1 Chronicles · chapter 16 · verse 6
1 Chronicles 16:6 in Kannada
ಇದಲ್ಲದೆ ಯಾಜಕರಾದ ಬೆನಾಯನೂ ಯೆಹಜೀಯೇಲನೂ ದೇವರ ಒಡಂಬ ಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
Idallade yaajakaraada benaayanoo yehajeeyelanoo devara odamba dikeya manjooshada munde yaavaagaloo tutoorigalannu ooduvavaraagiddaru.
1 Chronicles 16:6 in English
- King James Version (KJV)
- Benaiah also and Jahaziel the priests with trumpets continually before the ark of the covenant of God.
- World English Bible (WEB)
- with Benaiah and Jahaziel the priests with trumpets continually, before the ark of the covenant of God.
- American Standard Version (ASV)
- and Benaiah and Jahaziel the priests with trumpets continually, before the ark of the covenant of God.
- Bible in Basic English (BBE)
- And Benaiah and Jahaziel the priests, blowing horns all the time before the ark of the agreement of God.
- Darby Translation (DBY)
- and Benaiah and Jahaziel the priests with trumpets continually, before the ark of the covenant of God.
- Webster's Bible (WBS)
- Benaiah also and Jahaziel the priests with trumpets continually before the ark of the covenant of God.
- Young's Literal Translation (YLT)
- and Benaiah and Jahaziel the priests [are] with trumpets continually before the ark of the covenant of God.
Read in context
- 4ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
- 5ಅವರು ಯಾರಂದರೆ, ಮುಖ್ಯಸ್ಥನಾದ ಆಸಾಫನೂ ಅವನ ತರುವಾಯ ಜೆಕರ್ಯನೂ ಯೆಗೀಯೇಲನೂ ಶೆವಿಾರಾಮೋತನೂ ಯೆಹೀಯೇಲನೂ ಮತ್ತಿತ್ಯನೂ ಎಲೀಯಾಬನೂ ಬೆನಾಯನೂ ಒಬೇದೆದೋಮನೂ ಯೇಗಿಯೇಲನೂ. ಇವರು ವೀಣೆಗಳನ್ನೂ ಕಿನ್ನರಿ ಗಳನ್ನೂ ಬಾರಿಸುತ್ತಿದ್ದರು; ಆದರೆ ಆಸಾಫನು ತಾಳ ಗಳನ್ನು ಬಾರಿಸುತ್ತಿದ್ದನು.
- 6ಇದಲ್ಲದೆ ಯಾಜಕರಾದ ಬೆನಾಯನೂ ಯೆಹಜೀಯೇಲನೂ ದೇವರ ಒಡಂಬ ಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
- 7ಆಗ ಅದೇ ದಿವಸದಲ್ಲಿ ಕರ್ತನನ್ನು ಕೊಂಡಾಡುವದಕ್ಕೆ ದಾವೀದನು ಮೊದಲು ಆಸಾಫನಿಗೂ ಅವನ ಸಹೋದರರಿಗೂ ಈ ಸಂಗೀತವನ್ನು ಕೊಟ್ಟನು;--
- 8ಕರ್ತನನ್ನು ಕೊಂಡಾ ಡಿರಿ, ಆತನ ಹೆಸರನ್ನು ಕರೆಯಿರಿ; ಜನಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯುವಂತೆ ಮಾಡಿರಿ.
Cross references
- 2 Chronicles 29:26–28 2 ಪೂರ್ವಕಾಲವೃತ್ತಾಂತ 29:26–28ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರುವಾಗ ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿ ಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗ ಳಿಂದಲೂ ಕರ್ತನ ಹಾಡು ಆರಂಭವಾಯಿತು. ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ಪರ್ಯಂತರ ಹಾಡುಗಾರರು ಹಾಡಿದರು, ತುತೂರಿ ಊದುವವರು ಊದಿದರು.
- 2 Chronicles 5:12–13 2 ಪೂರ್ವಕಾಲವೃತ್ತಾಂತ 5:12–13ಯಾಜಕರು ಪರಿಶುದ್ಧ ಸ್ಥಳದಿಂದ ಹೊರ ಟಾಗ ಸಂಗೀತಗಾರರಾಗಿರುವ ಲೇವಿಯರೂ ಆಸಾಫ್, ಹೇಮಾನ್, ಯೆದೂತೂನ್ ಇವರೆಲ್ಲರೂ ಅವರ ಮಕ್ಕಳೂ ಸಹೋದರರೂ ನಾರು ಮಡಿಯನ್ನು ಧರಿಸಿ ಕೊಂಡು ತಾಳ ವೀಣೆ ಕಿನ್ನರಿಗಳನ್ನು ಹಿಡಿದು ಬಲಿ ಪೀಠದ ಮೂಡಣ ಪಾರ್ಶ್ವದಲ್ಲಿ ನಿಂತುಕೊಂಡರು; ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಇದ್ದರು. ತುತೂರಿ ಊದುವವರೂ ಸಂಗೀತಗಾರರೂ ಕರ್ತನನ್ನು ಕೊಂಡಾ ಡುತ್ತಾ ಹೊಗಳುತ್ತಾ ಏಕವಾಗಿ ಒಂದೇ ಶಬ್ದ ಮಾಡಿ ದಾಗ ತುತೂರಿ ತಾಳ ಮೊದಲಾದ ಗೀತ ವಾದ್ಯಗಳಿಂದ ತಮ್ಮ ಶಬ್ದವನ್ನೆತ್ತಿ--ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇರುವದೆಂದೂ ಕರ್ತನನ್ನು ಕೀರ್ತಿಸುವಾಗ ಕರ್ತನ ಆಲಯವು ಮೇಘದಿಂದ ತುಂಬಲ್ಪಟ್ಟಿತು.ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು.
- 2 Chronicles 13:12 2 ಪೂರ್ವಕಾಲವೃತ್ತಾಂತ 13:12ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು.
- Numbers 10:8 ಅರಣ್ಯಕಾಂಡ 10:8ಯಾಜಕರಾಗಿರುವ ಆರೋನನ ಕುಮಾರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು.