1 Samuel · chapter 20 · verse 31
1 Samuel 20:31 in Kannada
ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
Ishayana maganu bhoomiya mele badukuva divasagala varegoo neenaadaroo ninna raajyavaadaroo sthiravaaguvadilla. Aadadarinda eega neenu avanannu kareyakaluhisi nanna balige karakondu baa; avanu nijavaagi saayalebeku andanu.
1 Samuel 20:31 in English
- King James Version (KJV)
- For as long as the son of Jesse liveth upon the ground, thou shalt not be established, nor thy kingdom. Wherefore now send and fetch him unto me, for he shall surely die.
- World English Bible (WEB)
- For as long as the son of Jesse lives on the earth, you will not be established, nor will your kingdom. Therefore now send and bring him to me, for he shall surely die!”
- American Standard Version (ASV)
- For as long as the son of Jesse liveth upon the ground, thou shalt not be established, nor thy kingdom. Wherefore now send and fetch him unto me, for he shall surely die.
- Bible in Basic English (BBE)
- For while the son of Jesse is living on the earth, your position is unsafe and your kingdom is in danger. So make him come here to me, for it is certainly right for him to be put to death.
- Darby Translation (DBY)
- For as long as the son of Jesse lives upon earth, thou shalt not be established, nor thy kingdom. And now send and fetch him to me, for he must die.
- Webster's Bible (WBS)
- For as long as the son of Jesse liveth upon the earth, thou shalt not be established, nor thy kingdom. Wherefore now send and bring him to me, for he shall surely die.
- Young's Literal Translation (YLT)
- for all the days that the son of Jesse liveth on the ground thou art not established, thou and thy kingdom; and now, send and bring him unto me, for he [is] a son of death.'
Read in context
- 29ನನಗೆ ಅವನು--ದಯಮಾಡಿ ನನಗೆ ಅಪ್ಪಣೆಕೊಡು; ಯಾಕಂದರೆ ಊರೊಳಗೆ ನಮ್ಮ ಕುಟುಂಬದವರು ಯಜ್ಞ ಮಾಡುತ್ತಾರೆ; ನನ್ನ ಸಹೋ ದರನು ನನ್ನನ್ನು ಬರಲು ಹೇಳಿ ಕಳುಹಿಸಿದನು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ನನ್ನ ಸಹೋದರರನ್ನು ನೋಡುವದಕ್ಕೆ ಹೋಗುತ್ತೇನೆ ಅಂದನು. ಆದದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ ಅಂದನು.
- 30ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ--ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ ನಿನ್ನ ತಾಯಿಯ ಬೆತ್ತಲೆತನಕ್ಕೆ ನಾಚಿಕೆ ಯಾಗುವ ಹಾಗೆಯೂ ಇಷಯನ ಮಗನನ್ನು ನೀನು ಆದುಕೊಂಡಿದ್ದೀ ಎಂದು ನಾನರಿಯೆನೋ?
- 31ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
- 32ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿ--ಅವನನ್ನು ಯಾಕೆ ಕೊಲೆ ಮಾಡಬೇಕು? ಅವನು ಏನು ಮಾಡಿದನು ಅಂದನು.
- 33ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದದರಿಂದ ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದ್ದಾನೆಂದು ಯೋನಾತಾ ನನು ತಿಳುಕೊಂಡನು.
Cross references
- 1 Samuel 19:6 1 ಸಮುವೇಲನು 19:6ಆಗ ಸೌಲನು ಯೋನಾತಾನನ ಮಾತನ್ನು ಕೇಳಿ--ಕರ್ತನಾಣೆ ಅವನುಕೊಲೆಯಾಗುವದಿಲ್ಲ ಅಂದನು.
- 1 Samuel 20:8 1 ಸಮುವೇಲನು 20:8ಆದದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು; ಯಾಕಂದರೆ ಕರ್ತನ ಒಡಂಬಡಿಕೆ ಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀ ಯಲ್ಲಾ. ಆದಾಗ್ಯೂ ನನ್ನಲ್ಲಿ ಅಕ್ರಮವಿದ್ದರೆ ನೀನೇ ನನ್ನನ್ನು ಕೊಂದುಹಾಕು; ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವದು ಯಾಕೆ ಅಂದನು.
- 1 Samuel 19:11–15 1 ಸಮುವೇಲನು 19:11–15ಆದರೆ ದಾವೀದನಿಗಾಗಿ ಕಾದುಕೊಂಡಿದ್ದು ಉದಯ ದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ವಿಾಕಲಳು ಅವನಿಗೆ--ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ ನಾಳೆ ಕೊಲ್ಲಲ್ಪಡುವಿ ಎಂದು ಹೇಳಿ ವಿಾಕಲಳು ದಾವೀದನನ್ನು ಕಿಟಕಿಯ ಮಾರ್ಗವಾಗಿ ಇಳಿಸಿಬಿಟ್ಟಳು; ಅವನು ತಪ್ಪಿಸಿಕೊಂಡು ಓಡಿಹೋದನು. ತರುವಾಯ ವಿಾಕಲಳು ಒಂದು ಗೊಂಬೆಯನ್ನು ತೆಗೆದುಕೊಂಡು ಮಂಚದ ಮೇಲೆ ಮಲಗಿಸಿ ಅದರ ತಲೇ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ ಅದನ್ನು ವಸ್ತ್ರದಿಂದ ಮುಚ್ಚಿದಳು. ಸೌಲನು ದಾವೀದನನ್ನು ಹಿಡುಕೊಂಡು ಬರಲು ದೂತರನ್ನು ಕಳುಹಿಸಿದಾಗ ಅವನು ಕಾಯಿಲೆಯ ಲ್ಲಿದ್ದಾನೆ ಅಂದಳು. ತಿರಿಗಿ ಸೌಲನು ದಾವೀದನನ್ನು ನೋಡುವದಕ್ಕೋಸ್ಕರ ದೂತರನ್ನು ಕಳುಹಿಸಿ--ಅವ ನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು.
- 1 Samuel 26:16 1 ಸಮುವೇಲನು 26:16ನೀನು ಮಾಡಿದ ಈ ಕಾರ್ಯ ಒಳ್ಳೇದಲ್ಲ. ಕರ್ತನ ಜೀವ ದಾಣೆ--ಕರ್ತನ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದರಿಂದ ಮರಣಕ್ಕೆ ನೀವು ಪಾತ್ರರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು ಅಂದನು.
- 2 Samuel 19:28 2 ಸಮುವೇಲನು 19:28ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಮಾಡು. ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರು ಸತ್ತ ವರ ಹಾಗೆ ಇದ್ದಾಗ್ಯೂ ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವದಕ್ಕೆ ಯೋಗ್ಯನೋ ಅಂದನು. ಆಗ ಅರಸನು ಅವನಿಗೆಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡು ವದೇನು?
- Psalm 79:11 ಕೀರ್ತನೆಗಳು 79:11ಸೆರೆಯವನ ನಿಟ್ಟುಸಿರು ನಿನ್ನ ಮುಂದೆ ಬರಲಿ--ನಿನ್ನ ಮಹಾ ಶಕ್ತಿಯಿಂದ ಸಾಯುವದಕ್ಕಿರುವವರನ್ನು ಕಾಪಾಡು.