1 Kings · chapter 8 · verse 31
1 Kings 8:31 in Kannada
ಯಾವನಾದರೂ ತನ್ನ ನೆರೆಯವನಿಗೆ ವಿರೋಧ ವಾಗಿ ಪಾಪಮಾಡಲು ಅವನು ಆಣೆ ಇಡಬೇಕೆಂದು ಅವನಿಗೆ ಆಣೆ ನೇಮಿಸಲು ಈ ಮಂದಿರದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆಮಾಡಿದರೆ
Yaavanaadaroo tanna nereyavanige virodha vaagi paapamaadalu avanu aane idabekendu avanige aane nemisalu ee mandiradalli ninna balipeethada munde ee aanemaadidare
1 Kings 8:31 in English
- King James Version (KJV)
- If any man trespass against his neighbour, and an oath be laid upon him to cause him to swear, and the oath come before thine altar in this house:
- World English Bible (WEB)
- “If a man sins against his neighbor, and an oath is laid on him to cause him to swear, and he comes and swears before your altar in this house,
- American Standard Version (ASV)
- If a man sin against his neighbor, and an oath be laid upon him to cause him to swear, and he come [and] swear before thine altar in this house;
- Bible in Basic English (BBE)
- If a man does wrong to his neighbour, and has to take an oath, and comes before your altar to take his oath in this house:
- Darby Translation (DBY)
- If a man have sinned against his neighbour, and an oath be laid upon him to adjure him, and the oath come before thine altar in this house;
- Webster's Bible (WBS)
- If any man shall trespass against his neighbor, and an oath be laid upon him to cause him to swear, and the oath come before thy altar in this house:
- Young's Literal Translation (YLT)
- that which a man sinneth against his neighbour, and he hath lifted up upon him an oath to cause him to swear, and the oath hath come in before Thine altar in this house,
Read in context
- 29ನಿನ್ನ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀನು ಕೇಳುವ ಹಾಗೆ ಅಲ್ಲಿ ನನ್ನ ಹೆಸರಿರುವದೆಂದು ನೀನು ಹೇಳಿದ ಸ್ಥಳವಾದ ಈ ಮಂದಿರದ ಮೇಲೆ ರಾತ್ರಿ ಹಗಲು ನಿನ್ನ ಕಟಾಕ್ಷವಿರಲಿ.
- 30ನಿನ್ನ ಸೇವಕನ ವಿಜ್ಞಾಪನೆಯನ್ನೂ ನಿನ್ನ ಜನರಾದ ಇಸ್ರಾಯೇಲ್ಯರ ವಿಜ್ಞಾಪನೆಯನ್ನೂ ಕೇಳು. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಲ್ಲಿ ಕೇಳಿ ಮನ್ನಿಸು.
- 31ಯಾವನಾದರೂ ತನ್ನ ನೆರೆಯವನಿಗೆ ವಿರೋಧ ವಾಗಿ ಪಾಪಮಾಡಲು ಅವನು ಆಣೆ ಇಡಬೇಕೆಂದು ಅವನಿಗೆ ಆಣೆ ನೇಮಿಸಲು ಈ ಮಂದಿರದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆಮಾಡಿದರೆ
- 32ಆಗ ನೀನು ದುಷ್ಟನನ್ನು ದುಷ್ಟನಾಗಮಾಡಿ ಅವನ ಮಾರ್ಗದ ಪ್ರಕಾರ ಅವನ ತಲೆಯ ಮೇಲೆ ಬರಮಾಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ಪರಲೋಕದಲ್ಲಿರುವ ನೀನು ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
- 33ನಿನ್ನ ಜನರಾದ ಇಸ್ರಾಯೇಲ್ಯರು ನಿನಗೆ ವಿರೋಧ ವಾಗಿ ಪಾಪಮಾಡಿದ್ದರಿಂದ ಶತ್ರುವಿನ ಮುಂದೆ ಹೊಡೆ ಯಲ್ಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ನಿನ್ನ ಹೆಸರನ್ನು ಅರಿಕೆಮಾಡಿ ಪ್ರಾರ್ಥಿಸಿ
Cross references
- Exodus 22:8–11 ವಿಮೋಚನಕಾಂಡ 22:8–11ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ಸಾಮಾನುಗಳನ್ನು ಅವನು ಮುಟ್ಟಲಿಲ್ಲ ವೆಂದು ವಿಚಾರಿಸುವದಕ್ಕೆ ನ್ಯಾಯಾಧಿಪತಿಗಳ ಬಳಿಗೆ ಅವನನ್ನು ಬರಮಾಡಬೇಕು. ಎತ್ತು ಕತ್ತೆ ಕುರೀ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದು ಹೋದ ಯಾವದೇ ತರದ ವಸ್ತುಗಳ ವಿಷಯ ದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು ಇದು ತನ್ನದೆಂದು ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ನ್ಯಾಯಾಧಿಪತಿಗಳ ಮುಂದೆ ಬರಬೇಕು. ನ್ಯಾಯಾಧಿ ಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸು ವರೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು. ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶು ವನ್ನಾದರೂ ಕಾಯುವದಕ್ಕೆ ಕೊಟ್ಟಾಗ ಅದು ಸತ್ತರೆ ಇಲ್ಲವೆ ಊನವಾದರೆ ಇಲ್ಲವೆ ಯಾರೂ ನೋಡದೆ ಇದ್ದಾಗ ಓಡಿಸಿಕೊಂಡು ಹೋದರೆ ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಕರ್ತನ ಮೇಲೆ ಪ್ರಮಾಣ ಮಾಡಬೇಕು. ಅದನ್ನು (ಪಶುವಿನ) ಯಜಮಾನನು ಒಪ್ಪಿದರೆ ಅವನು ಬದಲುಕೊಡಬಾರದು.
- Numbers 5:16–22 ಅರಣ್ಯಕಾಂಡ 5:16–22ಯಾಜಕನು ಅವಳನ್ನು ಸವಿಾಪಕ್ಕೆ ಕರೆದು ಕರ್ತನ ಸಮ್ಮುಖದಲ್ಲಿ ನಿಲ್ಲಿಸಬೇಕು. ಆಗ ಯಾಜಕನು ಪವಿತ್ರ ವಾದ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದು ಕೊಳ್ಳಬೇಕು; ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತಕ್ಕೊಂಡು ಆ ನೀರಿನೊಳಗೆ ಹಾಕಬೇಕು. ಯಾಜಕನು ಆ ಸ್ತ್ರೀಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಿ ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು ಅವಳ ಕೈಗಳಲ್ಲಿ ರೋಷದ ಕಾಣಿಕೆಯಾಗಿರುವ ಜ್ಞಾಪಕದ ಕಾಣಿಕೆಯನ್ನು ಇಡಬೇಕು. ಆದರೆ ಯಾಜಕನ ಕೈಯಲ್ಲಿ ಶಪಿಸುವಂತ ಕಹಿಯಾದ ನೀರು ಇರಬೇಕು. ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು. ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ ಯಾಜಕನು ಶಾಪದ ಪ್ರಮಾಣ ದಿಂದ ಆ ಸ್ತ್ರೀಗೆ ಹೇಳಬೇಕಾದದ್ದೇನಂದರೆ--ಕರ್ತನು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವದರಿಂದ ಕರ್ತನು ನಿನ್ನನ್ನು ನಿನ್ನ ಜನರೊಳಗೆ ಶಾಪವನ್ನಾಗಿಯೂ ದೂಷಣೆಯನ್ನಾಗಿಯೂ ಇಡಲಿ. ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು.
- Proverbs 30:9 ಜ್ಞಾನೋಕ್ತಿಗಳು 30:9ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.
- 2 Chronicles 6:22–23 2 ಪೂರ್ವಕಾಲವೃತ್ತಾಂತ 6:22–23ಯಾವನಾದರೂ ತನ್ನ ನೆರೆಯವ ನಿಗೆ ವಿರೋಧವಾಗಿ ಪಾಪಮಾಡಿ ಅವನು ಆಣೆಇಡಬೇಕೆಂದು ನೇಮಿಸಲು ಈ ಆಲಯದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆ ಬಂದರೆ ನೀನೇ ದುಷ್ಟನ ಮಾರ್ಗವನ್ನು ಅವನ ತಲೆಯ ಮೇಲೆ ಬರ ಮಾಡಿ ಅವನಿಗೆ ಬದಲು ಕೊಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗಿ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ನೀನು ಆಕಾಶದಿಂದ ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
- Leviticus 5:1 ಯಾಜಕಕಾಂಡ 5:1ಯಾವನಾದರೂ ಆಣೆಯಿಡುವದನ್ನು ಕೇಳಿ ಸಾಕ್ಷಿಯಾಗಿದ್ದು ಪಾಪಮಾಡಿದರೆ ಅವನು ಅದನ್ನು ನೋಡಿಯೂ ಇಲ್ಲವೆ ತಿಳಿದೂ ಹೇಳದಿದ್ದರೆ ಅವನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು.