1 Chronicles · chapter 6 · verse 48
1 Chronicles 6:48 in Kannada
ಅವರ ಸಹೋದರರಾದ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಿಸಲ್ಪಟ್ಟ ವರಾಗಿದ್ದರು.
Avara sahodararaada leviyaru devara maneya gudaarada samasta sevege nemisalpatta varaagiddaru.
1 Chronicles 6:48 in English
- King James Version (KJV)
- Their brethren also the Levites [were] appointed unto all manner of service of the tabernacle of the house of God.
- World English Bible (WEB)
- Their brothers the Levites were appointed for all the service of the tabernacle of God’s house.
- American Standard Version (ASV)
- And their brethren the Levites were appointed for all the service of the tabernacle of the house of God.
- Bible in Basic English (BBE)
- And their brothers the Levites were responsible for all the work of the Tent of the house of God.
- Darby Translation (DBY)
- And their brethren the Levites were given for all the service of the tabernacle of the house of God.
- Webster's Bible (WBS)
- Their brethren also the Levites [were] appointed to all manner of service of the tabernacle of the house of God.
- Young's Literal Translation (YLT)
- And their brethren the Levites are put to all the service of the tabernacle of the house of God.
Read in context
- 46ಇವನು ಅವ್ಚೆಾಯ ಮಗನು, ಇವನು ಬಾನೀಯ ಮಗನು,
- 47ಇವನು ಶೆಮೆರನ ಮಗನು, ಇವನು ಮಹ್ಲೀಯ ಮಗನು, ಇವನು ಮೂಷೀಯ ಮಗನು, ಇವನು ಮೆರಾರಿಯ ಮಗನು, ಇವನು ಲೇವಿಯ ಮಗನು.
- 48ಅವರ ಸಹೋದರರಾದ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಿಸಲ್ಪಟ್ಟ ವರಾಗಿದ್ದರು.
- 49ಆದರೆ ಆರೋನನು ಅವನ ಕುಮಾ ರರು ದಹನಬಲಿಯ ಪೀಠದ ಮೇಲೆಯೂ ಧೂಪ ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಾನದ ಸಮಸ್ತ ಕಾರ್ಯಕ್ಕೂ ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೂ ನೇಮಿಸಲ್ಪಟ್ಟರು.
- 50ಆರೋನನ ಕುಮಾರರು-- ಇವನ ಮಗನು ಎಲ್ಲಾಜಾರನು, ಇವನ ಮಗನು ಫಿನೇ ಹಾಸನು, ಇವನ ಮಗನು ಅಬೀಷೂವನು,
Cross references
- Numbers 18:1–32 ಅರಣ್ಯಕಾಂಡ 18:1–32ಕರ್ತನು ಆರೋನನಿಗೆ--ನೀನೂ ನಿನ್ನ ಕುಮಾರರೂ ನಿನ್ನ ಪಿತೃಗಳ ಮನೆಯೂ ನಿನ್ನೊಂದಿಗೆ ಪರಿಶುದ್ಧ ಸ್ಥಳದ ಅಕ್ರಮವನ್ನು ಹೊತ್ತು ಕೊಳ್ಳಬೇಕು; ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವದ ಅಕ್ರಮವನ್ನು ಹೊತ್ತುಕೊಳ್ಳಬೇಕು. ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು; ಅವರು ನಿನ್ನ ಅಪ್ಪಣೆಯನ್ನೂ ಗುಡಾರವೆಲ್ಲಾದರ ಅಪ್ಪಣೆಯನ್ನೂ ಕಾಪಾಡಬೇಕು. ಪರಿಶುದ್ಧ ಸ್ಥಳದ ಸಾಮಾನುಗಳಿಗೂ ಬಲಿಪೀಠಕ್ಕೂ ಮಾತ್ರ ಅವರೂ ನೀವೂ ಸಾಯದ ಹಾಗೆ ಅವರು ಸವಿಾಪಕ್ಕೆ ಬರಬಾರದು. ಆದರೆ ಅವರು ನಿನ್ನ ಸಹಾಯಕರಾಗಿದ್ದು ಗುಡಾರದ ಎಲ್ಲಾ ಸೇವೆಗೋಸ್ಕರ ಸಭೆಯ ಗುಡಾರದ ಅಪ್ಪಣೆಯನ್ನು ಕಾಪಾಡಬೇಕು; ಪರಕೀಯನು ನಿಮ್ಮ ಸವಿಾಪಕ್ಕೆ ಬರ ಬಾರದು. ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು. ಇಗೋ, ನಾನು ನಿಮ್ಮ ಸಹೋದರ ರಾದ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ತೆಗೆದುಕೊಂಡಿದ್ದೇನೆ. ಸಭೆಯ ಗುಡಾರದ ಸೇವೆಯನ್ನು ಮಾಡುವದಕ್ಕೆ ಅವರು ಕರ್ತನಿಗೋಸ್ಕರ ನಿಮಗೆ ದಾನವಾಗಿ ಕೊಡಲ್ಪಟ್ಟವರಾಗಿದ್ದಾರೆ. ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು. ಕರ್ತನು ಮಾತನಾಡಿ ಆರೋನನಿಗೆ--ಇಗೋ, ನಾನು ನಿನಗೆ ಎತ್ತುವ ಅರ್ಪಣೆಗಳ ಅಪ್ಪಣೆಗಳನ್ನು ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪರಿಶುದ್ಧ ಮಾಡುವ ಎಲ್ಲಾದರಲ್ಲಿ ನಾನು ಅವುಗಳನ್ನು ಅಭಿಷೇಕ ಕ್ಕೋಸ್ಕರ ನಿನಗೂ ನಿನ್ನ ಮಕ್ಕಳಿಗೂ ನಿತ್ಯಕಟ್ಟಳೆಯಾಗಿ ಕೊಟ್ಟಿದ್ದೇನೆ. ಬೆಂಕಿಗೆ ಒಳಗಾಗದ ಅತೀ ಪರಿಶುದ್ಧ ವಾದವುಗಳಲ್ಲಿ ನಿನಗಾಗಬೇಕಾದವುಗಳು ಯಾವ ವೆಂದರೆ--ಅವರ ಅರ್ಪಣೆಗಳೆಲ್ಲಾ ಅಂದರೆ ಅವರು ನನಗೆ ತರುವ ಆಹಾರ ಸಮರ್ಪಣೆಗಳು ಪಾಪದ ಬಲಿಗಳು ಅಪರಾಧದ ಬಲಿಗಳು ಇವೆಲ್ಲಾ ಅತೀ ಪರಿಶುದ್ಧವಾಗಿ ನಿನಗೂ ನಿನ್ನ ಕುಮಾರರಿಗೂ ಇರಬೇಕು. ನೀನು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು; ಎಲ್ಲಾ ಗಂಡಸರು ಅದನ್ನು ತಿನ್ನಬೇಕು. ಅದು ನಿನಗೆ ಪರಿಶುದ್ಧವಾಗಿರುವದು. ಇದು ನಿನ್ನದಾಗಿದೆ. ಅವರು ಕೊಟ್ಟ ಎತ್ತುವ ಅರ್ಪಣೆಯೂ ಇಸ್ರಾಯೇಲ್ ಮಕ್ಕಳು ಆಡಿಸುವ ಎಲ್ಲಾ ಅರ್ಪಣೆಗಳೂ; ಅವುಗಳನ್ನು ನಾನು ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ಶಾಶ್ವತ ಕಟ್ಟಳೆಯಾಗಿ ಕೊಟ್ಟಿದ್ದೇನೆ; ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನು ಅದನ್ನು ತಿನ್ನಬಹುದು. ಉತ್ತಮವಾದ ಎಲ್ಲಾ ಎಣ್ಣೆಯೂ ದ್ರಾಕ್ಷಾರಸವೂ ಗೋಧಿಯೂ ಅವರು ಕರ್ತನಿಗೆ ಕೊಡುವ ಅವುಗಳ ಪ್ರಥಮ ಫಲಗಳನ್ನೂ ನಿನಗೆ ಕೊಟ್ಟಿದ್ದೇನೆ. ಅವರು ಕರ್ತನಿಗೆ ತರುವ ದೇಶದ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನ್ನು ಅದನ್ನು ತಿನ್ನಬಹುದು. ಇಸ್ರಾಯೇಲ್ಯರಲ್ಲಿ ಆಣೆಯೊಂದಿಗೆ ಒಪ್ಪಿಸಿದ್ದೆಲ್ಲಾ ನಿನ್ನದಾಗಿರಬೇಕು. ಮನುಷ್ಯರಲ್ಲಾಗಲಿ ಪಶುಗಳ ಲ್ಲಾಗಲಿ ಕರ್ತನಿಗೆ ತರುವ ಎಲ್ಲಾ ಶರೀರಗಳಲ್ಲಿ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು; ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಪವಿತ್ರವಾದ ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು. ಬಿಡಿಸತಕ್ಕವುಗಳನ್ನು ಒಂದು ತಿಂಗಳಿನ ಪ್ರಾಯ ದಿಂದ ಇಪ್ಪತ್ತು ಗೇರಗಳು ಅಂದರೆ ಪರಿಶುದ್ಧ ಶೇಕೆಲಿನ ಮೇರೆಗೆ ನಿನ್ನ ಎಣಿಕೆಯಲ್ಲಿ ಐದು ಶೇಕೆಲುಗಳ ಬೆಳ್ಳಿ ಯಿಂದ ವಿಮೋಚಿಸಿಕೊಳ್ಳಬೇಕು. ಆದರೆ ಪಶು ಕುರಿ ಮೇಕೆ ಇವುಗಳ ಚೊಚ್ಚಲನ್ನಾದರೂ ನೀನು ವಿಮೋಚಿಸಿಕೊಳ್ಳಬಾರದು; ಅವು ಪರಿಶುದ್ಧವಾಗಿವೆ; ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸ ಬೇಕು; ಅವುಗಳ ಕೊಬ್ಬನ್ನು ಕರ್ತನಿಗೆ ದಹನ ವಾಗಿಯೂ ಸುವಾಸನೆಗಾಗಿಯೂ ಸುಡಬೇಕು. ಆಡಿಸುವ ಬಲಿಯ ಎದೆಯೂ ಬಲ ಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನ ದಾಗಿರಬೇಕು. ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು. ಕರ್ತನು ಆರೋನನಿಗೆ--ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು; ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು; ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಿನ್ನ ಪಾಲೂ ಸ್ವಾಸ್ತ್ಯವೂ ಆಗಿದ್ದೇನೆ. ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ಇನ್ನು ಮೇಲೆ ಸಭೆಯ ಗುಡಾರದ ಸವಿಾಪಕ್ಕೆ ಬರಬಾರದು. ಆದರೆ ಲೇವಿಯರೇ ಸಭೆಯ ಗುಡಾರದ ಸೇವೆ ಯನ್ನು ಮಾಡಬೇಕು; ಅವರೇ ಅವರ ಅಕ್ರಮವನ್ನು ಹೊತ್ತುಕೊಳ್ಳಬೇಕು; ಇದು ನಿಮ್ಮ ಸಂತತಿಗಳಿಗೆ ನಿತ್ಯ ಕಟ್ಟಳೆಯಾಗಿದೆ; ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವು ಇರಬಾರದು. ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ನೀನು ಲೇವಿಯರಿಗೆ ಹೀಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಾನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ತಕ್ಕೊಂಡರೆ ನೀವು ಅದರಲ್ಲಿ ಕರ್ತನಿಗೆ ಹತ್ತನೆಯ ದರಿಂದ ಹತ್ತನೆಯದನ್ನು ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು. ಇದು ನಿಮಗೆ ಕಣದ ಧಾನ್ಯದ ಹಾಗೆಯೂ ದ್ರಾಕ್ಷೇತೊಟ್ಟಿಯ ಪರಿಪೂರ್ಣತೆಯ ಹಾಗೆಯೂ ನಿಮ್ಮ ಎತ್ತುವ ಅರ್ಪಣೆಯಾಗಿಯೂ ನಿಮಗೆ ಎಣಿಸಲ್ಪಡುವದು. ಈ ಪ್ರಕಾರ ನೀವು ಸಹ ಇಸ್ರಾಯೇಲ್ ಮಕ್ಕಳ ಕಡೆಯಿಂದ ತಕ್ಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯವುಗಳಿಂದ ಕರ್ತನಿಗೆ ಎತ್ತುವ ಕಾಣಿಕೆಯನ್ನು ಅರ್ಪಿಸಬೇಕು; ನೀವು ಅದರಿಂದ ಕರ್ತ ನಿಗೆ ಎತ್ತುವ ಅರ್ಪಣೆಯನ್ನು ಯಾಜಕನಾದ ಆರೋನ ನಿಗೆ ಕೊಡಬೇಕು. ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು. ನೀನು ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಅದರಲ್ಲಿ ಉತ್ತಮವಾದದ್ದನ್ನು ಎತ್ತಿದಾಗ ಅದು ಲೇವಿಯರಿಗೆ ಕಣದ ಆದಾಯದ ಹಾಗೆಯೂ ದ್ರಾಕ್ಷೇ ತೊಟ್ಟಿಯ ಆದಾಯದ ಹಾಗೆಯೂ ಎಣಿಸಲ್ಪಡುವದು. ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು. ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
- 1 Chronicles 25:1–26 1 ಪೂರ್ವಕಾಲವೃತ್ತಾಂತ 25:1–26ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್ ಹೇಮಾನ್ ಯೆದುತೂನ್ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು. ಅವರು ಯಾರಂದರೆ, ಆಸಾಫನ ಕುಮಾರ ರಲ್ಲಿ ಜಕ್ಕೂರನು ಯೋಸೇಫನು ನೆತನ್ಯನು ಅಶರೇ ಲನು; ಇವರು ಆಸಾಫನ ಕುಮಾರರು; ಅರಸ ಆಜ್ಞೆಯ ಪ್ರಕಾರ ಆಸಾಫನ ಕೈಕೆಳಗೆ ಪ್ರವಾದಿಸಿದವರು. ಯೆದುತೂನನ ಕುಮಾರರಲ್ಲಿ ಗೆದಲ್ಯನು, ಚೆರೀಯು, ಯೆಶಾಯನು, ಹಷಬ್ಯನು, ಮತ್ತಿತ್ಯನು ಈ ಆರು ಮಂದಿಯು; ತಮ್ಮ ತಂದೆಯಾದ ಯೆದುತೂನನ ಕೈಕೆಳಗೆ ಕಿನ್ನರಿಗಳಿಂದ ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಪ್ರವಾದಿಸಿದವರು. ಹೆಮಾನನ ಕುಮಾರರಲ್ಲಿ ಬುಕ್ಕೀಯನು, ಮತ್ತನ್ಯನು, ಉಜ್ಜಿಯೇ ಲನು, ಶೆಬೂವೇಲನು, ಯೆರೀಮೋತನು, ಹನನ್ಯನು, ಹನಾನೀಯು, ಎಲೀಯಾತನು, ಗಿದ್ದಲ್ತಿಯು, ರೋಮ ಮ್ತಿಯೆಜರನು, ಯೊಷ್ಬೆಕಾಷನು, ಮಲ್ಲೋತೀಯು, ಹೋತೀರನು, ಮಹಜೀಯೋತನು. ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೆಮಾನನ ಕುಮಾರರು. ದೇವರು ಹೆಮಾನನಿಗೆ ಹದಿನಾಲ್ಕು ಮಂದಿ ಕುಮಾರರನ್ನೂ ಮೂರು ಮಂದಿ ಕುಮಾರ್ತೆಯರನ್ನೂ ಕೊಟ್ಟನು. ಅರಸನು ಆಸಾಫನಿಗೂ ಯೆದುತೂನನಿಗೂ ಹೆಮಾ ನನಿಗೂ ಆಜ್ಞಾಪಿಸಿದ ಪ್ರಕಾರ ಇವರೆಲ್ಲರು ದೇವರ ಮಂದಿರದ ಸೇವೆಗೋಸ್ಕರ ಕರ್ತನ ಮನೆಯಲ್ಲಿ ತಾಳ ವೀಣೆ ಕಿನ್ನರಿಗಳಿಂದ ಹಾಡುವದಕ್ಕೆ ತಮ್ಮ ತಂದೆಯ ಕೈಕೆಳಗೆ ಇದ್ದರು. ಹೀಗೆಯೇ ಅವರ ಲೆಕ್ಕವೂ ಕರ್ತನ ಹಾಡುಗಳಲ್ಲಿ ಬೋಧಿಸಲ್ಪಟ್ಟ ಸಮಸ್ತ ಪ್ರವೀಣರ ಲೆಕ್ಕವೂ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಭತ್ತೆಂಟು ಮಂದಿಯಾಗಿದ್ದರು. ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು. ಆಸಾಫನಿ ಗೋಸ್ಕರ ಮೊದಲನೇ ಚೀಟು ಯೋಸೆಫನಿಗೆ ಬಂತು; ಎರಡನೆಯದು ಗೆದಲ್ಯನಿಗೆ, ಅವನೂ ಅವನ ಸಹೋ ದರರೂ ಅವನ ಕುಮಾರರೂ ಹನ್ನೆರಡು ಮಂದಿ; ಮೂರನೆಯದು ಜಕ್ಕೂರನಿಗೆ; ಅವನೂ ಅವನ ಕುಮಾರರೂ ಸಹೋದರರೂ ಹನ್ನೆರಡು ಮಂದಿ, ನಾಲ್ಕನೆಯದು ಇಚ್ರೀಗೆ, ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಐದನೆ ಯದು ನೆತನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ. ಆರನೆ ಯದು ಬುಕ್ಕಿಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಏಳನೆ ಯದು ಯೆಸರೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಎಂಟನೆ ಯದು ಯೆಶಾಯನಿಗೆ ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಒಂಭ ತ್ತನೆಯದು ಮತ್ತನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹತ್ತನೆಯದು ಶಿವ್ಮೆಾಗೆ, ಅವನೂ ಅವನ ಕುಮಾ ರರೂ ಅವನ ಸಹೋದರರೂ ಹನ್ನೆರಡು ಮಂದಿ; ಹನ್ನೊಂದನೆಯದು ಅಜರೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹನ್ನೆರಡನೆಯದು ಹಷಬ್ಯನಿಗೆ; ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿಮೂರನೆಯದು ಶೂಬಾಯೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನಾಲ್ಕನೆಯದು ಮತ್ತಿತ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನೈದನೆಯದು ಯೆರೆಮೋತ ನಿಗೆ, ಅವನೂ ಅವನ ಕುಮಾರರೂ ಅವನ ಸಹೋ ದರರೂ ಹನ್ನೆರಡು ಮಂದಿ; ಹದಿನಾರನೆಯದು ಹನನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನೇಳನೆ ಯದು ಯೊಷ್ಬೆಕಾಷನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿ ನೆಂಟನೆಯದು ಹನಾನೀಗೆ, ಅವನೂ ಅವನ ಕುಮಾ ರರೂ ಅವನ ಸಹೋದರರೂ ಹನ್ನೆರಡು ಮಂದಿ; ಹತ್ತೊಂಭತ್ತನೆಯದು ಮಲ್ಲೋತಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆ ರಡು ಮಂದಿ;
- Numbers 16:9–10 ಅರಣ್ಯಕಾಂಡ 16:9–10ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ? ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ?
- Numbers 3:1–4 ಅರಣ್ಯಕಾಂಡ 3:1–4ಕರ್ತನು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿನದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ: ಆರೋನನ ಮಕ್ಕಳ ಹೆಸರುಗಳು ಇವೇ; ಚೊಚ್ಚಲ ಮಗನು ನಾದಾಬನು, ತರುವಾಯ ಅಬೀಹೂ, ಎಲ್ಲಾಜಾರನು, ಈತಾಮಾರನು. ಅಭಿಷೇ ಕಿಸಲ್ಪಟ್ಟ ಯಾಜಕರಾದ ಆರೋನನ ಮಕ್ಕಳ ಹೆಸರು ಗಳು ಇವೇ; ಇವರನ್ನು ಯಾಜಕೋದ್ಯೋಗ ಮಾಡುವ ದಕ್ಕೆ ಅವನು ಪ್ರತಿಷ್ಠೆಮಾಡಿದನು. ನಾದಾಬನೂ ಅಬೀಹೂ ಕರ್ತನ ಸಮ್ಮುಖದಲ್ಲಿ ಅನ್ಯಬೆಂಕಿಯನ್ನು ಅರ್ಪಿಸಿದಾಗ ಸೀನಾಯಿ ಅರಣ್ಯದಲ್ಲಿ ಕರ್ತನ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ; ಹೀಗೆ ಎಲ್ಲಾಜಾ ರನು ಈತಾಮಾರನು ತಮ್ಮ ತಂದೆಯಾದ ಆರೋನನ ಎದುರಿನಲ್ಲಿ ಯಾಜಕೋದ್ಯೋಗವನ್ನು ಮಾಡಿದರು.
- 1 Chronicles 23:2 1 ಪೂರ್ವಕಾಲವೃತ್ತಾಂತ 23:2ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು.
- Numbers 8:5–26 ಅರಣ್ಯಕಾಂಡ 8:5–26ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡು ಅವರನ್ನು ಶುದ್ಧ ಮಾಡು. ಅವರನ್ನು ಶುದ್ಧಮಾಡುವದಕ್ಕೆ ಅವರಿಗೆ ಮಾಡಬೇಕಾದದ್ದೇನಂದರೆ--ಶುದ್ಧಿಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಆಗ ಅವರು ತಮ್ಮ ಶರೀರವನ್ನೆಲ್ಲಾ ಕ್ಷೌರಮಾಡಿಸಿಕೊಂಡು ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧಮಾಡಿಕೊಳ್ಳುವಂತೆ ಮಾಡು. ಅವರು ಒಂದು ಎಳೇ ಹೋರಿಯನ್ನು ಅದರೊಂದಿಗೆ ಆಹಾರ ಸಮರ್ಪಣೆಯನ್ನು ಅಂದರೆ ಎಣ್ಣೇ ಬೆರೆಸಿದ ನಯ ವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ಪಾಪದ ಬಲಿ ಗಾಗಿ ಮತ್ತೊಂದು ಎಳೇ ಹೋರಿಯನ್ನೂ ನೀನು ತೆಗೆದುಕೋ. ಆಗ ನೀನು ಲೇವಿಯರನ್ನು ಸಭೆಯ ಗುಡಾರದ ಮುಂದೆ ಕರತಂದು ಇಸ್ರಾಯೇಲ್ಯರ ಸಮಸ್ತ ಸಭೆಯನ್ನು ಒಟ್ಟುಗೂಡಿಸಬೇಕು. ನೀನು ಲೇವಿ ಯರನ್ನು ಕರ್ತನ ಎದುರಿನಲ್ಲಿ ಕರತರಬೇಕು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು. ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು. ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನಿಗೆ ಒಂದನ್ನು ಪಾಪದ ಬಲಿಗಾಗಿಯೂ ಮತ್ತೊಂದನ್ನು ದಹನ ಬಲಿಗಾಗಿಯೂ ಸಮರ್ಪಿಸಬೇಕು. ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು. ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ಪ್ರತ್ಯೇಕಿಸಬೇಕು; ಲೇವಿಯರು ನನ್ನವರಾಗಿರ ಬೇಕು. ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು. ಅವರು ಇಸ್ರಾಯೇಲ್ ಮಕ್ಕಳೊ ಳಗಿಂದ ನನಗೆ ಸಂಪೂರ್ಣವಾಗಿ ಕೊಡಲ್ಪಟ್ಟವರು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಗರ್ಭಗಳನ್ನು ತೆರೆಯುವಂತದ್ದಕ್ಕೂ ಅಂದರೆ ಚೊಚ್ಚಲಾದವರೆಲ್ಲರಿಗೂ ಬದಲಾಗಿ ಅವರನ್ನು ನನಗೋಸ್ಕರ ತೆಗೆದುಕೊಂಡಿ ದ್ದೇನೆ. ಇಸ್ರಾಯೇಲ್ ಮಕ್ಕಳಲ್ಲಿ ಮನುಷ್ಯರಲ್ಲಾ ದರೂ ಪಶುಗಳಲ್ಲಾದರೂ ಚೊಚ್ಚಲಾದದ್ದೆಲ್ಲಾ ನನ್ನದು; ಐಗುಪ್ತ ದೇಶದಲ್ಲಿ ಎಲ್ಲಾ ಚೊಚ್ಚಲಾದವುಗಳನ್ನು ಹೊಡೆದ ದಿವಸದಲ್ಲಿ ನಾನು ಅವರನ್ನು ನನಗಾಗಿ ಪರಿಶುದ್ಧ ಮಾಡಿಕೊಂಡೆನು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಚೊಚ್ಚಲಾದವುಗಳಿಗೋಸ್ಕರ ಲೇವಿಯರನ್ನು ನಾನು ತೆಗೆದುಕೊಂಡೆನು. ಅವರು ಸಭೆಯ ಗುಡಾರದಲ್ಲಿ ಇಸ್ರಾಯೇಲ್ ಮಕ್ಕಳ ಸೇವೆ ಯನ್ನು ಮಾಡುವದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲ್ ಮಕ್ಕಳು ಸವಿಾಪಿಸುವಾಗ ಇಸ್ರಾಯೇಲ್ ಮಕ್ಕಳೊಳಗೆ ವ್ಯಾಧಿಯು ಇರದಂತೆ ಇಸ್ರಾಯೇಲ್ ಮಕ್ಕಳಿಗೋಸ್ಕರ ಪ್ರಾಯಶ್ಚಿತ್ತಮಾಡುವದಕ್ಕೂ ನಾನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ಆರೋನನಿಗೂ ಅವನ ಕುಮಾರರಿಗೂ ದಾನವಾಗಿ ಕೊಟ್ಟಿದ್ದೇನೆ. ಮೋಶೆಗೆ ಲೇವಿಯರ ವಿಷಯದಲ್ಲಿ ಕರ್ತನು ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಆಗ ಮೋಶೆಯೂ ಆರೋನನೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯೂ ಲೇವಿಯರಿಗೆ ಮಾಡಿದರು, ಇಸ್ರಾಯೇಲ್ ಮಕ್ಕಳು ಅವರಿಗೆ ಹಾಗೆಯೇ ಮಾಡಿದರು. ಲೇವಿಯರು ತಮ್ಮನ್ನು ಪವಿತ್ರಮಾಡಿಕೊಂಡು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಕರ್ತನ ಮುಂದೆ ಕಾಣಿಕೆಯಂತೆ ಅರ್ಪಿಸಿದನು; ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು. ತರುವಾಯ ಲೇವಿಯರು ಸಭೆಯ ಗುಡಾರದಲ್ಲಿ ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ಅವರ ಸೇವೆ ಮಾಡು ವದಕ್ಕೆ ಒಳಗೆ ಪ್ರವೇಶಿಸಿದರು. ಕರ್ತನು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಅವರಿಗೆ ಮಾಡಿದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು. ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು. ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.