1 Chronicles · chapter 14 · verse 4
1 Chronicles 14:4 in Kannada
ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳೇನಂದರೆ--ಶಮ್ಮೂವನು, ಶೋಬಾ ಬನು, ನಾತಾನನು,
Yeroosaleminalli avanige huttida makkala hesarugalenandare--shammoovanu, shobaa banu, naataananu,
1 Chronicles 14:4 in English
- King James Version (KJV)
- Now these [are] the names of [his] children which he had in Jerusalem; Shammua, and Shobab, Nathan, and Solomon,
- World English Bible (WEB)
- These are the names of the children whom he had in Jerusalem: Shammua, Shobab, Nathan, Solomon,
- American Standard Version (ASV)
- And these are the names of the children whom he had in Jerusalem: Shammua, and Shobab, Nathan, and Solomon,
- Bible in Basic English (BBE)
- These are the names of the children he had in Jerusalem: Shammua and Shobab, Nathan and Solomon
- Darby Translation (DBY)
- And these are the names of the children which he had in Jerusalem: Shammua, and Shobab, Nathan, and Solomon,
- Webster's Bible (WBS)
- Now these [are] the names of [his] children which he had in Jerusalem; Shammua, and Shobab, Nathan, and Solomon,
- Young's Literal Translation (YLT)
- and these [are] the names of the children whom he hath in Jerusalem: Shammua, and Shobab, Nathan, and Solomon,
Read in context
- 2ಆಗ ಕರ್ತನು ಇಸ್ರಾಯೇಲಿನ ಮೇಲೆ ಅರಸನಾಗಿರಲು ತನ್ನನ್ನು ಸ್ಥಿರಪಡಿಸಿದನೆಂದು ದಾವೀದನು ತಿಳುಕೊಂಡನು. ಯಾಕಂದರೆ ಆತನ ಜನರಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವು ಮೇಲಕ್ಕೆ ಎತ್ತಲ್ಪಟ್ಟಿತ್ತು.
- 3ದಾವೀದನು ಯೆರೂಸಲೇಮಿನಲ್ಲಿ ಇನ್ನೂ ಹೆಂಡತಿಯರನ್ನು ತೆಗೆದು ಕೊಂಡು ಹೆಚ್ಚು ಕುಮಾರರನ್ನೂ ಕುಮಾರ್ತೆಯರನ್ನೂ ಪಡೆದನು.
- 4ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳೇನಂದರೆ--ಶಮ್ಮೂವನು, ಶೋಬಾ ಬನು, ನಾತಾನನು,
- 5ಸೊಲೊಮೋನನು, ಇಬ್ಹಾರನು, ಎಲೀಷೂವನು, ಎಲ್ಪೆಲೆಟನು,
- 6ನೋಗಹನು, ನೆಫೆ ಗನು,
Cross references
- 1 Chronicles 3:5–9 1 ಪೂರ್ವಕಾಲವೃತ್ತಾಂತ 3:5–9ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರು ಯಾರಂದರೆ ಅವ್ಮೆಾಯೇಲನ ಮಗಳಾದ ಬತ್ಷೂವಳಿಂದ ಹುಟ್ಟಿದ ಶಿಮ್ಮನು, ಶೋಬಾಬನು, ನಾತಾನನು, ಸೊಲೊ ಮೋನನು ಈ ನಾಲ್ಕು ಮಂದಿಯು. ಇದಲ್ಲದೆ ಇಬ್ಹಾರನು, ಎಲೀಷಾಮನು, ಎಲೀಫೆಲೆಟನು, ನೊಗನು, ನೆಫೆಗನು, ಯಾಫೀಯನು, ಎಲೀಷಾ ಮನು, ಎಲ್ಯಾದನು, ಎಲೀಫೆಲೆಟನು, ಈ ಒಂಬತ್ತು ಮಂದಿಯು. ಉಪಪತ್ನಿಗಳ ಮಕ್ಕಳ ಹೊರತಾಗಿ ಇವರೆಲ್ಲರು ದಾವೀದನ ಮಕ್ಕಳಾಗಿದ್ದರು. ತಾಮಾರಳು ಇವರ ಸಹೋದರಿಯಾಗಿದ್ದಳು.
- 1 Kings 1:17 1 ಅರಸುಗಳು 1:17ಆಕೆಯು ಅವನಿಗೆ--ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನೀನು ನಿನ್ನ ದಾಸಿಗೆ ನಿನ್ನ ದೇವರಾದ ಕರ್ತನ ಹೆಸರಿನಲ್ಲಿ ಪ್ರಮಾಣಮಾಡಿದಿ.
- 1 Chronicles 28:5–6 1 ಪೂರ್ವಕಾಲವೃತ್ತಾಂತ 28:5–6ಕರ್ತನು ನನಗೆ ಅನೇಕ ಕುಮಾ ರರನ್ನು ಕೊಟ್ಟಿರುವಾಗ ನನ್ನ ಸಮಸ್ತ ಕುಮಾರರಲ್ಲಿ ಇಸ್ರಾಯೇಲಿನ ಮೇಲಾಗಿ ಕರ್ತನ ರಾಜ್ಯದ ಸಿಂಹಾ ಸನದ ಮೇಲೆ ಕುಳಿತುಕೊಳ್ಳುವದಕ್ಕೆ ನನ್ನ ಮಗನಾದ ಸೊಲೊಮೋನನನ್ನು ಆದುಕೊಂಡನು. ಆತನು ನನ್ನ ಸಂಗಡ--ನಿನ್ನ ಮಗನಾದ ಸೊಲೊಮೋನನು ತಾನೇನನ್ನ ಮನೆಯನ್ನೂ ಅಂಗಳಗಳನ್ನೂ ಕಟ್ಟಿಸುವನು; ಅವನನ್ನು ನನಗೆ ಮಗನಾಗಿರಲು ಆದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು.
- 2 Samuel 12:24–25 2 ಸಮುವೇಲನು 12:24–25ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು. ಪ್ರವಾದಿಯಾದ ನಾತಾ ನನ ಮುಖಾಂತರ ಕರ್ತನ ನಿಮಿತ್ತ ಅವನಿಗೆ ಯೆದೀದ್ಯ ನೆಂದು ಹೆಸರಿಟ್ಟನು.
- 1 Kings 3:3 1 ಅರಸುಗಳು 3:3ಸೊಲೊ ಮೋನನು ಕರ್ತನನ್ನು ಪ್ರೀತಿಮಾಡಿ ತನ್ನ ತಂದೆ ಯಾದ ದಾವೀದನ ಕಟ್ಟಳೆಗಳಲ್ಲಿ ನಡೆಯುತ್ತಾ ಇದ್ದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದನು.
- 1 Chronicles 22:9–12 1 ಪೂರ್ವಕಾಲವೃತ್ತಾಂತ 22:9–12ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು. ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು. ಈಗ ನನ್ನ ಮಗನೇ, ಕರ್ತನು ನಿನ್ನನ್ನು ಕುರಿತು ಹೇಳಿದ ಪ್ರಕಾರ ನೀನು ಸಫಲವನ್ನು ಹೊಂದುವ ಹಾಗೆಯೂ ನೀನು ನಿನ್ನ ದೇವರಾದ ಕರ್ತನ ಮನೆಯನ್ನು ಕಟ್ಟಿಸುವ ಹಾಗೆಯೂ ಆತನು ನಿನ್ನ ಸಂಗಡ ಇರಲಿ. ಆದರೆ ಕರ್ತನು ನಿನಗೆ ಬುದ್ಧಿಯನ್ನೂ ಗ್ರಹಿಕೆಯನ್ನೂ ಕೊಡಲಿ; ಇಸ್ರಾಯೇ ಲನ್ನು ಕುರಿತು ನಿನಗೆ ಆಜ್ಞಾಪಿಸಲಿ; ನಿನ್ನ ದೇವರಾದ ಕರ್ತನ ನ್ಯಾಯಪ್ರಮಾಣವನ್ನು ನೀನು ಕೈಕೊಳ್ಳುವ ಹಾಗೆ
- 2 Samuel 5:14 2 ಸಮುವೇಲನು 5:14ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಯಾವವೆಂದರೆ; ಶಮ್ಮೂವ ಶೊಬಾಬ್ ನಾತಾನ್
- 2 Samuel 12:1 2 ಸಮುವೇಲನು 12:1ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ--ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು.
- Matthew 1:6 ಮತ್ತಾಯನು 1:6ಇಷಯನಿಂದ ಅರಸನಾದ ದಾವೀದನು ಹುಟ್ಟಿದನು. ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು;
- Luke 3:31 ಲೂಕನು 3:31ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು;
- 1 Kings 2:15 1 ಅರಸುಗಳು 2:15ಆಗ ಅವನು--ರಾಜ್ಯವು ನನ್ನದಾಗಿತ್ತೆಂದು ನಾನು ಆಳುವ ಹಾಗೆ ಸಮಸ್ತ ಇಸ್ರಾಯೇಲ್ಯರು ನನ್ನ ಮೇಲೆ ಕಣ್ಣಿಟ್ಟಿದ್ದರೆಂದು ನೀನು ಬಲ್ಲೆ.
- 1 Kings 1:13 1 ಅರಸುಗಳು 1:13ನೀನು ದಾವೀದನ ಬಳಿಗೆ ಹೋಗಿ ಅವ ನಿಗೆ--ಅರಸನಾದ, ನನ್ನ ಒಡೆಯನೇ, ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವದು ಯಾಕೆ ಎಂದು ಹೇಳು.