1 Chronicles · chapter 13 · verse 8
1 Chronicles 13:8 in Kannada
ಆಗ ದಾವೀದನೂ ಸಮಸ್ತ ಇಸ್ರಾ ಯೇಲ್ಯರೂ ತಮ್ಮ ಸಮಸ್ತ ಕಿನ್ನರಿ ವೀಣೆ ದಮ್ಮಡಿ ತಾಳ ತುತೂರಿಗಳಿಂದ ಬಲದಿಂದ ದೇವರ ಮುಂದೆ ಹಾಡುಗಳನ್ನೂ ಹಾಡಿದರು.
Aaga daaveedanoo samasta israa yelyaroo tamma samasta kinnari veene dammadi taala tutoorigalinda baladinda devara munde haadugalannoo haadidaru.
1 Chronicles 13:8 in English
- King James Version (KJV)
- And David and all Israel played before God with all [their] might, and with singing, and with harps, and with psalteries, and with timbrels, and with cymbals, and with trumpets.
- World English Bible (WEB)
- David and all Israel played before God with all their might, even with songs, with harps, with stringed instruments, with tambourines, with cymbals, and with trumpets.
- American Standard Version (ASV)
- And David and all Israel played before God with all their might, even with songs, and with harps, and with psalteries, and with timbrels, and with cymbals, and with trumpets.
- Bible in Basic English (BBE)
- Then David and all Israel made melody before God with all their strength, with songs and corded instruments of music, and with brass instruments and horns.
- Darby Translation (DBY)
- And David and all Israel played before God with all their might, and with singing, and with harps, and with lutes, and with tambours, and with cymbals, and with trumpets.
- Webster's Bible (WBS)
- And David and all Israel played before God with all [their] might, and with singing, and with harps, and with psalteries, and with timbrels, and with cymbals, and with trumpets.
- Young's Literal Translation (YLT)
- and David and all Israel are playing before God, with all strength, and with songs, and with harps, and with psalteries, and with timbrels, and with cymbals, and with trumpets.
Read in context
- 6ಆಗ ದಾವೀದನೂ ಸಮಸ್ತ ಇಸ್ರಾಯೇಲೂ ಕರ್ತನ ನಾಮ ಇಡಲ್ಪಟ್ಟ ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಕರ್ತನಾದ ದೇವರ ಮಂಜೂಷವನ್ನು ಅಲ್ಲಿಂದ ತಕ್ಕೊಂಡು ಬರಲು ಯೆಹೂದಕ್ಕೆ ಸೇರಿದ ಕಿರ್ಯತ್ಯಾರೀಮಿನ ಬಾಳಾಕ್ಕೆ ಹೋದರು.
- 7ಅವರು ಅಬೀನಾದಾಬನ ಮನೆಯೊಳಗಿಂದ ಕರ್ತನ ಮಂಜೂ ಷವನ್ನು ತಂದು ಹೊಸ ಬಂಡಿಯ ಮೇಲೆ ಅದನ್ನು ಏರಿಸಿದರು. ಉಜ್ಜನೂ ಅಹಿಯೋವನೂ ಬಂಡಿಯನ್ನು ನಡಿಸಿದರು.
- 8ಆಗ ದಾವೀದನೂ ಸಮಸ್ತ ಇಸ್ರಾ ಯೇಲ್ಯರೂ ತಮ್ಮ ಸಮಸ್ತ ಕಿನ್ನರಿ ವೀಣೆ ದಮ್ಮಡಿ ತಾಳ ತುತೂರಿಗಳಿಂದ ಬಲದಿಂದ ದೇವರ ಮುಂದೆ ಹಾಡುಗಳನ್ನೂ ಹಾಡಿದರು.
- 9ಆದರೆ ಅವರು ಕೀದೋ ನನ ಕಣದ ಬಳಿಗೆ ಬಂದಾಗ ಉಜ್ಜನು ಮಂಜೂಷ ವನ್ನು ಹಿಡಿಯುವದಕ್ಕೆ ತನ್ನ ಕೈಯನ್ನು ಚಾಚಿದನು; ಯಾಕಂದರೆ ಎತ್ತುಗಳು ಎಡವಿದವು.
