1 Kings · chapter 2 · verse 12
1 Kings 2:12 in Kannada
ಆಗ ಸೊಲೊಮೋನನು ತನ್ನ ತಂದೆಯಾದ ದಾವೀ ದನ ಸಿಂಹಾಸನದ ಮೇಲೆ ಕುಳಿತನು; ಅವನ ರಾಜ್ಯವು ಬಹು ಸ್ಥಿರವಾಗಿತ್ತು.
Aaga solomonanu tanna tandeyaada daavee dana sinhaasanada mele kulitanu; avana raajyavu bahu sthiravaagittu.
1 Kings 2:12 in English
- King James Version (KJV)
- Then sat Solomon upon the throne of David his father; and his kingdom was established greatly.
- World English Bible (WEB)
- Solomon sat on David his father’s throne; and his kingdom was firmly established.
- American Standard Version (ASV)
- And Solomon sat upon the throne of David his father; and his kingdom was established greatly.
- Bible in Basic English (BBE)
- And Solomon took his place on the seat of David his father, and his kingdom was made safe and strong.
- Darby Translation (DBY)
- And Solomon sat on the throne of David his father; and his kingdom was established greatly.
- Webster's Bible (WBS)
- Then Solomon was seated upon the throne of David his father; and his kingdom was established greatly.
- Young's Literal Translation (YLT)
- And Solomon hath sat on the throne of David his father, and his kingdom is established greatly,
Read in context
- 10ಹೀಗೆಯೇ ದಾವೀದನು ತನ್ನ ಪಿತೃಗಳ ಸಂಗಡ ಮಲಗಿಕೊಂಡನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು.
- 11ದಾವೀದನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರುಷಗಳು. ಏಳು ವರುಷ ಹೆಬ್ರೋನಿನಲ್ಲಿ ಆಳಿದನು; ಮೂವತ್ತು ಮೂರು ವರುಷ ಯೆರೂಸಲೇಮಿನಲ್ಲಿ ಆಳಿದನು.
- 12ಆಗ ಸೊಲೊಮೋನನು ತನ್ನ ತಂದೆಯಾದ ದಾವೀ ದನ ಸಿಂಹಾಸನದ ಮೇಲೆ ಕುಳಿತನು; ಅವನ ರಾಜ್ಯವು ಬಹು ಸ್ಥಿರವಾಗಿತ್ತು.
- 13ಆದರೆ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಬಂದನು. ಆಕೆಯು ಅವನಿಗೆ--ಸಮಾಧಾನವಾಗಿ ಬರುತ್ತೀಯೋ ಅಂದಳು.
- 14ಅದಕ್ಕೆ ಅವನು--ಸಮಾ ಧಾನವೇ ಅಂದನು ಮತ್ತು ಅವನು--ನಿನಗೆ ಹೇಳತಕ್ಕ ಮಾತು ನನಗುಂಟು ಅಂದನು. ಅದಕ್ಕವಳು--ಹೇಳು ಅಂದಳು.
Cross references
- 2 Chronicles 1:1 2 ಪೂರ್ವಕಾಲವೃತ್ತಾಂತ 1:1ದಾವೀದನ ಮಗನಾದ ಸೊಲೊಮೋ ನನು ತನ್ನ ರಾಜ್ಯದಲ್ಲಿ ಬಲಗೊಂಡನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದು ಅವನನ್ನು ಅಧಿಕವಾಗಿ ಹೆಚ್ಚಿಸಿದನು.
- 1 Chronicles 29:23–25 1 ಪೂರ್ವಕಾಲವೃತ್ತಾಂತ 29:23–25ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲಾಗಿ ಅರಸನಾಗಿ, ಕರ್ತನ ಸಿಂಹಾಸನದ ಮೇಲೆ ಕುಳಿತುಕೊಂಡು ಸಫಲ ಹೊಂದಿದನು. ಸಮಸ್ತ ಇಸ್ರಾಯೇಲ್ಯರು ಅವನಿಗೆ ವಿಧೇಯರಾದರು. ಎಲ್ಲಾ ಪ್ರಧಾನರೂ ಪರಾಕ್ರಮಶಾಲಿಗಳೂ ಅರಸನಾದ ದಾವೀದನ ಸಮಸ್ತ ಕುಮಾರರೂ ಅರಸನಾದ ಸೊಲೊ ಮೋನನ ಕೆಳಗೆ ಒಪ್ಪಿಸಿಕೊಟ್ಟರು. ಇದಲ್ಲದೆ ಕರ್ತನು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ ಇಸ್ರಾಯೇ ಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸ ನಿಗಾದರೂ ಇಲ್ಲದಂಥ ರಾಜ್ಯದ ಮಹಿಮೆಯನ್ನು ಅವನಿಗೆ ಕೊಟ್ಟನು.
- 2 Samuel 7:29 2 ಸಮುವೇಲನು 7:29ಆದಕಾರಣ ಈಗ ನಿನ್ನ ದಾಸನ ಮನೆಯು ನಿನ್ನ ಮುಂದೆ ಸದಾಕಾಲಕ್ಕೂ ಇರುವ ಹಾಗೆ ಅದನ್ನು ಆಶೀರ್ವದಿಸಲು ನಿನ್ನ ಚಿತ್ತವಾಗಿರಲಿ, ಯಾಕಂದರೆ ಓ ಕರ್ತನಾದ ದೇವರೇ, ನೀನು ಅದನ್ನು ಹೇಳಿದಿ; ನಿನ್ನ ದಾಸನ ಮನೆಯು ಸದಾಕಾಲವೂ ನಿನ್ನ ಆಶೀರ್ವಾದದಿಂದ ಆಶೀರ್ವದಿಸಲ್ಪಟ್ಟಿರಲಿ ಎಂದು ಹೇಳಿದನು.
- Psalm 89:36–37 ಕೀರ್ತನೆಗಳು 89:36–37ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು. ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.
- Psalm 72:8–20 ಕೀರ್ತನೆಗಳು 72:8–20ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಆತನು ಆಳುವನು. ಆತನ ಮುಂದೆ ಅರಣ್ಯ ನಿವಾಸಿಗಳು ಎರಗುವರು; ಆತನ ಶತ್ರುಗಳು ಧೂಳನ್ನು ನೆಕ್ಕುವರು. ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು. ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು. ಆತನಿಗೆ ಮೊರೆ ಇಡುವ ಬಡವರನ್ನೂ ಸಹಾಯ ಕನಿಲ್ಲದ ದೀನನನ್ನೂ ಬಿಡಿಸುವನು. ದರಿದ್ರನನ್ನೂ ಬಡವನನ್ನೂ ಕರುಣಿಸುವನು; ಬಡವರ ಪ್ರಾಣಗ ಳನ್ನು ರಕ್ಷಿಸುವನು. ಮೋಸದಿಂದಲೂ ಬಲಾತ್ಕಾರ ದಿಂದಲೂ ಅವರ ಪ್ರಾಣವನ್ನು ಬಿಡುಗಡೆ ಮಾಡು ವನು; ಅವರ ರಕ್ತವು ಆತನ ದೃಷ್ಟಿಯಲ್ಲಿ ಅಮೂಲ್ಯ ವಾಗಿರುವದು. ಅವನು ಬಾಳುವನು; ಅವನಿಗೆ ಶೆಬಾದ ಚಿನ್ನ ವನ್ನು ಕೊಡುವರು; ಅವನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡುವರು; ಪ್ರತಿದಿನ ಅವನನ್ನು ಕೊಂಡಾಡುವರು. ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯ ಮೇಲೆ ಇರುವದು; ಅದರ ಫಲವು ಲೆಬನೋನಿನ ಹಾಗೆ ಕದಲುವದು. ಪಟ್ಟಣದ ವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿಯಾಗುವರು. ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು. ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ. ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್. ಆಮೆನ್.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ. ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.
- Psalm 132:12 ಕೀರ್ತನೆಗಳು 132:12ನಿನ್ನ ಮಕ್ಕಳಿಗೆ ನಾನು ಕಲಿಸುವ ನನ್ನ ಒಡಂಬಡಿಕೆಯನ್ನೂ ನನ್ನ ಸಾಕ್ಷಿಯನ್ನೂ ಕೈಕೊಂಡರೆ ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನ ದಲ್ಲಿ ಕೂಡ್ರುವರು.
- 1 Kings 1:46 1 ಅರಸುಗಳು 1:46ನೀವು ಕೇಳುವ ಶಬ್ದವು ಇದೇ. ಇದಲ್ಲದೆ ಸೊಲೊಮೋನನು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
- 2 Samuel 7:12–13 2 ಸಮುವೇಲನು 7:12–13ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು. ಅವನು ನನ್ನ ಹೆಸ ರಿಗೆ ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯದ ಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರುವೆನು; ಅವನು ನನ್ನ ಮಗನಾಗಿರುವನು.