1 Chronicles · chapter 21 · verse 29
1 Chronicles 21:29 in Kannada
ಅರಣ್ಯ ದಲ್ಲಿ ಮೋಶೆಯು ಮಾಡಿದ ಕರ್ತನ ಗುಡಾರವೂ ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.ಆದರೆ ದಾವೀದನು ದೇವರ ಹತ್ತಿರ ವಿಚಾರಿಸಲು ಅದರ ಬಳಿಗೆ ಹೋಗ ಲಾರದೆ ಇದ್ದನು; ಯಾಕಂದರೆ ಅವನು ಕರ್ತನ ದೂತನ ಕತ್ತಿಯ ನಿಮಿತ್ತ ಹೆದರಿದನು.
Aranya dalli mosheyu maadida kartana gudaaravoo dahanabalipeethavoo aa kaaladalli gibyonina unnata sthaladalli iddavu.aadare daaveedanu devara hattira vichaarisalu adara balige hoga laarade iddanu; yaakandare avanu kartana dootana kattiya nimitta hedaridanu.
1 Chronicles 21:29 in English
- King James Version (KJV)
- For the tabernacle of the LORD, which Moses made in the wilderness, and the altar of the burnt offering, [were] at that season in the high place at Gibeon.
- World English Bible (WEB)
- For the LORD’s tabernacle, which Moses made in the wilderness, and the altar of burnt offering, were at that time in the high place at Gibeon.
- American Standard Version (ASV)
- For the tabernacle of Jehovah, which Moses made in the wilderness, and the altar of burnt-offering, were at that time in the high place at Gibeon.
- Bible in Basic English (BBE)
- For the House of the Lord, which Moses had made in the waste land, and the altar of burned offerings, were at that time in the high place at Gibeon.
- Darby Translation (DBY)
- And the tabernacle of Jehovah, which Moses had made in the wilderness, and the altar of burnt-offering, were at that time in the high place at Gibeon.
- Webster's Bible (WBS)
- For the tabernacle of the LORD, which Moses made in the wilderness, and the altar of the burnt-offering, [were] at that season in the high place at Gibeon.
- Young's Literal Translation (YLT)
- and the tabernacle of Jehovah that Moses made in the wilderness, and the altar of the burnt-offering, [are] at that time in a high place, in Gibeon;
Read in context
- 27ಆಗ ಕರ್ತನು ದೂತನಿಗೆ ಹೇಳಿದ್ದರಿಂದ ಅವನು ತನ್ನ ಕತ್ತಿಯನ್ನು ಅದರ ಒರೆಯಲ್ಲಿ ತಿರುಗಿ ಹಾಕಿದನು.
- 28ಕರ್ತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ತನಗೆ ಪ್ರತ್ಯುತ್ತರ ಕೊಟ್ಟನೆಂದು ದಾವೀದನು ಕಂಡಾಗ ಅವನು ಅಲ್ಲಿ ಬಲಿಗಳನ್ನು ಅರ್ಪಿಸಿದನು.
- 29ಅರಣ್ಯ ದಲ್ಲಿ ಮೋಶೆಯು ಮಾಡಿದ ಕರ್ತನ ಗುಡಾರವೂ ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.ಆದರೆ ದಾವೀದನು ದೇವರ ಹತ್ತಿರ ವಿಚಾರಿಸಲು ಅದರ ಬಳಿಗೆ ಹೋಗ ಲಾರದೆ ಇದ್ದನು; ಯಾಕಂದರೆ ಅವನು ಕರ್ತನ ದೂತನ ಕತ್ತಿಯ ನಿಮಿತ್ತ ಹೆದರಿದನು.
- 30ಆದರೆ ದಾವೀದನು ದೇವರ ಹತ್ತಿರ ವಿಚಾರಿಸಲು ಅದರ ಬಳಿಗೆ ಹೋಗ ಲಾರದೆ ಇದ್ದನು; ಯಾಕಂದರೆ ಅವನು ಕರ್ತನ ದೂತನ ಕತ್ತಿಯ ನಿಮಿತ್ತ ಹೆದರಿದನು.
Cross references
- 1 Chronicles 16:39 1 ಪೂರ್ವಕಾಲವೃತ್ತಾಂತ 16:39ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ
- 2 Chronicles 1:13 2 ಪೂರ್ವಕಾಲವೃತ್ತಾಂತ 1:13ತರುವಾಯ ಸೊಲೊಮೋನನು ಸಭೆಯ ಗುಡಾರವನ್ನು ಬಿಟ್ಟು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಿಂದ ಯೆರೂಸ ಲೇಮಿಗೆ ಬಂದು ಇಸ್ರಾಯೇಲನ್ನು ಆಳಿದನು.
- 2 Chronicles 1:3 2 ಪೂರ್ವಕಾಲವೃತ್ತಾಂತ 1:3ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.
- Exodus 40:1–38 ವಿಮೋಚನಕಾಂಡ 40:1–38ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ-- ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು. ಮಂಜೂಷದ ಸಾಕ್ಷಿಯ ಪೆಟ್ಟಿಗೆಯನ್ನು ಒಳಗಿಟ್ಟು ಅದನ್ನು ನೀನು ತೆರೆಯಿಂದ ಮುಚ್ಚಬೇಕು. ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪ ಸ್ತಂಭವನ್ನು ಒಳಗೆ ತಂದು ನೀನು ಅದರ ದೀಪಗಳನ್ನು ಅಂಟಿಸಬೇಕು. ನೀನು ಧೂಪಕ್ಕೋಸ್ಕರ ಮಾಡಿದ ಚಿನ್ನದ ಬಲಿಪೀಠವನ್ನು ಮಂಜೂಷದ ಸಾಕ್ಷಿಯ ಪೆಟ್ಟಿಗೆಗೆ ಎದುರಾಗಿ ಇಟ್ಟು, ಗುಡಾರದ ಬಾಗಿಲಿಗೆ ತೆರೆಯನ್ನು ಹಾಕಬೇಕು. ನೀನು ದಹನಬಲಿಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡ ಬೇಕು. ನೀನು ಸಭೆಯ ಡೇರೆಗೂ ಯಜ್ಞವೇದಿಗೂ ಮಧ್ಯದಲ್ಲಿ ಗಂಗಾಳವನ್ನಿಟ್ಟು ಅದರಲ್ಲಿ ನೀರನ್ನು ಹೊಯ್ಯ ಬೇಕು. ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ತೆರೆಯನ್ನು ತೂಗುಹಾಕಬೇಕು. ನೀನು ಅಭಿಷೇಕ ತೈಲವನ್ನು ತಕ್ಕೊಂಡು ಗುಡಾರ ವನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ ಅದನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ಪರಿಶುದ್ಧ ಮಾಡು; ಆಗ ಅದು ಪರಿಶುದ್ಧವಾಗುವದು. ದಹನಬಲಿಪೀಠವನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ನೀನು ಅಭಿಷೇಕಿಸಿ ಬಲಿಪೀಠವನ್ನು ಪವಿತ್ರ ಮಾಡು; ಆಗ ಅದು ಅತೀ ಪರಿಶುದ್ಧವಾದ ಬಲಿಪೀಠ ವಾಗುವದು. ಗಂಗಾಳವನ್ನೂ ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ ಅದನ್ನು ಪರಿಶುದ್ಧ ಮಾಡಬೇಕು. ಆರೋನನನ್ನೂ ಅವನ ಮಕ್ಕಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ ಅವರನ್ನು ನೀರಿನಿಂದ ತೊಳೆಯಬೇಕು. ಆರೋನನು ನನಗೆ ಯಾಜಕ ಸೇವೆಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ ಶುದ್ಧ ಮಾಡಬೇಕು. ಅವನ ಕುಮಾರರನ್ನು ನೀನು ಬರ ಮಾಡಿಕೊಂಡು ಅವರಿಗೆ ಅಂಗಿಗಳನ್ನು ತೊಡಿಸಿ ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವ ರನ್ನೂ ನೀನು ಅಭಿಷೇಕಿಸು. ಅವರ ಅಭಿಷೇಕವು ನಿಶ್ಚಯವಾಗಿದ್ದು ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವದು ಎಂದು ಹೇಳಿದನು. ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು. ಎರಡನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಗುಡಾರವು ನಿಲ್ಲಿಸಲ್ಪಟ್ಟಿತು. ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ ಅದರ ಕಾಲುಗಳನ್ನು ಬಿಗಿದು ಅದರ ಹಲಗೆಗಳನ್ನು ಇರಿಸಿ ಅಗುಳಿಗಳನ್ನು ಹಾಕಿ ಅದರ ಸ್ತಂಭಗಳನ್ನು ನಿಲ್ಲಿಸಿದನು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು. ಅವನು ಪ್ರಮಾಣವನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿ ಇಟ್ಟು ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ ಮಂಜೂಷದ ಮೇಲೆ ಕರುಣಾ ಸನವನ್ನು ಇಟ್ಟನು. ಅವನು ಮಂಜೂಷವನ್ನು ಗುಡಾರಕ್ಕೆ ತಂದು ಮರೆಮಾಡುವ ತೆರೆಯನ್ನಿರಿಸಿದನು. ಕರ್ತನು ಹೇಳಿದ ಹಾಗೆಯೇ ಮೋಶೆಯು ಮಾಡಿದನು. ಸಭೆ ಡೇರೆಯ ಗುಡಾರದ ಉತ್ತರ ಭಾಗದಲ್ಲಿ ತೆರೆಯ ಹೊರಗೆ ಮೇಜನ್ನು ಇಟ್ಟನು. ರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿ ಯನ್ನು ಕರ್ತನ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು. ಸಭೆಯ ಡೇರೆಯಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಕರ್ತನ ಸನ್ನಿಧಿಯಲ್ಲಿ ದೀಪಗಳನ್ನು ಹತ್ತಿಸಿದನು. ಚಿನ್ನದ ವೇದಿಯನ್ನು ಸಭೆಯ ಡೇರೆಯಲ್ಲಿ ತೆರೆಯ ಮುಂದೆ ಇಟ್ಟನು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು. ಗುಡಾರದ ಬಾಗಿಲಿನ ತೆರೆಯನ್ನು ತೂಗುಹಾಕಿ ದನು. ಸಭೆ ಡೇರೆಯ ಗುಡಾರದ ಬಳಿಯಲ್ಲಿ ದಹನ ಬಲಿಪೀಠವನ್ನು ಇಟ್ಟನು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ದಹನಬಲಿಯನ್ನೂ ಆಹಾರಸಮರ್ಪಣೆಯನ್ನೂ ಅರ್ಪಿಸಿದನು. ಸಭೆ ಡೇರೆಗೂ ಯಜ್ಞವೇದಿಗೂ ಮಧ್ಯ ಗಂಗಾಳ ವನ್ನು ಇಟ್ಟು ಅದರಲ್ಲಿ ತೊಳೆಯುವದಕ್ಕೆ ನೀರನ್ನು ಹೊಯ್ದನು. ಮೋಶೆಯೂ ಆರೋನನೂ ಅವನ ಕುಮಾರರೂ ಅದರಲ್ಲಿ ಕೈಕಾಲುಗಳನ್ನು ತೊಳೆದು ಕೊಂಡರು. ಅವರು ಸಭೆಯ ಡೇರೆಯೊಳಗೆ ಸೇರುವ ಸಮಯದಲ್ಲಿಯೂ ಯಜ್ಞವೇದಿಯ ಸವಿಾಪಕ್ಕೆ ಬರುವ ಸಮಯದಲ್ಲಿಯೂ ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ತೊಳೆದುಕೊಂಡರು. ಗುಡಾರಕ್ಕೂ ಯಜ್ಞವೇದಿಗೂ ಸುತ್ತಲೂ ಅಂಗಳ ವನ್ನು ನಿಲ್ಲಿಸಿ ಅಂಗಳದ ಬಾಗಿಲಿನ ತೆರೆಯನ್ನು ತೂಗು ಹಾಕಿದನು. ಈ ಪ್ರಕಾರ ಮೋಶೆಯು ಆ ಕೆಲಸವನ್ನು ತೀರಿಸಿದನು. ಆಗ ಮೇಘವು ಸಭೆಯ ಡೇರೆಯನ್ನು ಮುಚ್ಚಿಕೊಂಡು ಕರ್ತನ ಮಹಿಮೆಯು ಗುಡಾರವನ್ನು ತುಂಬಿಕೊಂಡಿತು. ಸಭೆ ಡೇರೆಯ ಮೇಲೆ ಮೇಘವು ನೆಲೆಯಾಗಿದದ್ದರಿಂದಲೂ ಕರ್ತನ ಮಹಿಮೆಯು ಗುಡಾರವನ್ನು ತುಂಬಿದ್ದರಿಂದಲೂ ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು. ಮೇಘವು ಗುಡಾರದ ಮೇಲಕ್ಕೆ ಎತ್ತಲ್ಪಟ್ಟಾಗ ಇಸ್ರಾಯೇಲ್ ಮಕ್ಕಳು ತಮ್ಮ ಎಲ್ಲಾ ಪ್ರಯಾಣಗಳನ್ನು ಮುಂದುವರಿಸುತ್ತಿದ್ದರು. ಆದರೆ ಮೇಘವು ಎತ್ತಲ್ಪ ಡದೆ ಇರುವಾಗ ಅದು ಎತ್ತಲ್ಪಡುವ ದಿವಸದ ವರೆಗೆ ಅವರು ಪ್ರಯಾಣ ಮಾಡಲಿಲ್ಲ,ಇಸ್ರಾಯೇಲ್ಯರ ಮನೆಯವರೆಲ್ಲರ ಕಣ್ಣುಗಳ ಮುಂದೆ ಅವರ ಎಲ್ಲಾ ಪ್ರಯಾಣಗಳಲ್ಲಿ ಹಗಲಿನಲ್ಲಿ ಕರ್ತನ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಅಗ್ನಿಯು ಅದರ ಮೇಲೆ ಇತ್ತು. ಇಸ್ರಾಯೇಲ್ಯರ ಮನೆಯವರೆಲ್ಲರ ಕಣ್ಣುಗಳ ಮುಂದೆ ಅವರ ಎಲ್ಲಾ ಪ್ರಯಾಣಗಳಲ್ಲಿ ಹಗಲಿನಲ್ಲಿ ಕರ್ತನ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಅಗ್ನಿಯು ಅದರ ಮೇಲೆ ಇತ್ತು.
- 1 Kings 3:4–15 1 ಅರಸುಗಳು 3:4–15ಗಿಬ್ಯೋನು ದೊಡ್ಡ ಎತ್ತರದ ಸ್ಥಳ; ಆದದರಿಂದ ಅರಸನು ಯಜ್ಞವನ್ನರ್ಪಿಸಲು ಅಲ್ಲಿಗೆ ಹೋಗಿ ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು. ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿ ಯಲ್ಲಿ ಸ್ವಪ್ನದೊಳಗೆ ಕರ್ತನು ಸೊಲೊಮೋನನಿಗೆ ಕಾಣಿಸಿಕೊಂಡನು. ದೇವರು ಅವನಿಗೆ--ನಾನು ನಿನಗೆ ಏನು ಕೊಡಬೇಕು ಕೇಳಿಕೋ ಅಂದನು. ಅದಕ್ಕೆ ಸೊಲೊಮೋನನು--ನನ್ನ ತಂದೆಯಾಗಿರುವ ನಿನ್ನ ಸೇವಕನಾದ ದಾವೀದನು ನಿನ್ನ ಮುಂದೆ ಸತ್ಯದಿಂದಲೂ ನೀತಿಯಿಂದಲೂ ಯಥಾರ್ಥವಾದ ಹೃದಯವುಳ್ಳವ ನಾಗಿಯೂ ನಡೆದದ್ದರಿಂದ ನೀನು ಅವನಿಗೆ ಬಹು ದಯೆತೋರಿಸಿ ಈ ಮಹಾಕರುಣೆಯನ್ನು ಅವನಿ ಗೋಸ್ಕರ ಕಾದಿಟ್ಟಿದ್ದೀ. ಈ ಹೊತ್ತಿರುವ ಹಾಗೆಯೇ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಬ್ಬ ಮಗನನ್ನು ಕೊಟ್ಟಿದ್ದೀ. ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ. ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು. ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು. ಸೊಲೊಮೋನನು ಕೇಳಿದ ಈ ಮಾತು ಕರ್ತನ ದೃಷ್ಟಿಗೆ ಒಳ್ಳೇದಾಗಿತ್ತು. ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ. ನೀನು ಕೇಳದ ಐಶ್ವ ರ್ಯವನ್ನೂ ಘನವನ್ನೂ ಕೊಟ್ಟಿದ್ದೇನೆ. ಆದದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸು ಗಳಲ್ಲಿ ಒಬ್ಬನೂ ಇರುವದಿಲ್ಲ. ನೀನು ನಿನ್ನ ತಂದೆಯಾದ ದಾವೀದನು ನಡೆದ ಪ್ರಕಾರ ನನ್ನ ಮಾರ್ಗಗಳಲ್ಲಿ ನಡೆದು ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡರೆ ನಿನ್ನ ದಿವಸಗಳನ್ನು ಹೆಚ್ಚಿಸುವೆನು ಅಂದನು. ಆಗ ಸೊಲೊಮೋನನು ಎಚ್ಚತ್ತಾಗ ಇಗೋ, ಅದು ಸ್ವಪ್ನವಾಗಿತ್ತು, ಅವನು ಯೆರೂ ಸಲೇಮಿಗೆ ಬಂದು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತನ್ನ ಸೇವಕರಿಗೆ ಔತಣ ಮಾಡಿಸಿದನು.