1 Chronicles · chapter 17 · verse 22
1 Chronicles 17:22 in Kannada
ನೀನು ನಿನ್ನ ಜನರಾದ ಇಸ್ರಾಯೇಲ್ಯರನ್ನು ಯುಗಯುಗಾಂತರಕ್ಕೂ ನಿನ್ನ ಸ್ವಂತ ಜನರಾಗಿ ಮಾಡಿದಿ; ನೀನು ಕರ್ತನೇ, ಅವರ ದೇವರಾದಿ.
Neenu ninna janaraada israayelyarannu yugayugaantarakkoo ninna svanta janaraagi maadidi; neenu kartane, avara devaraadi.
1 Chronicles 17:22 in English
- King James Version (KJV)
- For thy people Israel didst thou make thine own people for ever; and thou, LORD, becamest their God.
- World English Bible (WEB)
- For you made your people Israel your own people forever; and you, LORD, became their God.
- American Standard Version (ASV)
- For thy people Israel didst thou make thine own people for ever; and thou, Jehovah, becamest their God.
- Bible in Basic English (BBE)
- For your people Israel you made yours for ever; and you, Lord, became their God.
- Darby Translation (DBY)
- And thy people Israel hast thou made thine own people for ever; and thou, Jehovah, art become their God.
- Webster's Bible (WBS)
- For thy people Israel didst thou make thy own people for ever; and thou, LORD, becamest their God.
- Young's Literal Translation (YLT)
- Yea, Thou dost appoint Thy people Israel to Thee for a people unto the age, and Thou, O Jehovah, hast been to them for God.
Read in context
- 20ಓ ಕರ್ತನೇ, ನಾವು ನಮ್ಮ ಕಿವಿಗಳಿಂದ ಕೇಳಿದ ಎಲ್ಲಾದರ ಪ್ರಕಾರ ನಿನ್ನ ಹಾಗೆ ಯಾರೂ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ.
- 21ನಿನ್ನ ಜನರಾದ ಇಸ್ರಾಯೇಲ್ಯರ ಹಾಗೆ ಭೂಮಿ ಯಲ್ಲಿರುವ ಜನಗಳೊಳಗೆ ಜನಾಂಗವು ಯಾವದು? ಐಗುಪ್ತದಿಂದ ಬಿಡಿಸಿದ ನಿನ್ನ ಜನರ ಮುಂದೆ ಜನಾಂಗ ಗಳನ್ನು ಓಡಿಸಿ ನಿನಗೆ ದೊಡ್ಡದಾದಂಥ ಭಯಂಕರ ವಾದಂಥ ನಾಮವನ್ನು ಉಂಟು ಮಾಡಲು ದೇವರಾದ ನೀನು ನಿನ್ನ ಸ್ವಂತ ಜನರಾದ ಅವರನ್ನು ಬಿಡಿಸಲು ಹೋದಿ.
- 22ನೀನು ನಿನ್ನ ಜನರಾದ ಇಸ್ರಾಯೇಲ್ಯರನ್ನು ಯುಗಯುಗಾಂತರಕ್ಕೂ ನಿನ್ನ ಸ್ವಂತ ಜನರಾಗಿ ಮಾಡಿದಿ; ನೀನು ಕರ್ತನೇ, ಅವರ ದೇವರಾದಿ.
- 23ಈಗ ಕರ್ತನೇ, ನೀನು ನಿನ್ನ ಸೇವಕನನ್ನು ಕುರಿತು ಅವನ ಮನೆಯನ್ನು ಕುರಿತು ಹೇಳಿದ ಮಾತು ಯುಗಯುಗಾಂತರಕ್ಕೂ ನಿಶ್ಚಯವಾಗಲಿ; ನೀನು ಹೇಳಿದ ಹಾಗೆ ಮಾಡು.
