1 Corinthians · chapter 3 · verse 11
1 Corinthians 3:11 in Kannada
ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
Haakiruva astivaaravu yesu kristane; aa astivaaravannallade mattondu astivaaravannu yaaroo haakalaararashte.
1 Corinthians 3:11 in English
- King James Version (KJV)
- For other foundation can no man lay than that is laid, which is Jesus Christ.
- World English Bible (WEB)
- For no one can lay any other foundation than that which has been laid, which is Jesus Christ.
- American Standard Version (ASV)
- For other foundation can no man lay than that which is laid, which is Jesus Christ.
- Bible in Basic English (BBE)
- For there is no other base for the building but that which has been put down, which is Jesus Christ.
- Darby Translation (DBY)
- For other foundation can no man lay besides that which [is] laid, which is Jesus Christ.
- Webster's Bible (WBS)
- For other foundation can no man lay than that which is laid, which is Jesus Christ.
- Young's Literal Translation (YLT)
- for other foundation no one is able to lay except that which is laid, which is Jesus the Christ;
Read in context
- 9ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
- 10ದೇವರು ನನಗೆ ಕೃಪೆಯನ್ನು ಕೊಟ್ಟ ಪ್ರಕಾರ ನಾನು ಪ್ರವೀಣಶಿಲ್ಪಿಯಂತೆ ಆಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ; ಪ್ರತಿಯೊಬ್ಬನು ತಾನು ಅದರ ಮೇಲೆ ಹೇಗೆ ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು.
- 11ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
- 12ಈ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಕಟ್ಟಿಗೆ ಹುಲ್ಲು ಆಪು ಇವುಗಳಲಿ
- 13ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು; ಯಾಕಂದರೆ ಆ ದಿನವು ಬೆಂಕಿ ಯೊಡನೆ ಪ್ರತ್ಯಕ್ಷವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು.
Cross references
- Ephesians 2:20 ಎಫೆಸದವರಿಗೆ 2:20ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು;
- Isaiah 28:16 ಯೆಶಾಯ 28:16ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಪರೀಕ್ಷಿತವಾಗಿಯೂ ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಆಸ್ತಿವಾರವನ್ನಾಗಿ ಇಡು ತ್ತೇನೆ; ವಿಶ್ವಾಸವಿಡುವವನು ಆತುರಪಡನು (ಆಶಾ ಭಂಗ ಪಡುವದಿಲ್ಲ).
- 2 Timothy 2:19 2 ತಿಮೊಥೆಯನಿಗೆ 2:19ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
- Acts 4:11–12 ಅಪೊಸ್ತಲರ ಕೃತ್ಯಗಳು 4:11–12ಮನೆ ಕಟ್ಟುವವರಾದ ನಿಮ್ಮಿಂದ ಹೀನೈಸಲ್ಪಟ್ಟ ಈ ಕಲ್ಲೇ ಮುಖ್ಯವಾದ ಮೂಲೆಗಲ್ಲಾ ಯಿತು. ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.
- 1 Peter 2:6–8 1 ಪೇತ್ರನು 2:6–8ಇದಲ್ಲದೆ--ಇಗೋ, ಚೀಯೋನಿನಲ್ಲಿ ಮೂಲೆ ಗಲ್ಲನ್ನು ಇಡುತ್ತೇನೆ; ಅದು ಆಯಲ್ಪಟ್ಟದ್ದು, ಅಮೂಲ್ಯ ವಾದದ್ದು; ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗ ಪಡುವದೇ ಇಲ್ಲ ಎಂದು ಬರಹದಲ್ಲಿ ಇರುತ್ತದೆ. ಆದದರಿಂದ ನಂಬುವವರಾದ ನಿಮಗೆ ಆತನು ಅಮೂಲ್ಯನಾಗಿದ್ದಾನೆ. ಅವಿಧೇಯರಿಗಾ ದರೋ ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಅದು ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿದೆ; ಅವರು ವಾಕ್ಯಕ್ಕೆ ಅವಿಧೇಯರಾದದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.
- Matthew 16:18 ಮತ್ತಾಯನು 16:18ನಾನು ಸಹ ನಿನಗೆ ಹೇಳುವದೇ ನಂದರೆ--ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ನರಕದ ದ್ವಾರಗಳು ಅದನ್ನು ಜಯಿಸಲಾರವು.
- Galatians 1:7–9 ಗಲಾತ್ಯದವರಿಗೆ 1:7–9ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಕಳವಳಪಡಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಪ್ರಯತ್ನಿಸುತ್ತಾರೆ. ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೆ ಸುವಾರ್ತೆಯನ್ನು ನಾವೇ ಆಗಲಿ ಪರಲೋಕದಿಂದ ಬಂದ ದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿ ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.
- 2 Corinthians 11:2–4 2 ಕೊರಿಂಥದವರಿಗೆ 11:2–4ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ. ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಹೇಗೆ ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸುಗಳು ಕ್ರಿಸ್ತನ ವಿಷಯದಲ್ಲಿರಬೇಕಾದ ಸರಳತೆಯನ್ನು ಬಿಟ್ಟು ಕೆಟ್ಟು ಹೋದೀತೆಂದು ನನಗೆ ಭಯವುಂಟು. ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ.