1 Corinthians · chapter 7 · verse 33
1 Corinthians 7:33 in Kannada
ಮದುವೆ ಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸ ಬೇಕೆಂದು ಪ್ರಪಂಚದವುಗಳನ್ನು ಕುರಿತು ಚಿಂತಿಸುತ್ತಾನೆ.
Maduve yaadavanu tanna hendatiyannu hege mechchisa bekendu prapanchadavugalannu kuritu chintisuttaane.
1 Corinthians 7:33 in English
- King James Version (KJV)
- But he that is married careth for the things that are of the world, how he may please [his] wife.
- World English Bible (WEB)
- but he who is married is concerned about the things of the world, how he may please his wife.
- American Standard Version (ASV)
- but he that is married is careful for the things of the world, how he may please his wife,
- Bible in Basic English (BBE)
- But the married man gives his attention to the things of this world, how he may give pleasure to his wife.
- Darby Translation (DBY)
- but he that has married cares for the things of the world, how he shall please his wife.
- Webster's Bible (WBS)
- But he that is married, is anxious for the things that are of the world, how he may please [his] wife.
- Young's Literal Translation (YLT)
- and the married is anxious for the things of the world, how he shall please the wife.
Read in context
- 31ಲೋಕವನ್ನು ಅನುಭೋಗಿಸುವವರು ಅದನ್ನು ದುರುಪಯೋಗ ಮಾಡದವರಂತೆಯೂ ಇರಬೇಕು; ಯಾಕಂದರೆ ಈ ಲೋಕದ ಆಡಂಬರವು ಗತಿಸಿಹೋಗುತ್ತದೆ.
- 32ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂಬದು ನನ್ನ ಇಷ್ಟ. ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
- 33ಮದುವೆ ಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸ ಬೇಕೆಂದು ಪ್ರಪಂಚದವುಗಳನ್ನು ಕುರಿತು ಚಿಂತಿಸುತ್ತಾನೆ.
- 34ಅದರಂತೆ ಮದುವೆಯಾದವಳಿಗೂ ಕನ್ನಿಕೆಗೂ ವ್ಯತ್ಯಾಸವುಂಟು; ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ; ಮದುವೆ ಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದವುಗಳನ್ನು ಕುರಿತು
- 35ನಾನು ನಿಮಗೆ ಉರ್ಲುಹಾಕುವದಕ್ಕಾಗಿ ಅಲ್ಲ; ಆದರೆ ಯೋಗ್ಯವಾದದ್ದಕ್ಕಾಗಿಯೂ ನೀವು ಕರ್ತನಿಗೆ ದೃಢ ನಿಷ್ಠೆಯುಳ್ಳವರಾಗಿಯೂ ಇರುವಂತೆ ನಿಮ್ಮ ಸ್ವಂತ ಹಿತಕ್ಕಾಗಿಯೇ ಹೇಳುತ್ತೇನೆ.
Cross references
- 1 Peter 3:7 1 ಪೇತ್ರನು 3:7ಅದೇ ರೀತಿಯಾಗಿ ಪುರಷರೇ, ಸ್ತ್ರೀಯು ಬಲಹೀನ ಳೆಂಬದನ್ನು ತಿಳಿದು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಇರ್ರಿ. ಅವರು ಜೀವದ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.
- Colossians 3:19 ಕೊಲೊಸ್ಸೆಯವರಿಗೆ 3:19ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ; ಅವರಿಗೆ ನಿಷ್ಠುರವಾಗಿರಬೇಡಿರಿ.
- 1 Timothy 5:8 1 ತಿಮೊಥೆಯನಿಗೆ 5:8ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ.
- Ephesians 5:25–33 ಎಫೆಸದವರಿಗೆ 5:25–33ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು. ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೆ ಪ್ರೀತಿಸಿಕೊಳ್ಳುವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ. ಆದರೆ ಅದನ್ನು ಪೋಷಿಸಿ ಸಂರಕ್ಷಿಸುವ ಪ್ರಕಾರ ಕರ್ತನು ಸಭೆಯನ್ನು ಪೋಷಿಸಿ ಸಂರಕ್ಷಿಸುವಾತನಾಗಿದ್ದಾನೆ. ನಾವು ಆತನ ದೇಹದ ಅಂಗಗಳೂ ಮಾಂಸವೂ ಎಲುಬುಗಳೂ ಆಗಿದ್ದೇವೆ. ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿ ಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು. ಇದೊಂದು ದೊಡ್ಡ ಮರ್ಮವೇ; ಆದರೆ ನಾನು ಕ್ರಿಸ್ತನ ವಿಷಯವಾಗಿಯೂ ಸಭೆಯ ವಿಷಯವಾಗಿಯೂ ಮಾತನಾಡುತ್ತೇನೆ.ಆದಾಗ್ಯೂ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಸ್ತ್ರೀಯು ತನ್ನ ಗಂಡನನ್ನು ಗೌರವಿಸುವವಳಾಗಿ ನಡೆದುಕೊಳ್ಳಬೇಕು. ಆದಾಗ್ಯೂ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಸ್ತ್ರೀಯು ತನ್ನ ಗಂಡನನ್ನು ಗೌರವಿಸುವವಳಾಗಿ ನಡೆದುಕೊಳ್ಳಬೇಕು.
