1 Chronicles · chapter 6 · verse 37
1 Chronicles 6:37 in Kannada
ಇವನು ತಹತನ ಮಗನು, ಇವನು ಅಸೀರನ ಮಗನು, ಇವನು ಎಬ್ಯಾಸಾಫನ ಮಗನು, ಇವನು ಕೋರಹನ ಮಗನು, ಇವನು ಇಚ್ಹಾರನ ಮಗನು
Ivanu tahatana maganu, ivanu aseerana maganu, ivanu ebyaasaaphana maganu, ivanu korahana maganu, ivanu ichhaarana maganu
1 Chronicles 6:37 in English
- King James Version (KJV)
- The son of Tahath, the son of Assir, the son of Ebiasaph, the son of Korah,
- World English Bible (WEB)
- the son of Tahath, the son of Assir, the son of Ebiasaph, the son of Korah,
- American Standard Version (ASV)
- the son of Tahath, the son of Assir, the son of Ebiasaph, the son of Korah,
- Bible in Basic English (BBE)
- The son of Tahath, the son of Assir, the son of Ebiasaph, the son of Korah,
- Darby Translation (DBY)
- the son of Tahath, the son of Assir, the son of Ebiasaph, the son of Korah,
- Webster's Bible (WBS)
- The son of Tahath, the son of Assir, the son of Ebiasaph, the son of Korah,
- Young's Literal Translation (YLT)
- son of Tahath, son of Assir, son of Ebiasaph, son of Korah,
Read in context
- 35ಇವನು ತೋಹನ ಮಗನು, ಇವನು ಚೂಫನ ಮಗನು, ಇವನು ಎಲ್ಕಾನನ ಮಗನು, ಇವನು ಮಹತನ ಮಗನು,
- 36ಇವನು ಅಮಾಸೈಯ ಮಗನು, ಇವನು ಎಲ್ಕಾನನ ಮಗನು, ಇವನು ಯೋವೇಲನ ಮಗನು, ಇವನು ಅಜರ್ಯನ ಮಗನು, ಇವನು ಚೆಫನ್ಯನ ಮಗನು,
- 37ಇವನು ತಹತನ ಮಗನು, ಇವನು ಅಸೀರನ ಮಗನು, ಇವನು ಎಬ್ಯಾಸಾಫನ ಮಗನು, ಇವನು ಕೋರಹನ ಮಗನು, ಇವನು ಇಚ್ಹಾರನ ಮಗನು
- 38ಇವನು ಕೆಹಾತನ ಮಗನು, ಇವನು ಲೇವಿಯನ ಮಗನು, ಇವನು ಇಸ್ರಾಯೇಲನ ಮಗನು.
- 39ಇವನ ಬಲಗಡೆ ನಿಂತಿರುವ ಇವನ ಸಹೋ ದರನಾದ ಆಸಾಫನು; ಈ ಆಸಾಫನು ಬೆರೆಕ್ಯನ ಮಗನು, ಇವನು ಶಿಮ್ಮನ ಮಗನು,
Cross references
- Exodus 6:21–24 ವಿಮೋಚನಕಾಂಡ 6:21–24ಇಚ್ಹಾರನ ಕುಮಾರರು: ಕೋರಹ ನೆಫೆಗ್ ಜಿಕ್ರೀ. ಉಜ್ಜೀಯೇಲನ ಕುಮಾರರು: ವಿಾಷಾಯೇಲ್ ಎಲ್ಚಾಫಾನ್ ಸಿತ್ರೀ. ಆರೋನನು ಅವ್ಮೆಾನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬ ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ--ನಾದಾಬ್ ಅಬೀಹೂ ಎಲ್ಲಾಜಾರ್ ಈತಾಮಾರ್ ಇವರನ್ನು ಹೆತ್ತಳು. ಕೋರಹನ ಕುಮಾರರು: ಅಸ್ಸೀರ್ ಎಲ್ಕಾನಾ ಅಬೀಯಾಸಾಫ್ ಎಂಬವರು. ಇವರೇ ಕೋರಹೀಯರ ಗೋತ್ರಗಳು.
- Numbers 16:1–35 ಅರಣ್ಯಕಾಂಡ 16:1–35ಆಗ ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಹಾರನ ಮಗನಾದ ಕೋರಹನೂ ರೂಬೇನ್ ಗೋತ್ರದವರಾದ ಎಲೀ ಯಾಬನ ಮಕ್ಕಳಾದ ದಾತಾನನೂ ಅಬೀರಾಮನೂ ಪೆಲೆತನ ಮಗನಾದ ಓನನೂ ಇವರು ಜನರನ್ನು ತಕ್ಕೊಂಡು ಇಸ್ರಾಯೇಲ್ ಮಕ್ಕಳೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯಲ್ಲಿ ಪ್ರಸಿದ್ಧ ರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಯ ಮುಂದೆ ಎದ್ದರು. ಅವರು ಮೋಶೆಗೂ ಆರೋನ ನಿಗೂ ವಿರೋಧವಾಗಿ ಕೂಡಿಕೊಂಡು--ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ; ಸಭೆಯೂ ಸಭೆ ಯಲ್ಲಿರುವ ಎಲ್ಲರೂ ಪರಿಶುದ್ಧರೇ, ಕರ್ತನು ಅವರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ನೀವು ನಿಮ್ಮನ್ನು ಸಭೆಗಿಂತ ಹೆಚ್ಚಾಗಿ ನೀವೇ ಹೆಚ್ಚಿಸಿಕೊಳ್ಳು ವದು ಯಾಕೆ ಎಂದು ಅವರಿಗೆ ಹೇಳಿದರು. ಮೋಶೆಯು ಇದನ್ನು ಕೇಳಿ ಬೋರಲು ಬಿದ್ದು ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ: ಕೋರಹನೂ ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ ಅವುಗಳ ಮೇಲೆ ಧೂಪವನ್ನು ಕರ್ತನ ಮುಂದೆ ಹಾಕಿರಿ; ಆಗ ಕರ್ತನು ಯಾವನನ್ನು ಆದುಕೊಳ್ಳುವನೋ ಅವನೇ ಪರಿ ಶುದ್ಧನಾಗಿರುವನು; ಲೇವಿಯ ಮಕ್ಕಳೇ, ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ ಎಂದು ಹೇಳಿದನು. ಮೋಶೆಯು ಕೋರಹನಿಗೆ--ಲೇವಿಯ ಕುಮಾ ರರೇ, ಈಗ ಕೇಳಿರಿ. ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ? ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ? ಈ ಕಾರಣದಿಂದ ನೀನೂ ನಿನ್ನ ಸಮಸ್ತ ಗುಂಪೂ ಕರ್ತನಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ; ನೀವು ಅವನಿಗೆ ವಿರೋಧವಾಗಿ ಗುಣುಗುಟ್ಟುವ ಹಾಗೆ ಆರೋನನು ಯಾರು ಎಂದು ಹೇಳಿದನು. ಆಗ ಮೋಶೆ ಎಲೀಯಾಬನ ಕುಮಾರರಾದ ದಾತಾನನನ್ನೂ ಅಬೀರಾಮನನ್ನೂ ಕರೇಕಳುಹಿಸಿದನು. ಆದರೆ ಅವರು--ನಾವು ಬರುವದಿಲ್ಲ, ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ? ಇದಲ್ಲದೆ ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತಕ್ಕೊಂಡು ಬರಲಿಲ್ಲ; ಇಲ್ಲವೆ ಹೊಲಗಳನ್ನೂ ದ್ರಾಕ್ಷೇ ತೋಟಗಳನ್ನೂ ನಮಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ; ಈ ಮನುಷ್ಯರ ಕಣ್ಣುಗಳನ್ನು ಕಿತ್ತುಬಿಡುವಿಯೋ? ನಾವು ಬರುವದಿಲ್ಲ ಅಂದರು. ಆಗ ಮೋಶೆಯು ಬಹಳ ವಾಗಿ ಕೋಪಿಸಿಕೊಂಡು ಕರ್ತನಿಗೆ--ಅವರ ಬಲಿಯನ್ನು ನೀನು ಗೌರವಿಸಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ; ಇಲ್ಲವೆ ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ ಎಂದು ಹೇಳಿದನು. ಮೋಶೆಯು ಕೋರಹನಿಗೆ--ನೀನೂ ನಿನ್ನ ಸಮೂಹವೆಲ್ಲವೂ ಕರ್ತನ ಎದುರಿನಲ್ಲಿ ಇರಬೇಕು; ನೀನೂ ಅವರೂ ಆರೋನನೂ ನಾಳೆ ಬಂದು ಒಬ್ಬೊಬ್ಬನು ತನ್ನ ತನ್ನ ಧೂಪದ ಪಾತ್ರೆಯನ್ನು ತಕ್ಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ನಿಮ್ಮ ಧೂಪ ಪಾತ್ರೆಗಳನ್ನು ಕರ್ತನ ಎದುರಿಗೆ ತನ್ನಿರಿ. ನೀನೂ ಆರೋನನೂ ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಬನ್ನಿರಿ ಅಂದನು. ಆಗ ಅವರು ತಮ್ಮ ತಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಅವುಗಳ ಮೇಲೆ ಬೆಂಕಿಯನ್ನು ಹಾಕಿ ಅದರ ಮೇಲೆ ಧೂಪವನ್ನು ಹಾಕಿ ಸಭೆಯ ಗುಡಾರದ ಬಾಗಲಿನ ಮುಂದೆ ಮೋಶೆ ಆರೋನರ ಸಂಗಡ ನಿಂತರು. ಕೋರಹನು ಅವರಿಗೆ ಎದುರಾಗಿ ಸಮಸ್ತ ಸಮೂಹವನ್ನು ಸಭೆಯ ಗುಡಾರದ ಬಾಗಲಿನ ಹತ್ತಿರ ಕೂಡಿಸಿದನು. ಆಗ ಕರ್ತನ ಮಹಿಮೆಯು ಸಮಸ್ತ ಸಭೆಗೆ ತೋರಿಬಂತು. ಕರ್ತನು ಮೋಶೆ ಆರೋನನ ಸಂಗಡ ಮಾತ ನಾಡಿ-- ಈ ಸಭೆಯ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರ ದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದು--ಓ ದೇವರೇ, ಎಲ್ಲಾ ಶರೀರಾತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀನು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳು ತ್ತೀಯೋ ಅಂದರು. ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ-- ಕೋರಹ ದಾತಾನ್ ಅಬೀರಾಮರ ನಿವಾಸದ ಸುತ್ತಲಿಂದ ದೂರಹೋಗಿರಿ ಎಂದು ನೀನು ಸಭೆಗೆ ಹೇಳು ಅಂದನು-- ಆಗ ಮೋಶೆಯು ಎದ್ದು ದಾತಾನ ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲ್ಯರ ಹಿರಿಯರೂ ಅವನ ಹಿಂದೆ ಹೋದರು. ಅವನು ಸಭೆಗೆ--ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿ ಹೋಗಿರಿ. ನೀವು ಅವರ ಎಲ್ಲಾ ಪಾಪಗಳಲ್ಲಿ ನಾಶವಾಗ ದಂತೆ ಅವರಿಗಿರುವ ಯಾವದನ್ನು ಮುಟ್ಟಬೇಡಿರಿ ಅಂದನು. ಆಗ ಅವರು ಕೋರಹ ದಾತಾನ್ ಅಬೀರಾಮರ ಡೇರೆಗಳ ಸುತ್ತಲಿಂದ ದೂರಹೋದರು. ದಾತಾನ್ ಅಬೀರಾಮರೂ ಅವರ ತಮ್ಮ ಹೆಂಡತಿಯರೂ ಕುಮಾ ರರೂ ಚಿಕ್ಕ ಮಕ್ಕಳೂ ಹೊರಟು ತಮ್ಮ ಗುಡಾರಗಳ ಬಾಗಲುಗಳಲ್ಲಿ ನಿಂತುಕೊಂಡರು. ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ. ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ ಇಲ್ಲವೆ ಎಲ್ಲಾ ಮನುಷ್ಯರ ಹಾಗೆ ಶಿಕ್ಷೆ ಇವರಿಗೆ ಪ್ರಾಪ್ತವಾದರೆ ಕರ್ತನು ನನ್ನನ್ನು ಕಳುಹಿಸಲಿಲ್ಲ. ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು. ಇದಾದ ಮೇಲೆ ಅವನು ಹೇಳಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ ಅವರ ಕೆಳಗಿರುವ ನೆಲವು ಸೀಳಿ ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು. ಅವರು ತಮಗೆ ಸಂಬಂಧಪಟ್ಟವುಗಳೆ ಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು; ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. ಆಗ ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರು ಅವರ ಕೂಗಿಗೆ ಓಡಿಹೋದರು; ಅವರು--ಭೂಮಿಯು ನಮ್ಮನ್ನು ಸಹ ನುಂಗಿತೆಂದು ಹೇಳಿದರು. ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
- Numbers 26:10–11 ಅರಣ್ಯಕಾಂಡ 26:10–11ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು. ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ.
- Psalm 42:1 ಕೀರ್ತನೆಗಳು 42:1ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.
- Psalm 84:1 ಕೀರ್ತನೆಗಳು 84:1ಸೈನ್ಯಗಳ ಓ ಕರ್ತನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!
- Psalm 85:1 ಕೀರ್ತನೆಗಳು 85:1ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.
- Psalm 44:1 ಕೀರ್ತನೆಗಳು 44:1ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ.
- Psalm 49:1 ಕೀರ್ತನೆಗಳು 49:1ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕೇಳಿರಿ;
- Psalm 45:1 ಕೀರ್ತನೆಗಳು 45:1ನನ್ನ ಹೃದಯವು ಒಂದು ದಿವ್ಯ ವಿಷಯವನ್ನು ರಚಿಸುತ್ತಿರುವದು; ಅರಸನನ್ನು ಕುರಿತು ನಾನು ಮಾಡಿದವುಗಳನ್ನು ವಿವರಿಸುತ್ತೇನೆ; ನನ್ನ ನಾಲಿಗೆಯು ಬರೆಯುವವನ ಲೇಖನಿಯಂತೆ ಸಿದ್ಧವಾಗಿದೆ.