- 10ಉಜ್ಜನು ಮಂಜೂಷಕ್ಕೆ ತನ್ನ ಕೈಯನ್ನು ಚಾಚಿದ್ದರಿಂದ ಕರ್ತನ ಕೋಪವು ಅವನ ಮೇಲೆ ಉರಿಯಿತು. ಆತನು ಅವನನ್ನು ಹತಮಾಡಿದನು; ಅವನು ಅಲ್ಲಿಯೇ ದೇವರ ಮುಂದೆ ಸತ್ತನು.
Cross references
- Psalm 150:3–5 ಕೀರ್ತನೆಗಳು 150:3–5ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ. ದಮ್ಮಡಿ ಯಿಂದಲೂ ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತ ನನ್ನು ಸ್ತುತಿಸಿರಿ. ಜಲ್ಲರಿಯ ದೊಡ್ಡ ಶಬ್ದದಿಂದ ಆತನನ್ನು ಸ್ತುತಿಸಿರಿ; ಉತ್ಸಾಹದ ತಾಳಗಳಿಂದ ಆತನನ್ನು ಸ್ತುತಿಸಿರಿ.ಶ್ವಾಸವಿರುವದೆಲ್ಲಾ ಕರ್ತನನ್ನು ಸ್ತುತಿಸಲಿ. ಕರ್ತನನ್ನು ಸ್ತುತಿಸಿರಿ.
- 2 Samuel 6:5–23 2 ಸಮುವೇಲನು 6:5–23ದಾವೀದನೂ ಇಸ್ರಾಯೇಲ್ ಮನೆ ಯವರೆಲ್ಲರೂ ತುರಾಯಿ ಮರದಿಂದ ಮಾಡಲ್ಪಟ್ಟ ಸಕಲ ವಾದ್ಯಗಳಾದ ಕಿನ್ನರಿಗಳನ್ನೂ ವೀಣೆಗಳನ್ನೂ ದಮ್ಮಡಿಗಳನ್ನೂ ಸ್ವರಮಂಡಲಗಳನ್ನೂ ತಾಳಗಳನ್ನೂ ಕರ್ತನ ಮುಂದೆ ಬಾರಿಸಿಕೊಂಡು ಹೋದರು. ಅವರು ನಾಕೋನನ ಕಣದ ಬಳಿಗೆ ಬಂದಾಗ ಉಜ್ಜನು ದೇವರ ಮಂಜೂಷವನ್ನು ಹಿಡಿಯುವದಕ್ಕೆ ತನ್ನ ಕೈಚಾಚಿ ಅದನ್ನು ಹಿಡಿದನು. ಯಾಕಂದರೆ ಎತ್ತುಗಳು ಎಡವಿದವು. ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು. ಕರ್ತನು ಉಜ್ಜನನ್ನು ಹರಿದುಬಿಟ್ಟಿದ್ದರಿಂದ ದಾವೀದನು ವ್ಯಥೆ ಗೊಂಡು ಆ ಸ್ಥಳಕ್ಕೆ ಇಂದಿನ ವರೆಗೂ ಪೆರೆಚುಜ್ಜಾ ಎಂದು ಹೆಸರಿಟ್ಟನು. ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು. ದಾವೀದನು ಕರ್ತನ ಮಂಜೂಷವನ್ನು ತಾನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ ಗತ್ ಊರಿನ ಒಬೇದೆದೋಮನ ಮನೆಗೆ ಹೊತ್ತುಕೊಂಡು ಹೋದನು. ಕರ್ತನ ಮಂಜೂ ಷವು ಗತ್ ಊರಿನ ಒಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇದ್ದದ್ದರಿಂದ ಕರ್ತನು ಒಬೇದೆ ದೋಮನನ್ನೂ ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದನು. ದೇವರ ಮಂಜೂಷದ ನಿಮಿತ್ತ ಕರ್ತನು ಒಬೇ ದೆದೋಮನ ಮನೆಯನ್ನೂ ಅವನಿಗೆ ಉಂಟಾದ ದ್ದೆಲ್ಲವನ್ನೂ ಆಶೀರ್ವದಿಸಿದ್ದಾನೆಂದು ಅರಸನಾದ ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೊರಟು ಹೋಗಿ ದೇವರ ಮಂಜೂಷವನ್ನು ಒಬೇ ದೆದೋಮನ ಮನೆಯಿಂದ ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು. ಕರ್ತನ ಮಂಜೂಷ ವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ ಅವನು ಎತ್ತುಗಳನ್ನೂ ಕೊಬ್ಬಿದ ಪಶು