1 Chronicles · chapter 11 · verse 1
1 Chronicles 11:1 in Kannada
ಇಸ್ರಾಯೇಲ್ಯರೆಲ್ಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಕೂಡಿಬಂದು ಹೇಳಿ ದ್ದೇನಂದರೆ--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
Israayelyarellaru hebroninallidda daaveedana balige koodibandu heli ddenandare--igo, naavu ninna eluboo ninna maansavoo aagiddeve.
1 Chronicles 11:1 in English
- King James Version (KJV)
- Then all Israel gathered themselves to David unto Hebron, saying, Behold, we [are] thy bone and thy flesh.
- World English Bible (WEB)
- Then all Israel gathered themselves to David to Hebron, saying, “Behold, we are your bone and your flesh.
- American Standard Version (ASV)
- Then all Israel gathered themselves to David unto Hebron, saying, Behold, we are thy bone and thy flesh.
- Bible in Basic English (BBE)
- Then all Israel came together to David at Hebron, and said, Truly, we are your bone and your flesh.
- Darby Translation (DBY)
- And all Israel assembled themselves to David to Hebron, saying, Behold, we are thy bone and thy flesh.
- Webster's Bible (WBS)
- Then all Israel gathered themselves to David to Hebron, saying, Behold, we [are] thy bone and thy flesh.
- Young's Literal Translation (YLT)
- And gathered are all Israel unto David to Hebron, saying, 'Lo, thy bone and thy flesh [are] we;
Read in context
- 1ಇಸ್ರಾಯೇಲ್ಯರೆಲ್ಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಕೂಡಿಬಂದು ಹೇಳಿ ದ್ದೇನಂದರೆ--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
- 2ಇದಲ್ಲದೆ ಪೂರ್ವದಲ್ಲಿ ಸೌಲನು ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವ ನಾಗಿಯೂ ಇದ್ದಿ; ಕರ್ತನಾದ ನಿನ್ನ ದೇವರು ನಿನಗೆ ಹೇಳಿದ್ದು--ನೀನು ನನ್ನ ಜನರಾದ ಇಸ್ರಾಯೇಲ್ಯರನ್ನು ಮೇಯಿಸುವವನಾಗಿಯೂ; ಇಸ್ರಾಯೇಲ್ಯರ ಮೇಲೆ ಅಧಿಕಾರಿಯಾಗಿರುವಿ ಎಂಬದು.
- 3ಹಾಗೆಯೇ ಇಸ್ರಾ ಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದರು; ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು; ಕರ್ತನು ಸಮುವೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
Cross references
- Judges 9:2 ನ್ಯಾಯಸ್ಥಾಪಕರು 9:2ನೀವು ದಯಮಾಡಿ ಶೆಕೆಮಿನ ಜನರೆಲ್ಲರು ಕೇಳುವ ಹಾಗೆ ಮಾತನಾಡ ಬೇಕಾದದ್ದೇನಂದರೆ -- ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವದು ಒಳ್ಳೇದೋ? ಒಬ್ಬನು ಆಳುವದು ಒಳ್ಳೇದೋ? ನಾನು ನಿಮ್ಮ ಎಲುಬೂ ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕ ಮಾಡಿಕೊಳ್ಳಿರಿ ಅಂದನು.
- 2 Samuel 5:1–16 2 ಸಮುವೇಲನು 5:1–16ಇದಾದ ಮೇಲೆ ಇಸ್ರಾಯೇಲ್ ಗೋತ್ರ ಗಳೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ. ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವನಾಗಿಯೂ ಆಗಿದ್ದಿ. ಆದದರಿಂದ ಕರ್ತನು ನಿನಗೆ--ನೀನು ನನ್ನ ಜನರಾದ ಇಸ್ರಾಯೇ ಲನ್ನು ಮೇಯಿಸುವಿ; ಇಸ್ರಾಯೇಲಿನ ಮೇಲೆ ನಾಯಕನಾಗಿರುವಿ ಎಂದು ಹೇಳಿದನು ಅಂದರು. ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರೂ ಹೆಬ್ರೋನಿನಲ್ಲಿರುವ ಅರಸನ ಬಳಿಗೆ ಬಂದಾಗ ಅರಸ ನಾದ ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸ ನಾಗಿರಲು ಅಭಿಷೇಕಮಾಡಿದರು. ದಾವೀದನು ಆಳಲು ಪ್ರಾರಂಭಿಸಿದಾಗ ಮೂವತ್ತು ವರುಷದವ ನಾಗಿದ್ದನು; ಅವನು ನಾಲ್ವತ್ತು ವರುಷ ಆಳಿದನು. ಅವನು ಹೆಬ್ರೋನಿನಲ್ಲಿ ಯೆಹೂದ ಜನರ ಮೇಲೆ ಏಳುವರೆ ವರುಷ ಆಳಿದನು. ಯೆರೂಸಲೇಮಿನಲ್ಲಿ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಎಲ್ಲಾ ಯೆಹೂ ದದ ಜನರ ಮೇಲೆಯೂ ಮೂವತ್ತುಮೂರು ವರುಷ ಆಳಿದನು. ಆಗ ಅರಸನೂ ಅವನ ಜನರೂ ದೇಶದ ನಿವಾಸಿ ಗಳಾದ ಯೆಬೂಸಿಯರು ಒಳಗೆ ಯೆರೂಸಲೇಮಿಗೆ ಬಂದರು. ದಾವೀದನು ಇದರಲ್ಲಿ ಬರಲಾರನೆಂದು ಅವರು ನೆನಸಿ ದಾವೀದನಿಗೆ--ನೀನು ಕುರುಡರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು ನೀನು ಇಲ್ಲಿಗೆ ಬರಲಾರಿ ಅಂದರು. ಆದಾಗ್ಯೂ ದಾವೀದನು ಚೀಯೋನಿನ ಕೋಟೆಯನ್ನು ಹಿಡುಕೊಂಡನು. ಅದೇ ದಾವೀದನ ಪಟ್ಟಣವು. ಆ ದಿವಸದಲ್ಲಿ ದಾವೀದನುಕಂದಕವನ್ನು ದಾಟಿ ಯೆಬೂಸಿಯರನ್ನು ಅಂದರೆ ದಾವೀದನ ಪ್ರಾಣ ದ್ವೇಷಿಗಳಾದ ಕುಂಟರನ್ನೂ ಕುರು ಡರನ್ನೂ ಹೊಡೆಯುವವನು (ಮುಖ್ಯಸ್ಥನೂ ಅಧಿ ಪತಿಯೂ ಆಗಿರುವನು) ಎಂದು ಹೇಳಿದ್ದನು. ಅದಕ್ಕೆ ಅವರು--ಕುರುಡರೂ ಕುಂಟರೂ ಮನೆಯೊಳಗೆ ಬರಕೂಡದು ಅಂದರು. ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು. ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು. ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು. ದಾವೀದನು ತನ್ನನ್ನು ಕರ್ತನು ಇಸ್ರಾಯೇ ಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದನೆಂದೂ ತನ್ನ ಜನವಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದನೆಂದೂ ತಿಳಿದುಕೊಂಡನು. ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ ಯೆರೂಸಲೇಮಿನಿಂದ ಇನ್ನೂ ಕೆಲವು ಮಂದಿ ಉಪಪತ್ನಿಯರನ್ನೂ ಹೆಂಡತಿಯರನ್ನೂ ಮಾಡಿಕೊಂಡನು; ದಾವೀದನಿಗೆ ಇನ್ನೂ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು. ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಯಾವವೆಂದರೆ; ಶಮ್ಮೂವ ಶೊಬಾಬ್ ನಾತಾನ್ ಸೊಲೊಮೋನ್ ಇಬ್ಹಾರ್ ಎಲೀಷೂವ ನೆಫೆಗ್ ಯಾಫೀಯ ಎಲೀಷಾಮ ಎಲ್ಯಾದ ಎಲೀಫೆ ಲೆಟ್ ಇವರೇ.
