1 Samuel · chapter 7 · verse 17
1 Samuel 7:17 in Kannada
ಅವನು ರಾಮಕ್ಕೆ ತಿರಿಗಿ ಬರುತ್ತಿದ್ದನು. ಯಾಕಂದರೆ ಅಲ್ಲಿ ಅವನ ಮನೆ ಇತ್ತು; ಅಲ್ಲಿ ಇಸ್ರಾಯೇಲಿಗೆ ನ್ಯಾಯ ತೀರಿಸಿ ದನು; ಕರ್ತನಿಗೆ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.
Avanu raamakke tirigi baruttiddanu. Yaakandare alli avana mane ittu; alli israayelige nyaaya teerisi danu; kartanige alli ondu yajnyavediyannu kattisidanu.
1 Samuel 7:17 in English
- King James Version (KJV)
- And his return [was] to Ramah; for there [was] his house; and there he judged Israel; and there he built an altar unto the LORD.
- World English Bible (WEB)
- His return was to Ramah, for his house was there, and he judged Israel there; and he built an altar to the LORD there.
- American Standard Version (ASV)
- And his return was to Ramah, for there was his house; and there he judged Israel: and he built there an altar unto Jehovah.
- Bible in Basic English (BBE)
- And his base was at Ramah, where his house was; there he was judge of Israel and there he made an altar to the Lord.
- Darby Translation (DBY)
- And his return was to Ramah; for there was his house, and there he judged Israel; and there he built an altar to Jehovah.
- Webster's Bible (WBS)
- And his return [was] to Ramah; for there [was] his house; and there he judged Israel; and there he built an altar to the LORD.
- Young's Literal Translation (YLT)
- and his returning [is] to Ramath, for there [is] his house, and there he hath judged Israel, and he buildeth there an altar to Jehovah.
Read in context
- 15ಇದಲ್ಲದೆ ಸಮುವೇಲನು ತಾನು ಬದುಕಿದ ಎಲ್ಲಾ ದಿವಸಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.
- 16ಅವನು ಪ್ರತಿವರುಷ ಹೊರಟು ಬೇತೇಲ್ ಗಿಲ್ಗಾಲ್ ಮಿಚ್ಪೆಯನ್ನೂ ಸುತ್ತಿಕೊಂಡುಹೋಗಿ ಆ ಸ್ಥಳಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.ಅವನು ರಾಮಕ್ಕೆ ತಿರಿಗಿ ಬರುತ್ತಿದ್ದನು. ಯಾಕಂದರೆ ಅಲ್ಲಿ ಅವನ ಮನೆ ಇತ್ತು; ಅಲ್ಲಿ ಇಸ್ರಾಯೇಲಿಗೆ ನ್ಯಾಯ ತೀರಿಸಿ ದನು; ಕರ್ತನಿಗೆ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.
- 17ಅವನು ರಾಮಕ್ಕೆ ತಿರಿಗಿ ಬರುತ್ತಿದ್ದನು. ಯಾಕಂದರೆ ಅಲ್ಲಿ ಅವನ ಮನೆ ಇತ್ತು; ಅಲ್ಲಿ ಇಸ್ರಾಯೇಲಿಗೆ ನ್ಯಾಯ ತೀರಿಸಿ ದನು; ಕರ್ತನಿಗೆ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.
Cross references
- 1 Samuel 1:19 1 ಸಮುವೇಲನು 1:19ಅವರು ಉದಯದಲ್ಲಿ ಎದ್ದು ಕರ್ತನ ಮುಂದೆ ಆರಾಧಿಸಿ ಹಿಂತಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಿದನು; ಆಗ ಕರ್ತನು ಅವಳನ್ನು ಜ್ಞಾಪಕಮಾಡಿಕೊಂಡನು.
