1 Chronicles · chapter 4 · verse 15
1 Chronicles 4:15 in Kannada
ಯೆಫುನ್ನೆಯ ಮಗನಾದ ಕಾಲೇಬನ ಕುಮಾರರು--ಈರುವು, ಏಲನು, ನಾಮನು, ಏಲನ ವರು, ಕೆನಜನು.
Yephunneya maganaada kaalebana kumaararu--eeruvu, elanu, naamanu, elana varu, kenajanu.
1 Chronicles 4:15 in English
- King James Version (KJV)
- And the sons of Caleb the son of Jephunneh; Iru, Elah, and Naam: and the sons of Elah, even Kenaz.
- World English Bible (WEB)
- The sons of Caleb the son of Jephunneh: Iru, Elah, and Naam. The son of Elah: Kenaz.
- American Standard Version (ASV)
- And the sons of Caleb the son of Jephunneh: Iru, Elah, and Naam; and the sons of Elah; and Kenaz.
- Bible in Basic English (BBE)
- And the sons of Caleb, the son of Jephunneh: Iru, Elah, and Naam; and the son of Elah: Kenaz.
- Darby Translation (DBY)
- — And the sons of Caleb the son of Jephunneh: Iru, Elah, and Naam; and the sons of Elah, ...and Kenaz.
- Webster's Bible (WBS)
- And the sons of Caleb the son of Jephunneh; Iru, Elah, and Naam: and the sons of Elah, even Kenaz.
- Young's Literal Translation (YLT)
- And sons of Caleb son of Jephunneh: Iru, Elah, and Naam; and sons of Elah, even Kenaz.
Read in context
- 13ಇವರೇ ರೇಕಾಹ್ಯರು. ಕೆನಾಜನ ಕುಮಾರರು--ಒತ್ನೀಯೇಲನು ಸೆರಾಯನು. ಒತ್ನೀಯೇಲನ ಕುಮಾ ರರು--ಹತತನು.
- 14ಮೆಯೋನೋತೈಯು ಒಫ್ರಾಹ ನನ್ನು ಪಡೆದನು; ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮ್ಯರ ತಂದೆಯಾದ ಯೋವಾಬನನ್ನು ಪಡೆದನು.
- 15ಯೆಫುನ್ನೆಯ ಮಗನಾದ ಕಾಲೇಬನ ಕುಮಾರರು--ಈರುವು, ಏಲನು, ನಾಮನು, ಏಲನ ವರು, ಕೆನಜನು.
- 16ಯೆಹಲ್ಲೆಲೇಲನ ಕುಮಾರರು -- ಜೀಫನು, ಜೀಫಾನು, ತೀರ್ಯನು, ಅಸರೇಲನು. ಎಜ್ರನ ಕುಮಾ ರರು --
- 17ಯೆತೆರನು, ಮೆರೆದನು, ಏಫೆರನು, ಯಾಲೋನನು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮಳನ್ನೂ ಶೆಮ್ಮೈಯನ್ನೂ ಎಷ್ಟೆಮೋವನ ತಂದೆಯಾದ ಇಷ್ಟಹನನ್ನೂ ಹೆತ್ತಳು.
Cross references
- Numbers 13:6 ಅರಣ್ಯಕಾಂಡ 13:6ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು,
- Numbers 13:30 ಅರಣ್ಯಕಾಂಡ 13:30ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.
- Numbers 14:30 ಅರಣ್ಯಕಾಂಡ 14:30ಯೆಫುನ್ನೆಯ ಮಗನಾದ ಕಾಲೇಬನು ನೂನನ ಮಗನಾದ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡಿಸುವದಕ್ಕಾಗಿ ಪ್ರಮಾಣಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವು ಬಾರದೆ ಇರುವಿರಿ.
- Numbers 14:24 ಅರಣ್ಯಕಾಂಡ 14:24ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ನನ್ನ ಆತ್ಮವಿದದ್ದರಿಂದಲೂ ಅವನು ನನ್ನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದಲೂ ಅವನು ಸಂಚರಿಸಿದ ದೇಶಕ್ಕೆ ಅವನನ್ನು ತರುವೆನು; ಅವನ ಸಂತಾನವು ಅದನ್ನು ಸ್ವತಂತ್ರಿಸಿಕೊಳ್ಳುವದು.
- Numbers 14:6–10 ಅರಣ್ಯಕಾಂಡ 14:6–10ಆಗ ದೇಶವನ್ನು ಪಾಳತಿ ನೋಡಿದವರಲ್ಲಿದ್ದ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಕೊಂಡು ಇಸ್ರಾ ಯೇಲ್ ಮಕ್ಕಳ ಸಮಸ್ತ ಸಭೆಯ ಕೂಟಕ್ಕೆ--ಪಾಳತಿ ನೋಡುವದಕ್ಕೆ ನಾವು ದಾಟಿಹೋದ ದೇಶವು ಅತ್ಯು ತ್ತಮವಾದ ದೇಶವೇ. ಕರ್ತನು ನಮ್ಮಲ್ಲಿ ಇಷ್ಟಪಟ್ಟರೆ ಹಾಲು ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಬರಮಾಡಿ ಅದನ್ನು ನಮಗೆ ಕೊಡುವನು. ನೀವಾ ದರೋ ಕರ್ತನಿಗೆ ವಿರೋಧವಾಗಿ ಬೀಳಬೇಡಿರಿ, ಆ ದೇಶದ ಜನರಿಗೆ ಭಯಪಡಬೇಡಿರಿ, ಅವರು ನಮಗೆ ರೊಟ್ಟಿಯಾಗುವರು; ಅವರಿಗಿದ್ದ ಆಶ್ರಯವು ಅವರ ಬಳಿಯಿಂದ ಹೋಯಿತು; ಕರ್ತನು ನಮ್ಮ ಸಂಗಡ ಇದ್ದಾನೆ; ಅವರಿಗೆ ಭಯಪಡಬೇಡಿರಿ ಅಂದನು. ಸಭೆಯವರೆಲ್ಲರೂ ಅವರನ್ನು ಕಲ್ಲೆಸೆಯಬೇಕೆಂದಿ ದ್ದರು. ಆಗ ಕರ್ತನ ಮಹಿಮೆಯು ಸಭೆಯ ಗುಡಾರ ದಲ್ಲಿ ಇಸ್ರಾಯೇಲ್ ಮಕ್ಕಳಿಗೆಲ್ಲಾ ಪ್ರತ್ಯಕ್ಷವಾಯಿತು.
- Joshua 15:13–20 ಯೆಹೋಶುವ 15:13–20ಇದಲ್ಲದೆ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನಿಗೆ ಅನಾಕನ ತಂದೆಯ ಕಿರ್ಯಾತ್ಅರ್ಬ ಎಂಬ ಹೆಬ್ರೋನನ್ನು ಯೂದನ ಮಕ್ಕಳ ನಡುವೆ ಪಾಲಾಗಿ ಕೊಟ್ಟನು. ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ ಅಹೀಮನ್ ತಲ್ಮೈಯ ರನ್ನು ಹೊರಡಿಸಿಬಿಟ್ಟನು. ಕಾಲೇಬನು ಅಲ್ಲಿಂದ ಹೊರಟು--ಯಾವನು ಪೂರ್ವದಲ್ಲಿ ಕಿರ್ಯತ್ ಸೇಫರ್ ಎಂಬ ಹೆಸರು ಉಂಟಾಗಿದ್ದ ದೆಬೀರಿನ ವಾಸಿಗಳ ಬಳಿಗೆ ಹೋಗಿ ಅವನು ಕಿರ್ಯತ್ ಸೇಫೆರನ್ನು ಹೊಡೆದು ಹಿಡಿಯುವನೋ ಅವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡು ವೆನು ಎಂದು ಹೇಳಿದ್ದನು. ಆಗ ಕೆನಜನ ಮಗನೂ ಕಾಲೇಬನ ಸಹೋದರನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿ ಕೊಟ್ಟನು. ಅವಳು ಬಂದಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳನ್ನು ನೋಡಿ--ನಿನಗೆ ಏನು ಬೇಕು ಅಂದನು. ಅದಕ್ಕೆ ಅವಳು--ನನಗೆ ಒಂದು ಆಶೀರ್ವಾದ ಕೊಡು; ಯಾಕಂದರೆ ನನಗೆ ಮೊದಲು ದಕ್ಷಿಣ ಭೂಮಿಯನ್ನು ಕೊಟ್ಟಿ; ನೀರು ಬುಗ್ಗೆಗಳನ್ನು ಸಹ ನನಗೆ ಕೊಡು ಅಂದಳು. ಆಗ ಅವನು ಅವಳಿಗೆ ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ನೀರು ಬುಗ್ಗೆಗಳನ್ನು ಕೊಟ್ಟನು. ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬ ಗಳ ಪ್ರಕಾರ ಉಂಟಾದ ಸ್ವಾಸ್ತ್ಯವೇನಂದರೆ--
- Joshua 14:6–14 ಯೆಹೋಶುವ 14:6–14ಯೂದನ ಮಕ್ಕಳು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಸೇರಿದರು. ಆಗ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಅವನಿಗೆ--ಕಾದೇಶ್ ಬರ್ನೇಯದಲ್ಲಿ ಕರ್ತನು ನನ್ನನ್ನೂ ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ; ಕರ್ತನ ಸೇವಕನಾದ ಮೋಶೆಯು ದೇಶವನ್ನು ಪಾಳತಿ ನೋಡಲು ನನ್ನನ್ನು ಕಾದೇಶ್ ಬರ್ನೇಯದಿಂದ ಕಳುಹಿಸಿದಾಗ ನಾನು ನಾಲ್ವತ್ತು ವರುಷ ಪ್ರಾಯದವನಾಗಿದ್ದೆನು; ನನ್ನ ಹೃದಯದಲ್ಲಿ ಇದ್ದ ಹಾಗೆಯೇ ಅವನಿಗೆ ಒಂದು ಮಾತನ್ನು ತಿರಿಗಿ ತಕ್ಕೊಂಡು ಬಂದೆನು. ಆದಾಗ್ಯೂ ನನ್ನ ಸಂಗಡ ಹೋಗಿ ಬಂದ ನನ್ನ ಸಹೋದರರು ಜನರ ಹೃದಯ ವನ್ನು ಕರಗಿಸಿದರು. ಆದರೆ ನಾನು ನನ್ನ ದೇವರಾದ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿದೆನು. ಆ ದಿನದಲ್ಲಿ ಮೋಶೆಯು ನನಗೆ--ನೀನು ನನ್ನ ದೇವರಾದ ಕರ್ತನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದ್ದರಿಂದ ನಿನ್ನ ಕಾಲು ತುಳಿದ ದೇಶವು ನಿನಗೂ ನಿನ್ನ ಮಕ್ಕಳಿಗೂ ಎಂದೆಂದಿಗೂ ಬಾಧ್ಯತೆಯಾಗಿರುವದು ಎಂದು ಆಣೆ ಇಟ್ಟು ಹೇಳಿದನು. ಈಗ ಇಗೋ, ಕರ್ತನು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲ್ ಮಕ್ಕಳು ಅರಣ್ಯದಲ್ಲಿ ಸಂಚರಿಸಿದ ನಾಲ್ವತ್ತೈದು ವರುಷ ಕರ್ತನು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾನೆ. ಈಗ ಇಗೋ, ನಾನು ಇಂದು ಎಂಭತ್ತೈದು ವರುಷ ಪ್ರಾಯದವನಾಗಿದ್ದೇನೆ. ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲವಾಗಿ ಇದ್ದೆನೋ ಹಾಗೆಯೇ ಇದು ವರೆಗೂ ಬಲವಾಗಿದ್ದೇನೆ. ನಾನು ಯುದ್ಧಕ್ಕೆ ಹೋಗಿ ಬರುವದಕ್ಕೆ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳ ವನಾಗಿದ್ದೇನೆ. ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು. ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನನ್ನು ಆಶೀರ್ವದಿಸಿ ಅವನಿಗೆ ಹೆಬ್ರೋನನ್ನು ಬಾಧ್ಯತೆ ಯಾಗಿ ಕೊಟ್ಟನು. ಹೀಗೆಯೇ ಕೆನೆಜ್ಯನಾದ ಯೆಫು ನ್ನೆಯ ಮಗನಾದ ಕಾಲೇಬನು ಇಸ್ರಾಯೇಲಿನ ದೇವರಾದ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿ ದ್ದರಿಂದ ಹೆಬ್ರೋನು ಇಂದಿನ ವರೆಗೂ ಅವನ ಬಾಧ್ಯತೆ ಯಾಯಿತು.ಹೆಬ್ರೋನಿನ ಹೆಸರು ಮೊದಲು ಕಿರ್ಯತ್ಅರ್ಬ; ಈ ಹೆಸರು ಅನಾಕ್ಯರಲ್ಲಿ ಒಬ್ಬ ದೊಡ್ಡ ಮನುಷ್ಯನದು. ದೇಶವು ಯುದ್ಧವಿಲ್ಲದೆ ಶಾಂತವಾಯಿತು.
- Judges 1:12–14 ನ್ಯಾಯಸ್ಥಾಪಕರು 1:12–14ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು. ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಅವಳು ಅವನ ಬಳಿಗೆ ಹೋಗುವಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿದವಳಾಗಿ ಕತ್ತೆಯಿಂದ ಇಳಿದಳು; ಕಾಲೇಬನು ಅವಳಿಗೆ--ನಿನಗೆ ಏನು ಬೇಕು ಅಂದನು.