರೂ ಲೇವಿಯರೂ ತಂದರು.

    And they brought up the ark, and the tabernacle of the congregation, and all the holy vessels that [were] in the tabernacle, these did the priests [and] the Levites bring up.

  6. ಆಗ ಅರಸನಾದ ಸೊಲೊಮೋನನೂ ತನ್ನ ಬಳಿಯಲ್ಲಿ ಮಂಜೂಷದ ಮುಂದೆ ಕೂಡಿಕೊಂಡ ಇಸ್ರಾಯೇಲ್‌ ಸಭೆಯವರೆಲ್ಲರೂ ಲೆಕ್ಕಿಸಲಾಗದ ಕುರಿ ಗಳನ್ನೂ ದನಗಳನ್ನೂ ಬಲಿಯಾಗಿ ಅರ್ಪಿಸಿದರು.

    Also king Solomon, and all the congregation of Israel that were assembled unto him before the ark, sacrificed sheep and oxen, which could not be told nor numbered for multitude.

  7. ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಅತಿಪರಿಶುದ್ಧ ಸ್ಥಳಕ್ಕೆ ಆಲಯದ ದೈವೋಕ್ತಿ ಸ್ಥಾನಕ್ಕೆ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳಕ್ಕೆ ತಂದುಬಿಟ್ಟರು.

    And the priests brought in the ark of the covenant of the LORD unto his place, to the oracle of the house, into the most holy [place, even] under the wings of the cherubims:

  8. ಕೆರೂಬಿಗಳು ಮಂಜೂ ಷದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿ ದ್ದವು; ಹೀಗೆಯೇ ಕೆರೂಬಿಗಳು ಮಂಜೂಷವನ್ನೂ ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿ ದ್ದವು.

    For the cherubims spread forth [their] wings over the place of the ark, and the cherubims covered the ark and the staves thereof above.

  9. ಆಗ ಕೋಲುಗಳ ಕೊನೆಗಳು ದೈವೋಕ್ತಿಯ ಮುಂದೆ ಮಂಜೂಷದಿಂದ ಕಾಣಲ್ಪಡುವ ಹಾಗೆ ಕೋಲುಗಳನ್ನು ಎಳಕೊಂಡರು. ಆದರೆ ಅವು ಹೊರಗೆ ಕಾಣಲ್ಪಡಲಿಲ್ಲ. ಅದು ಅಲ್ಲಿ ಇಂದಿನ ವರೆಗೂ ಇರು ತ್ತದೆ.

    And they drew out the staves [of the ark], that the ends of the staves were seen from the ark before the oracle; but they were not seen without. And there it is unto this day.

  10. ಇಸ್ರಾಯೇಲ್‌ ಮಕ್ಕಳು ಐಗುಪ್ತದೇಶದಿಂದ ಬಂದ ನಂತರ ಕರ್ತನು ಅವರ ಸಂಗಡ ಒಡಂಬಡಿಕೆ ಯನ್ನು ಮಾಡಿದಾಗ ಮೋಶೆಯು ಹೋರೇಬಿನ ಬಳಿ ಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.

    [There was] nothing in the ark save the two tables which Moses put [therein] at Horeb, when the LORD made [a covenant] with the children of Israel, when they came out of Egypt.

  11. ಇದಲ್ಲದೆ ಅಲ್ಲಿ ಇದ್ದ ಸಮಸ್ತ ಯಾಜಕರು ಪರಿಶುದ್ಧ ವಾಗಿದ್ದು ಸರದಿಗಳ ಪ್ರಕಾರ ಕಾಯದೆ ಇದ್ದದರಿಂದ

    And it came to pass, when the priests were come out of the holy [place:] (for all the priests [that were] present were sanctified, [and] did not [then] wait by course:

  12. ಯಾಜಕರು ಪರಿಶುದ್ಧ ಸ್ಥಳದಿಂದ ಹೊರ ಟಾಗ ಸಂಗೀತಗಾರರಾಗಿರುವ ಲೇವಿಯರೂ ಆಸಾಫ್‌, ಹೇಮಾನ್‌, ಯೆದೂತೂನ್‌ ಇವರೆಲ್ಲರೂ ಅವರ ಮಕ್ಕಳೂ ಸಹೋದರರೂ ನಾರು ಮಡಿಯನ್ನು ಧರಿಸಿ ಕೊಂಡು ತಾಳ ವೀಣೆ ಕಿನ್ನರಿಗಳನ್ನು ಹಿಡಿದು ಬಲಿ ಪೀಠದ ಮೂಡಣ ಪಾರ್ಶ್ವದಲ್ಲಿ ನಿಂತುಕೊಂಡರು; ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಇದ್ದರು.

    Also the Levites [which were] the singers, all of them of Asaph, of Heman, of Jeduthun, with their sons and their brethren, [being] arrayed in white linen, having cymbals and psalteries and harps, stood at the east end of the altar, and with them an hundred and twenty priests sounding with trumpets:)

  13. ತುತೂರಿ ಊದುವವರೂ ಸಂಗೀತಗಾರರೂ ಕರ್ತನನ್ನು ಕೊಂಡಾ ಡುತ್ತಾ ಹೊಗಳುತ್ತಾ ಏಕವಾಗಿ ಒಂದೇ ಶಬ್ದ ಮಾಡಿ ದಾಗ ತುತೂರಿ ತಾಳ ಮೊದಲಾದ ಗೀತ ವಾದ್ಯಗಳಿಂದ ತಮ್ಮ ಶಬ್ದವನ್ನೆತ್ತಿ--ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇರುವದೆಂದೂ ಕರ್ತನನ್ನು ಕೀರ್ತಿಸುವಾಗ ಕರ್ತನ ಆಲಯವು ಮೇಘದಿಂದ ತುಂಬಲ್ಪಟ್ಟಿತು.ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು.

    It came even to pass, as the trumpeters and singers [were] as one, to make one sound to be heard in praising and thanking the LORD; and when they lifted up [their] voice with the trumpets and cymbals and instruments of musick, and praised the LORD, [saying], For [he is] good; for his mercy [endureth] for ever: that [then] the house was filled with a cloud, [even] the house of the LORD;

  14. ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು.

    So that the priests could not stand to minister by reason of the cloud: for the glory of the LORD had filled the house of God.

All chapters of 2 Chronicles · Kannada Bible · 2 Chronicles 5 in Tamil

Kannada Bible: Kannada Old Version, public domain.

King James Version: public domain.