- 1 Samuel 1:1 1 ಸಮುವೇಲನು 1:1ಎಫ್ರಾಯಾಮ್ ಬೆಟ್ಟದಲ್ಲಿರುವ ರಾಮಾತಯಿಮ್ ಚೊಫೀಮನಲ್ಲಿ ಎಲ್ಕಾನನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾ ಯಾಮ್ಯನಾದ ಚೂಫನ ಮೊಮ್ಮಗನೂ ತೋಹು ವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು. 3
- 1 Samuel 8:4 1 ಸಮುವೇಲನು 8:4ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು ರಾಮದಲ್ಲಿರುವ ಸಮುವೇಲನ ಬಳಿಗೆ ಬಂದು
- Judges 21:4–5 ನ್ಯಾಯಸ್ಥಾಪಕರು 21:4–5ಜನರು ಮಾರನೇ ದಿವಸ ಉದಯ ದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ ದಹನಬಲಿ ಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು. ಆದರೆ ಇಸ್ರಾಯೇಲ್ ಮಕ್ಕಳು--ಕರ್ತನ ಬಳಿಗೆ ಸಭೆಯೊಂದಿಗೆ ಇಸ್ರಾಯೇಲಿನ ಸಮಸ್ತ ಗೋತ್ರದಲ್ಲಿ ಬಾರದವರು ಯಾರು ಅಂದರು. ಯಾಕಂದರೆ ಕರ್ತನ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆಇಟ್ಟುಕೊಂಡಿದ್ದರು.
- 1 Samuel 11:15 1 ಸಮುವೇಲನು 11:15ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.
- 1 Kings 18:30–36 1 ಅರಸುಗಳು 18:30–36ಆಗ ಎಲೀಯನು ಸಮಸ್ತ ಜನರಿಗೆ--ನನ್ನ ಬಳಿಗೆ ಬನ್ನಿರಿ ಅಂದನು; ಜನರೆಲ್ಲರು ಅವನ ಬಳಿಗೆ ಬಂದರು. ಕಿತ್ತುಹಾಕಲ್ಪಟ್ಟ ಕರ್ತನ ಬಲಿಪೀಠವನ್ನು ಅವನು ದುರಸ್ತು ಮಾಡಿದನು. ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವದೆಂದು ಕರ್ತನ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ ಎಲೀಯನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಆ ಕಲ್ಲುಗಳಿಂದ ಕರ್ತನ ಹೆಸರಿಗೆ ಬಲಿಪೀಠವನ್ನು ಕಟ್ಟಿ ಆ ಬಲಿಪೀಠದ ಸುತ್ತಲೂ ಎರಡು ಕೊಳಗ ಬೀಜ ಹಿಡಿಯುವ ಒಂದು ಕಾಲಿವೆಯನ್ನು ಮಾಡಿದನು. ತರುವಾಯ ಅವನು ಕಟ್ಟಿಗೆಗಳನ್ನು ಇಟ್ಟು ಹೋರಿ ಯನ್ನು ತುಂಡುತುಂಡಾಗಿ ಕಡಿದು ಕಟ್ಟಿಗೆಗಳ ಮೇಲೆ ಇಟ್ಟು--ನೀವು ನಾಲ್ಕು ಮಡಕೆ ನೀರನ್ನು ತುಂಬಿಕೊಂಡು ದಹನಬಲಿಯ ಮೇಲೆಯೂ ಕಟ್ಟಿಗೆಗಳ ಮೇಲೆಯೂ ಹೊಯ್ಯಿರಿ ಅಂದನು. ಎರಡನೇ ಸಾರಿ ಹೊಯ್ಯಿರಿ ಅಂದನು. ಮೂರನೇ ಸಾರಿ ಹೊಯ್ಯಿರಿ ಅಂದನು; ಮೂರನೇ ಸಾರಿಯೂ ಹೊಯ್ದರು. ಆದದರಿಂದ ನೀರು ಬಲಿಪೀಠದ ಸುತ್ತಲೂ ಹರಿಯಿತು. ಇದಲ್ಲದೆ ಅವನು ಕಾಲಿವೆಯನ್ನು ನೀರಿನಿಂದ ತುಂಬಿಸಿದನು. ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ.
