1 Kings · chapter 8 · verse 51
1 Kings 8:51 in Kannada
ಅವರು ಐಗುಪ್ತದಿಂದಲೂ ಕಬ್ಬಿಣ ಕರಗಿಸುವ ಕುಲಿಮೆಯ ಮಧ್ಯದಿಂದಲೂ ನೀನು ಬರಮಾಡಿದ ನಿನ್ನ ಜನವಾ ಗಿಯೂ ನಿನ್ನ ಬಾಧ್ಯತೆಯಾಗಿಯೂ ಆಗಿದ್ದಾರೆ.
Avaru aiguptadindaloo kabbina karagisuva kulimeya madhyadindaloo neenu baramaadida ninna janavaa giyoo ninna baadhyateyaagiyoo aagiddaare.
1 Kings 8:51 in English
- King James Version (KJV)
- For they [be] thy people, and thine inheritance, which thou broughtest forth out of Egypt, from the midst of the furnace of iron:
- World English Bible (WEB)
- (for they are your people and your inheritance, which you brought out of Egypt, from the middle of the iron furnace);
- American Standard Version (ASV)
- (for they are thy people, and thine inheritance, which thou broughtest forth out of Egypt, from the midst of the furnace of iron);
- Bible in Basic English (BBE)
- For they are your people and your heritage, which you took out of Egypt, out of the iron fireplace;
- Darby Translation (DBY)
- (for they are thy people, and thine inheritance, which thou broughtest forth out of Egypt, from the midst of the furnace of iron) —
- Webster's Bible (WBS)
- For they [are] thy people, and thy inheritance, which thou broughtest out of Egypt, from the midst of the furnace of iron:
- Young's Literal Translation (YLT)
- (for Thy people and Thy inheritance [are] they, whom Thou didst bring out of Egypt, out of the midst of the furnace of iron) —
Read in context
- 49ಆಗ ನೀನು ಪರಲೋಕ ದಲ್ಲಿ, ನೀನು ವಾಸಮಾಡುವ ಸ್ಥಳದಲ್ಲಿ ಕೇಳಿ ಅವರ ನ್ಯಾಯವನ್ನು ತೀರಿಸಿ
- 50ನಿನಗೆ ವಿರೋಧವಾಗಿ ಮಾಡಿದ ನಿನ್ನ ಜನರ ಪಾಪಗಳನ್ನೂ ಅವರು ನಿನಗೆ ವಿರೋಧವಾಗಿ ಮಾಡಿದ ಅವರ ಸಮಸ್ತ ದ್ರೋಹ ಗಳನ್ನೂ ಮನ್ನಿಸಿ ಅವರನ್ನು ಕರುಣಿಸುವ ಹಾಗೆ ಅವರ ಮುಂದೆ ನೀನು ಅವರನ್ನು ಕರುಣಿಸು.
- 51ಅವರು ಐಗುಪ್ತದಿಂದಲೂ ಕಬ್ಬಿಣ ಕರಗಿಸುವ ಕುಲಿಮೆಯ ಮಧ್ಯದಿಂದಲೂ ನೀನು ಬರಮಾಡಿದ ನಿನ್ನ ಜನವಾ ಗಿಯೂ ನಿನ್ನ ಬಾಧ್ಯತೆಯಾಗಿಯೂ ಆಗಿದ್ದಾರೆ.
- 52ಓ ಕರ್ತನಾದ ದೇವರೇ--ಅವರು ನಿನಗೆ ಕೂಗುವ ಎಲ್ಲಾದರಲ್ಲಿ ನೀನು ಅವರನ್ನು ಕೇಳುವ ಹಾಗೆ ನಿನ್ನ ಸೇವಕನ ವಿಜ್ಞಾಪನೆಗೂ ನಿನ್ನ ಜನವಾದ ಇಸ್ರಾಯೇಲಿನ ವಿಜ್ಞಾಪನೆಗೂ ನಿನ್ನ ಕಣ್ಣುಗಳು ತೆರೆ ದಿರಲಿ,
- 53ನೀನು ಐಗುಪ್ತದಿಂದ ನಮ್ಮ ಪಿತೃಗಳನ್ನು ಹೊರಡ ಮಾಡುವಾಗ ನಿನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಹೇಳಿದ ಹಾಗೆ ಅವರನ್ನು ನಿನ್ನ ಬಾಧ್ಯತೆಯಾಗಿ ಭೂಮಿಯ ಸಮಸ್ತ ಜನರೊಳಗಿಂದ ಪ್ರತ್ಯೇಕಿಸಿದಿ ಅಂದನು.
Cross references
- Nehemiah 1:10 ನೆಹೆಮೀಯ 1:10ನಿನ್ನ ಮಹಾ ಶಕ್ತಿಯಿಂದಲೂ ಬಲವಾದ ಕೈಯಿಂದಲೂ ನೀನು ವಿಮೋಚಿಸಿದ ನಿನ್ನ ಸೇವಕರೂ ಜನರೂ ಇವರೇ.ಓ ಕರ್ತನೇ, ನಿನ್ನ ನಾಮಕ್ಕೆ ಭಯಪಡಲು ಇಚ್ಛಿಸುವ ನಿನ್ನ ಸೇವಕನ ಪ್ರಾರ್ಥನೆಯನ್ನೂ ಸೇವಕರ ಪ್ರಾರ್ಥನೆಯನ್ನೂ ನಿನ್ನ ಕಿವಿ ಆಲೈಸುತ್ತಾ ಇರಲಿ; ಇಂದು ನಿನ್ನ ಸೇವಕನಿಗೆ ವೃದ್ಧಿಯನ್ನು ಕೊಟ್ಟು ಈ ಮನುಷ್ಯನ ದೃಷ್ಟಿಯಲ್ಲಿ ಅವನಿಗೆ ಕರುಣೆ ದೊರಕುವ ಹಾಗೆ ಮಾಡು. ಯಾಕಂದರೆ ನಾನು ಅರಸನಿಗೆ ಪಾನ ಕೊಡುವವನಾಗಿದ್ದೆನು.
- Jeremiah 11:4 ಯೆರೆಮೀಯ 11:4ಅವು ಗಳನ್ನು ನಿಮ್ಮ ತಂದೆಗಳಿಗೆ ಅಂದರೆ ಅವರನ್ನು ಐಗುಪ್ತ ದೇಶದೊಳಗಿಂದಲೂ ಕಬ್ಬಿಣದ ಕುಲುಮೆಯೊಳ ಗಿಂದಲೂ ಹೊರಗೆ ಬರಮಾಡಿದ ದಿವಸದಲ್ಲಿ ನಾನು ಆಜ್ಞಾಪಿಸಿದ್ದೇನಂದರೆ--ನಾನು ನಿಮಗೆ ಆಜ್ಞಾಪಿಸುವದೆ ಲ್ಲಾದರ ಪ್ರಕಾರ ನನ್ನ ಸ್ವರಕ್ಕೆ ವಿಧೇಯರಾಗಿ ಅವುಗಳಂತೆ ಮಾಡಿದರೆ ನೀವು ನನಗೆ ಜನಾಂಗವಾಗುವಿರಿ; ನಾನು ನಿಮ್ಮ ದೇವರಾಗಿರುವೆನು ಅಂದೆನು.
- Deuteronomy 4:20 ಧರ್ಮೋಪದೇಶಕಾಂಡ 4:20ನಿಮ್ಮನ್ನೇ ಕರ್ತನು ತಕ್ಕೊಂಡು ನೀವು ಈ ದಿನ ಇರುವ ಪ್ರಕಾರ ತನಗೆ ಸ್ವಾಸ್ತ್ಯವಾದ ಜನವಾಗುವ ಹಾಗೆ ಕಬ್ಬಿಣದ ಕುಲುಮೆಯೊಳಗಿಂದ ಅಂದರೆ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
- Jeremiah 51:19 ಯೆರೆಮೀಯ 51:19ಯಾಕೋಬನ ಭಾಗವು ಇವುಗಳ ಹಾಗಲ್ಲ; ಆತನು ಎಲ್ಲವನ್ನು ರೂಪಿಸಿದವನೇ, ಆತನ ಸ್ವಾಸ್ತ್ಯದ ಕೋಲು ಇಸ್ರಾಯೇಲೇ; ಆತನ ಹೆಸರು ಸೈನ್ಯಗಳ ಕರ್ತನೇ.
