1 Corinthians · chapter 3 · verse 21
1 Corinthians 3:21 in Kannada
ಆದಕಾರಣ ಮನುಷ್ಯ ಮಾತ್ರದವರ ವಿಷಯದಲ್ಲಿ ಯಾರೂ ಹಿಗ್ಗದಿರಲಿ. ಯಾಕಂದರೆ ಸಮಸ್ತವೂ ನಿಮ್ಮದು;
Aadakaarana manushya maatradavara vishayadalli yaaroo higgadirali. Yaakandare samastavoo nimmadu;
1 Corinthians 3:21 in English
- King James Version (KJV)
- Therefore let no man glory in men. For all things are yours;
- World English Bible (WEB)
- Therefore let no one boast in men. For all things are yours,
- American Standard Version (ASV)
- Wherefore let no one glory in men. For all things are yours;
- Bible in Basic English (BBE)
- So let no one take pride in men. For all things are yours;
- Darby Translation (DBY)
- So that let no one boast in men; for all things are yours.
- Webster's Bible (WBS)
- Therefore let no man glory in men: for all things are yours:
- Young's Literal Translation (YLT)
- So then, let no one glory in men, for all things are yours,
Read in context
- 19ಇಹಲೋಕಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಯಾಕಂದರೆ--ಆತನು ಜ್ಞಾನಿ ಗಳನ್ನು ಅವರ ಸ್ವಂತತಂತ್ರದಲ್ಲಿಯೇ ಹಿಡು ಕೊಳ್ಳುತ್ತಾನೆಂತಲೂ
- 20ಜ್ಞಾನಿಗಳ ಯೋಚನೆಗಳು ನಿಷ್ಪಲವಾದವುಗಳೆಂದೂ ಕರ್ತನು ತಿಳುಕೊಳ್ಳುತ್ತಾನೆ ಬರೆದದೆಯಲ್ಲಾ;
- 21ಆದಕಾರಣ ಮನುಷ್ಯ ಮಾತ್ರದವರ ವಿಷಯದಲ್ಲಿ ಯಾರೂ ಹಿಗ್ಗದಿರಲಿ. ಯಾಕಂದರೆ ಸಮಸ್ತವೂ ನಿಮ್ಮದು;
- 22ಪೌಲನಾಗಲಿ ಅಪೊಲ್ಲೋಸನಾಗಲಿ ಕೇಫನಾಗಲಿ ಲೋಕವಾಗಲಿ ಜೀವವಾಗಲಿ ಮರಣವಾಗಲಿ ಈಗಿನ ಸಂಗತಿ ಗಳಾಗಲಿ ಮುಂದಣ ಸಂಗತಿಗಳಾಗಲೀ ಸಮಸ್ತವೂ ನಿಮ್ಮವೇ;ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರವನು.
- 23ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರವನು.
Cross references
- Romans 8:32 ರೋಮಾಪುರದವರಿಗೆ 8:32ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ?
- Romans 8:28 ರೋಮಾಪುರದವರಿಗೆ 8:28ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯ ಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವು ಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು.
- Jeremiah 9:23–24 ಯೆರೆಮೀಯ 9:23–24ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ. ಆದರೆ ಹೆಚ್ಚಳ ಪಡುವವನು ಇದರಲ್ಲಿ ಹೆಚ್ಚಳಪಡಲಿ; ಯಾವದರಲ್ಲಿ ಅಂದರೆ ಕರ್ತನಾದ ನಾನು ಭೂಮಿಯಲ್ಲಿ ಕೃಪೆಯನ್ನೂ ನ್ಯಾಯವನ್ನೂ ನೀತಿಯನ್ನೂ ನಡಿಸುವವನಾಗಿದ್ದೇ ನೆಂದು ನನ್ನನ್ನು ಗ್ರಹಿಸಿ ತಿಳುಕೊಳ್ಳುವದರಲ್ಲಿಯೇ; ಇವುಗಳಲ್ಲಿ ನಾನು ಸಂತೋಷ ಪಡುತ್ತೇನೆಂದು ಕರ್ತನು ಅನ್ನುತ್ತಾನೆ.
- 1 Corinthians 4:6 1 ಕೊರಿಂಥದವರಿಗೆ 4:6ಸಹೋದರರೇ, ನಾನು ನಿಮಗೋಸ್ಕರವೇ ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ; ಬರೆದಿರುವದನ್ನು ನೀವು ವಿಾರಿಹೋಗದೆ ನಿಮ್ಮಲ್ಲಿ ಯಾರೂ ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನು ಉಬ್ಬಿಕೊಳ್ಳಬಾರದೆಂಬದನ್ನು ನಮ್ಮಲ್ಲಿ ಕಲಿತುಕೊಳ್ಳ ಬೇಕು.
- Revelation 21:7 ಪ್ರಕಟನೆ 21:7ಜಯಹೊಂದುವವನು ಎಲ್ಲವುಗಳಿಗೆ ಬಾಧ್ಯನಾಗುವನು; ನಾನು ಅವನ ದೇವರಾಗಿರುವೆನು. ಅವನು ನನ್ನ ಮಗನಾಗಿರುವನು.
- 1 Corinthians 3:4–7 1 ಕೊರಿಂಥದವರಿಗೆ 3:4–7ಒಬ್ಬನು--ನಾನು ಪೌಲನ ವನೆಂದೂ ಮತ್ತೊಬ್ಬನು--ನಾನು ಅಪೊಲ್ಲೋಸನ ವನೆಂದೂ ಹೇಳುತ್ತಿರುವಾಗ ನೀವು ಪ್ರಾಪಂಚಿಕ ರಲ್ಲವೇ? ಹಾಗಾದರೆ ಪೌಲನು ಯಾರು? ಅಪೊಲ್ಲೋಸನು ಯಾರು? ಅವರು ಸೇವಕರು, ಅವರ ಮುಖಾಂತರ ನೀವು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವ ರಾಗಿದ್ದಾರೆ. ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು. ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು.
- Romans 4:13 ರೋಮಾಪುರದವರಿಗೆ 4:13ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು.
- 1 Corinthians 1:12–17 1 ಕೊರಿಂಥದವರಿಗೆ 1:12–17ನಾನು ನಿಮಗೆ ಈಗ ಹೇಳುವದೇನಂದರೆ, ನಿಮ್ಮೊ ಳಗೆ ಪ್ರತಿಯೊಬ್ಬನು--ನಾನು ಪೌಲನವನು, ನಾನು ಅಪೊಲ್ಲೋಸನವನು, ನಾನು ಕೇಫನವನು, ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ. ಕ್ರಿಸ್ತನು ವಿಭಾಗವಾಗಿದ್ದಾನೋ? ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡವನು ಪೌಲನೋ? ನೀವು ಪೌಲನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೋ? ನಿಮ್ಮಲ್ಲಿ ಕ್ರಿಸ್ಪನಿಗೂ ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ಬಾಪ್ತಿಸ್ಮ ಮಾಡಿಸಲಿಲ್ಲವಾದದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಹೀಗೆ ನನ್ನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೆಂದು ಯಾರಿಗೂ ಹೇಳುವದ ಕ್ಕಾಗದು. ನಾನು ಸ್ತೆಫನನ ಮನೆಯವರಿಗೆ ಸಹ ಬಾಪ್ತಿಸ್ಮ ಮಾಡಿಸಿದೆನು. ಇವರಿಗಲ್ಲದೆ ಇನ್ನಾರಿಗೂ ನಾನು ಬಾಪ್ತಿಸ್ಮ ಮಾಡಿಸಿದಂತೆ ಕಾಣೆನು. ಬಾಪ್ತಿಸ್ಮ ಮಾಡಿಸುವದಕ್ಕಲ್ಲ, ಸುವಾರ್ತೆಯನ್ನು ಸಾರುವದಕ್ಕೆ ಕ್ರಿಸ್ತನು ನನ್ನನ್ನು ಕಳುಹಿಸಿದನು. ವಾಕ್ಚಾತುರ್ಯದಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯು ನಿರರ್ಥಕವಾಗುವದು.
- 2 Corinthians 4:5 2 ಕೊರಿಂಥದವರಿಗೆ 4:5ನಮ್ಮನ್ನು ನಾವೇ ಅಲ್ಲ, ಆದರೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ಸೇವಕರೆಂದು ಕರ್ತನಾದ ಕ್ರಿಸ್ತ ಯೇಸುವನ್ನೇ ಸಾರುತ್ತೇವೆ.
- 2 Corinthians 4:15 2 ಕೊರಿಂಥದವರಿಗೆ 4:15ಅವೆಲ್ಲವುಗಳು ನಿಮಗಾಗಿಯೇ ಇರುತ್ತವೆ; ಅವು ಗಳಲ್ಲಿ ಅಧಿಕವಾಗಿ ದೊರಕುವ ಕೃಪೆಯು ಬಹುಜನ ರೊಳಗೆ ಕೃತಜ್ಞತೆಯನ್ನು ಹುಟ್ಟಿಸುವದರಿಂದ ದೇವರಿಗೆ ಹೆಚ್ಚಾದ ಮಹಿಮೆಯನ್ನು ಉಂಟು ಮಾಡುವದು.