2 Chronicles · chapter 23 · verse 19
2 Chronicles 23:19 in Kannada
ಕರ್ತನ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿ ದನು.
Kartana aalayadalli yaava apavitravaadaddoo olage praveshisada haage baagalugala baliyalli dvaarapaalakarannu irisi danu.
2 Chronicles 23:19 in English
- King James Version (KJV)
- And he set the porters at the gates of the house of the LORD, that none [which was] unclean in any thing should enter in.
- World English Bible (WEB)
- He set the gatekeepers at the gates of the LORD’s house, that no one who was unclean in anything should enter in.
- American Standard Version (ASV)
- And he set the porters at the gates of the house of Jehovah, that none that was unclean in anything should enter in.
- Bible in Basic English (BBE)
- And he put door-keepers at the doors of the Lord's house, to see that no one who was unclean in any way might come in.
- Darby Translation (DBY)
- And he set the doorkeepers at the gates of the house of Jehovah, that no one unclean in anything should enter in.
- Webster's Bible (WBS)
- And he set the porters at the gates of the house of the LORD, that none [who was] unclean in any thing should enter.
- Young's Literal Translation (YLT)
- and he stationeth the gatekeepers over the gates of the house of Jehovah, and the unclean in anything doth not go in.
Read in context
- 17ಸಮಸ್ತ ಜನರು ಬಾಳನ ಮನೆಗೆ ಹೋಗಿ ಅದನ್ನು ಕೆಡವಿಹಾಕಿ ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿ ಪೀಠಗಳ ಮುಂದೆ ಕೊಂದುಹಾಕಿದರು.
- 18ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.
- 19ಕರ್ತನ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿ ದನು.
- 20ಅವನು ಶತಾಧಿಪತಿಗಳನ್ನೂ ಗೌರವಸ್ಥರನ್ನೂ ಜನರ ಅಧಿಪತಿಗಳನ್ನೂ ದೇಶದ ಜನರೆಲ್ಲರನ್ನೂ ಕರ ಕೊಂಡು ಅರಸನನ್ನು ಕರ್ತನ ಆಲಯದಿಂದ ಕರ ತಂದನು. ಅವರು ಎತ್ತರವಾದ ಬಾಗಲಿನಿಂದ ಅರಸನ ಮನೆಗೆ ಬಂದು ಅರಸನನ್ನು ರಾಜ್ಯದ ಸಿಂಹಾಸನದ ಮೇಲೆ ಕೂಡ್ರಿಸಿದರು.ಅವರು ಅತಲ್ಯಳನ್ನು ಕತ್ತಿ ಯಿಂದ ಕೊಂದ ತರುವಾಯ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
- 21ಅವರು ಅತಲ್ಯಳನ್ನು ಕತ್ತಿ ಯಿಂದ ಕೊಂದ ತರುವಾಯ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
Cross references
- 1 Chronicles 9:22–24 1 ಪೂರ್ವಕಾಲವೃತ್ತಾಂತ 9:22–24ಬಾಗ ಲುಗಳಲ್ಲಿ ದ್ವಾರಪಾಲಕರಾಗಿರಲು ಆಯಲ್ಪಟ್ಟ ಇವ ರೆಲ್ಲರೂ ಇನ್ನೂರ ಹನ್ನೆರಡು ಮಂದಿಯಾಗಿದ್ದರು. ಇವರು ತಮ್ಮ ಗ್ರಾಮಗಳಲ್ಲಿ ತಮ್ಮ ವಂಶಾವಳಿಯ ಪ್ರಕಾರವಾಗಿ ಲೆಕ್ಕಿಸಲ್ಪಟ್ಟಿದ್ದರು. ದಾವೀದನೂ ದರ್ಶಿ ಯಾದ ಸಮುವೇಲನೂ ಇವರನ್ನು ನೇಮಕವಾದ ಸೇವೆಗೆ ನೇಮಿಸಿದರು. ಹೀಗೆಯೇ ಇವರಿಗೂ ಇವರ ಮಕ್ಕಳಿಗೂ ಕರ್ತನ ಮನೆಯ ಬಾಗಲ ಕಾವಲಿತ್ತು ಅದು ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರ ರಿಂದ ಕಾವಲಿತ್ತು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು.
- 1 Chronicles 26:1–32 1 ಪೂರ್ವಕಾಲವೃತ್ತಾಂತ 26:1–32ದ್ವಾರಪಾಲಕರ ವರ್ಗಗಳನ್ನು ಕುರಿತು ಏನಂದರೆ--ಕೊರಹೀಯರೊಳಗೆ ಆಸಾ ಫನ ಕುಮಾರರಲ್ಲಿ ಒಬ್ಬನಾಗಿರುವ ಕೋರೆಯನ ಮಗನಾದ ಮೆಷೆಲೆಮ್ಯನು. ಮೆಷೆಲೆಮ್ಯನ ಕುಮಾ ರರು--ಚೊಚ್ಚಲ ಮಗನು ಜೆಕರ್ಯನು, ಎರಡನೆ ಯವನು ಎದೀಯಯೇಲನು, ಮೂರನೆ ಯವನು ಜೆಬದ್ಯನು, ನಾಲ್ಕನೆಯವನು ಯತ್ನಿಯೇಲನು, ಐದನೆ ಯವನು ಎಲಾಮನು, ಆರನೆಯವನು ಯೆಹೋ ಹಾನಾನನು, ಏಳನೆಯವನು ಎಲ್ಯೆಹೋಯೇನೈ. ಇದಲ್ಲದೆ ಒಬೇದೆದೋಮನ ಕುಮಾರರು-- ಚೊಚ್ಚಲ ಮಗನು ಶೆಮಾಯನು, ಎರಡನೆಯವನು ಯೆಹೋಜಾಬಾದನು, ಮೂರನೆಯವನು ಯೋವಾ ಹನು, ನಾಲ್ಕನೆಯವನು ಸಾಕಾರನು, ಐದನೆಯವನು ನೆತನೇಲನು ಆರನೆಯವನು ಅವ್ಮೆಾಯೇಲನು, ಏಳನೆಯವನು ಇಸ್ಸಾಕಾರನು, ಎಂಟನೆಯವನು ಪೆಯುಲ್ಲೆತೈನು. ದೇವರು ಅವನನ್ನು ಆಶೀರ್ವದಿ ಸಿದನು. ಅದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಕುಮಾರರು ಹುಟ್ಟಿದರು; ಅವರು ಪರಾಕ್ರಮಶಾಲಿಗಳಾಗಿದ್ದರು. ಶೆಮಾಯನ ಕುಮಾರರು ಯಾರಂದರೆ--ಒತ್ನೀಯು, ರೆಫಾಯೇಲನು, ಒಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು. ಇವರೆಲ್ಲರು ಒಬೇದೆದೋಮನ ಕುಮಾ ರರು; ಇವರೂ ತಮ್ಮ ಕುಮಾರರೂ ತಮ್ಮ ಸಹೋ ದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೇದೆ ದೋಮನವರು ಅರವತ್ತೆರಡು ಮಂದಿಯಾಗಿದ್ದರು. ಮೆಷೆಲೆಮ್ಯನಿಗೂ ಬಲವುಳ್ಳ ಕುಮಾರರೂ ಸಹೋ ದರರೂ ಹದಿನೆಂಟು ಮಂದಿಯಾಗಿದ್ದರು. ಇದಲ್ಲದೆ ಮೆರಾರಿಯ ಮಕ್ಕಳಲ್ಲಿರುವ ಹೋಸನಿಗೆ ಮಕ್ಕಳಿದ್ದರು; ಮುಖ್ಯನಾದವನು ಶಿಮ್ರಿಯು; (ಅವನು ಚೊಚ್ಚಲ ಮಗನಲ್ಲ) ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು; ಎರಡನೆಯವನು ಹಿಲ್ಕೀಯನು, ಮೂರನೆಯವನು ಟೆಬಲ್ಯನು, ನಾಲ್ಕನೆ ಯವನು ಜೆಕರ್ಯನು; ಹೋಸನ ಸಮಸ್ತ ಕುಮಾರರೂ ಹದಿಮೂರು ಮಂದಿಯಾಗಿದ್ದರು. ಇದರಲ್ಲಿ ದ್ವಾರಪಾಲಕರ ವರ್ಗಗಳು ಕರ್ತನ ಮನೆಯಲ್ಲಿ ಸೇವಿಸುವದಕ್ಕೆ ವರ್ಗವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲ್ಪಟ್ಟಿದ್ದವು. ಅವರು