Skip to content
ThuthiThuthiThuthi
Psalms · chapter 150 of 150 · 6 verses

Psalm 150 in Kannada

ಕೀರ್ತನೆಗಳು 150

  1. ನೀವು ಕರ್ತನನ್ನು ಸ್ತುತಿಸಿರಿ. ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ; ಆತನ ಬಲದ ಆಂತರಿಕ್ಷದಲ್ಲಿ ಆತನನ್ನು ಸ್ತುತಿಸಿರಿ.

    Praise ye the LORD. Praise God in his sanctuary: praise him in the firmament of his power.

  2. ಆತನ ಪರಾಕ್ರಮಗಳಿಗೋಸ್ಕರ ಆತನನ್ನು ಸ್ತುತಿಸಿರಿ; ಆತನ ಮಹಾ ಪ್ರಭಾವದ ಪ್ರಕಾರ ಆತನನ್ನು ಸ್ತುತಿಸಿರಿ.

    Praise him for his mighty acts: praise him according to his excellent greatness.

  3. ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ.

    Praise him with the sound of the trumpet: praise him with the psaltery and harp.

  4. ದಮ್ಮಡಿ ಯಿಂದಲೂ ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತ ನನ್ನು ಸ್ತುತಿಸಿರಿ.

    Praise him with the timbrel and dance: praise him with stringed instruments and organs.

  5. ಜಲ್ಲರಿಯ ದೊಡ್ಡ ಶಬ್ದದಿಂದ ಆತನನ್ನು ಸ್ತುತಿಸಿರಿ; ಉತ್ಸಾಹದ ತಾಳಗಳಿಂದ ಆತನನ್ನು ಸ್ತುತಿಸಿರಿ.ಶ್ವಾಸವಿರುವದೆಲ್ಲಾ ಕರ್ತನನ್ನು ಸ್ತುತಿಸಲಿ. ಕರ್ತನನ್ನು ಸ್ತುತಿಸಿರಿ.

    Praise him upon the loud cymbals: praise him upon the high sounding cymbals.

  6. ಶ್ವಾಸವಿರುವದೆಲ್ಲಾ ಕರ್ತನನ್ನು ಸ್ತುತಿಸಲಿ. ಕರ್ತನನ್ನು ಸ್ತುತಿಸಿರಿ.

    Let every thing that hath breath praise the LORD. Praise ye the LORD.

All chapters of Psalms · Kannada Bible · Psalm 150 in Tamil

Kannada Bible: Kannada Old Version, public domain.

King James Version: public domain.