1 Corinthians · chapter 5 · verse 7
1 Corinthians 5:7 in Kannada
ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ.
Aadadarinda neevu huli illada varaada kaarana hosa kanikavaagiruvante aa hale huliyannu tegeduhaakiri. Yaakandare namma paskavaagiruva kristane namagoskara yajnyaarpita naagiddaane.
1 Corinthians 5:7 in English
- King James Version (KJV)
- Purge out therefore the old leaven, that ye may be a new lump, as ye are unleavened. For even Christ our passover is sacrificed for us:
- World English Bible (WEB)
- Purge out the old yeast, that you may be a new lump, even as you are unleavened. For indeed Christ, our Passover, has been sacrificed in our place.
- American Standard Version (ASV)
- Purge out the old leaven, that ye may be a new lump, even as ye are unleavened. For our passover also hath been sacrificed, [even] Christ:
- Bible in Basic English (BBE)
- Take away, then, the old leaven, so that you may be a new mass, even as you are without leaven. For Christ has been put to death as our Passover.
- Darby Translation (DBY)
- Purge out the old leaven, that ye may be a new lump, according as ye are unleavened. For also our passover, Christ, has been sacrificed;
- Webster's Bible (WBS)
- Cleanse out therefore the old leaven, that ye may be a new lump, as ye are unleavened. For even Christ our passover is sacrificed for us:
- Young's Literal Translation (YLT)
- cleanse out, therefore, the old leaven, that ye may be a new lump, according as ye are unleavened, for also our passover for us was sacrificed — Christ,
Read in context
- 5ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವದಕ್ಕಾಗಿ ಅವನ ಶರೀರವು ನಾಶವಾಗ ಬೇಕೆಂದು ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕೆಂಬದೇ.
- 6ನೀವು ಹಿಗ್ಗುವದು ಒಳ್ಳೇದಲ್ಲ. ಸ್ವಲ್ಪ ಹುಳಿಯು ಕಣಿಕವನ್ನೆಲ್ಲಾ ಹುಳಿ ಮಾಡುತ್ತದೆಂಬದು ನಿಮಗೆ ತಿಳಿಯದೋ?
- 7ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ.
- 8ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
- 9ಜಾರರ ಸಹವಾಸವನ್ನು ಮಾಡಬಾರದೆಂದು ಒಂದು ಪತ್ರಿಕೆಯಲ್ಲಿ ನಿಮಗೆ ಬರೆದಿದ್ದೆನು.
Cross references
- 1 Peter 1:19–20 1 ಪೇತ್ರನು 1:19–20ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ. ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟು ಈ ಅಂತ್ಯ ಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
- Ephesians 4:22 ಎಫೆಸದವರಿಗೆ 4:22ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು.
- Colossians 3:5–9 ಕೊಲೊಸ್ಸೆಯವರಿಗೆ 3:5–9ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ. ಇವುಗಳ ನಿಮಿತ್ತ ಅವಿಧೇಯ ರಾದ ಮಕ್ಕಳ ಮೇಲೆ ದೇವರ ಕೋಪವು ಬರುತ್ತದೆ. ಪೂರ್ವದಲ್ಲಿ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿ ದ್ದಾಗ ಅವುಗಳಂತೆ ನಡೆದಿರಿ. ಈಗಲಾದರೋ ಕ್ರೋಧ ಕೋಪ ಮತ್ಸರ ದೇವದೂಷಣೆ ನಿಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ. ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಹಳೇ ಮನುಷ್ಯನನ್ನು ಅವನ ಕೃತ್ಯಗಳ ಕೂಡ ತೆಗೆದುಹಾಕಿದ್ದೀರಲ್ಲವೇ?
- Exodus 12:5–6 ವಿಮೋಚನಕಾಂಡ 12:5–6ನಿಮ್ಮ ಕುರಿಮರಿಯು ನಿರ್ದೋಷವಾಗಿರುವ ಒಂದು ವರುಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಮೇಕೆಗಳಿಂದಾಗಲಿ ಅದನ್ನು ತಕ್ಕೊ ಳ್ಳಬೇಕು. ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು.
- John 1:29 ಯೋಹಾನನು 1:29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
- Revelation 5:12 ಪ್ರಕಟನೆ 5:12ಅವರು--ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು.
- Acts 8:32–35 ಅಪೊಸ್ತಲರ ಕೃತ್ಯಗಳು 8:32–35ಅವನು ಓದುತ್ತಿದ್ದ ಬರಹದ ಭಾಗವು ಯಾವ ದಂದರೆ--ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಕುರಿಮರಿಯು ಉಣ್ಣೆ ಕತ್ತರಿಸು ವವನ ಮುಂದೆ ಮೌನವಾಗಿರುವಂತೆ ಆತನು ತನ್ನ ಬಾಯಿತೆರೆಯಲೇ ಇಲ್ಲ. ಆತನಿಗುಂಟಾದ ದೀನಾ ವಸ್ಥೆಯಲ್ಲಿ ಆತನಿಗೆ ನ್ಯಾಯವು ಇಲ್ಲದೆ ಹೋಯಿತು. ಆತನ ವಂಶಾವಳಿಯನ್ನು ಯಾರು ಪ್ರಕಟಿಸುವರು? ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದು ಬಿಟ್ಟರಲ್ಲಾ ಎಂಬದೇ. ಕಂಚುಕಿಯು--ಇದನ್ನು ಪ್ರವಾದಿಯು ಯಾರ ವಿಷಯದಲ್ಲಿ ಹೇಳಿದ್ದಾನೆ? ತನ್ನ ವಿಷಯದಲ್ಲಿಯೋ? ಮತ್ತೊಬ್ಬನ ವಿಷಯದಲ್ಲಿಯೋ? ನನಗೆ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಿಕೊಂಡನು. ಅದಕ್ಕೆ ಫಿಲಿಪ್ಪನು ತನ್ನ ಬಾಯನ್ನು ತೆರೆದು ಅದೇ ಬರಹದಿಂದ ಆರಂಭಿಸಿ ಅವನಿಗೆ ಯೇಸುವಿನ ವಿಷಯವನ್ನು ಸಾರಿದನು.
- Isaiah 53:7–10 ಯೆಶಾಯ 53:7–10ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ. ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು. ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ. ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.
- Exodus 12:15 ವಿಮೋಚನಕಾಂಡ 12:15ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.
- Exodus 13:6–7 ವಿಮೋಚನಕಾಂಡ 13:6–7ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಕರ್ತನಿಗೆ ಹಬ್ಬವನ್ನಾಚ ರಿಸಬೇಕು. ಹುಳಿಯಿಲ್ಲದ ರೊಟ್ಟಿಯನ್ನು ಆ ಏಳು ದಿನಗಳಲ್ಲಿ ತಿನ್ನಬೇಕು, ನಿನ್ನ ಬಳಿಯಲ್ಲಿ ಹುಳಿ ರೊಟ್ಟಿಯು ಕಾಣಿಸಬಾರದು. ಇಲ್ಲವೆ ಹುಳಿ ಹಿಟ್ಟು ನಿನ್ನ ಯಾವ ಮೇರೆಯಲ್ಲೂ ಕಾಣಬಾರದು.
- 1 Corinthians 10:17 1 ಕೊರಿಂಥದವರಿಗೆ 10:17ಅನೇಕರಾದ ನಾವು ಒಂದೇರೊಟ್ಟಿಯೂ ಒಂದೇದೇಹವೂ ಆಗಿದ್ದೇವೆ; ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುಗಾರರಾಗಿದ್ದೇವೆ.
- 1 Corinthians 15:3–4 1 ಕೊರಿಂಥದವರಿಗೆ 15:3–4ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು. ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.
Original words (Greek)
- out · G1571ἐκκαθαίρω ekkathaírō
- therefore · G3767οὖν oûn
- old · G3820παλαιός palaiós
- leaven · G2219ζύμη zýmē
- that · G2443ἵνα hína
- be · G5600ὦ ō
- new · G3501νέος néos
- lump · G5445φύραμα phýrama
- as · G2531καθώς kathṓs
- are · G2075ἐστέ esté
- unleavened · G106ἄζυμος ázymos
- For · G1063γάρ gár
- even · G2532καί kaí
- Christ · G5547Χριστός Christós
- our · G2257ἡμῶν hēmōn
- passover · G3957πάσχα páscha
- sacrificed · G2380θύω thýō
- for · G5228ὑπέρ hypér
- us · G2257ἡμῶν hēmōn