1 Chronicles · chapter 15 · verse 25
1 Chronicles 15:25 in Kannada
ಹೀಗೆಯೇ ದಾವೀದನೂ ಇಸ್ರಾಯೇಲಿನ ಹಿರಿ ಯರೂ ಸಹಸ್ರಗಳ ಮೇಲೆ ಇರುವ ಅಧಿಪತಿಗಳೂ ಸಂತೋಷವಾಗಿ ಒಬೇದೆದೋಮನ ಮನೆಯೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು.
Heegeye daaveedanoo israayelina hiri yaroo sahasragala mele iruva adhipatigaloo santoshavaagi obededomana maneyolaginda kartana odambadikeya manjooshavannu taralu hodaru.
1 Chronicles 15:25 in English
- King James Version (KJV)
- So David, and the elders of Israel, and the captains over thousands, went to bring up the ark of the covenant of the LORD out of the house of Obed-edom with joy.
- World English Bible (WEB)
- So David, the elders of Israel, and the captains over thousands went to bring the ark of the LORD’s covenant up out of the house of Obed-Edom with joy.
- American Standard Version (ASV)
- So David, and the elders of Israel, and the captains over thousands, went to bring up the ark of the covenant of Jehovah out of the house of Obed-edom with joy.
- Bible in Basic English (BBE)
- So David, and the responsible men of Israel, and the captains over thousands, went with joy to get the ark of the agreement of the Lord out of the house of Obed-edom.
- Darby Translation (DBY)
- And David, and the elders of Israel, and the captains over thousands, went to bring up the ark of the covenant of Jehovah out of the house of Obed-Edom with joy.
- Webster's Bible (WBS)
- So David and the elders of Israel, and the captains over thousands, went to bring up the ark of the covenant of the LORD from the house of Obed-edom with joy.
- Young's Literal Translation (YLT)
- And it is David, and the elders of Israel, and the heads of the thousands, who are going to bring up the ark of the covenant of Jehovah from the house of Obed-Edom with joy;
Read in context
- 23ಬೆರಕ್ಯನೂ ಎಲ್ಕಾನನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.
- 24ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು.
- 25ಹೀಗೆಯೇ ದಾವೀದನೂ ಇಸ್ರಾಯೇಲಿನ ಹಿರಿ ಯರೂ ಸಹಸ್ರಗಳ ಮೇಲೆ ಇರುವ ಅಧಿಪತಿಗಳೂ ಸಂತೋಷವಾಗಿ ಒಬೇದೆದೋಮನ ಮನೆಯೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು.
- 26ದೇವರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರಲು ಲೇವಿಯರಿಗೆ ಸಹಾಯ ಕೊಟ್ಟದ್ದರಿಂದ ಅವರು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು.
- 27ದಾವೀ ದನೂ ಮಂಜೂಷವನ್ನು ಹೊರುವ ಲೇವಿಯರೂ ಹಾಡುಗಾರರೂ ಹಾಡುಗಾರರ ಸಂಗಡ ಇರುವ ಸಂಗೀತದ ಯಜಮಾನನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದ ಲ್ಲದೆ ದಾವೀದನ ಮೇಲೆ ನಾರಿನ ಎಫೋದು ಇತ್ತು.
Cross references
- 2 Samuel 6:12–23 2 ಸಮುವೇಲನು 6:12–23ದೇವರ ಮಂಜೂಷದ ನಿಮಿತ್ತ ಕರ್ತನು ಒಬೇ ದೆದೋಮನ ಮನೆಯನ್ನೂ ಅವನಿಗೆ ಉಂಟಾದ ದ್ದೆಲ್ಲವನ್ನೂ ಆಶೀರ್ವದಿಸಿದ್ದಾನೆಂದು ಅರಸನಾದ ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೊರಟು ಹೋಗಿ ದೇವರ ಮಂಜೂಷವನ್ನು ಒಬೇ ದೆದೋಮನ ಮನೆಯಿಂದ ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು. ಕರ್ತನ ಮಂಜೂಷ ವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ ಅವನು ಎತ್ತುಗಳನ್ನೂ ಕೊಬ್ಬಿದ ಪಶು ಗಳನ್ನೂ ಬಲಿಯಾಗಿ ಕೊಟ್ಟನು. ಇದಲ್ಲದೆ ದಾವೀ ದನು ನಾರಿನ ಎಫೋದನ್ನು ಧರಿಸಿಕೊಂಡು ತನ್ನ ಪೂರ್ಣ ಬಲದಿಂದ ಕರ್ತನ ಮುಂದೆ ನಾಟ್ಯವಾ ಡಿದನು. ಈ ಪ್ರಕಾರ ದಾವೀದನೂ ಇಸ್ರಾಯೇಲ್ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು. ಆದರೆ ಕರ್ತನ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ ಸೌಲನ ಮಗಳಾದ ವಿಾಕಲಳು ಕಿಟಿಕಿಯಿಂದ ನೋಡಿ ಅರಸನಾದ ದಾವೀ ದನು ಕರ್ತನ ಮುಂದೆ ಜಿಗಿಯುತ್ತಾ ನಾಟ್ಯವಾಡು ವದನ್ನು ಕಂಡು ತನ್ನ ಹೃದಯದಲ್ಲಿ ಅವನನ್ನು ತಿರಸ್ಕ ರಿಸಿದಳು. ಅವರು ಕರ್ತನ ಮಂಜೂಷವನ್ನು ಒಳಗೆ ತಂದು ದಾವೀದನು ಹಾಕಿಸಿದ ಗುಡಾರದೊಳಗೆ ಅದರ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ ದಾವೀದನು ಕರ್ತನ ಸನ್ನಿಧಿಯಲ್ಲಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ದಾವೀದನು ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಸೈನ್ಯಗಳ ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ ಜನರಿಗೆಲ್ಲಾ ಅಂದರೆ ಇಸ್ರಾಯೇಲಿನ ಸಮೂಹಕ್ಕೆಲ್ಲಾ ಸ್ತ್ರೀ ಪುರುಷರಲ್ಲಿ ಒಬ್ಬೊಬ್ಬರಿಗೆ ಒಂದು ರೊಟ್ಟಿ ತುಂಡನ್ನೂ ಒಂದು ದೊಡ್ಡ ತುಂಡು ಮಾಂಸವನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಕೊಟ್ಟನು. ತರುವಾಯ ಜನರೆ ಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವದಕ್ಕೆ ಹೋದಾಗ ಸೌಲನ ಮಗಳಾದ ವಿಾಕಲಳು ದಾವೀದನಿಗೆ ಎದುರಾಗಿ ಬಂದು--ನಿಷ್ಪ್ರ ಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ ಹಾಗೆಯೇ ಈಹೊತ್ತು ತನ್ನ ಸೇವಕರ ದಾಸಿಗಳ ಕಣ್ಣುಮುಂದೆ ತನ್ನ ವಸ್ತ್ರ ಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಪಟ್ಟನು ಅಂದಳು. ಆದರೆ ದಾವೀದನು ವಿಾಕಳಿಗೆ--ನಿನ್ನ ತಂದೆಗಿಂತಲೂ ಅವನ ಮನೆಯವರೆಲ್ಲರಿಗಿಂತಲೂ ನನ್ನನ್ನು ಕರ್ತನು ತನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ನೇಮಿಸುವೆನು ಎಂದು ಆದುಕೊಂಡ ಕರ್ತನ ಸಮ್ಮು ಖದ ಮುಂದೆಯೇ ಆಯಿತು. ನಾನು ಕರ್ತನ ಮುಂದೆ ಆಡುವೆನು. ಇನ್ನೂ ಇದಕ್ಕಿಂತ ಅಲ್ಪನಾಗಿ ಇರುವೆನು; ನಿನ್ನ ದೃಷ್ಟಿಯಲ್ಲಿ ನೀಚನಾಗಿರುವೆನು.ಆದರೆ ನೀನು ಹೇಳಿದ ದಾಸಿಗಳಿಂದ ನಿಶ್ಚಯವಾಗಿ ಘನವನ್ನು ಹೊಂದುವೆನು ಅಂದನು.ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು. ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು.
