2 Chronicles · chapter 34 · verse 1
2 Chronicles 34:1 in Kannada
ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಮೂವತ್ತೊಂದು ವರುಷ ಆಳಿದನು.
Yosheeyanu aalalu aarambhisidaaga entu varushadavanaagiddu yeroosa leminalli moovattondu varusha aalidanu.
2 Chronicles 34:1 in English
- King James Version (KJV)
- Josiah [was] eight years old when he began to reign, and he reigned in Jerusalem one and thirty years.
- World English Bible (WEB)
- Josiah was eight years old when he began to reign, and he reigned thirty-one years in Jerusalem.
- American Standard Version (ASV)
- Josiah was eight years old when he began to reign; and he reigned thirty and one years in Jerusalem.
- Bible in Basic English (BBE)
- Josiah was eight years old when he became king; he was ruling in Jerusalem for thirty-one years.
- Darby Translation (DBY)
- Josiah was eight years old when he began to reign; and he reigned thirty-one years in Jerusalem.
- Webster's Bible (WBS)
- Josiah [was] eight years old when he began to reign, and he reigned in Jerusalem one and thirty years.
- Young's Literal Translation (YLT)
- A son of eight years [is] Josiah in his reigning, and thirty and one years he hath reigned in Jerusalem,
Read in context
- 1ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಮೂವತ್ತೊಂದು ವರುಷ ಆಳಿದನು.
- 2ಅವನು ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು; ಎಡಗಡೆಗಾದರೂ ಬಲಗಡೆಗಾದರೂ ತೊಲಗದೆ ತನ್ನ ಪಿತೃವಾದ ದಾವೀದನ ಮಾರ್ಗ ಗಳಲ್ಲಿ ನಡೆದನು.
- 3ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.
Cross references
- Jeremiah 1:2 ಯೆರೆಮೀಯ 1:2ಯೆಹೂದದ ಅರಸನಾದ ಆಮೋನನ ಮಗನಾದ ಯೋಷೀಯನ ದಿನಗಳಲ್ಲಿ ಅವನ ಆಳಿಕೆಯ ಹದಿಮೂರನೇ ವರುಷದಲ್ಲಿ ಅವನಿಗೆ ಕರ್ತನ ವಾಕ್ಯವು ಉಂಟಾಯಿತು.
- Zephaniah 1:1 ಚೆಫನ್ಯ 1:1ಯೆಹೂದದ ಅರಸನಾದ ಅಮೋನನ ಮಗನಾದ ಯೋಷೀಯನ ದಿವಸಗಳಲ್ಲಿ ಹಿಜ್ಕೀಯನ ಮಗನಾದ ಅಮರ್ಯನ ಮಗನಾದ ಗೆದಲೀಯನ ಮಗನಾದ ಕೂಶೀಯನ ಮಗನಾದ ಚೆಫನ್ಯನಿಗೆ ಉಂಟಾದ ಕರ್ತನ ದೈವೋಕ್ತಿ
- 1 Samuel 2:18 1 ಸಮುವೇಲನು 2:18ಬಾಲಕನಾದ ಸಮುವೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಕರ್ತನ ಸನ್ನಿಧಿಯಲ್ಲಿ ಸೇವಿಸುತ್ತಿದ್ದನು.
- 2 Chronicles 24:1 2 ಪೂರ್ವಕಾಲವೃತ್ತಾಂತ 24:1ಯೆಹೋವಾಷನು ಆಳಲು ಆರಂಭಿಸಿದಾಗ ಏಳು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ನಾಲ್ವತ್ತು ವರುಷ ಆಳಿದನು. ಅವನ ತಾಯಿ ಬೇರ್ಷೆಬ ಊರಿನವಳಾದ ಚಿಬ್ಯಳೆಂಬವಳು.
- 1 Chronicles 3:14–15 1 ಪೂರ್ವಕಾಲವೃತ್ತಾಂತ 3:14–15ಇವನ ಮಗನು ಅಮೋನನು; ಇವನ ಮಗನು ಯೋಷೀ ಯನು. ಯೋಷಿಯನ ಮಕ್ಕಳು--ಚೊಚ್ಚಲ ಮಗ ನಾದ ಯೋಹನಾನನು, ಎರಡನೆಯವನಾದ ಯೆಹೋ ಯಾಕೀಮನು, ಮೂರನೆಯವನಾದ ಚಿದ್ಕೀಯನು, ನಾಲ್ಕನೆಯವನಾದ ಶಲ್ಲೂಮನು.
- 1 Kings 3:7–9 1 ಅರಸುಗಳು 3:7–9ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ. ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು. ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.
- Ecclesiastes 4:13 ಪ್ರಸಂಗಿ 4:13ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮುದುಕನೂ ಮೂಢನೂ ಆದ ಅರಸನಿಗಿಂತ ಬಡವನೂ ಜ್ಞಾನಿಯೂ ಆದ ಒಂದು ಮಗುವೇ ಮೇಲು.
- 1 Samuel 2:26 1 ಸಮುವೇಲನು 2:26ಆದರೆ ಬಾಲಕನಾದ ಸಮು ವೇಲನು ಬೆಳೆಯುತ್ತಾ ಇದ್ದನು; ಕರ್ತನ ಮತ್ತು ಮನುಷ್ಯರ ದಯೆಗೆ ಪಾತ್ರನಾಗಿದ್ದನು.
- 2 Kings 22:1–20 2 ಅರಸುಗಳು 22:1–20ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಮೂವ ತ್ತೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತೂರಿನ ಅದಾಯನ ಮಗಳಾ ಗಿದ್ದು, ಯೆದೀದಾಳೆಂಬ ಹೆಸರುಳ್ಳವಳಾಗಿದ್ದಳು. ಅವನು ಕರ್ತನ ದೃಷ್ಟಿಗೆ ಒಳ್ಳೆಯದ್ದನ್ನು ಮಾಡಿ ತನ್ನ ತಂದೆಯಾದ ದಾವೀದನ ಎಲ್ಲಾ ಮಾರ್ಗಗಳಲ್ಲಿ ಬಲ, ಎಡ ಪಾರ್ಶ್ವವಾಗಿ ತಿರುಗದೆ ನಡೆದನು. ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೇ ವರುಷದಲ್ಲಿ ಏನಾಯಿತಂದರೆ, ಅರಸನು ಲೇಖಕನಾದ ಮೆಷುಲ್ಲಾ ಮನ ಮಗನಾದ ಅಚಲ್ಯನ ಮಗನಾದ ಶಾಫಾನನನ್ನು ಕರ್ತನ ಮನೆಗೆ ಕಳುಹಿಸಿ ಹೇಳಿದ್ದೇನಂದರೆ-- ನೀನು ಪ್ರಧಾನ ಯಾಜಕನಾದ ಹಿಲ್ಕೀಯನ ಬಳಿಗೆ ಹೋಗು, ಅವನು ಕರ್ತನ ಮನೆಯಲ್ಲಿ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ. ಅವರು ಅದನ್ನು ಕರ್ತನ ಮನೆಯ ಕೆಲಸಮಾಡು ವವರ ಮೇಲೆ ಇರುವ ಕಾವಲುಗಾರರ ಕೈಯಲ್ಲಿ ಒಪ್ಪಿಸಲಿ. ಮನೆ ದುರಸ್ತುಮಾಡುವ ಹಾಗೆ ಕರ್ತನ ಮನೆಯಲ್ಲಿ ಕೆಲಸ ಮಾಡುವವರಾದ ಬಡಿಗೆಯವ ರಿಗೂ ಶಿಲ್ಪಿಗಾರರಿಗೂ ಕಲ್ಲು ಕೆಲಸದವರಿಗೂ ಕೊಟ್ಟು ಮನೆಯನ್ನು ದುರಸ್ತು ಮಾಡಲು ಮರಗಳನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವದಕ್ಕೆ ಕೊಡಲಿ. ಆದರೆ ಅವರು ನಂಬಿಗಸ್ತರಾಗಿ ಕೆಲಸಮಾಡಿದ್ದರಿಂದ ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳಲಿಲ್ಲ. ಆಗ ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕ ನಾದ ಶಾಫಾನನಿಗೆ--ನಾನು ಕರ್ತನ ಮನೆಯಲ್ಲಿ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡಿದ್ದೇನೆ ಅಂದನು; ಹಿಲ್ಕೀಯನು ಆ ಪುಸ್ತಕವನ್ನು ಶಾಫಾನನಿಗೆ ಕೊಟ್ಟನು; ಅವನು ಅದನ್ನು ಓದಿದನು. ಲೇಖಕನಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆಕರ್ತನ ಮನೆಯಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ ಕರ್ತನ ಆಲಯದ ಕೆಲಸ ಮಾಡು ವವರ ಮೇಲಿರುವ ಕೆಲಸಗಾರರ ಕೈಯಲ್ಲಿ ಒಪ್ಪಿಸಿದ್ದಾರೆ ಅಂದನು. ಇದಲ್ಲದೆ ಲೇಖಕನಾದ ಶಾಫಾನನು ಅರಸನಿಗೆ--ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆಂದು ತೋರಿಸಿದನು; ಶಾಫಾ ನನು ಅದನ್ನು ಅರಸನ ಮುಂದೆ ಓದಿದನು. ಅರಸನು ನ್ಯಾಯಪ್ರಮಾಣದ ಪುಸ್ತಕದ ಮಾತು ಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು. ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ ಶಾಫಾನನ ಮಗನಾದ ಅಹೀಕಾಮ್ನಿಗೂ ವಿಾಕಾ ಯನ ಮಗನಾದ ಅಕ್ಬೋರ್ನಿಗೂ ಲೇಖಕನಾದ ಶಾಫಾನನಿಗೂ ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ ಹೇಳಿದ್ದೇನಂದರೆ-- ನೀವು ಹೋಗಿ ಸಿಕ್ಕಿದ ಈ ಪುಸ್ತಕದ ಮಾತುಗಳನ್ನು ಕುರಿತು ನನಗೋಸ್ಕರವೂ ಜನರಿಗೋಸ್ಕರವೂ ಎಲ್ಲಾ ಯೆಹೂದ್ಯರಿಗೋಸ್ಕರವೂ ಕರ್ತನ ಬಳಿಯಲ್ಲಿ ವಿಚಾರಿಸಿರಿ. ಯಾಕಂದರೆ ನಮ್ಮನ್ನು ಕುರಿತು ಬರೆಯಲ್ಪಟ್ಟ ಎಲ್ಲಾದರ ಪ್ರಕಾರ ಮಾಡಲು ನಮ್ಮ ಪಿತೃಗಳು ಈ ಪುಸ್ತಕದ ಮಾತುಗಳನ್ನು ಕೇಳದೆ ಹೋದದರಿಂದ ನಮಗೆ ವಿರೋಧವಾಗಿ ಉರಿ ಯುವ ದೇವರ ಕೋಪವು ದೊಡ್ಡದಾಗಿದೆ ಅಂದನು. ಹಾಗೆಯೇ ಯಾಜಕನಾದ ಹಿಲ್ಕೀಯನೂ ಅಹೀಕಾ ಮನೂ ಅಕ್ಬೋರನೂ ಶಾಫಾನನೂ ಅಸಾಯನೂ ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ವಸ್ತ್ರಗಳ ಕೆಲಸಗಾರರಾದ ಶಲ್ಲೂಮನ ಹೆಂಡತಿಯಾದ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಮಾತನಾಡಿದರು. ಅವಳು ಯೆರೂಸಲೇಮಿ ನೊಳಗೆ ಎರಡನೇ ಭಾಗದಲ್ಲಿ ವಾಸವಾಗಿದ್ದಳು. ಆಗ ಅವಳು--ಅವರಿಗೆ ಹೇಳಿದ್ದು--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ--ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು. ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ. ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ--ನೀವು ಕೇಳಿದ ಮಾತು ಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ -- ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ವಿರೋಧವಾಗಿ ಅವರು ನಾಶವೂ ಶಾಪವೂ ಆಗುವದೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ನಿನ್ನನ್ನು ಕರ್ತನ ಮುಂದೆ ತಗ್ಗಿಸಿ ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದನ್ನು ನಾನೇ ಕೇಳಿದ್ದೇನೆಂದು ಕರ್ತನು ಹೇಳುತ್ತಾನೆ.ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು. ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.
- 1 Kings 13:2 1 ಅರಸುಗಳು 13:2ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.
- 2 Chronicles 33:1 2 ಪೂರ್ವಕಾಲವೃತ್ತಾಂತ 33:1ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ಐವತ್ತೈದು ವರುಷ ಆಳಿದನು.
- Matthew 1:10–11 ಮತ್ತಾಯನು 1:10–11ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು; ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು.