1 Chronicles · chapter 10 · verse 11
1 Chronicles 10:11 in Kannada
ಯಾಬೇಷ್ ಗಿಲ್ಯಾದಿ ನವರೆಲ್ಲರೂ ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಕೇಳಿದಾಗ
Yaabesh gilyaadi navarellaroo philishtiyaru saulanige maadiddannellaa kelidaaga
1 Chronicles 10:11 in English
- King James Version (KJV)
- And when all Jabesh-gilead heard all that the Philistines had done to Saul,
- World English Bible (WEB)
- When all Jabesh Gilead heard all that the Philistines had done to Saul,
- American Standard Version (ASV)
- And when all Jabesh-gilead heard all that the Philistines had done to Saul,
- Bible in Basic English (BBE)
- And when the news came to Jabesh-gilead of what the Philistines had done to Saul,
- Darby Translation (DBY)
- And when all they of Jabesh-Gilead heard of all that the Philistines had done to Saul,
- Webster's Bible (WBS)
- And when all Jabesh-gilead heard all that the Philistines had done to Saul,
- Young's Literal Translation (YLT)
- And all Jabesh-Gilead hear of all that the Philistines have done to Saul,
Read in context
- 9ಅವರು ಅವನನ್ನು ಸುಲುಕೊಂಡು ಅವನ ತಲೆಯನ್ನೂ ಆಯುಧಗಳನ್ನೂ ಎತ್ತಿಕೊಂಡುಹೋಗಿ ತಮ್ಮ ವಿಗ್ರಹಗಳಿಗೂ ಜನರಿಗೂ ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿ ಸಿದರು.
- 10ಅವನ ಆಯುಧಗಳನ್ನು ತಮ್ಮ ದೇವರುಗಳ ಮನೆಯಲ್ಲಿ ಇಟ್ಟು ಅವರ ತಲೆಯನ್ನು ದಾಗೋನನ ಮನೆಯಲ್ಲಿ ಭದ್ರಪಡಿಸಿದರು.
- 11ಯಾಬೇಷ್ ಗಿಲ್ಯಾದಿ ನವರೆಲ್ಲರೂ ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಕೇಳಿದಾಗ
- 12ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶರೀರವನ್ನೂ ಅವನ ಕುಮಾರರ ಶರೀರಗಳನ್ನು ತಕ್ಕೊಂಡು ಯಾಬೇಷಿಗೆ ತಂದು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಅವರ ಎಲುಬುಗಳನ್ನು ಹೂಣಿಟ್ಟು ಏಳುದಿವಸ ಉಪವಾಸ ಮಾಡಿದರು.
- 13ಹೀಗೆಯೇ ಸೌಲನು ಕರ್ತನಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಕರ್ತನ ವಾಕ್ಯವನ್ನು ಕೈಕೊಳ್ಳದೆ,ಅದಕ್ಕೆ ವಿರೋಧವಾಗಿ ನಡೆದು ಕರ್ತನನ್ನು ವಿಚಾರಿಸದೆ ಯಕ್ಷಿ ಣಿಗಾರರನ್ನು ವಿಚಾರಿಸಲು ಅವರನ್ನು ಹುಡುಕಿದ್ದರಿಂದ ಕರ್ತನು ಅವನನ್ನು ಕೊಂದುಹಾಕಿ ರಾಜ್ಯವನ್ನು ಇಷ ಯನ ಮಗನಾದ ದಾವೀದನ ಕಡೆಗೆ ತಿರುಗಿಸಿದನು.
Cross references
- 2 Samuel 2:4–7 2 ಸಮುವೇಲನು 2:4–7ಆಗ ಯೆಹೂದ ಜನರು ಬಂದು ಅಲ್ಲಿ ದಾವೀದನನ್ನು ಯೆಹೂದನ ಮನೆಯವರ ಮೇಲೆ ಅರಸನನ್ನಾಗಿ ಅಭಿಷೇಕಿಸಿದರು. ಯಾಬೇಷ್ಗಿಲ್ಯಾದಿನವರು ಸೌಲನನ್ನು ಹೂಣಿಟ್ಟ ರೆಂದು ದಾವೀದನಿಗೆ ತಿಳಿಸಿದಾಗ ಅವನು ದೂತರನ್ನು ಕಳುಹಿಸಿ--ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ ಅವನನ್ನು ಹೂಣಿಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ. ಈಗ ಕರ್ತನು ನಿಮಗೆ ದಯೆಯನ್ನೂ ಸತ್ಯವನ್ನೂ ತೋರಿಸಲಿ. ನೀವು ಈ ಕಾರ್ಯವನ್ನು ಮಾಡಿದ್ದರಿಂದ ನಾನು ನಿಮಗೆ ಪ್ರತ್ಯುಪಕಾರ ಮಾಡುವೆನು. ನೀವು ಪರಾ ಕ್ರಮಶಾಲಿಗಳಾಗಿದ್ದು ನಿಮ್ಮ ಕೈಗಳು ಬಲವಾಗಿರಲಿ; ನಿಮ್ಮ ಯಜಮಾನನಾದ ಸೌಲನು ಸತ್ತುಹೋದನು; ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕಮಾಡಿದರು ಅಂದನು.
- 1 Samuel 31:11–13 1 ಸಮುವೇಲನು 31:11–13ಹೀಗೆಯೇಫಿಲಿಷ್ಟಿ ಯರು ಸೌಲನಿಗೆ ಮಾಡಿದ್ದನ್ನು ಯಾಬೇಷಿನ ಗಿಲ್ಯಾದಿ ನವರು ಕೇಳಿದಾಗ ಅವರಲ್ಲಿ ಪರಾಕ್ರಮಶಾಲಿಗಳು ಎದ್ದು ರಾತ್ರಿಯೆಲ್ಲಾ ನಡೆದು ಹೋಗಿ ಬೇತ್ಷೆಯಾನಿನ ಗೋಡೆಗೆ ಜಡಿದಿದ್ದ ಸೌಲನ ಶರೀರವನ್ನೂ ಅವನ ಕುಮಾರರ ಶರೀರಗಳನ್ನೂ ತಕ್ಕೊಂಡು ಯಾಬೇಷಿಗೆ ಬಂದು ಅವುಗಳನ್ನು ಅಲ್ಲಿ ಸುಟ್ಟುಬಿಟ್ಟರು.ಅವರ ಎಲುಬುಗಳನ್ನು ತಕ್ಕೊಂಡು ಅವುಗಳನ್ನು ಯಾಬೇಷಿ ನಲ್ಲಿರುವ ಒಂದು ಮರದ ಕೆಳಗೆ ಹೂಣಿಟ್ಟು ಏಳು ದಿವಸ ಉಪವಾಸಮಾಡಿದರು. ಅವರ ಎಲುಬುಗಳನ್ನು ತಕ್ಕೊಂಡು ಅವುಗಳನ್ನು ಯಾಬೇಷಿ ನಲ್ಲಿರುವ ಒಂದು ಮರದ ಕೆಳಗೆ ಹೂಣಿಟ್ಟು ಏಳು ದಿವಸ ಉಪವಾಸಮಾಡಿದರು.
- 1 Samuel 11:1–11 1 ಸಮುವೇಲನು 11:1–11ಅಮ್ಮೋನಿಯನಾದ ನಾಹಾಷನು ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ವಿರೋಧ ವಾಗಿ ದಂಡು ಇರಿಸಿದನು. ಆಗ ಯಾಬೇಷಿನ ಜನರೆ ಲ್ಲರು ನಾಹಾಷನಿಗೆ--ನೀನು ನಮ್ಮ ಸಂಗಡ ಒಡಂಬ ಡಿಕೆ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು. ಅಮ್ಮೋನ್ಯನಾದ ನಾಹಾಷನು ಅವರಿಗೆ--ಇಸ್ರಾಯೇ ಲ್ಯರನ್ನು ಅವಮಾನ ಪಡಿಸುವದಕ್ಕಾಗಿ ನಿಮ್ಮೆಲ್ಲರ ಬಲ ಕಣ್ಣುಗಳನ್ನು ಕಿತ್ತುಹಾಕಿ ನಿಮ್ಮ ಸಂಗಡ ಒಡಂಬಡಿಕೆ ಮಾಡುತ್ತೇನೆ ಅಂದನು. ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ--ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಗಡುವನ್ನು ಕೊಡು. ನಮ್ಮನ್ನು ರಕ್ಷಿಸು ವವರು ಯಾರೂ ಇಲ್ಲದೆ ಹೋದರೆ ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು ಅಂದರು. ದೂತರು ಸೌಲನು ಇರುವ ಗಿಬೆಯಕ್ಕೆ ಬಂದು ಜನರ ಕಿವಿಗಳಲ್ಲಿ ಆ ಮಾತುಗಳನ್ನು ಹೇಳಿದರು. ಆಗ ಜನರೆಲ್ಲರೂ ಗಟ್ಟಿಯಾಗಿ ಅತ್ತರು. ಇಗೋ; ಸೌಲನು ಪಶುಗಳ ಹಿಂದೆ ಹೊಲದಿಂದ ಬಂದು--ಜನರು ಅಳುವದೇನು ಎಂದು ಕೇಳಿದನು. ಆಗ ಅವನಿಗೆ ಯಾಬೇಷಿನ ಜನರ ಮಾತುಗಳನ್ನು ವಿವರಿಸಿದರು. ಸೌಲನು ಈ ಮಾತು ಗಳನ್ನು ಕೇಳಿದಾಗ ದೇವರ ಆತ್ಮನು ಅವನ ಮೇಲೆ ಬಂದನು; ಅವನು ಬಹು ಕೋಪೋದ್ರೇಕಗೊಂಡವ ನಾಗಿ ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿಸೌಲನ ಹಿಂದೆಯೂ ಸಮುವೇಲನ ಹಿಂದೆಯೂ ಹೊರಡದವನ ಪಶುಗಳಿಗೆ ಈ ಪ್ರಕಾರ ಮಾಡಲ್ಪಡು ವದೆಂದು ಹೇಳಿಸಿದನು. ಆಗ ಕರ್ತನಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ ಅವರು ಒಂದೇ ಮನಸ್ಸಿನಿಂದ ಹಾಗೆಯೇ ಹೊರಟು ಬಂದರು. ಅವನು ಅವರನ್ನು ಬೆಜೆಕಿನಲ್ಲಿ ಎಣಿಸಿದಾಗ ಇಸ್ರಾ ಯೇಲ್ ಮಕ್ಕಳು ಮೂರು ಲಕ್ಷಜನರೂ ಯೆಹೂದ ಮನುಷ್ಯರು ಮೂವತ್ತು ಸಾವಿರ ಜನರೂ ಆಗಿದ್ದರು. ಆಗ ಅವರು ಬಂದ ದೂತರಿಗೆ--ನೀವು ಗಿಲ್ಯಾದಿನ ಲ್ಲಿರುವ ಯಾಬೇಷಿನ ಜನರಿಗೆ--ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವದು ಅಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ ಅವರು ಸಂತೋಷಪಟ್ಟರು. ತರುವಾಯ ಯಾಬೇಷಿನ ಜನರು ನಾಹಾಷನಿಗೆ--ನಾಳೆ ನಿನ್ನ ಬಳಿಗೆ ಹೊರಟು ಬರುವೆವು; ಆಗ ನಿನಗೆ ಒಳ್ಳೇದಾಗಿ ತೋರುವದನ್ನೆಲ್ಲಾ ನಮಗೆ ಮಾಡು ಅಂದರು. ಆದರೆ ಮಾರನೇ ದಿವಸದಲ್ಲಿ ಸೌಲನು ಜನರನ್ನು ಮೂರು ಗುಂಪಾಗಿ ಇರಿಸಿ ಬೆಳಗಿನ ಜಾವ ದಂಡಿನಲ್ಲಿ ಬಂದು ಬಿಸಿಲೇರುವವರೆಗೆ ಅಮ್ಮೋನಿಯ ರನ್ನು ಸಂಹರಿಸಿದನು. ಉಳಿದವರು ಚದರಿಹೋದರು; ಅವರಲ್ಲಿ ಒಬ್ಬರೂ ಕೂಡ ಇರಲಿಲ್ಲ.