ಕಿರಿ ಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಲು ಬಾಗಲುಗಳಿಗೂ ಚೀಟುಗಳನ್ನು ಹಾಕಿದರು. ಮೂಡಣ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗನೂ ಬುದ್ಧಿಯುಳ್ಳ ಆಲೋಚನೆ ಯುಳ್ಳವನಾಗಿರುವ ಜೆಕರ್ಯನಿಗೋಸ್ಕರ ಚೀಟುಗ ಳನ್ನು ಹಾಕಿದರು; ಅವನ ಚೀಟು ಉತ್ತರ ಭಾಗಕ್ಕೆ ಬಿತ್ತು. ಒಬೇದೆದೋಮನಿಗೆ ದಕ್ಷಿಣ ಭಾಗಕ್ಕೆ ಬಿತ್ತು. ಅವನ ಕುಮಾರರಿಗೆ ಶುಪ್ಪೀಮ್ ಎಂಬ ಮನೆ ಬಂತು. ಶುಪ್ಪೀಮನಿಗೂ ಹೋಸನಿಗೂ ಪಶ್ಚಿಮದಲ್ಲಿರುವ ಶಲ್ಲೆಕೆತೆಂಬ ಬಾಗಲು ಬಂತು. ಹೋಗುವ ರಾಜ ಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು. ಮೂಡಣ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಶುಪ್ಪೀಮಿನ ಬಳಿಯಲ್ಲಿ ಇಬ್ಬರಿ ಬ್ಬರಾಗಿಯೂ ಪಶ್ಚಿಮ ಭಾಗವಾದ ಪರ್ಬರಿಗೆ ಹೋಗುವ ರಾಜ ಮಾರ್ಗದಲ್ಲಿ ನಾಲ್ಕು ಮಂದಿಯೂ ಪರ್ಬರಿನ ಬಳಿಯಲ್ಲಿ ಇಬ್ಬರು ಇದ್ದರು. ಕೋರ ಹೀಯರು ಮೆರಾರೀಯರ ಕುಮಾರರಲ್ಲಿಯೂ ವಿಭಾ ಗಿಸಿದ ದ್ವಾರಪಾಲಕರ ವರ್ಗಗಳು ಇವೇ. ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು. ಲದ್ದಾನನ ಕುಮಾರರು; ಗೇರ್ಷೋನ್ಯ ನಾದ ಲದ್ದಾನನ ಕುಮಾರರು ಮುಖ್ಯಸ್ಥರಾದ ಪಿತೃ ಗಳಾಗಿದ್ದರು. ಈ ಗೇರ್ಷೋನ್ಯನಾದ ಲದ್ದಾನನ ಮಗನು ಯೆಹೀಯೇಲನು. ಯೆಹೀಯೇಲನ ಕುಮಾರರು--ಜೇತಾಮನು, ಅವನ ಸಹೋದರನಾದ ಯೋವೇಲನು; ಇವರು ಕರ್ತನ ಮನೆಯ ಬೊಕ್ಕಸಗಳ ಮೇಲೆ ಇದ್ದರು. ಅಮ್ರಾಮ್ಯರಲ್ಲಿಯೂ ಇಚ್ಹಾರಲ್ಲಿಯೂ ಹೆಬ್ರೋ ನ್ಯರಲ್ಲಿಯೂ ಉಜ್ಜೀಯೇಲ್ಯರಲ್ಲಿಯೂ ಸಹ ಕೆಲವರು. ಮೋಶೆಯ ಮಗನಾದ ಗೇರ್ಷೋನನ ಮಗನಾದ ಶೆಬೂವೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿ ದ್ದನು. ಇವನ ಸಹೋದರರು--ಎಲಿಯೇಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮನು, ಇವನ ಮಗನು ಜಿಕ್ರೀಯು, ಇವನ ಮಗನು ಶೆಲೋಮೊತನು. ಈ ಶೆಲೋಮೊತನೂ ಅವನ ಸಹೋದರರೂ ಅರಸ ನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆಮಾಡಿದ ಪ್ರತಿಷ್ಠವಾದವುಗಳ ಬೊಕ್ಕಸಗಳ ಮೇಲೆಯೂ ಇದ್ದರು. ಅವರು ಕರ್ತನ ಮನೆಯನ್ನು ಬಲಪಡಿಸುವದಕ್ಕೆ ಯುದ್ಧಗಳಿಂದಲೂ ಕೊಳ್ಳೆಯಿಂದಲೂ ಸಂಪಾದಿಸಿ ದವುಗಳನ್ನು ಪ್ರತಿಷ್ಠೆಮಾಡಿದರು. ಇದಲ್ಲದೆ ಪ್ರವಾ ದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂ ಯಳ ಮಗನಾದ ಯೋವಾಬನೂ ಪ್ರತಿಷ್ಠೆಮಾಡಿ ದೆಲ್ಲವೂ ಮತ್ತು ಯಾರು ಪ್ರತಿಷ್ಠೆಮಾಡಿದ್ದರೋ ಅವೆ ಲ್ಲವೂ ಶೆಲೋಮೊತನ ಕೈಕೆಳಗೂ ಅವನ ಸಹೋ ದರರ ಕೈಕೆಳಗೂ ಇತ್ತು. ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಕುಮಾರರೂ ಪಾರುಪತ್ಯಗಾರರಿಗೋಸ್ಕರವೂ ನ್ಯಾಯಾಧಿಪತಿಗಳಿ ಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ಇಡಲ್ಪಟ್ಟಿದ್ದರು. ಹೆಬ್ರೋನ್ಯರಲ್ಲಿ ಬಲವುಳ್ಳವರಾದ ಹಷಬ್ಯನೂ ಅವನ ಸಹೋದರರೂ ಕರ್ತನ ಸಮಸ್ತ ಕಾರ್ಯ ಗಳಲ್ಲಿಯೂ ಅರಸನ ಸೇವೆಯಲ್ಲಿಯೂ ಸಾವಿರದ ಏಳುನೂರು ಮಂದಿ ಪಶ್ಚಿಮವಾಗಿ ಯೊರ್ದನಿನ ಈಚೆ ಯಲ್ಲಿ ಇಸ್ರಾಯೇಲ್ಯರೊಳಗೆ ಅಧಿಪತಿಗಳಾಗಿದ್ದರು. ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು. ಇವರು ದಾವೀ ದನ ಆಳಿಕೆಯ ನಾಲ್ವತ್ತನೇ ವರುಷದಲ್ಲಿ ಹುಡುಕ ಲ್ಪಟ್ಟಿದ್ದರು; ಆಗ ಗಿಲ್ಯಾದಿನ ಯಾಜೇರಿನಲ್ಲಿ ಅವರೊಳಗೆ ಬಲವುಳ್ಳ ಪರಾಕ್ರಮಶಾಲಿಗಳು ಸಿಕ್ಕಿದರು.ಇದ ಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಮುಖ್ಯ ಪಿತೃಗಳಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ಅರಸುಗಳ ಕಾರ್ಯಗಳ ನಿಮಿತ್ತವಾಗಿಯೂ ರೂಬೇ ನ್ಯರ ಮೇಲೆಯೂ ಗಾದ್ಯರ ಮೇಲೆಯೂ ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳನ್ನಾಗಿ ಮಾಡಿದನು. ಇದ ಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಮುಖ್ಯ ಪಿತೃಗಳಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ಅರಸುಗಳ ಕಾರ್ಯಗಳ ನಿಮಿತ್ತವಾಗಿಯೂ ರೂಬೇ ನ್ಯರ ಮೇಲೆಯೂ ಗಾದ್ಯರ ಮೇಲೆಯೂ ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳನ್ನಾಗಿ ಮಾಡಿದನು.