ಗಳನ್ನೂ ಬಲಿಯಾಗಿ ಕೊಟ್ಟನು. ಇದಲ್ಲದೆ ದಾವೀ ದನು ನಾರಿನ ಎಫೋದನ್ನು ಧರಿಸಿಕೊಂಡು ತನ್ನ ಪೂರ್ಣ ಬಲದಿಂದ ಕರ್ತನ ಮುಂದೆ ನಾಟ್ಯವಾ ಡಿದನು. ಈ ಪ್ರಕಾರ ದಾವೀದನೂ ಇಸ್ರಾಯೇಲ್ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು. ಆದರೆ ಕರ್ತನ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ ಸೌಲನ ಮಗಳಾದ ವಿಾಕಲಳು ಕಿಟಿಕಿಯಿಂದ ನೋಡಿ ಅರಸನಾದ ದಾವೀ ದನು ಕರ್ತನ ಮುಂದೆ ಜಿಗಿಯುತ್ತಾ ನಾಟ್ಯವಾಡು ವದನ್ನು ಕಂಡು ತನ್ನ ಹೃದಯದಲ್ಲಿ ಅವನನ್ನು ತಿರಸ್ಕ ರಿಸಿದಳು. ಅವರು ಕರ್ತನ ಮಂಜೂಷವನ್ನು ಒಳಗೆ ತಂದು ದಾವೀದನು ಹಾಕಿಸಿದ ಗುಡಾರದೊಳಗೆ ಅದರ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ ದಾವೀದನು ಕರ್ತನ ಸನ್ನಿಧಿಯಲ್ಲಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ದಾವೀದನು ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಸೈನ್ಯಗಳ ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ ಜನರಿಗೆಲ್ಲಾ ಅಂದರೆ ಇಸ್ರಾಯೇಲಿನ ಸಮೂಹಕ್ಕೆಲ್ಲಾ ಸ್ತ್ರೀ ಪುರುಷರಲ್ಲಿ ಒಬ್ಬೊಬ್ಬರಿಗೆ ಒಂದು ರೊಟ್ಟಿ ತುಂಡನ್ನೂ ಒಂದು ದೊಡ್ಡ ತುಂಡು ಮಾಂಸವನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಕೊಟ್ಟನು. ತರುವಾಯ ಜನರೆ ಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವದಕ್ಕೆ ಹೋದಾಗ ಸೌಲನ ಮಗಳಾದ ವಿಾಕಲಳು ದಾವೀದನಿಗೆ ಎದುರಾಗಿ ಬಂದು--ನಿಷ್ಪ್ರ ಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ ಹಾಗೆಯೇ ಈಹೊತ್ತು ತನ್ನ ಸೇವಕರ ದಾಸಿಗಳ ಕಣ್ಣುಮುಂದೆ ತನ್ನ ವಸ್ತ್ರ ಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಪಟ್ಟನು ಅಂದಳು. ಆದರೆ ದಾವೀದನು ವಿಾಕಳಿಗೆ--ನಿನ್ನ ತಂದೆಗಿಂತಲೂ ಅವನ ಮನೆಯವರೆಲ್ಲರಿಗಿಂತಲೂ ನನ್ನನ್ನು ಕರ್ತನು ತನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ನೇಮಿಸುವೆನು ಎಂದು ಆದುಕೊಂಡ ಕರ್ತನ ಸಮ್ಮು ಖದ ಮುಂದೆಯೇ ಆಯಿತು. ನಾನು ಕರ್ತನ ಮುಂದೆ ಆಡುವೆನು. ಇನ್ನೂ ಇದಕ್ಕಿಂತ ಅಲ್ಪನಾಗಿ ಇರುವೆನು; ನಿನ್ನ ದೃಷ್ಟಿಯಲ್ಲಿ ನೀಚನಾಗಿರುವೆನು.ಆದರೆ ನೀನು ಹೇಳಿದ ದಾಸಿಗಳಿಂದ ನಿಶ್ಚಯವಾಗಿ ಘನವನ್ನು ಹೊಂದುವೆನು ಅಂದನು.ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು. ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು.
- Psalm 47:5 ಕೀರ್ತನೆಗಳು 47:5ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ.
- Daniel 3:5–7 ದಾನಿಯೇಲನು 3:5–7ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು. ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು. ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
- Psalm 68:25–27 ಕೀರ್ತನೆಗಳು 68:25–27ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು. ಸಭೆಗಳಲ್ಲಿ ದೇವರನ್ನು ಸ್ತುತಿ ಸಿರಿ; ಇಸ್ರಾಯೇಲನ ಬುಗ್ಗೆಯಿಂದ ಕರ್ತನನ್ನು ಸ್ತುತಿ ಸಿರಿ. ಅಲ್ಲಿ ಅವರನ್ನಾಳುವವರ ಕೂಡ ಚಿಕ್ಕ ಬೆನ್ಯಾ ವಿಾನನು ಅವರ ನಾಯಕರಾದ ಯೆಹೂದನ ಪ್ರಧಾ ನರೂ ಅವರ ಸಮೂಹವೂ ಜೆಬುಲೂನನ, ನಫ್ತಾ ಲಿಯ ಪ್ರಧಾನರೂ ಇದ್ದಾರೆ.
- 1 Chronicles 23:5 1 ಪೂರ್ವಕಾಲವೃತ್ತಾಂತ 23:5ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
- 1 Chronicles 15:28 1 ಪೂರ್ವಕಾಲವೃತ್ತಾಂತ 15:28ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು.ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.
- 1 Chronicles 16:42 1 ಪೂರ್ವಕಾಲವೃತ್ತಾಂತ 16:42ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
- 1 Chronicles 15:10–24 1 ಪೂರ್ವಕಾಲವೃತ್ತಾಂತ 15:10–24ಉಜ್ಜೀಯೇಲನ ಕುಮಾರ ರಲ್ಲಿ ಮುಖ್ಯಸ್ಥನಾದ ಅವ್ಮೆಾನಾದಾಬನೂ ಅವನ ಸಹೋದರರಾದ ನೂರ ಹನ್ನೆರಡು ಮಂದಿಯೂ. ಆಗ ದಾವೀದನು ಚಾದೋಕ್, ಎಬ್ಯಾತ್ಯಾರ್ ಎಂಬ ಯಾಜಕರನ್ನೂ ಉರೀಯೇಲ್, ಅಸಾಯನು, ಯೋವೇಲನು, ಶೆಮಾಯನು, ಎಲೀಯೇಲನು, ಅವ್ಮೆಾನಾದಾಬ ಎಂಬ ಲೇವಿಯರನ್ನೂ ಕರೇಕಳುಹಿಸಿ ಅವರಿಗೆ ಹೇಳಿದ್ದೇನಂದರೆ-- ನೀವು ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದದರಿಂದ ಇಸ್ರಾಯೇಲಿನ ದೇವರಾದ ಕರ್ತನ ಮಂಜೂಷವನ್ನು ನಾನು ಅದ ಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ. ನೀವು ಮೊದಲಿನ ಹಾಗೆ ಮಾಡದೆ ಇದದ್ದರಿಂದ ಕರ್ತನಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದನು. ನ್ಯಾಯದ ಪ್ರಕಾರ ನಾವು ಆತನನ್ನು ಹುಡುಕಲಿಲ್ಲ ಅಂದನು. ಆಗ ಇಸ್ರಾಯೇಲಿನ ದೇವರಾದ ಕರ್ತನ ಮಂಜೂ ಷವನ್ನು ತರುವದಕ್ಕೆ ಯಾಜಕರೂ ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು. ಮೋಶೆಯು ಆಜ್ಞಾಪಿಸಿದ ಕರ್ತನ ವಾಕ್ಯದ ಪ್ರಕಾರ ಲೇವಿಯರ ಮಕ್ಕಳು ಕೋಲುಗಳನ್ನು ಹಾಕಿ ದೇವರ ಮಂಜೂಷ ವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು. ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು. ಹಾಗೆಯೇ ಲೇವಿಯರು ಯೋವೇಲನ ಮಗನಾದ ಹೇಮಾನನನ್ನೂ ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ ಮೆರಾರಿಯ ಕುಮಾರರ ಸಹೋದರರಲ್ಲಿ ಕೂಷಾಯನ ಮಗನಾದ ಎತಾನ ನನ್ನೂ ನೇಮಿಸಿದರು. ಅವರ ಸಂಗಡ ಎರಡನೇ ತರಗತಿಯ ತಮ್ಮ ಸಹೋದರರಾಗಿರುವ ಜೆಕರ್ಯ ನನ್ನೂ ಬೇನ್ನನ್ನೂ ಯಾಜೀಯೇಲನನ್ನೂ ಶೆವಿಾರಾ ಮೋತನನ್ನೂ ಯೆಹೀಯೇಲನನ್ನೂ ಉನ್ನಿಯನ್ನೂ ಎಲೀಯಾಬನನ್ನೂ ಬೆನಾಯನನ್ನೂ ಮಾಸೇಯನನ್ನೂ ಮತ್ತಿತ್ಯನನ್ನೂ ಎಲೀಫೆಲೇಹುವನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಒಬೇದೆದೋಮನನ್ನೂ ಯೆಗೀ ಯೇಲನನ್ನೂ ನೇಮಿಸಿದರು. ಹಾಡುಗಾರರಾದ ಹೇಮಾನನೂ ಆಸಾಫನೂ ಏತಾನನೂ ತಾಮ್ರದ ತಾಳಗಳನ್ನು ಬಾರಿಸುವದಕ್ಕೂ ಜೆಕರ್ಯನೂ ಅಜೀಯೇಲನೂ ಶೆವಿಾರಾಮೋತನೂ ಯೆಹೀ ಯೇಲನೂ ಉನ್ನಿಯೂ ಎಲೀಯಾಬನೂ ಮಾಸೇ ಯನೂ ಬೆನಾಯನೂ ಅಲಮೋತಿನಿಂದ ವೀಣೆಗಳನ್ನು ಬಾರಿಸುವದಕ್ಕೂ; ಮತ್ತಿತ್ಯನೂ ಎಲೀಫೆಲೇಹುವೂ ಮಿಕ್ನೇಯನೂ ಒಬೇದೆದೋಮನೂ ಯೆಗೀಯೇ ಲನೂ ಅಜಜ್ಯನೂ ಹೆಚ್ಚಳವಾಗಿ ಶಿಮಿನೇಟನಿಂದ ಕಿನ್ನರಿಗಳನ್ನು ಬಾರಿಸುವದಕ್ಕೂ ನೇಮಿಸಲ್ಪಟ್ಟಿದ್ದರು. ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡು ವದಕ್ಕೆ ನೇಮಿಸಲ್ಪಟ್ಟಿದ್ದನು. ಅವನು ಗ್ರಹಿಕೆಯುಳ್ಳವನಾ ದದರಿಂದ ಹಾಡುವದಕ್ಕೆ ಕಲಿಸುತ್ತಿದ್ದನು. ಬೆರಕ್ಯನೂ ಎಲ್ಕಾನನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು. ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು.
- 1 Samuel 10:5 1 ಸಮುವೇಲನು 10:5ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು.
- 1 Chronicles 25:1–6 1 ಪೂರ್ವಕಾಲವೃತ್ತಾಂತ 25:1–6ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್ ಹೇಮಾನ್ ಯೆದುತೂನ್ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು. ಅವರು ಯಾರಂದರೆ, ಆಸಾಫನ ಕುಮಾರ ರಲ್ಲಿ ಜಕ್ಕೂರನು ಯೋಸೇಫನು ನೆತನ್ಯನು ಅಶರೇ ಲನು; ಇವರು ಆಸಾಫನ ಕುಮಾರರು; ಅರಸ ಆಜ್ಞೆಯ ಪ್ರಕಾರ ಆಸಾಫನ ಕೈಕೆಳಗೆ ಪ್ರವಾದಿಸಿದವರು. ಯೆದುತೂನನ ಕುಮಾರರಲ್ಲಿ ಗೆದಲ್ಯನು, ಚೆರೀಯು, ಯೆಶಾಯನು, ಹಷಬ್ಯನು, ಮತ್ತಿತ್ಯನು ಈ ಆರು ಮಂದಿಯು; ತಮ್ಮ ತಂದೆಯಾದ ಯೆದುತೂನನ ಕೈಕೆಳಗೆ ಕಿನ್ನರಿಗಳಿಂದ ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಪ್ರವಾದಿಸಿದವರು. ಹೆಮಾನನ ಕುಮಾರರಲ್ಲಿ ಬುಕ್ಕೀಯನು, ಮತ್ತನ್ಯನು, ಉಜ್ಜಿಯೇ ಲನು, ಶೆಬೂವೇಲನು, ಯೆರೀಮೋತನು, ಹನನ್ಯನು, ಹನಾನೀಯು, ಎಲೀಯಾತನು, ಗಿದ್ದಲ್ತಿಯು, ರೋಮ ಮ್ತಿಯೆಜರನು, ಯೊಷ್ಬೆಕಾಷನು, ಮಲ್ಲೋತೀಯು, ಹೋತೀರನು, ಮಹಜೀಯೋತನು. ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೆಮಾನನ ಕುಮಾರರು. ದೇವರು ಹೆಮಾನನಿಗೆ ಹದಿನಾಲ್ಕು ಮಂದಿ ಕುಮಾರರನ್ನೂ ಮೂರು ಮಂದಿ ಕುಮಾರ್ತೆಯರನ್ನೂ ಕೊಟ್ಟನು. ಅರಸನು ಆಸಾಫನಿಗೂ ಯೆದುತೂನನಿಗೂ ಹೆಮಾ ನನಿಗೂ ಆಜ್ಞಾಪಿಸಿದ ಪ್ರಕಾರ ಇವರೆಲ್ಲರು ದೇವರ ಮಂದಿರದ ಸೇವೆಗೋಸ್ಕರ ಕರ್ತನ ಮನೆಯಲ್ಲಿ ತಾಳ ವೀಣೆ ಕಿನ್ನರಿಗಳಿಂದ ಹಾಡುವದಕ್ಕೆ ತಮ್ಮ ತಂದೆಯ ಕೈಕೆಳಗೆ ಇದ್ದರು.
- 1 Chronicles 16:5 1 ಪೂರ್ವಕಾಲವೃತ್ತಾಂತ 16:5ಅವರು ಯಾರಂದರೆ, ಮುಖ್ಯಸ್ಥನಾದ ಆಸಾಫನೂ ಅವನ ತರುವಾಯ ಜೆಕರ್ಯನೂ ಯೆಗೀಯೇಲನೂ ಶೆವಿಾರಾಮೋತನೂ ಯೆಹೀಯೇಲನೂ ಮತ್ತಿತ್ಯನೂ ಎಲೀಯಾಬನೂ ಬೆನಾಯನೂ ಒಬೇದೆದೋಮನೂ ಯೇಗಿಯೇಲನೂ. ಇವರು ವೀಣೆಗಳನ್ನೂ ಕಿನ್ನರಿ ಗಳನ್ನೂ ಬಾರಿಸುತ್ತಿದ್ದರು; ಆದರೆ ಆಸಾಫನು ತಾಳ ಗಳನ್ನು ಬಾರಿಸುತ್ತಿದ್ದನು.
Original words (Hebrew)
- David · H1732דָּוִד Dâvid
- Israel · H3478יִשְׂרָאֵל Yisrâʼêl
- played · H7832שָׂחַק sâchaq
- before · H6440פָּנִים pânîym
- God · H430אֱלֹהִים ʼĕlôhîym
- might · H5797עֹז ʻôz
- singing · H7892שִׁיר shîyr
- harps · H3658כִּנּוֹר kinnôwr
- psalteries · H5035נֶבֶל nebel
- timbrels · H8596תֹּף tôph
- cymbals · H4700מְצֵלֶת mᵉtsêleth
- trumpets · H2689חֲצֹצְרָה chătsôtsᵉrâh