- 1 Corinthians 7:3 1 ಕೊರಿಂಥದವರಿಗೆ 7:3ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ.
- 1 Samuel 1:4–8 1 ಸಮುವೇಲನು 1:4–8ಎಲ್ಕಾನನು ಬಲಿಯನ್ನು ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿಯಾದ ಪೆನಿನ್ನಳಿಗೂ ಅವಳ ಎಲ್ಲಾ ಕುಮಾರರಿಗೂ ಕುಮಾರ್ತೆ ಯರಿಗೂ ಪಾಲನ್ನು ಕೊಟ್ಟನು. ಹನ್ನಳಿಗೆ ಯೋಗ್ಯ ವಾದ ಪಾಲನ್ನು ಕೊಟ್ಟು ಹನ್ನಳನ್ನು ಪ್ರೀತಿಮಾಡಿ ದನು. ಆದರೆ ಕರ್ತನು ಅವಳ ಗರ್ಭವನ್ನು ಮುಚ್ಚಿ ದ್ದನು. ಕರ್ತನು ಅವಳ ಗರ್ಭವನ್ನು ಮುಚ್ಚಿದ್ದರಿಂದ ಅವಳ ವಿರೋಧಿಯಾದವಳು ಅವಳಿಗೆ ಮನಗುಂದುವ ಹಾಗೆ ಬಹಳವಾಗಿ ಕೆಣಕಿ ಬಾಧಿಸಿದಳು. ಹೀಗೆಯೇ ಅವನು ಪ್ರತಿಸಂವತ್ಸರದಲ್ಲಿಯೂ ಮಾಡಿದ್ದರಿಂದ ಇವಳು ಕರ್ತನ ಮನೆಗೆ ಹೋಗುತ್ತಿರುವಾಗ ಈ ಪ್ರಕಾರ ಹನ್ನಳನ್ನು ಬಾಧಿಸಿದ್ದರಿಂದ; ಅವಳು ಅತ್ತು ಊಟ ಮಾಡದೆ ಇದ್ದಳು. ಆಗ ಅವಳ ಗಂಡನಾದ ಎಲ್ಕಾನನು ಅವಳಿಗೆ--ಹನ್ನಳೇ, ಯಾಕೆ ಅಳುತ್ತೀ? ಯಾಕೆ ತಿನ್ನದೆ ಇದ್ದೀ? ಯಾಕೆ ನಿನ್ನ ಹೃದಯದಲ್ಲಿ ದುಃಖಪಡುತ್ತಿದ್ದೀ? ಹತ್ತು ಮಂದಿ ಕುಮಾರರಿಗಿಂತ ನಾನು ನಿನಗೆ ಉತ್ತಮನಲ್ಲವೋ ಅಂದನು.
- Nehemiah 5:1–5 ನೆಹೆಮೀಯ 5:1–5ಆದರೆ ಜನರಿಂದಲೂ ಅವರ ಹೆಂಡತಿಯರಿಂದಲೂ ತಮ್ಮ ಸಹೋದರರಾದ ಯೆಹೂದ್ಯರ ಮೇಲೆ ದೊಡ್ಡ ಕೂಗು ಉಂಟಾಯಿತು. ಅವರಲ್ಲಿ ಕೆಲವರು--ನಾವೂ ನಮ್ಮ ಕುಮಾರರೂ ನಮ್ಮ ಕುಮಾರ್ತೆಯರೂ ಅನೇಕರಾದದರಿಂದ ನಾವು ಬದುಕುವ ಹಾಗೆ ಧಾನ್ಯವನ್ನು ತಕ್ಕೊಂಡೆವು ಅಂದರು. ಕೆಲವರು ಈ ಬರದಲ್ಲಿ ನಾವು ಧಾನ್ಯಕೊಂಡು ಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಮನೆಗಳನ್ನೂ ಒತ್ತೆ ಇಟ್ಟೆವು ಅಂದರು. ಇನ್ನು ಕೆಲವರು--ಅರಸನಿಗೆ ಕಪ್ಪವನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ ನಮ್ಮ ದ್ರಾಕ್ಷೇ ತೋಟಗಳ ಮೇಲೆಯೂ ಸಾಲವನ್ನು ತೆಗೆದು ಕೊಂಡಿದ್ದೇವೆ. ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.
- Luke 12:22 ಲೂಕನು 12:22ಆತನು ತನ್ನ ಶಿಷ್ಯರಿಗೆ--ನೀವು ನಿಮ್ಮ ಪ್ರಾಣಕ್ಕೆ ಏನು ತಿನ್ನಬೇಕು ಇಲ್ಲವೆ ನಿಮ್ಮ ದೇಹಕ್ಕೆ ಏನು ಹೊದ್ದು ಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.