1 Samuel · chapter 15 · verse 24
1 Samuel 15:24 in Kannada
ಆಗ ಸೌಲನು ಸಮುವೇಲನಿಗೆ--ನಾನು ಕರ್ತನ ವಾಕ್ಯವನ್ನೂ ನಿನ್ನ ಮಾತುಗಳನ್ನೂ ವಿಾರಿ ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
Aaga saulanu samuvelanige--naanu kartana vaakyavannoo ninna maatugalannoo viాri paapamaadidenu. Naanu janarige bhayapattu avara maatannu kelidenu.
1 Samuel 15:24 in English
- King James Version (KJV)
- And Saul said unto Samuel, I have sinned: for I have transgressed the commandment of the LORD, and thy words: because I feared the people, and obeyed their voice.
- World English Bible (WEB)
- Saul said to Samuel, “I have sinned; for I have transgressed the commandment of the LORD and your words, because I feared the people and obeyed their voice.
- American Standard Version (ASV)
- And Saul said unto Samuel, I have sinned; for I have transgressed the commandment of Jehovah, and thy words, because I feared the people, and obeyed their voice.
- Bible in Basic English (BBE)
- And Saul said to Samuel, Great is my sin: for I have gone against the orders of the Lord and against your words: because, fearing the people, I did what they said.
- Darby Translation (DBY)
- And Saul said to Samuel, I have sinned, for I have transgressed the commandment of Jehovah, and thy words; for I feared the people, and hearkened to their voice.
- Webster's Bible (WBS)
- And Saul said to Samuel, I have sinned: for I have transgressed the commandment of the LORD, and thy words; because I feared the people, and obeyed their voice.
- Young's Literal Translation (YLT)
- And Saul saith unto Samuel, 'I have sinned, for I passed over the command of Jehovah, and thy words; because I have feared the people, I also hearken to their voice;
Read in context
- 22ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು.
- 23ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.
- 24ಆಗ ಸೌಲನು ಸಮುವೇಲನಿಗೆ--ನಾನು ಕರ್ತನ ವಾಕ್ಯವನ್ನೂ ನಿನ್ನ ಮಾತುಗಳನ್ನೂ ವಿಾರಿ ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
- 25ಆದದರಿಂದ ಈಗ ದಯಮಾಡಿ ನನ್ನ ಪಾಪವನ್ನು ಕ್ಷಮಿಸಿ ನಾನು ಕರ್ತನನ್ನು ಆರಾಧಿಸುವ ಹಾಗೆ ನನ್ನ ಸಂಗಡ ತಿರಿಗಿ ಬಾ ಎಂದು ಬೇಡಿಕೊಂಡನು.
- 26ಆದಕ್ಕೆ ಸಮುವೇಲನು ಸೌಲನಿಗೆ--ನಾನು ನಿನ್ನ ಸಂಗಡ ಹಿಂತಿರುಗಿ ಬರುವದಿಲ್ಲ; ಯಾಕಂದರೆ ನೀನು ಕರ್ತನ ವಾಕ್ಯವನ್ನು ತಿರಸ್ಕಾರಮಾಡಿದಿ; ಕರ್ತನು ನಿನ್ನನ್ನು ಇಸ್ರಾಯೇಲ್ಯರ ಮೇಲೆ ಅರಸನಾಗಿರದ ಹಾಗೆ ತಿರ ಸ್ಕಾರ ಮಾಡಿಬಿಟ್ಟನು.
Cross references
- 2 Samuel 12:13 2 ಸಮುವೇಲನು 12:13ಆಗ ದಾವೀದನು ನಾತಾನನಿಗೆ--ನಾನು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆನು ಅಂದನು. ನಾತಾನನು ದಾವೀದನಿಗೆ--ನೀನು ಸಾಯದಹಾಗೆ ಕರ್ತನು ನಿನ್ನ ಪಾಪವನ್ನು ಪರಿಹರಿಸಿದನು.
- Isaiah 51:12–13 ಯೆಶಾಯ 51:12–13ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು? ಆಕಾಶವನ್ನು ಹಾಸಿ, ಭೂಮಿಗೆ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟು ಮಾಡಿದ ಕರ್ತನನ್ನು ನೀನು ಮರೆತುಬಿಟ್ಟು ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶ ಪಡಿಸುವನೋ ಎಂಬಂತೆ ಅಂಜಿಕೊಂಡಿದ್ದಿಯಲ್ಲಾ? ಮತ್ತು ಆ ಹಿಂಸಕನ ಉಗ್ರವು ಎಲ್ಲಿ?
- Proverbs 29:25 ಜ್ಞಾನೋಕ್ತಿಗಳು 29:25ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು.
- Galatians 1:10 ಗಲಾತ್ಯದವರಿಗೆ 1:10ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯ ರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.
- Numbers 22:34 ಅರಣ್ಯಕಾಂಡ 22:34ಆಗ ಬಿಳಾಮನು ಕರ್ತನ ದೂತನಿಗೆ ಹೇಳಿದ್ದುನಾನು ಪಾಪಮಾಡಿದ್ದೇನೆ; ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ; ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ ಅಂದನು.
- Revelation 21:8 ಪ್ರಕಟನೆ 21:8ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- 1 Samuel 15:30 1 ಸಮುವೇಲನು 15:30ಅದಕ್ಕವನು--ನಾನು ಪಾಪವನ್ನು ಮಾಡಿದೆನು; ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನನ್ನು ಗೌರವಿಸು ನಾನು ನಿನ್ನ ದೇವರಾದ ಕರ್ತನನ್ನು ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ ಅಂದನು.
- Exodus 23:2 ವಿಮೋಚನಕಾಂಡ 23:2ಕೆಟ್ಟದ್ದನ್ನು ಮಾಡು ವಂತೆ ಬಹುಮಂದಿಯನ್ನು ಹಿಂಬಾಲಿಸಬೇಡ; ಇಲ್ಲವೆ ಬಹುಮಂದಿಯೊಂದಿಗೆ ನ್ಯಾಯಕ್ಕೆ ಪ್ರತಿಕೂಲವಾಗಿ ವ್ಯಾಜ್ಯದಲ್ಲಿ ಉತ್ತರಕೊಡಬೇಡ.
- Exodus 9:27 ವಿಮೋಚನಕಾಂಡ 9:27ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.
- Matthew 27:4 ಮತ್ತಾಯನು 27:4ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.
- Genesis 3:17 ಆದಿಕಾಂಡ 3:17ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ.
- 1 Samuel 2:29 1 ಸಮುವೇಲನು 2:29ನನ್ನ ಜನರಾದ ಇಸ್ರಾಯೇಲ್ಯರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವದಕ್ಕೆ ನನ್ನ ವಾಸಸ್ಥಳ ದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ ಅರ್ಪಣೆಯನ್ನೂ ನೀವು ಒದ್ದು ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವದೇನು?