1 John · chapter 5 · verse 19
1 John 5:19 in Kannada
ನಾವು ದೇವರಿಗೆ ಸಂಬಂಧಪಟ್ಟವರಾಗಿದ್ದೇವೆಂದೂ ಲೋಕವೆಲ್ಲವು ಕೆಟ್ಟತನದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.
Naavu devarige sambandhapattavaraagiddevendoo lokavellavu kettatanadalli biddide endoo namage gottade.
1 John 5:19 in English
- King James Version (KJV)
- [And] we know that we are of God, and the whole world lieth in wickedness.
- World English Bible (WEB)
- We know that we are of God, and the whole world lies in the power of the evil one.
- American Standard Version (ASV)
- We know that we are of God, and the whole world lieth in the evil one.
- Bible in Basic English (BBE)
- We are certain that we are of God, but all the world is in the power of the Evil One.
- Darby Translation (DBY)
- We know that we are of God, and the whole world lies in the wicked [one].
- Webster's Bible (WBS)
- [And] we know that we are of God, and the whole world lieth in wickedness.
- Young's Literal Translation (YLT)
- we have known that of God we are, and the whole world in the evil doth lie;
Read in context
- 17ಅನೀತಿಯೆಲ್ಲವೂ ಪಾಪವಾಗಿದೆ; ಆದರೂ ಮರಣಕರವಲ್ಲದ ಪಾಪವುಂಟು.
- 18ದೇವರಿಂದ ಹುಟ್ಟಿರುವವನು ಪಾಪಮಾಡುವವ ನಲ್ಲವೆಂಬದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದ ವನು ತನ್ನನ್ನು ತಾನು ಕಾಪಾಡಿಕೊಳ್ಳುವನು; ಕೆಡುಕನು ಅವನನ್ನು ಮುಟ್ಟುವದಿಲ್ಲ.
- 19ನಾವು ದೇವರಿಗೆ ಸಂಬಂಧಪಟ್ಟವರಾಗಿದ್ದೇವೆಂದೂ ಲೋಕವೆಲ್ಲವು ಕೆಟ್ಟತನದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.
- 20ದೇವರ ಮಗನು ಬಂದು ನಾವು ಸತ್ಯವಾಗಿರುವಾತ ನನ್ನು ಅರಿತುಕೊಳ್ಳುವ ಹಾಗೆ ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ನಾವು ಆ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಈತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ.ಚಿಕ್ಕ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. ಆಮೆನ್.
- 21ಚಿಕ್ಕ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. ಆಮೆನ್.
Cross references
- 2 Corinthians 4:4 2 ಕೊರಿಂಥದವರಿಗೆ 4:4ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಮಹಿಮೆಯ ಸುವಾರ್ತೆಯು ಇವರಲ್ಲಿ ಪ್ರಕಾಶಿಸಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ್ದಾನೆ.
- 1 John 4:4–6 1 ಯೋಹಾನನು 4:4–6ಚಿಕ್ಕಮಕ್ಕಳೇ, ನೀವು ದೇವರಿಗೆ ಸಂಬಂಧಪಟ್ಟವರಾ ಗಿದ್ದೀರಿ. ಅವರನ್ನು ಜಯಿಸಿದ್ದೀರಿ. ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ. ಅವರು ಲೋಕಸಂಬಂಧಿಗಳಾಗಿದ್ದಾರೆ; ಈ ಕಾರಣ ದಿಂದ ಅವರು ಲೋಕಸಂಬಂಧವಾಗಿ ಮಾತನಾ ಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ. ನಾವಂತೂ ದೇವರಿಗೆ ಸಂಬಂಧಪಟ್ಟವ ರಾಗಿದ್ದೇವೆ; ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ; ದೇವರಿಗೆ ಸಂಬಂಧಪಡದವನು ನಮ್ಮ ಮಾತನ್ನು ಕೇಳುವದಿಲ್ಲ. ಇದು ಸತ್ಯದ ಆತ್ಮ, ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದು ಕೊಳ್ಳುತ್ತೇವೆ.
- Ephesians 2:2 ಎಫೆಸದವರಿಗೆ 2:2ನೀವು ಪೂರ್ವದಲ್ಲಿ ಅಪರಾಧ ಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹ ಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡಿಸುವ ಆತ್ಮನಿಗನುಸಾರವಾಗಿ ನಡೆದುಕೊಂಡಿರಿ;
- Galatians 1:4 ಗಲಾತ್ಯದವರಿಗೆ 1:4ಈತನು ನಮ್ಮನ್ನು ಕೆಟ್ಟದ್ದಾಗಿರುವ ಈಗಿನ ಪ್ರಪಂಚದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆ ಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗೋಸ್ಕರ ತನ್ನನ್ನು ತಾನೇ ಒಪ್ಪಿಸಿದನು.
- Revelation 12:9 ಪ್ರಕಟನೆ 12:9ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.
- John 12:31 ಯೋಹಾನನು 12:31ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ; ಇಹಲೋಕದ ಅಧಿಪತಿಯು ಈಗ ಹೊರಗೆ ಹಾಕಲ್ಪಡುವನು.
- John 16:11 ಯೋಹಾನನು 16:11ಇಹಲೋಕಾಧಿಪತಿಯು ನ್ಯಾಯತೀರ್ಪನ್ನು ಹೊಂದಿರುವದರಿಂದ ನ್ಯಾಯ ತೀರ್ವಿಕೆಯ ವಿಷಯವಾಗಿಯೂ ಲೋಕವನ್ನು ಗದರಿಸುವನು.
- 1 John 5:20 1 ಯೋಹಾನನು 5:20ದೇವರ ಮಗನು ಬಂದು ನಾವು ಸತ್ಯವಾಗಿರುವಾತ ನನ್ನು ಅರಿತುಕೊಳ್ಳುವ ಹಾಗೆ ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ನಾವು ಆ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಈತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ.ಚಿಕ್ಕ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. ಆಮೆನ್.
- John 15:18–19 ಯೋಹಾನನು 15:18–19ಲೋಕವು ನಿಮ್ಮನ್ನು ದ್ವೇಷಮಾಡಿದರೆ ನಿಮಗಿಂತ ಮೊದಲು ಅದು ನನ್ನನ್ನು ದ್ವೇಷಮಾಡಿದೆ ಎಂದು ನಿಮಗೆ ತಿಳಿದದೆ. ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ.
- Revelation 13:7–8 ಪ್ರಕಟನೆ 13:7–8ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು. ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು.
- Romans 1:28–32 ರೋಮಾಪುರದವರಿಗೆ 1:28–32ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು. ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು.ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ. ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.
- 1 John 5:10 1 ಯೋಹಾನನು 5:10ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ; ಹೇಗೆಂದರೆ ದೇವರು ತನ್ನ ಮಗನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ.