Skip to content
ThuthiThuthiThuthi
3 John · chapter 1 of 1 · 14 verses

3 John 1 in Kannada

3 ಯೋಹಾನನು 1

  1. ಹಿರಿಯನಾದ ಸತ್ಯದಲ್ಲಿ ಬಹಳವಾಗಿ ಪ್ರೀತಿಸುವ ಗಾಯನಿಗೆ--

    The elder unto the wellbeloved Gaius, whom I love in the truth.

  2. ಪ್ರಿಯನೇ, ನಿನ್ನ ಆತ್ಮವು ಅಭಿವೃದಿ ಹೊಂದಿರುವ ಪ್ರಕಾರವೇ ಎಲ್ಲಾ ವಿಷಯಗಳಿಗಿಂತ ನೀನು ಸ್ವಸ್ಥನಾಗಿದ್ದು ಕ್ಷೇಮಹೊಂದಿ ಅಭಿವೃದ್ಧಿಯಾಗ ಬೇಕೆಂದು ನಾನು ಅಪೇಕ್ಷಿಸುತ್ತೇನೆ.

    Beloved, I wish above all things that thou mayest prosper and be in health, even as thy soul prospereth.

  3. ಸಹೋದರರು ಬಂದಾಗ ನಿನ್ನಲ್ಲಿರುವ ಸತ್ಯವನ್ನು ಸಾಕ್ಷೀಕರಿಸಿದ್ದರಿಂದ ನಾನು ಬಹಳವಾಗಿ ಸಂತೋಷಪಟ್ಟೆನು.

    For I rejoiced greatly, when the brethren came and testified of the truth that is in thee, even as thou walkest in the truth.

  4. ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವ ದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.

    I have no greater joy than to hear that my children walk in truth.

  5. ಪ್ರಿಯನೇ, ಸಹೋದರರಿಗೂ ಪರಿಚಯವಿಲ್ಲದವ ರಿಗೂ ನೀನು ಮಾಡುವದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ.

    Beloved, thou doest faithfully whatsoever thou doest to the brethren, and to strangers;

  6. ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು. ಅವರನ್ನು ನೀನು ಭಕ್ತಿಪೂರ್ವಕವಾಗಿ ಸಾಗ ಕಳುಹಿಸಿದರೆ ನೀನು ಒಳ್ಳೇದು ಮಾಡುತ್ತೀ.

    Which have borne witness of thy charity before the church: whom if thou bring forward on their journey after a godly sort, thou shalt do well:

  7. ಯಾಕಂದರೆ ಅವರು ಆತನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ; ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ.

    Because that for his name’s sake they went forth, taking nothing of the Gentiles.

  8. ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.

    We therefore ought to receive such, that we might be fellowhelpers to the truth.

  9. ಸಭೆಗೆ ನಾನು ಬರೆದಿದ್ದೆನು; ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮನ್ನು ಅಂಗೀಕರಿಸುವದಿಲ್ಲ.

    I wrote unto the church: but Diotrephes, who loveth to have the preeminence among them, receiveth us not.

  10. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳನ್ನು ಜ್ಞಾಪಕ ಮಾಡುವೆನು. ಅವನು ಹರಟೆ ಕೊಚ್ಚುವವನಾಗಿ ನಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ. ಇವೂ ಸಾಲದೆ ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿ ರುವವರಿಗೆ ಅಡ್ಡಿ ಮಾಡುತ್ತಾ ತಾನೂ ಅವರನ್ನು ಸೇರಿಸಿಕೊಳ್ಳ

    Wherefore, if I come, I will remember his deeds which he doeth, prating against us with malicious words: and not content therewith, neither doth he himself receive the brethren, and forbiddeth them that would, and casteth [them] out of the church.

  11. ಪ್ರಿಯನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೇದನ್ನು ಅನುಸರಿಸು; ಒಳ್ಳೇದನ್ನು ಮಾಡುವವನು ದೇವರಿಗೆ ಸಂಬಂಧಪಟ್ಟವನಾಗಿದ್ದಾನೆ, ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.

    Beloved, follow not that which is evil, but that which is good. He that doeth good is of God: but he that doeth evil hath not seen God.

  12. ದೇಮೇತ್ರಿ ಯನು ಎಲ್ಲರಿಂದಲೂ ಸತ್ಯದಿಂದಲೂ ಒಳ್ಳೇ ಸಾಕ್ಷಿ ಹೊಂದಿದ್ದಾನೆ. ಹೌದು, ನಾವು ಸಹ ಸಾಕ್ಷಿ ಹೇಳುವವ ರಾಗಿದ್ದೇವೆ, ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀವು ಬಲ್ಲಿರಿ.

    Demetrius hath good report of all [men], and of the truth itself: yea, and we [also] bear record; and ye know that our record is true.

  13. ನಾನು ಬರೆಯತಕ್ಕ ಅನೇಕ ವಿಷಯಗಳಿದ್ದವು; ಆದರೆ ಮಸಿ ಲೇಖಣಿಗಳಿಂದ ನಿನಗೆ ಬರೆಯುವದಕ್ಕೆ ನನಗಿಷ್ಟವಿಲ್ಲ.ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ; ಆಗ ಮುಖಾಮುಖಿಯಾಗಿ ನಾವು ಮಾತನಾಡುವೆವು. ನಿನಗೆ ಶಾಂತಿ ಇರಲಿ. ನಮ್ಮ ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಸ್ನೇಹಿತರನು ಹೆಸರ್ಹೆಸರಾಗಿ ವಂದಿಸು.

    I had many things to write, but I will not with ink and pen write unto thee:

  14. ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ; ಆಗ ಮುಖಾಮುಖಿಯಾಗಿ ನಾವು ಮಾತನಾಡುವೆವು. ನಿನಗೆ ಶಾಂತಿ ಇರಲಿ. ನಮ್ಮ ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಸ್ನೇಹಿತರನು ಹೆಸರ್ಹೆಸರಾಗಿ ವಂದಿಸು.

    But I trust I shall shortly see thee, and we shall speak face to face. Peace [be] to thee. [Our] friends salute thee. Greet the friends by name.

All chapters of 3 John · Kannada Bible · 3 John 1 in Tamil

Kannada Bible: Kannada Old Version, public domain.

King James Version: public domain.