1 Kings · chapter 14 · verse 17
1 Kings 14:17 in Kannada
ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಕರ್ತನು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ತಿಳಿಸಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಮಗನು ಸತ್ತನು.
Aaga yaarobbaamana patni eddu horatu tirchakke bandalu. Kartanu pravaadiyaada tanna sevakanaagiruva aheeyana mukhaantara tilisida vaakyada prakaarave avalu baagila hostila balige bandaaga maganu sattanu.
1 Kings 14:17 in English
- King James Version (KJV)
- And Jeroboam’s wife arose, and departed, and came to Tirzah: [and] when she came to the threshold of the door, the child died;
- World English Bible (WEB)
- Jeroboam’s wife arose and departed, and came to Tirzah. As she came to the threshold of the house, the child died.
- American Standard Version (ASV)
- And Jeroboam’s wife arose, and departed, and came to Tirzah: [and] as she came to the threshold of the house, the child died.
- Bible in Basic English (BBE)
- Then Jeroboam's wife got up and went away and came to Tirzah; and when she came to the doorway of the house, death came to the child.
- Darby Translation (DBY)
- And Jeroboam's wife arose and departed, and came to Tirzah; when she came to the threshold of the door, the child died.
- Webster's Bible (WBS)
- And Jeroboam's wife arose, and departed, and came to Tirzah: [and] when she came to the threshhold of the door, the child died;
- Young's Literal Translation (YLT)
- And the wife of Jeroboam riseth, and goeth, and cometh to Tirzah; she hath come in to the threshold of the house, and the youth dieth;
Read in context
- 15ಆದರೆ ಈಗಲೇ ಏನು ಆಗುವದು? ನೀರಿನಲ್ಲಿರುವ ದಂಟು ಅಲ್ಲಾಡುವ ಹಾಗೆ ಕರ್ತನು ಇಸ್ರಾಯೇಲ್ಯರನ್ನು ಹೊಡೆಯುವನು. ಇಸ್ರಾ ಯೇಲ್ಯರು ಕರ್ತನಿಗೆ ಕೋಪವನ್ನು ಎಬ್ಬಿಸಲು ತಮ್ಮ ವಿಗ್ರಹಾರಾಧನೆಗೋಸ್ಕರ ತೋಪುಗಳನ್ನು ಹಾಕಿದ್ದ ರಿಂದ ಆತನು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವನು.
- 16ಆತನು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲ್ಯರನ್ನು ಒಪ್ಪಿಸಿ ಬಿಡುವನು; ಅವನೇ ಪಾಪ ಮಾಡಿ ಪಾಪವನ್ನು ಮಾಡಲು ಇಸ್ರಾಯೇಲ್ಯರನ್ನು ಪ್ರೇರೇಪಿಸಿದನು ಅಂದನು.
- 17ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಕರ್ತನು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ತಿಳಿಸಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಮಗನು ಸತ್ತನು.
- 18ಇಸ್ರಾಯೇಲ್ಯರೆಲ್ಲರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಟ್ಟರು.
- 19ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಯುದ್ಧ ಮಾಡಿದ್ದೂ ಆಳಿದ್ದೂ--ಇಗೋ, ಇವು ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕ ದಲ್ಲಿ ಬರೆಯಲ್ಪಟ್ಟಿವೆ.
Cross references
- 1 Kings 15:33 1 ಅರಸುಗಳು 15:33ಯೆಹೂದದ ಅರಸನಾದ ಆಸನ ಮೂರನೇ ವರುಷದಲ್ಲಿ ಅಹೀಯನ ಮಗನಾದ ಬಾಷನು ಸಮಸ್ತ ಇಸ್ರಾಯೇಲ್ಯರ ಮೇಲೆ ತಿರ್ಚದಲ್ಲಿ ಆಳಲು ಆರಂಭಿಸಿ ಇಪ್ಪತ್ತನಾಲ್ಕು ವರುಷ ಆಳಿದನು.ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಯಾರೊ ಬ್ಬಾಮನ ಮಾರ್ಗದಲ್ಲಿಯೂ ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ಲ್ಲಿಯೂ ನಡೆದನು.
- 1 Kings 15:21 1 ಅರಸುಗಳು 15:21ಬಾಷನು ಅದನ್ನು ಕೇಳುತ್ತಲೆ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತಿರ್ಚ ದಲ್ಲಿ ವಾಸಿಸಿದನು.
