Skip to content
ThuthiThuthiThuthi
Exodus · chapter 37 of 40 · 29 verses

Exodus 37 in Kannada

ವಿಮೋಚನಕಾಂಡ 37

  1. ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು.

    And Bezaleel made the ark [of] shittim wood: two cubits and a half [was] the length of it, and a cubit and a half the breadth of it, and a cubit and a half the height of it:

  2. ಅದನ್ನು ಚೊಕ್ಕ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ ಅದರ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.

    And he overlaid it with pure gold within and without, and made a crown of gold to it round about.

  3. ಅವನು ಅದರ ನಾಲ್ಕು ಮೂಲೆಗಳಿಗೆ ನಾಲ್ಕು ಉಂಗುರಗಳನ್ನು ಎರಕ ಹೊಯ್ದನು; ಇದಲ್ಲದೆ ಅದರ ಒಂದು ಮಗ್ಗಲಿಗೆ ಎರಡು ಇನ್ನೊಂದು ಮಗ್ಗಲಿಗೆ ಎರಡು ಉಂಗುರಗಳನ್ನು ಎರಕ ಹೊಯ್ದನು.

    And he cast for it four rings of gold, [to be set] by the four corners of it; even two rings upon the one side of it, and two rings upon the other side of it.

  4. ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿ ಸಿದನು.

    And he made staves [of] shittim wood, and overlaid them with gold.

  5. ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು.

    And he put the staves into the rings by the sides of the ark, to bear the ark.

  6. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು.

    And he made the mercy seat [of] pure gold: two cubits and a half [was] the length thereof, and one cubit and a half the breadth thereof.

  7. ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಚಿನ್ನದ ಕೆರೂಬಿಗಳನ್ನು ಮಾಡಿದನು. ಅವು ಒಂದೇ ತುಂಡಿನಲ್ಲಿ ಹೊಡೆದು ಮಾಡಿದ್ದಾಗಿದ್ದವು.

    And he made two cherubims [of] gold, beaten out of one piece made he them, on the two ends of the mercy seat;

  8. ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನು ಇನ್ನೊಂದು ಬದಿಯ ಕೊನೆಯಲ್ಲಿ ಇನ್ನೊಂದು ಕೆರೂಬಿ ಯನ್ನು ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯರನ್ನು ಮಾಡಿದನು.

    One cherub on the end on this side, and another cherub on the [other] end on that side: out of the mercy seat made he the cherubims on the two ends thereof.

  9. ಆ ಕೆರೂಬಿ ಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಹರಡಿಕೊಂಡು ಕರುಣಾಸನವನ್ನು ಮುಚ್ಚಿದಂತಿದ್ದವು, ಆ ಕೆರೂಬಿಯರ ಮುಖಗಳು ಒಂದನ್ನೊಂದು ನೋಡುತ್ತಿರುವಂತೆಯೂ ಕರುಣಾಸನವನ್ನು ನೋಡುತ್ತಿರುವಂತೆಯೂ ಇದ್ದವು.

    And the cherubims spread out [their] wings on high, [and] covered with their wings over the mercy seat, with their faces one to another; [even] to the mercy seatward were the faces of the cherubims.

  10. ಅವನು ಜಾಲೀ ಮರದಿಂದ ಒಂದು ಮೇಜನ್ನು ಮಾಡಿದನು; ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.

    And he made the table [of] shittim wood: two cubits [was] the length thereof, and a cubit the breadth thereof, and a cubit and a half the height thereof:

  11. ಅವನು ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿ ಅದರ ಸುತ್ತಲೂ ಚಿನ್ನದ ಕೀರೀಟವನ್ನು ಮಾಡಿದನು.

    And he overlaid it with pure gold, and made thereunto a crown of gold round about.

  12. ಅವನು ಅದರ ಸುತ್ತಲೂ ಗೇಣಗಲವಾದ ಅಂಚನ್ನು ಮಾಡಿದನು; ಆ ಅಂಚಿನ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.

    Also he made thereunto a border of an handbreadth round about; and made a crown of gold for the border thereof round about.

  13. ಅವನು ಅದಕ್ಕೆ ನಾಲ್ಕು ಚಿನ್ನದ ಉಂಗುರಗಳನ್ನು ಎರಕಹೊಯ್ದು ಆ ಉಂಗುರಗಳನ್ನು ಅದರ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿಟ್ಟನು.

    And he cast for it four rings of gold, and put the rings upon the four corners that [were] in the four feet thereof.

  14. ಮೇಜನ್ನು ಹೊರುವದಕ್ಕೆ ಕೋಲನ್ನು ಸಿಕ್ಕಿಸುವ ಸ್ಥಳಗಳಲ್ಲಿ ಆ ಉಂಗುರಗಳು ಮೇಜಿನ ಅಂಚಿನ ಮೇಲಿದ್ದವು.

    Over against the border were the rings, the places for the staves to bear the table.

  15. ಮೇಜನ್ನು ಹೊರು ವದಕ್ಕೆ ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.

    And he made the staves [of] shittim wood, and overlaid them with gold, to bear the table.

  16. ಅನಂತರ ಅವನು ಮೇಜಿನ ಮೇಲಿರುವ ಪಾತ್ರೆಗಳನ್ನು ಮಾಡಿ ದನು. ಅದರ ಹರಿವಾಣಗಳು, ಅದರ ಚಮಚಗಳು, ಅದರ ಬಟ್ಟಲುಗಳು ಅದೇ ರೀತಿಯಲ್ಲಿ ಅವುಗಳ ಮುಚ್ಚಳಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.

    And he made the vessels which [were] upon the table, his dishes, and his spoons, and his bowls, and his covers to cover withal, [of] pure gold.

  17. ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು.

    And he made the candlestick [of] pure gold: [of] beaten work made he the candlestick; his shaft, and his branch, his bowls, his knops, and his flowers, were of the same:

  18. ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು.

    And six branches going out of the sides thereof; three branches of the candlestick out of the one side thereof, and three branches of the candlestick out of the other side thereof:

  19. ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ; ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು.

    Three bowls made after the fashion of almonds in one branch, a knop and a flower; and three bowls made like almonds in another branch, a knop and a flower: so throughout the six branches going out of the candlestick.

  20. ದೀಪಸ್ತಂಭದಲ್ಲಿ ಗೂಡುಗಳೂ ಹೂವುಗಳೂ ಕೂಡಿದ ಬಾದಾವಿ ಹೂವುಳ್ಳ ನಾಲ್ಕು ಹಣತೆಗಳು.

    And in the candlestick [were] four bowls made like almonds, his knops, and his flowers:

  21. ದೀಪಸ್ತಂಭದೊಳ ಗಿಂದ ಹೊರಗೆ ಬರುವ ಆರು ಕೊಂಬೆಗಳಿಗೆ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗೂಡು.

    And a knop under two branches of the same, and a knop under two branches of the same, and a knop under two branches of the same, according to the six branches going out of it.

  22. ಅದರ ಗೂಡುಗಳೂ ಕೊಂಬೆಗಳೂ ಅದರಿಂದಲೇ ಉಂಟಾಗಿದ್ದವು; ಅದೆಲ್ಲಾ ಚೊಕ್ಕ ಬಂಗಾರದ ಒಂದೇ ಕಲಾಕೃತಿಯಾಗಿತ್ತು.

    Their knops and their branches were of the same: all of it [was] one beaten work [of] pure gold.

  23. ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು.

    And he made his seven lamps, and his snuffers, and his snuffdishes, [of] pure gold.

  24. ಇವೆಲ್ಲವುಗಳನ್ನೂ ಸಮಸ್ತ ಪಾತ್ರೆಗಳನ್ನೂ ಅವನು ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಿದನು.

    [Of] a talent of pure gold made he it, and all the vessels thereof.

  25. ಅವನು ಜಾಲೀ ಮರದಿಂದ ಧೂಪಪೀಠವನ್ನು ಮಾಡಿದನು; ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲವಾಗಿ ಚಚ್ಚೌಕವಾಗಿತ್ತು; ಅದು ಎರಡು ಮೊಳ ಎತ್ತರವಾಗಿತ್ತು. ಅದರ ಕೊಂಬುಗಳು ಸಹ ಜಾಲೀ ಮರದಿಂದಲೇ ಮಾಡಲ್ಪಟ್ಟಿದ್ದವು.

    And he made the incense altar [of] shittim wood: the length of it [was] a cubit, and the breadth of it a cubit; [it was] foursquare; and two cubits [was] the height of it; the horns thereof were of the same.

  26. ಅವನು ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಅದರ ಕೊಂಬುಗಳನ್ನೂ ಚೊಕ್ಕ ಬಂಗಾರದಿಂದ ಹೊದಿಸಿದನು; ಅದರ ಸುತ್ತಲೂ ಬಂಗಾರದ ಕಿರೀಟ ವನ್ನಿಟ್ಟನು.

    And he overlaid it with pure gold, [both] the top of it, and the sides thereof round about, and the horns of it: also he made unto it a crown of gold round about.

  27. ಅದನ್ನು ಹೊರುವದಕ್ಕೆ ಕೋಲುಗಳನ್ನು ಸಿಕ್ಕಿಸುವದಕ್ಕೋಸ್ಕರ ಅದರ ಕಿರೀಟದ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಚಿನ್ನದ ಎರಡು ಉಂಗುರಗಳನ್ನು ಮಾಡಿದನು.

    And he made two rings of gold for it under the crown thereof, by the two corners of it, upon the two sides thereof, to be places for the staves to bear it withal.

  28. ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.

    And he made the staves [of] shittim wood, and overlaid them with gold.

  29. ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.

    And he made the holy anointing oil, and the pure incense of sweet spices, according to the work of the apothecary.

All chapters of Exodus · Kannada Bible · Exodus 37 in Tamil

Kannada Bible: Kannada Old Version, public domain.

King James Version: public domain.