1 Timothy · chapter 4 · verse 10
1 Timothy 4:10 in Kannada
ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
Aadadarinda idakkaagi naavu kashtapaduvavaroo nindeyannanubhavisuvavaroo aagiddeve; yaakandare ellaa manushyarige visheshavaagi nambuvavarige rakshakanaagiruva jeevavulla devarannu naavu nambi ddeve.
1 Timothy 4:10 in English
- King James Version (KJV)
- For therefore we both labour and suffer reproach, because we trust in the living God, who is the Saviour of all men, specially of those that believe.
- World English Bible (WEB)
- For to this end we both labor and suffer reproach, because we have set our trust in the living God, who is the Savior of all men, especially of those who believe.
- American Standard Version (ASV)
- For to this end we labor and strive, because we have our hope set on the living God, who is the Saviour of all men, specially of them that believe.
- Bible in Basic English (BBE)
- And this is the purpose of all our work and our fighting, because our hope is in the living God, who is the Saviour of all men, and specially of those who have faith.
- Darby Translation (DBY)
- for, for this we labour and suffer reproach, because we hope in a living God, who is preserver of all men, specially of those that believe.
- Webster's Bible (WBS)
- For therefore we both labor and suffer reproach, because we trust in the living God who is the Savior of all men, especially of those that believe.
- Young's Literal Translation (YLT)
- for for this we both labour and are reproached, because we hope on the living God, who is Saviour of all men — especially of those believing.
Read in context
- 8ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು.
- 9ಈ ಮಾತು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ.
- 10ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
- 11ಈ ವಿಷಯಗಳನ್ನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.
- 12ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು.
Cross references
- 1 Timothy 2:4 1 ತಿಮೊಥೆಯನಿಗೆ 2:4ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರ ಬೇಕೆಂಬದು ಆತನ ಚಿತ್ತವಾಗಿದೆ.
- 1 John 2:2 1 ಯೋಹಾನನು 2:2ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತವಾಗಿದ್ದಾನೆ; ನಮ್ಮ ಪಾಪಗಳಿಗೆ ಮಾತ್ರ ವಲ್ಲದೆ ಸಮಸ್ತ ಲೋಕದ ಪಾಪಗಳಿಗಾಗಿಯೂ ಪ್ರಾಯಶ್ಚಿತ್ತವಾಗಿದ್ದಾನೆ.
- John 1:29 ಯೋಹಾನನು 1:29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
- 1 Timothy 2:6 1 ತಿಮೊಥೆಯನಿಗೆ 2:6ಆತನು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು; ಇದೇ ತಕ್ಕಕಾಲದಲ್ಲಿ ಹೇಳ ಬೇಕಾದ ಸಾಕ್ಷಿಯಾಗಿದೆ.
- 1 John 4:14 1 ಯೋಹಾನನು 4:14ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
- John 4:42 ಯೋಹಾನನು 4:42ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.
- John 3:15–17 ಯೋಹಾನನು 3:15–17ಹೀಗೆ ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದಿರುವನು. ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದವನಾಗಿರುವನು. ದೇವರು ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ; ಆದರೆ ತನ್ನ ಮಗನ ಮುಖಾಂತರ ಲೋಕವನ್ನು ರಕ್ಷಿಸುವದಕ್ಕಾಗಿ ಆತನನ್ನು ಕಳುಹಿಸಿದನು.
- Romans 15:12–13 ರೋಮಾಪುರದವರಿಗೆ 15:12–13ತಿರಿಗಿ ಯೆಶಾಯನು--ಇಷಯನ ಅಂಕುರದವನು ಎದ್ದು ಅನ್ಯ ಜನಾಂಗಗಳ ಮೇಲೆ ಆಡಳಿತ ಮಾಡುವನು; ಅನ್ಯ ಜನರು ಆತನಲ್ಲಿ ನಂಬಿಕೆಯಿಡುವರು ಅಂದನು. ನಿರೀಕ್ಷೆಗೆ ಆಧಾರನಾದ ದೇವರು ಪವಿತ್ರಾತ್ಮನ ಬಲದಿಂದ ನೀವು ನಿರೀಕ್ಷೆಯಲ್ಲಿ ಅಭಿವೃದ್ಧಿ ಹೊಂದು ವಂತೆ ನಂಬಿಕೆಯಿಂದುಂಟಾದ ಸಂತೋಷ ಸಮಾಧಾನಗಳಿಂದ ನಿಮ್ಮನ್ನು ತುಂಬಿಸಲಿ.
- 1 John 5:10–13 1 ಯೋಹಾನನು 5:10–13ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ; ಹೇಗೆಂದರೆ ದೇವರು ತನ್ನ ಮಗನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ. ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು.ಈ ಜೀವವು ಆತನ ಮಗನಲ್ಲಿ ಅದೆ ಎಂಬದೇ. ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ. ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆಯೂ ನೀವು ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ಹಾಗೆಯೂ ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ಇವು ಗಳನ್ನು ಬರೆದಿದ್ದೇನೆ.
- Psalm 84:12 ಕೀರ್ತನೆಗಳು 84:12ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- Psalm 107:6–43 ಕೀರ್ತನೆಗಳು 107:6–43ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿ, ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ. ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ. ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ ಆತನು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕ ನಿಲ್ಲದೆ ಕೆಳಗೆ ಬಿದ್ದರು. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳ ಗಿಂದ ಅವರನ್ನು ರಕ್ಷಿಸಿ ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋ ಸ್ಕರವೂ ಕೊಂಡಾಡಲಿ. ಆತನು ಹಿತ್ತಾಳೆಯ ಕದ ಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದು ಬಿಟ್ಟಿದ್ದಾನೆ. ಮೂಢರು ತಮ್ಮ ದ್ರೋಹದಿಂದಲೂ ಅಕ್ರಮಗಳಿಂದಲೂ ಶ್ರಮೆಪಡುತ್ತಾರೆ. ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ. ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ. ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು. ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ. ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ. ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು ಕರ್ತನ ಕೆಲಸಗಳನ್ನೂ ಅಗಾಧಗಳಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ. ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ. ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ. ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು. ಅವು ಶಾಂತವಾದಾಗ ಅವರು ಸಂತೋಷಪಡುತ್ತಾರೆ; ಹೀಗೆ ಅವರು ಅಪೇಕ್ಷಿಸಿದ ರೇವಿಗೆ ಅವರನ್ನು ನಡೆಸುತ್ತಾನೆ. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿ ಗೋಸ್ಕರವೂ ಕೊಂಡಾಡಲಿ. ಜನರು ಸಭೆಯಲ್ಲಿ ಆತನನ್ನು ಘನಪಡಿಸಿ ಹಿರಿಯರ ಸಭೆಯಲ್ಲಿ ಆತನನ್ನು ಸ್ತುತಿಸಲಿ. ಆತನು ನದಿಗಳನ್ನು ಅರಣ್ಯವಾಗಿಯೂ ನೀರಿನ ಬುಗ್ಗೆಗಳನ್ನು ಒಣ ಭೂಮಿಯಾಗಿಯೂ ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ. ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ. ಅಲ್ಲಿ ಹಸಿದವರನ್ನು ವಾಸಿಸಮಾಡುತ್ತಾನೆ; ಆಗ ಅವರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿ, ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು. ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ. ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ. ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ. ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ. ನೀತಿವಂತರು ನೋಡಿ ಸಂತೋ ಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು. ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
- Isaiah 45:21–22 ಯೆಶಾಯ 45:21–22ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ. ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿ ರಕ್ಷಣೆಯನ್ನು ಹೊಂದಿರಿ; ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.
Original words (Greek)
- For · G1063γάρ gár
- therefore · G5124τοῦτο toûto
- we · G2872κοπιάω kopiáō
- both · G2532καί kaí
- labour · G2872κοπιάω kopiáō
- and · G2532καί kaí
- reproach · G3679ὀνειδίζω oneidízō
- because · G3754ὅτι hóti
- trust · G1679ἐλπίζω elpízō
- in · G1909ἐπί epí
- living · G2198ζάω záō
- God · G2316θεός theós
- who · G3739ὅς hós
- is · G2076ἐστί estí
- Saviour · G4990σωτήρ sōtḗr
- all · G3956πᾶς pâs
- men · G444ἄνθρωπος ánthrōpos
- specially · G3122μάλιστα málista
- believe · G4103πιστός pistós