- Micah 5:2 ಮೀಕ 5:2ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.
- Philippians 3:3 ಫಿಲಿಪ್ಪಿಯವರಿಗೆ 3:3ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ.
- Philippians 4:4 ಫಿಲಿಪ್ಪಿಯವರಿಗೆ 4:4ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ನಾನು ತಿರಿಗಿ ಹೇಳುತ್ತೇನೆ.
- Ezra 6:16 ಎಜ್ರನು 6:16ಆಗ ಇಸ್ರಾಯೇಲ್ಯರ ಮಕ್ಕಳೂ ಯಾಜಕರೂ ಲೇವಿಯರೂ ಸೆರೆಯಿಂದ ಬಂದ ಮಿಕ್ಕಾ ದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠೆಮಾಡಿದರು.
- 2 Chronicles 20:27–28 2 ಪೂರ್ವಕಾಲವೃತ್ತಾಂತ 20:27–28ಕರ್ತನು ಅವರ ಶತ್ರುಗಳ ಮೇಲೆ ಅವರನ್ನು ಸಂತೋ ಷಪಡುವಂತೆ ಮಾಡಿದ್ದರಿಂದ ಅವರು ಸಂತೋಷವಾಗಿ ಯೆರೂಸಲೇಮಿಗೆ ತಿರಿಗಿ ಹೋಗುವದಕ್ಕೆ ಯೆಹೂದ ಯೆರೂಸಲೇಮಿನವರೆಲ್ಲರೂ ಅವರ ಮುಂಭಾಗ ದಲ್ಲಿ ಯೆಹೋಷಾಫಾಟನೂ ಹೊರಟು ವೀಣೆಗ ಳಿಂದಲೂ ಕಿನ್ನರಿಗಳಿಂದಲೂ ತುತೂರಿಗಳಿಂದಲೂ ಯೆರೂಸಲೇಮಿನಲ್ಲಿ ಪ್ರವೇಶಿಸಿ ಕರ್ತನ ಆಲಯಕ್ಕೆ ಬಂದರು.
- Psalm 100:1–2 ಕೀರ್ತನೆಗಳು 100:1–2ಸಮಸ್ತ ಭೂಮಿಯೇ, ಕರ್ತನಿಗೆ ಜಯಧ್ವನಿ ಮಾಡಿರಿ, ಸಂತೋಷ ದಿಂದ ಕರ್ತನನ್ನು ಸೇವಿಸಿರಿ; ಹಾಡುತ್ತಾ ಆತನ ಮುಂದೆ ಬನ್ನಿರಿ.
- Psalm 95:1–2 ಕೀರ್ತನೆಗಳು 95:1–2ಬನ್ನಿರಿ, ಕರ್ತನಿಗೆ ಉತ್ಸಾಹ ಧ್ವನಿಮಾಡುವಾ ನಮ್ಮ ರಕ್ಷಣೆಯ ಬಂಡೆಗೆ ಜಯಧ್ವನಿ ಮಾಡೋಣ. ಸ್ತೋತ್ರದಿಂದ ಆತನ ಸನ್ನಿಧಿಯ ಮುಂದೆ ಬಂದು ಕೀರ್ತನೆಗಳಿಂದ ಆತನಿಗೆ ಆನಂದದ ಧ್ವನಿಮಾಡೋಣ.
- 1 Chronicles 13:11–14 1 ಪೂರ್ವಕಾಲವೃತ್ತಾಂತ 13:11–14ಕರ್ತನು ಉಜ್ಜನನ್ನು ಹರಿದು ಬಿಟ್ಟದ್ದರಿಂದ ದಾವೀದನಿಗೆ ಮೆಚ್ಚಿಗೆಯಾಗ ಲಿಲ್ಲ. ಆದಕಾರಣ ಇಂದಿನ ವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರುಂಟು. ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ದೇವರ ಮಂಜೂಷ ವನ್ನು ನನ್ನ ಮನೆಗೆ ತರಿಸುವದು ಹೇಗೆ ಅಂದನು. ಹಾಗೆಯೇ ದಾವೀದನು ಮಂಜೂಷವನ್ನು ದಾವೀ ದನ ಪಟ್ಟಣಕ್ಕೆ ತನ್ನ ಬಳಿಗೆ ಸೇರಿಸಿಕೊಳ್ಳದೆ ಗಿತ್ತಿಯ ನಾದ ಒಬೇದೆದೋಮನ ಮನೆಗೆ ಸೇರಿಸಿಬಿಟ್ಟನು.ದೇವರ ಮಂಜೂಷವು ಒಬೇದೆದೋಮನ ಮನೆ ಯವರ ಸಂಗಡ ಅವನ ಮನೆಯಲ್ಲಿ ಮೂರು ತಿಂಗಳು ಇದ್ದದರಿಂದ ಕರ್ತನು ಒಬೇದೆದೋಮನ ಮನೆ ಯನ್ನೂ ಅವನಿಗಿದ್ದದ್ದೆಲ್ಲವನ್ನೂ ಆಶೀರ್ವದಿಸಿದನು. ದೇವರ ಮಂಜೂಷವು ಒಬೇದೆದೋಮನ ಮನೆ ಯವರ ಸಂಗಡ ಅವನ ಮನೆಯಲ್ಲಿ ಮೂರು ತಿಂಗಳು ಇದ್ದದರಿಂದ ಕರ್ತನು ಒಬೇದೆದೋಮನ ಮನೆ ಯನ್ನೂ ಅವನಿಗಿದ್ದದ್ದೆಲ್ಲವನ್ನೂ ಆಶೀರ್ವದಿಸಿದನು.
- 1 Samuel 8:12 1 ಸಮುವೇಲನು 8:12ಕೆಲ ವರು ಅವನ ರಥಗಳ ಮುಂದೆ ಓಡುವರು. ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿ ಗಳಾಗಿಯೂ ತನ್ನ ಭೂಮಿಯನ್ನು ಉಳುವವರಾ ಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ತನ್ನ ರಥದ ಸಾಮಾನು ಗಳನ್ನು ಮಾಡುವವರಾಗಿಯೂ ನೇಮಿಸುವನು.
- Numbers 31:14 ಅರಣ್ಯಕಾಂಡ 31:14ಆದರೆ ಮೋಶೆಯು ಯುದ್ಧದಿಂದ ಬಂದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಆಗಿರುವವರ ಮೇಲೆ ಕೋಪಗೊಂಡು
- 1 Kings 8:1 1 ಅರಸುಗಳು 8:1ಆಗ ಚೀಯೋನೆಂಬ ದಾವೀದನ ಪಟ್ಟಣ ದೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಅರಸನಾದ ಸೊಲೊ ಮೋನನು ಇಸ್ರಾಯೇಲಿನ ಮಕ್ಕಳಲ್ಲಿ ಶ್ರೇಷ್ಠರಾಗಿರುವ ತಂದೆಗಳಾದ ಇಸ್ರಾಯೇಲಿನ ಹಿರಿಯರನ್ನೂ ಗೋತ್ರ ಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
Original words (Hebrew)
- David · H1732דָּוִד Dâvid
- elders · H2205זָקֵן zâqên
- Israel · H3478יִשְׂרָאֵל Yisrâʼêl
- captains · H8269שַׂר sar
- thousands · H505אֶלֶף ʼeleph
- went · H1980הָלַךְ hâlak
- up · H5927עָלָה ʻâlâh
- ark · H727אָרוֹן ʼârôwn
- covenant · H1285בְּרִית bᵉrîyth
- house · H1004בַּיִת bayith
- Obed-edom · H5654עֹבֵד אֱדוֹם ʻÔbêd ʼĔdôwm
- joy · H8057שִׂמְחָה simchâh