- 24ಅದು ನಿಶ್ಚಯವಾಗಲಿ; ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಇಸ್ರಾಯೇಲಿಗೆ ದೇವರಾಗಿದ್ದಾ ನೆಂದು ನಿನ್ನ ನಾಮವು ಯುಗಯುಗಾಂತರಕ್ಕೂ ಘನ ಹೊಂದಲಿ;
Cross references
- Exodus 19:5–6 ವಿಮೋಚನಕಾಂಡ 19:5–6ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- 1 Peter 2:9 1 ಪೇತ್ರನು 2:9ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.
- Jeremiah 31:31–34 ಯೆರೆಮೀಯ 31:31–34ಇಗೋ, ನಾನು ಇಸ್ರಾಯೇಲಿನ ಮನೆತನದವರ ಸಂಗಡಲೂ ಯೆಹೂದದ ಮನೆತನದವರ ಸಂಗ ಡಲೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ. ನಾನು ಅವರ ತಂದೆಗಳ ಸಂಗಡ ಅವರನ್ನು ಐಗುಪ್ತದೇಶದಿಂದ ಹೊರತರುವದಕ್ಕೆ ಅವರ ಕೈ ಹಿಡಿದ ದಿನದಲ್ಲಿ ಮಾಡಿದ ಒಡಂಬಡಿಕೆಯ ಹಾಗಲ್ಲ; ನಾನು ಅವರ ಯಜಮಾನನಾಗಿದ್ದಾಗ್ಯೂ ಆ ನನ್ನ ಒಡಂಬಡಿಕೆಯನ್ನು ಅವರು ವಿಾರಿದರೆಂದು, ಕರ್ತನು ಅನ್ನುತ್ತಾನೆ. ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ. ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ.
- Zechariah 13:9 ಜೆಕರ್ಯ 13:9ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Romans 9:4–6 ರೋಮಾಪುರದವರಿಗೆ 9:4–6ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು. ಪಿತೃಗಳು ಇವರಿಗೆ ಸಂಬಂಧಪಟ್ಟವರೇ; ಶರೀರ ಸಂಬಂಧವಾಗಿ ಕ್ರಿಸ್ತನು ಇವರಿಂದಲೇ ಬಂದನು; ಆತನು ಎಲ್ಲಾದರ ಮೇಲೆ ಇರುವಾತನಾಗಿದ್ದು ನಿರಂತರಕ್ಕೂ ಸ್ತುತಿ ಹೊಂದತಕ್ಕ ದೇವರಾಗಿದ್ದಾನೆ. ಆಮೆನ್. ದೇವರ ಮಾತು ನಿರರ್ಥಕವಾಯಿತೆಂತಲ್ಲ; ಯಾಕಂದರೆ ಇಸ್ರಾಯೇಲ್ಯರಿಗೆ ಸಂಬಂಧಪಟ್ಟವ ರೆಲ್ಲರೂ ಇಸ್ರಾಯೇಲ್ಯರಲ್ಲ;
- 1 Samuel 12:22 1 ಸಮುವೇಲನು 12:22ನಿಮ್ಮನ್ನು ತನ್ನ ಜನರಾಗಿ ಮಾಡಿಕೊಳ್ಳಲು ಇಚ್ಛೈಸಿದ್ದಾನಲ್ಲಾ! ಇದಲ್ಲದೆ ನಾನು ನಿಮಗೋಸ್ಕರ ಪ್ರಾರ್ಥನೆ ಮಾಡದೆ ಕರ್ತನಿಗೆ ವಿರೋಧವಾಗಿ ಮಾಡುವ ಪಾಪವು ನನಗೆ ದೂರವಾಗಿರಲಿ.
- Deuteronomy 7:6–8 ಧರ್ಮೋಪದೇಶಕಾಂಡ 7:6–8ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ. ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ. ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು.
- Romans 9:25–26 ರೋಮಾಪುರದವರಿಗೆ 9:25–26ಇದಲ್ಲದೆ ಆತನು--ನನ್ನ ಜನರಲ್ಲದವರನ್ನು ನನ್ನ ಜನರೆಂದೂ ನನಗೆ ಪ್ರಿಯಳಲ್ಲದವಳನ್ನು ಪ್ರಿಯಳೆಂದೂ ಕರೆಯು ವೆನು ಎಂದು ಹೋಶೇಯನ ಮೂಲಕ ಹೇಳುತ್ತಾನೆ. ಯಾವ ಸ್ಥಳದಲ್ಲಿ ಅವರಿಗೆ--ನೀವು ನನ್ನ ಜನರಲ್ಲ ಎಂದು ಎಲ್ಲಿ ಹೇಳಲ್ಪಟ್ಟಿದೆಯೋ ಅಲ್ಲಿಯೇ ಅವರು ಜೀವಿಸುವ ದೇವರ ಮಕ್ಕಳೆಂದು ಕರೆಯಲ್ಪಡುವರು ಎಂಬದು.
- Genesis 17:7 ಆದಿಕಾಂಡ 17:7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- Deuteronomy 26:18–19 ಧರ್ಮೋಪದೇಶಕಾಂಡ 26:18–19ಕರ್ತನು ಈಹೊತ್ತು ನಿನಗೆ ತಾನು ವಾಗ್ದಾನಮಾಡಿದಂತೆ ನೀನು ಆತನಿಗೆ ಅಸಮಾನ್ಯ ಜನವಾಗಬೇಕೆಂದೂ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಬೇಕೆಂದೂಆತನು ಮಾಡಿದ ಎಲ್ಲಾ ಜನಾಂಗಗಳ ಮೇಲೆ ಸ್ತುತಿಯಲ್ಲಿಯೂ ಹೆಸರಿನಲ್ಲಿಯೂ ಘನತೆಯಲ್ಲಿಯೂ ನೀನು ಉನ್ನತ ವಾಗಬೇಕೆಂದೂ ನೀನು ನಿನ್ನ ದೇವರಾದ ಕರ್ತನಿಗೆ ಆತನು ಹೇಳಿದಂತೆ ಪರಿಶುದ್ಧ ಜನವಾಗಬೇಕೆಂದೂ ದೃಢವಾಗಿ ಹೇಳಿದ್ದಾನೆ. ಆತನು ಮಾಡಿದ ಎಲ್ಲಾ ಜನಾಂಗಗಳ ಮೇಲೆ ಸ್ತುತಿಯಲ್ಲಿಯೂ ಹೆಸರಿನಲ್ಲಿಯೂ ಘನತೆಯಲ್ಲಿಯೂ ನೀನು ಉನ್ನತ ವಾಗಬೇಕೆಂದೂ ನೀನು ನಿನ್ನ ದೇವರಾದ ಕರ್ತನಿಗೆ ಆತನು ಹೇಳಿದಂತೆ ಪರಿಶುದ್ಧ ಜನವಾಗಬೇಕೆಂದೂ ದೃಢವಾಗಿ ಹೇಳಿದ್ದಾನೆ.
- Romans 11:1–12 ರೋಮಾಪುರದವರಿಗೆ 11:1–12ಹಾಗಾದರೆ--ದೇವರು ತನ್ನ ಪ್ರಜೆಯನ್ನು ತಳ್ಳಿಬಿಟ್ಟದ್ದುಂಟೇ ಎಂದು ನಾನು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಯಾಕಂದರೆ ನಾನು ಸಹ ಇಸ್ರಾಯೇಲ್ಯನು. ಅಬ್ರ ಹಾಮನ ಸಂತತಿಯವನು, ಬೆನ್ಯಾವಿಾನನ ಗೋತ್ರ ದವನು ಆಗಿದ್ದೇನಲ್ಲಾ. ದೇವರು ಮುಂದಾಗಿ ಅರಿತುಕೊಂಡಿದ್ದ ತನ್ನ ಜನರನ್ನು ತಳ್ಳಿಹಾಕಲಿಲ್ಲ. ಎಲೀಯನ ವಿಷಯವಾಗಿಯಾದರೋ ಅವನು ಇಸ್ರಾಯೇಲ್ಯರಿಗೆ ವಿರೋಧವಾಗಿ ದೇವರಿಗೆ ವಿಜ್ಞಾಪನೆ ಮಾಡುತ್ತಾ-- ಕರ್ತನೇ, ಅವರು ನಿನ್ನ ಪ್ರವಾದಿಗಳನ್ನು ಕೊಂದು ನಿನ್ನ ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ; ಆದರೆ ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಿದ್ದಾರೆ ಎಂದು ಬರಹವು ಹೇಳಿದ್ದು ನಿಮಗೆ ಗೊತ್ತಿಲ್ಲವೋ? ಆದರೆ ದೇವರು ಅವನಿಗೆ ಕೊಟ್ಟ ಉತ್ತರವೇನಂದರೆ--ಬಾಳನ ವಿಗ್ರಹಕ್ಕೆ ಮೊಣಕಾಲೂರದ ಏಳುಸಾವಿರ ಜನರನ್ನು ನಾನು ನನಗೋಸ್ಕರ ಉಳಿಸಿಕೊಂಡಿದ್ದೇನೆ ಎಂಬದು. ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ. ಕೃಪೆಯಿಂದಾಗಿದ್ದರೆ ಇನ್ನೆಂದಿಗೂ ಕ್ರಿಯೆಗಳಿಂದಲ್ಲ; ಇಲ್ಲವಾದರೆ ಕೃಪೆಯು ಇನ್ನೆಂದಿಗೂ ಕೃಪೆಯೇ ಅಲ್ಲ. ಕ್ರಿಯೆಗಳಿಂದಾಗಿದ್ದರೆ ಇನ್ನೆಂದಿಗೂ ಕೃಪೆಯಲ್ಲ; ಇಲ್ಲವಾದರೆ ಕ್ರಿಯೆಯು ಇನ್ನೆಂದಿಗೂ ಕ್ರಿಯೆಯಲ್ಲ. ಹಾಗಾದರೇನು? ಇಸ್ರಾ ಯೇಲ್ಯರು ತಾವು ಹುಡುಕಿದ್ದನ್ನು ಹೊಂದಿಕೊಳ್ಳಲಿಲ್ಲ; ಆದರೆ ಆಯ್ಕೆಯಾದವರು ಅದನ್ನು ಹೊಂದಿಕೊಂಡರು. (ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ. ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ. ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ. ಹಾಗಾದರೆ--ಅವರು ಬಿದ್ದುಹೋಗುವಂತೆ ಎಡವಿದರೆಂದು ನಾನು ಹೇಳಬೇಕೋ? ಹಾಗೆ ಎಂದಿಗೂ ಆಗಬಾರದು; ಆದರೆ ಅವರಲ್ಲಿ ಹುರುಡು ಹುಟ್ಟಿಸುವದಕ್ಕಾಗಿ ಅವರ ಬೀಳುವಿಕೆಯ ಮೂಲಕವೇ ಅನ್ಯಜನರಿಗೆ ರಕ್ಷಣೆಯುಂಟಾಯಿತು. ಅವರ ಬೀಳುವಿಕೆಯು ಲೋಕದ ಐಶ್ವರ್ಯಕ್ಕೂ ಅವರ ಕುಂದುವಿಕೆಯು ಅನ್ಯಜನಗಳ ಸಂಪತ್ತಿಗೂ ಆಗಿರು ವದಾದರೆ ಅವರ ಸಮೃದ್ಧಿಯು ಇನ್ನೂ ಎಷ್ಟೋ ಹೆಚ್ಚಾಗಿರುವದಲ್ಲವೇ?