1 Chronicles · chapter 1 · verse 28
1 Chronicles 1:28 in Kannada
ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.
Abrahaamana makkalu -- isaakanu, ishmaayelanu.
1 Chronicles 1:28 in English
- King James Version (KJV)
- The sons of Abraham; Isaac, and Ishmael.
- World English Bible (WEB)
- The sons of Abraham: Isaac and Ishmael.
- American Standard Version (ASV)
- The sons of Abraham: Isaac, and Ishmael.
- Bible in Basic English (BBE)
- The sons of Abraham: Isaac and Ishmael.
- Darby Translation (DBY)
- The sons of Abraham: Isaac and Ishmael.
- Webster's Bible (WBS)
- The sons of Abraham; Isaac, and Ishmael.
- Young's Literal Translation (YLT)
- Sons of Abraham: Isaac and Ishmael.
Read in context
- 26ಸೆರೂಗನು, ನಾಹೋ ರನು, ತೆರಹನು;
- 27ಅಬ್ರಹಾಮನೆಂಬ ಅಬ್ರಾಮನು.
- 28ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.
- 29ಇವರ ವಂಶಾವಳಿ ಏನಂದರೆ--ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತನು, ತರುವಾಯ ಕೇದಾರನು, ಅದ್ಬೆಯೇಲನು, ಮಿಬ್ಸಾಮನು, ಮಿಷ್ಮನು,
- 30ದೂಮನು, ಮಸ್ಸನು, ಹದದನು, ತೇಮನು,
Cross references
- Genesis 16:11–16 ಆದಿಕಾಂಡ 16:11–16ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ. ಅವನು ಕಾಡು ಮನುಷ್ಯನಾಗಿರುವನು; ಎಲ್ಲರಿಗೆ ವಿರೋಧವಾಗಿ ಅವನ ಕೈಯೂ ಅವನಿಗೆ ವಿರೋಧ ವಾಗಿ ಎಲ್ಲರ ಕೈಯೂ ಇರುವದು, ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು ಅಂದನು. ಹಾಗರಳು ತನ್ನ ಸಂಗಡ ಮಾತನಾಡಿದ ಕರ್ತನಿಗೆ--ನೀನು ನನ್ನನ್ನು ನೋಡುವ ದೇವರು ಎಂದು ಹೆಸರಿಟ್ಟಳು. ಯಾಕಂದರೆ ನನ್ನನ್ನು ನೋಡುವಾ ತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಅಂದುಕೊಂಡಳು. ಆದದರಿಂದ ಆ ಬಾವಿಗೆ ಬೆರ್ ಲಹೈರೋಯಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ. ತರು ವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳು ಅಬ್ರಾಮನಿಗೆ ಹೆತ್ತ ಮಗನಿಗೆ ಅವನು ಇಷ್ಮಾಯೇಲ ಎಂದು ಹೆಸರಿಟ್ಟನು.ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು. ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.
- Genesis 21:12 ಆದಿಕಾಂಡ 21:12ಆಗ ದೇವರು ಅಬ್ರಹಾಮನಿಗೆ--ಹುಡುಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗದೆ ಇರಲಿ; ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು; ಯಾಕಂದರೆ ಇಸಾಕನಲ್ಲಿ ನಿನ್ನ ಸಂತತಿಯು ಕರೆಯಲ್ಪ ಡುವದು.
- Genesis 21:9–10 ಆದಿಕಾಂಡ 21:9–10ಇದಲ್ಲದೆ ಐಗುಪ್ತ್ಯ ಳಾದ ಹಾಗರಳು ಅಬ್ರಹಾಮನಿಗೆ ಹೆತ್ತಿದ್ದ ಮಗನು ಹಾಸ್ಯಮಾಡುವದನ್ನು ಸಾರಳು ನೋಡಿ ಅಬ್ರ ಹಾಮನಿಗೆ--ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನ ಸಂಗಡ ಬಾಧ್ಯನಾಗಬಾರದು ಅಂದಳು.
- Genesis 17:19–21 ಆದಿಕಾಂಡ 17:19–21ಅದಕ್ಕೆ ದೇವರು--ನಿಶ್ಚಯ ವಾಗಿ ನಿನ್ನ ಹೆಂಡತಿಯಾದ ಸಾರಳು ನಿನಗೆ ಮಗನನ್ನು ಹೆರುವಳು. ಅವನಿಗೆ ಇಸಾಕನೆಂದು ಹೆಸರಿಡಬೇಕು. ಅವನ ಸಂಗಡಲೂ ತರುವಾಯ ಹುಟ್ಟುವ ಅವನ ಸಂತತಿಯವರ ಸಂಗಡಲೂ ನನ್ನ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುವೆನು. ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ಇಗೋ, ನಾನು ಅವನನ್ನು ಆಶೀರ್ವದಿ ಸಿದೆನು. ಅವನನ್ನು ಅಭಿವೃದ್ಧಿಮಾಡಿ ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು. ಆದರೆ ಬರುವ ವರುಷ ಈ ಕಾಲದಲ್ಲಿ ಸಾರಳು ನಿನಗೆ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು ಎಂದು ಹೇಳಿದನು.
- Genesis 21:2–5 ಆದಿಕಾಂಡ 21:2–5ದೇವರು ಅಬ್ರಹಾಮನಿಗೆ ಮುಂತಿ ಳಿಸಿದ ಹಾಗೆ ಸಾರಳು ಗರ್ಭಿಣಿಯಾಗಿ ಅವನು ಮುದುಕನಾಗಿದ್ದಾಗ ಅವನಿಗೆ ಮಗನನ್ನು ಹೆತ್ತಳು. ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ ಇಸಾಕನೆಂದು ಹೆಸರಿಟ್ಟನು. ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿಮಾಡಿದನು. ಅಬ್ರಹಾಮನ ಮಗನಾದ ಇಸಾಕನು ಅವನಿಗೆ ಹುಟ್ಟಿದಾಗ ಅವನು ನೂರು ವರುಷದವನಾಗಿದ್ದನು.