- Exodus 32:11–12 ವಿಮೋಚನಕಾಂಡ 32:11–12ಅದಕ್ಕೆ ಮೋಶೆಯು ತನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನಂದರೆ--ಕರ್ತನೇ, ನೀನು ಮಹಾಶಕ್ತಿಯಿಂದಲೂ ಬಲವುಳ್ಳ ಕೈಯಿಂದಲೂ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನರ ಮೇಲೆ ನಿನ್ನ ಕೋಪವು ಯಾಕೆ ಉರಿಯುವದು? ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಕೊಲ್ಲುವದಕ್ಕೂ ಭೂಮಿಯ ಮೇಲಿನಿಂದ ಅವರನ್ನು ದಹಿಸಿಬಿಡುವದಕ್ಕೂ ಆತನು ಅವರನ್ನು ಹೊರಗೆ ಬರಮಾಡಿದ್ದಾನೆ ಎಂದು ಐಗುಪ್ತ್ಯರು ಯಾಕೆ ಹೇಳಬೇಕು? ನಿನ್ನ ಕೋಪದುರಿ ಯನ್ನು ಬಿಟ್ಟು ತಿರುಗಿಕೋ, ನಿನ್ನ ಜನರಿಗೆ ವಿರೋಧ ವಾದ ಈ ಕೇಡಿನ ವಿಷಯದಲ್ಲಿ ನಿನ್ನ ಮನಸ್ಸನ್ನು ಬದಲಾಯಿಸು.
- Numbers 14:13–19 ಅರಣ್ಯಕಾಂಡ 14:13–19ಆಗ ಮೋಶೆ ಕರ್ತನಿಗೆ--ಹಾಗಾದರೆ ಐಗುಪ್ತ್ಯರು ಅದನ್ನು ಕೇಳುವರು; ನೀನು ಈ ಜನರನ್ನು ನಿನ್ನ ಬಲದೊಂದಿಗೆ ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಿಯಲ್ಲಾ! ಅವರು ಈ ದೇಶದ ನಿವಾಸಿ ಗಳಿಗೆ ಅದನ್ನು ಹೇಳುವರು; ಯಾಕಂದರೆ ಕರ್ತನಾದ ನೀನೇ ಈ ಜನರ ಸಂಗಡ ಇದ್ದೀಯೆಂದೂ ಕರ್ತ ನಾದ ನೀನೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀ ಯೆಂದೂ ನಿನ್ನ ಮೇಘವು ಅವರ ಮೇಲೆ ನಿಂತಿದೆ ಯೆಂದೂ ನೀನು ಹಗಲು ಹೊತ್ತಿನಲ್ಲಿ ಮೇಘ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀಯೆಂದೂ ಅವರು ಕೇಳಿದ್ದಾರೆ. ಈಗ ನೀನು ಈ ಜನರನ್ನು ಒಬ್ಬ ಮನುಷ್ಯನೋ ಎಂಬಂತೆ ಕೊಂದುಹಾಕಿದರೆ ನಿನ್ನ ಸುದ್ದಿಯನ್ನು ಕೇಳಿದ ಜನಾಂಗಗಳು-- ಕರ್ತನು ಈ ಜನರನ್ನು ಅವರಿಗೆ ಪ್ರಮಾಣಮಾಡಿದ ದೇಶಕ್ಕೆ ತರಲು ಶಕ್ತಿಸಾಲದ ಕಾರಣ ಅವರನ್ನು ಅರಣ್ಯದಲ್ಲಿ ಕೊಂದು ಹಾಕಿದನು ಎಂದು ಹೇಳುವರು. ಈಗ ನೀನು ಹೇಳಿದ ಪ್ರಕಾರ ನನ್ನ ಕರ್ತನ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ. ಕರ್ತನು ದೀರ್ಘಶಾಂತನೂ ಮಹಾಕೃಪೆಯುಳ್ಳವನೂ ಅಕ್ರಮವನ್ನೂ ದ್ರೋಹವನ್ನೂ ಮನ್ನಿಸುವಾತನೂ ಅಪರಾಧಿಯನ್ನು ನಿರಪರಾಧಿಯೆಂದು ಎಣಿಸದವನೂ ಮೂರನೇ ನಾಲ್ಕನೇ ತಲೆಗಳ ವರೆಗೂ ಪಿತೃಗಳ ಅಕ್ರಮವನ್ನು ಮಕ್ಕಳಲ್ಲಿ ವಿಚಾರಿಸುವಾತನೂ ಎಂದು ನೀನು ಹೇಳಿದ್ದೀಯಲ್ಲಾ? ನಿನ್ನ ಕೃಪೆಯು ದೊಡ್ಡದಾಗಿರುವ ಪ್ರಕಾರವೂ ನೀನು ಐಗುಪ್ತದಿಂದ ಇಲ್ಲಿಯ ವರೆಗೆ ಮನ್ನಿಸಿದ ಪ್ರಕಾರವೂ ಈ ಜನರ ಅಕ್ರಮವನ್ನು ದಯ ದಿಂದ ಮನ್ನಿಸು ಎಂದು ಬೇಡಿಕೊಂಡನು.
- Deuteronomy 9:26–29 ಧರ್ಮೋಪದೇಶಕಾಂಡ 9:26–29ನಾನು ಕರ್ತನಿಗೆ ಪ್ರಾರ್ಥನೆ ಮಾಡಿ--ಓ ಕರ್ತನಾದ ದೇವರೇ, ನೀನು ನಿನ್ನ ಮಹತ್ವದಿಂದ ವಿಮೋಚಿಸಿ, ಬಲವಾದ ಕೈಯಿಂದ ಐಗುಪ್ತದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನ ವನ್ನೂ ನಿನ್ನ ಸ್ವಾಸ್ತ್ಯವನ್ನೂ ನಾಶಮಾಡಬೇಡ. ನಿನ್ನ ದಾಸರಾದ ಅಬ್ರಹಾಮ್ ಇಸಾಕ್ ಯಾಕೋಬರನ್ನು ಜ್ಞಾಪಕಮಾಡಿಕೋ; ಈ ಜನರ ಕಾಠಿಣ್ಯದ ಮೇಲೆಯೂ ಇಲ್ಲವೆ ಅವರ ದುಷ್ಟತ್ವದ ಮೇಲೆಯೂ ಅವರ ಪಾಪದ ಮೇಲೆಯೂ ದೃಷ್ಟಿ ಇಡಬೇಡ. ನಮ್ಮನ್ನು ಎಲ್ಲಿಂದ ಹೊರಗೆ ಬರಮಾಡಿದಿಯೋ ಆ ದೇಶವು--ಕರ್ತನು ಅವರಿಗೆ ಹೇಳಿದ ದೇಶದಲ್ಲಿ ಅವರನ್ನು ಬರಮಾಡ ಲಾರದೆ ಇದ್ದದ್ದರಿಂದಲೂ ಅವರನ್ನು ಹಗೆಮಾಡಿದ್ದ ರಿಂದಲೂ ಅರಣ್ಯದಲ್ಲಿ ಅವರನ್ನು ಕೊಂದುಹಾಕುವ ಹಾಗೆ ಅವರನ್ನು ಹೊರಗೆ ಬರಮಾಡಿದನೆಂದು ಹೇಳಬಾರದು.ಆದಾಗ್ಯೂ ನೀನು ನಿನ್ನ ದೊಡ್ಡ ಶಕ್ತಿಯಿಂದಲೂ ಚಾಚಿದ ನಿನ್ನ ಕೈಯಿಂದಲೂ ಹೊರಗೆ ಬರಮಾಡಿದ ನಿನ್ನ ಜನವೂ ಸ್ವಾಸ್ತ್ಯವೂ ಇವರೇ ಎಂದು ಹೇಳಿದೆನು. ಆದಾಗ್ಯೂ ನೀನು ನಿನ್ನ ದೊಡ್ಡ ಶಕ್ತಿಯಿಂದಲೂ ಚಾಚಿದ ನಿನ್ನ ಕೈಯಿಂದಲೂ ಹೊರಗೆ ಬರಮಾಡಿದ ನಿನ್ನ ಜನವೂ ಸ್ವಾಸ್ತ್ಯವೂ ಇವರೇ ಎಂದು ಹೇಳಿದೆನು.
- 1 Kings 8:53 1 ಅರಸುಗಳು 8:53ನೀನು ಐಗುಪ್ತದಿಂದ ನಮ್ಮ ಪಿತೃಗಳನ್ನು ಹೊರಡ ಮಾಡುವಾಗ ನಿನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಹೇಳಿದ ಹಾಗೆ ಅವರನ್ನು ನಿನ್ನ ಬಾಧ್ಯತೆಯಾಗಿ ಭೂಮಿಯ ಸಮಸ್ತ ಜನರೊಳಗಿಂದ ಪ್ರತ್ಯೇಕಿಸಿದಿ ಅಂದನು.
- Isaiah 64:9 ಯೆಶಾಯ 64:9ಓ ಕರ್ತನೇ, ಅತ್ಯಧಿಕ ವಾಗಿ ರೌದ್ರನಾಗಬೇಡ; ಎಂದೆಂದಿಗೂ ಅಕ್ರಮ ವನ್ನು ಜ್ಞಾಪಕಮಾಡಬೇಡ; ಇಗೋ, ನೋಡು, ನಾವು ಬೇಡುತ್ತೇವೆ ದೃಷ್ಟಿಯಿಡು; ನಾವೆಲ್ಲರೂ ನಿನ್ನ ಜನರೇ.
- Isaiah 63:16–18 ಯೆಶಾಯ 63:16–18ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ನಿಸ್ಸಂದೇಹವಾಗಿ ನೀನೇ ನಮ್ಮ ತಂದೆಯಾಗಿದ್ದೀ; ಕರ್ತನಾದ ನೀನೇ ನಮ್ಮ ತಂದೆಯು, ನಮ್ಮ ವಿಮೋಚಕನು; ನಿನ್ನ ಹೆಸರು ಸದಾಕಾಲವೂ ಇದೆ. ಓ ಕರ್ತನೇ, ಏಕೆ ನಮ್ಮನ್ನು ನಿನ್ನ ಮಾರ್ಗಗ ಳಿಂದ ತಪ್ಪಿಹೋಗುವಂತೆ ಮಾಡಿದ್ದೀ. ಏಕೆ ನಮ್ಮ ಹೃದಯವನ್ನು ನಿನಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀ. ನಿನ್ನ ಸೇವಕರಿಗೋಸ್ಕರವೂ ನಿನ್ನ ಬಾಧ್ಯತೆಯ ಗೋತ್ರಗಳಿಗೋಸ್ಕರವೂ ಹಿಂತಿರುಗು. ಸ್ವಲ್ಪ ಕಾಲ ಮಾತ್ರ ನಿನ್ನ ಪರಿಶುದ್ಧ ಜನರು ಅದನ್ನು ಸ್ವಾಧೀನ ಮಾಡಿಕೊಂಡರು; ನಮ್ಮ ಶತ್ರು ಗಳು ನಿನ್ನ ಪರಿಶುದ್ಧ ಸ್ಥಳವನ್ನು ತುಳಿದುಬಿಟ್ಟಿದ್ದಾರೆ.ನಾವು ನಿನ್ನವರಾಗಿದ್ದೇವೆ; ಅವರ ಮೇಲೆ ನೀನು ದೊರೆತನ ಮಾಡಲಿಲ್ಲ; ಅವರು ನಿನ್ನ ಹೆಸರಿನಿಂದ ಕರೆಯಲ್ಪಡಲಿಲ್ಲ.
- 2 Chronicles 6:39 2 ಪೂರ್ವಕಾಲವೃತ್ತಾಂತ 6:39ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿ ನಿನ್ನ ಜನರು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಮನ್ನಿಸು.