- 1 Chronicles 12:23–40 1 ಪೂರ್ವಕಾಲವೃತ್ತಾಂತ 12:23–40ಕರ್ತನ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವದಕ್ಕೆ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿ ಕೊಂಡು ಬಂದ ದಂಡುಗಳ ಲೆಕ್ಕವೇನಂದರೆ -- ಖೇಡ್ಯವನ್ನೂ ಭಲ್ಲೆಯನ್ನೂ ಹಿಡುಕೊಂಡು ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು ಆರು ಸಾವಿರದ ಎಂಟುನೂರು ಮಂದಿ. ಯುದ್ಧಕ್ಕೆ ಪರಾ ಕ್ರಮಶಾಲಿಗಳಾದ ಸಿಮೆಯೋನನ ಮಕ್ಕಳಲ್ಲಿ ಏಳು ಸಾವಿರದ ನೂರು ಮಂದಿ. ಲೇವಿಯ ಮಕ್ಕ ಳಲ್ಲಿ ನಾಲ್ಕು ಸಾವಿರದ ಆರುನೂರು ಮಂದಿ. ಆರೋನಿಯರಲ್ಲಿ ಯೆಹೋಯಾದಾವನು ನಾಯ ಕನಾಗಿದ್ದನು; ಅವನ ಸಂಗಡ ಮೂರು ಸಾವಿರದ ಏಳು ನೂರು ಮಂದಿ; ಇದಲ್ಲದೆ ಬಲವುಳ್ಳ ಪರಾ ಕ್ರಮಶಾಲಿಯಾದ ಪ್ರಾಯಸ್ಥನಾಗಿದ್ದ ಚಾದೋಕನೂ ಅವನ ತಂದೆಯ ಮನೆಯಿಂದ ಇಪ್ಪತ್ತೆರಡು ಮಂದಿ ಪ್ರಧಾನರೂ. ಸೌಲನ ಸಹೋದರರಾಗಿರುವ ಬೆನ್ಯಾವಿಾನನ ಮಕ್ಕಳಲ್ಲಿ ಮೂರು ಸಾವಿರಮಂದಿ; ಇಂದಿನ ವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು. ಎಫ್ರಾಯಾಮನ ಮಕ್ಕಳಲ್ಲಿ ಇಪ್ಪತ್ತು ಸಾವಿರದ ಎಂಟುನೂರು ಮಂದಿ; ಬಲವುಳ್ಳ ಪರಾಕ್ರಮಶಾಲಿ ಗಳೂ ತಮ್ಮ ಪಿತೃಗಳ ಮನೆಯಲ್ಲಿ ಹೆಸರುಗೊಂಡ ವರಾಗಿದ್ದರು. ಮನಸ್ಸೆಯ ಅರ್ಧಗೋತ್ರದಲ್ಲಿ ಹದಿ ನೆಂಟು ಸಾವಿರ ಮಂದಿ. ಅವರು ದಾವೀದನನ್ನು ಅರಸನಾಗ ಮಾಡಲು ಬಂದ ಹೆಸರು ಹೆಸರಾಗಿ ಹೇಳಲು ನೇಮಿಸಲ್ಪಟ್ಟವರು. ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲು ಮಾಡತಕ್ಕದ್ದು ಯಾವದೆಂದು ತಿಳಿಯ ತಕ್ಕಂಥ ಕಾಲಗಳ ಪರೀಕ್ಷೆ ತಿಳಿದವರು ಬಂದರು; ಅವರ ಯಜಮಾನರು ಇನ್ನೂರು ಮಂದಿಯಾಗಿದ್ದರು; ಅವರ ಸಹೋದರರೆಲ್ಲರೂ ಇವರ ಆಜ್ಞಾಧೀನರಾ ಗಿದ್ದರು. ಜೆಬುಲೋನನವರಲ್ಲಿ ದೃಢ ಹೃದಯವಿದ್ದು ಸಾಲಾಗಿ ನಡೆಯುವವರೂ ಸಕಲ ಆಯುಧಗಳನ್ನು ಧರಿಸಿಕೊಂಡ ಯುದ್ಧ ನಿಪುಣರೂ ಸೈನ್ಯವಾಗಿ ಹೊರ ಡುವವರೂ ಐವತ್ತು ಸಾವಿರ ಮಂದಿ. ನಫ್ತಾಲಿ ಯವರಲ್ಲಿ ಸಾವಿರ ಮಂದಿ ಪ್ರಧಾನರು; ಅವರ ಸಂಗಡ ಖೇಡ್ಯವನ್ನೂ ಈಟಿಯನ್ನೂ ಧರಿಸಿಕೊಂಡ ಮೂವ ತ್ತೇಳು ಸಾವಿರ ಮಂದಿ. ದಾನನವರಲ್ಲಿ ಯುದ್ಧ ನಿಪುಣರು ಇಪ್ಪತೆಂಟು ಸಾವಿರದ ಆರುನೂರು ಮಂದಿ. ಆಶೇರನವರಲ್ಲಿ ಯುದ್ಧಕ್ಕೆ ಹೋಗಬಲ್ಲ ನಿಪುಣರು, ಸೈನ್ಯವಾಗಿ ಹೋಗುವವರು ನಾಲ್ವತ್ತು ಸಾವಿರ ಮಂದಿ. ಯೊರ್ದನಿನ ಆಚೆಯಲ್ಲಿರುವ ರೂಬೇನ್ಯರಲ್ಲಿಯೂ ಗಾದನವರಲ್ಲಿಯೂ ಮನಸ್ಸೆಯ ಅರ್ಧ ಗೋತ್ರದ ಲ್ಲಿಯೂ ಯುದ್ಧಕ್ಕೆ ತಕ್ಕಂಥ ಸಕಲ ಆಯುಧಗಳನ್ನು ಧರಿಸಿಕೊಂಡವರು ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿಯು. ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು. ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಇದ್ದು ತಿನ್ನುತ್ತಾ ಕುಡಿಯುತ್ತಾ ಇದ್ದರು.ಅವರ ಸಹೋದರರು ಅವರಿಗೋಸ್ಕರ ಸಿದ್ಧಮಾಡಿ ದರು.ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು. ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು.
- Genesis 29:14 ಆದಿಕಾಂಡ 29:14ಆಗ ಲಾಬಾನನು ಅವನಿಗೆ--ನಿಶ್ಚಯವಾಗಿ ನೀನು ನನ್ನ ಎಲುಬೂ ಮಾಂಸವೂ ಆಗಿದ್ದೀ ಅಂದನು. ಇದಲ್ಲದೆ ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು.
- Deuteronomy 17:15 ಧರ್ಮೋಪದೇಶಕಾಂಡ 17:15ಹೇಗಾ ದರೂ ನಿನ್ನ ದೇವರಾದ ಕರ್ತನು ಆದುಕೊಳ್ಳು ವವನನ್ನು ನಿನಗೆ ಅರಸನನ್ನಾಗಿ ಇಟ್ಟು ಕೊಳ್ಳಬೇಕು; ನಿನ್ನ ಸಹೋದರರಲ್ಲಿಂದ ಒಬ್ಬನನ್ನು ನಿನಗೆ ಅರಸನ ನ್ನಾಗಿ ಇಟ್ಟುಕೊಳ್ಳಬೇಕು; ನಿನ್ನ ಸಹೋದರನಲ್ಲದ ಅನ್ಯನಾದ ಮನುಷ್ಯನನ್ನು ನಿನ್ನ ಮೇಲೆ ಇಟ್ಟು ಕೊಳ್ಳಬಾರದು.
- 1 Kings 2:11 1 ಅರಸುಗಳು 2:11ದಾವೀದನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರುಷಗಳು. ಏಳು ವರುಷ ಹೆಬ್ರೋನಿನಲ್ಲಿ ಆಳಿದನು; ಮೂವತ್ತು ಮೂರು ವರುಷ ಯೆರೂಸಲೇಮಿನಲ್ಲಿ ಆಳಿದನು.
- 2 Samuel 15:10 2 ಸಮುವೇಲನು 15:10ಆದರೆ ಅಬ್ಷಾಲೋಮನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಗೆ ಪಾಳತಿಗಾರರನ್ನು ಕಳುಹಿಸಿ ಅವರಿಗೆ--ನೀವು ತುತೂರಿಯ ಶಬ್ದ ಕೇಳಿದಾಗ ಅಬ್ಷಾಲೋಮನು ಹೆಬ್ರೋನಿನಲ್ಲಿ ಆಳುತ್ತಾನೆಂದು ಹೇಳಿರಿ ಅಂದನು.
- Ephesians 5:30 ಎಫೆಸದವರಿಗೆ 5:30ನಾವು ಆತನ ದೇಹದ ಅಂಗಗಳೂ ಮಾಂಸವೂ ಎಲುಬುಗಳೂ ಆಗಿದ್ದೇವೆ.
- Numbers 13:22 ಅರಣ್ಯಕಾಂಡ 13:22ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು.
- 2 Samuel 19:12–13 2 ಸಮುವೇಲನು 19:12–13ಹಾಗಾದರೆ ಅರಸನನ್ನು ತಿರಿಗಿ ಬರಮಾಡುವಂತೆ ನೀವು ಹಿಂಜರಿದದ್ದೇನು? ಇದಲ್ಲದೆ ನೀವು ಅಮಾಸನಿಗೆ--ನೀನು ನನ್ನ ಎಲುಬೂ ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ ದೇವರು ನನಗೆ ಹಾಗೆಯೇ ಮಾಡಲಿ ಎಂದು ಹೇಳಿರಿ ಅಂದನು.