- 1 Kings 16:23 1 ಅರಸುಗಳು 16:23ಯೆಹೂದದ ಅರಸನಾದ ಆಸನ ಮೂವ ತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಹನ್ನೆರಡು ವರುಷ ಆಳಿದನು;
- 1 Kings 16:15 1 ಅರಸುಗಳು 16:15ಯೆಹೂದದ ಅರಸನಾದ ಆಸನ ಇಪ್ಪತ್ತೇಳನೇವರುಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಏಳು ದಿವಸ ಆಳಿದನು. ಆಗ ಜನರು ಫಿಲಿಷ್ಟಿಯರಿಗೆ ಸಂಬಂಧ ಪಟ್ಟ ಗಿಬ್ಬೆತೋನಿನ ಬಳಿಯಲ್ಲಿ ದಂಡಾಗಿ ಇಳಿದಿರುವ
- Song of Solomon 6:4 ಪರಮಗೀತೆ 6:4ಓ ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದ ರಿಯೂ ಯೆರೂಸಲೇಮಿನ ಹಾಗೆ ರಮ್ಯಳೂ ಧ್ವಜ ಗಳಿರುವ ದಂಡಿನ ಹಾಗೆ ಭಯಂಕರಳೂ ಆಗಿದ್ದೀ.
- 1 Kings 14:12–13 1 ಅರಸುಗಳು 14:12–13ಆದ ದರಿಂದ ನೀನೆದ್ದು ನಿನ್ನ ಮನೆಗೆ ಹೋಗು; ನೀನು ಪಟ್ಟಣದೊಳಗೆ ಪಾದಗಳನ್ನು ಇಡುವಷ್ಟರಲ್ಲಿ ನಿನ್ನ ಮಗನು ಸಾಯುವನು. ಇದಲ್ಲದೆ ಸಮಸ್ತ ಇಸ್ರಾ ಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಡುವರು; ಯಾಕಂದರೆ ಯಾರೊಬ್ಬಾಮನ ವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು; ಯಾರೊಬ್ಬಾಮನ ಮನೆಯೊಳಗೆ ಅವನು ಇಸ್ರಾಯೇ ಲಿನ ದೇವರಾದ ಕರ್ತನ ದೃಷ್ಟಿಗೆ ಒಳ್ಳೆಯವನಾಗಿ ದ್ದನು.
- 1 Kings 16:6–9 1 ಅರಸುಗಳು 16:6–9ಬಾಷನು ತನ್ನ ಪಿತೃಗಳ ಸಂಗಡ ಮಲಗಿದನು; ತಿರ್ಚದಲ್ಲಿ ಅವನು ಹೂಣಿಡಲ್ಪಟ್ಟನು; ಅವನ ಮಗನಾದ ಏಲನು ಅವನಿಗೆ ಬದಲಾಗಿ ಆಳಿ ದನು. ಇದಲ್ಲದೆ ಬಾಷನು ಯಾರೂಬ್ಬಾಮನ ಮನೆ ಯವರ ಹಾಗಿದ್ದು ಅವನನ್ನು ಕೊಂದುಹಾಕಿ ತನ್ನ ದುಷ್ಕೃತ್ಯಗಳಿಂದ ಕರ್ತನಿಗೆ ಕೋಪವನ್ನು ಎಬ್ಬಿಸಿ ಕರ್ತನ ಸಮ್ಮುಖದಲ್ಲಿ ತಾನು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ಅವನಿಗೆ ವಿರೋಧವಾಗಿಯೂ ಅವನ ಮನೆಗೆ ವಿರೋಧವಾಗಿಯೂ ಹನಾನೀಯ ಮಗನಾಗಿರುವ ಪ್ರವಾದಿಯಾದ ಯೇಹುವಿನ ಮುಖಾಂತರ ಕರ್ತನ ವಾಕ್ಯ ಉಂಟಾಯಿತು. ಯೆಹೂದದ ಅರಸನಾದ ಆಸನ ಇಪ್ಪತ್ತಾರನೇ ವರುಷದಲ್ಲಿ ಬಾಷನ ಮಗನಾದ ಏಲನು ಇಸ್ರಾಯೇ ಲಿನ ಮೇಲೆ ತಿರ್ಚದಲ್ಲಿ ಎರಡು ವರುಷ ಆಳಲಾರಂಭಿ ಸಿದನು. ಆದರೆ ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕ ನಾದ ಅರ್ಚನ ಮನೆಯಲ್ಲಿ ಅವನು ಕುಡಿದು ಮತ್ತನಾಗಿ ತಿರ್ಚದಲ್ಲಿರುವಾಗ ಅರ್ಧ ರಥಗಳಿಗೆ ಅಧಿಪತಿಯಾಗಿ ರುವ ಅವನ ಸೇವಕನಾದ ಜಿಮ್ರಿ ಅವನಿಗೆ ವಿರೋಧ ವಾಗಿ ಒಳಸಂಚು ಮಾಡಿದನು.
- 1 Samuel 4:18–20 1 ಸಮುವೇಲನು 4:18–20ಅವನು ದೇವರ ಒಡಂಬಡಿಕೆಯ ಮಂಜೂಷದ ಮಾತನ್ನು ಹೇಳಿದಾಗ ಏಲಿಯು ಆಸನದ ಮೇಲಿನಿಂದ ಬಾಗಲಿನ ಪಾರ್ಶ್ವವಾಗಿ ಹಿಂದಕ್ಕೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಯಾಕಂದರೆ ಅವನು ಮುದುಕನಾಗಿಯೂ ಭಾರವುಳ್ಳ ವನಾಗಿಯೂ ಇದ್ದನು. ಅವನು ನಾಲ್ವತ್ತು ವರುಷ ಇಸ್ರಾಯೇಲಿಗೆ ನ್ಯಾಯತೀರಿಸಿದನು. ಇದಲ್ಲದೆ ಅವನ ಸೊಸೆಯಾದ ಫೀನೆಹಾಸನ ಹೆಂಡತಿ ಗರ್ಭಿಣಿಯಾಗಿ ಹೆರುವದಕ್ಕಿದ್ದಳು. ಅವಳು ದೇವರ ಮಂಜೂಷವು ಶತ್ರುವಶವಾಯಿತೆಂಬ ವರ್ತ ಮಾನವನ್ನೂ ತನ್ನ ಮಾವನೂ ಗಂಡನೂ ಸತ್ತು ಹೋದರೆಂಬದನ್ನೂ ಕೇಳಿದಾಗ ಅವಳಿಗೆ ಪ್ರಸವ ವೇದನೆ ಉಂಟಾಗಿ ಅವಳು ಮಗನನ್ನು ಹೆತ್ತಳು. ಅವಳು ಸಾಯುವ ವೇಳೆಯಲ್ಲಿ ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು--ಭಯಪಡಬೇಡ; ಯಾಕಂದರೆ ಮಗನನ್ನು ಹೆತ್ತಿದ್ದೀ ಎಂದು ಅವಳಿಗೆ ಹೇಳಿದರು.
- 1 Samuel 2:20–34 1 ಸಮುವೇಲನು 2:20–34ಆಗ ಏಲಿಯು ಎಲ್ಕಾನನನ್ನೂ ಅವನ ಹೆಂಡತಿ ಯನ್ನೂ ಆಶೀರ್ವದಿಸಿ--ಕರ್ತನಿಗೆ ಸಲ್ಲಿಸಿದ್ದಕ್ಕೋಸ್ಕರ ಕರ್ತನು ಈ ಸ್ತ್ರೀಯಿಂದ ನಿನಗೆ ಸಂತಾನವನ್ನು ದಯ ಪಾಲಿಸಲಿ ಅಂದನು. ಅವರು ತಿರಿಗಿ ತಮ್ಮ ಮನೆಗೆ ಹೋದರು. ಹಾಗೆಯೇ ಕರ್ತನು ಹನ್ನಳನ್ನು ದರ್ಶಿಸಿ ದ್ದರಿಂದ ಅವಳು ಗರ್ಭಧರಿಸಿ ಮೂವರು ಕುಮಾರ ರನ್ನೂ ಇಬ್ಬರು ಕುಮಾರ್ತೆಯರನ್ನೂ ಹೆತ್ತಳು. ಇದಲ್ಲದೆ ಬಾಲಕನಾದ ಸಮುವೇಲನು ಕರ್ತನ ಸನ್ನಿಧಿಯಲ್ಲಿ ಬೆಳೆಯುತ್ತಿದ್ದನು. ಆದರೆ ಏಲಿಯು ಬಹಳ ವೃದ್ಧನಾಗಿದ್ದನು. ತನ್ನ ಕುಮಾರರು ಇಸ್ರಾಯೇಲಿಗೆ ಮಾಡುವದೆಲ್ಲವನ್ನೂ ಅವರು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿ ಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬದನ್ನೂ ಕೇಳಿ ಅವರಿಗೆ-- ನೀವು ಇಂಥಾ ಕಾರ್ಯಗಳನ್ನು ಮಾಡು ವದೇನು? ಯಾಕಂದರೆ ನಾನು ಎಲ್ಲಾ ಜನರಿಂದ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ. ನನ್ನ ಕುಮಾ ರರೇ, ಹಾಗೆ ಮಾಡಬೇಡಿರಿ; ಯಾಕಂದರೆ ನಾನು ಕೇಳುವ ವರ್ತಮಾನ ಒಳ್ಳೇದಲ್ಲ; ಕರ್ತನ ಜನರು ಆಜ್ಞೆವಿಾರಿ ನಡೆಯುವ ಹಾಗೆ ಮಾಡುತ್ತೀರಿ. ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು. ಆದರೆ ಬಾಲಕನಾದ ಸಮು ವೇಲನು ಬೆಳೆಯುತ್ತಾ ಇದ್ದನು; ಕರ್ತನ ಮತ್ತು ಮನುಷ್ಯರ ದಯೆಗೆ ಪಾತ್ರನಾಗಿದ್ದನು. ದೇವರ ಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು ಅವನಿಗೆ--ಕರ್ತನು ಹೀಗೆ ಹೇಳುತ್ತಾನೆ--ನಿನ್ನ ತಂದೆಯ ಮನೆಯವರು ಐಗುಪ್ತದಲ್ಲಿ ಫರೋ ಹನ ಮನೆಯೊಳಗೆ ಇರುವಾಗ ನಾನು ಅವರಿಗೆ ಪ್ರತ್ಯಕ್ಷವಾದದ್ದು ಸ್ಪಷ್ಟವಾಗಲಿಲ್ಲವೋ? ನನ್ನ ಯಜ್ಞ ವೇದಿಯ ಮೇಲೆ ಬಲಿಯನ್ನು ಅರ್ಪಿಸುವದಕ್ಕೂ ಧೂಪವನ್ನು ಸುಡುವದಕ್ಕೂ ನನ್ನ ಮುಂದೆ ಏಫೋ ದನ್ನು ಧರಿಸಿಕೊಂಡಿರುವದಕ್ಕೂ ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರ ಬೇಕೆಂದು ನಾನು ಅವನನ್ನು ಆದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲ್ ಮಕ್ಕಳು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ? ನನ್ನ ಜನರಾದ ಇಸ್ರಾಯೇಲ್ಯರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವದಕ್ಕೆ ನನ್ನ ವಾಸಸ್ಥಳ ದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ ಅರ್ಪಣೆಯನ್ನೂ ನೀವು ಒದ್ದು ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವದೇನು? ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು. ಇಗೋ, ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇಲ್ಲದ ಹಾಗೆ ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿವಸಗಳು ಬರುವವು. ಇದಲ್ಲದೆ ಇಸ್ರಾಯೇಲಿಗೆ ಮಾಡುವ ಸಕಲ ಉತ್ತಮವಾದವು ಗಳಿಗೆ ಬದಲಾಗಿ ನೀನು ನನ್ನ ವಾಸಸ್ಥಳದಲ್ಲಿ ಒಬ್ಬ ವೈರಿಯನ್ನು ಕಾಣುವಿ; ಎಂದಿಗೂ ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇರುವದಿಲ್ಲ. ನನ್ನ ಯಜ್ಞ ವೇದಿಯ ಬಳಿಯಿಂದ ನಾನು ಕಡಿದು ಬಿಡದ ಮನು ಷ್ಯನು ನಿನ್ನ ಕಣ್ಣುಗಳನ್ನು ಕಳೆದು ನಿನ್ನ ಹೃದಯವನ್ನು ವೇದನೆಪಡಿಸುವದಕ್ಕೆ ಇರುವನು; ನಿನ್ನ ಮನೆಯವ ರೆಲ್ಲಾ ಯೌವನಸ್ಥರಾದಾಗಲೇ ಸಾಯುವರು. ಇದ ಲ್ಲದೆ ನಿನಗೆ ಗುರುತಾಗಿ ಹೊಫ್ನಿಯು ಫೀನೆಹಾಸನು ಎಂಬ ನಿನ್ನ ಇಬ್ಬರು ಮಕ್ಕಳಿಗೆ ಬರುವದೇನಂದರೆ, ಅವರಿಬ್ಬರೂ ಒಂದೇ ದಿವಸದಲ್ಲಿ ಸಾಯುವರು.
- Joshua 12:24 ಯೆಹೋಶುವ 12:24ತಿರ್ಚದ ಅರಸನು ಒಬ್ಬನು; ಒಟ್ಟು ಮೂವತ್ತೊಂದು ಅರಸರುಗಳು.