- Genesis 33:20 ಆದಿಕಾಂಡ 33:20ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
- Genesis 35:7 ಆದಿಕಾಂಡ 35:7ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
- 1 Samuel 19:18–23 1 ಸಮುವೇಲನು 19:18–23ಹೀಗೆಯೇ ದಾವೀದನು ತಪ್ಪಿಸಿಕೊಂಡು ಓಡಿ ಹೋಗಿ ರಾಮದಲ್ಲಿರುವ ಸಮುವೇಲನ ಬಳಿಗೆ ಬಂದು ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುವೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು. ಇಗೋ, ದಾವೀದನು ರಾಮದ ನಯೋತಿನಲ್ಲಿ ಇದ್ದಾನೆಂದು ಸೌಲನಿಗೆ ತಿಳಿಸಲ್ಪಟ್ಟಿತು. ಆದದರಿಂದ ಸೌಲನು ದಾವೀದನನ್ನು ಹಿಡು ಕೊಂಡು ಬರಲು ದೂತರನ್ನು ಕಳುಹಿಸಿದನು. ಅವರು ಪ್ರವಾದಿಗಳ ಗುಂಪು ಪ್ರವಾದಿಸುವದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುವೇಲನು ನಿಂತಿ ರುವದನ್ನೂ ನೋಡಿದಾಗ ದೇವರ ಆತ್ಮನು ಸೌಲನ ದೂತರ ಮೇಲೆ ಬಂದನು; ಅವರು ಸಹ ಪ್ರವಾದಿ ಸಿದರು. ಇದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಬೇರೆ ದೂತರನ್ನು ಕಳುಹಿಸಿದನು; ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತ ರನ್ನು ಕಳುಹಿಸಿದನು; ಅವರೂ ಹಾಗೆಯೇ ಪ್ರವಾದಿ ಸಿದರು. ಆಗ ಸೌಲನು ತಾನೇ ರಾಮಕ್ಕೆ ಹೋದನು; ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದುಸಮುವೇಲನು ದಾವೀದನು ಎಲ್ಲಿದ್ದಾರೆ ಎಂದು ಕೇಳಿ ದನು. ಆಗ ಒಬ್ಬನು--ಇಗೋ, ಅವರು ರಾಮದ ನಯೋತಿನಲ್ಲಿದ್ದಾರೆ ಅಂದನು. ಹಾಗೆಯೇ ಅವನು ರಾಮದ ನಯೋತಿಗೆ ಹೋದನು; ಆಗ ದೇವರ ಆತ್ಮ ಅವನ ಮೇಲೆ ಬಂದನು; ಅವನು ರಾಮದ ನಯೋತಿಗೆ ಸೇರುವ ವರೆಗೂ ಪ್ರವಾದಿಸುತ್ತಾ ಬಂದನು.ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ ತಾನೂ ಹಾಗೆಯೇ ಸಮುವೇಲನ ಮುಂದೆ ಪ್ರವಾದಿಸಿದನು; ಆ ದಿನ ಹಗಲೆಲ್ಲವೂ ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದದರಿಂದ--ಸೌಲನು ಕೂಡಾ ಪ್ರವಾದಿ ಗಳಲ್ಲಿ ಇದ್ದಾನೋ ಅನ್ನುವರು.
- Genesis 12:7–8 ಆದಿಕಾಂಡ 12:7–8ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು. ಅಲ್ಲಿಂದ ಅವನು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ ಪಶ್ಚಿಮದಲ್ಲಿ ಬೇತೇಲು ಪೂರ್ವದಲ್ಲಿ ಆಯಿಯು ಇರುವ ಹಾಗೆ ತನ್ನ ಗುಡಾರವನ್ನು ಹಾಕಿ ಅಲ್ಲಿ ಕರ್ತನಿಗೆ ಬಲಿಪೀಠವನ್ನು ಕಟ್ಟಿ ಕರ್ತನ ಹೆಸರನ್ನು ಹೇಳಿಕೊಂಡನು.