2 Chronicles · chapter 34 · verse 13
2 Chronicles 34:13 in Kannada
ಇದಲ್ಲದೆ ಹೊರೆಗಾರರ ಮೇಲೆಯೂ ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ವಿಚಾರಕರಾಗಿದ್ದರು. ಲೇವಿಯವರಲ್ಲಿ ಕೆಲವರು ರಾಯಸದವರೂ ಯಜಮಾನರೂ ದ್ವಾರಪಾಲಕರೂ ಆಗಿದ್ದರು.
Idallade horegaarara meleyoo bere bere seveya kelasavannu maaduvavara meleyoo avaru vichaarakaraagiddaru. Leviyavaralli kelavaru raayasadavaroo yajamaanaroo dvaarapaalakaroo aagiddaru.
2 Chronicles 34:13 in English
- King James Version (KJV)
- Also [they were] over the bearers of burdens, and [were] overseers of all that wrought the work in any manner of service: and of the Levites [there were] scribes, and officers, and porters.
- World English Bible (WEB)
- Also they were over the bearers of burdens, and directed all who did the work in every kind of service. Of the Levites, there were scribes, officials, and gatekeepers.
- American Standard Version (ASV)
- Also they were over the bearers of burdens, and set forward all that did the work in every manner of service: and of the Levites there were scribes, and officers, and porters.
- Bible in Basic English (BBE)
- Had authority over the transport workers, giving directions to all who were doing any sort of work; and among the Levites there were scribes and overseers and door-keepers.
- Darby Translation (DBY)
- They were also over the bearers of burdens, and were overseers of all that worked in any manner of service. And of the Levites were the scribes, and officers, and doorkeepers.
- Webster's Bible (WBS)
- Also [they were] over the bearers of burdens, and [were] overseers of all that wrought the work in any manner of service: and of the Levites [there were] scribes, and officers, and porters.
- Young's Literal Translation (YLT)
- and over the burden-bearers, and overseers of every one doing work for service and service; and of the Levites [are] scribes, and officers, and gatekeepers.
Read in context
- 11ಕೆತ್ತಿದ ಕಲ್ಲುಗಳನ್ನೂ ಜಂತೆಗಳಿಗೋಸ್ಕರ ಮರಗ ಳನ್ನೂ ಕೊಂಡುಕೊಂಡವರಾಗಿ ಯೆಹೂದದ ಅರಸು ಗಳು ಕೆಡವಿಹಾಕಿದ ಮನೆಗಳಲ್ಲಿ ನೆಲಕ್ಕೆ ಹಾಸುವದ ಕ್ಕೋಸ್ಕರ ಶಿಲ್ಪಿಯವರಿಗೂ ಕಟ್ಟುವವರಿಗೂ ಕೊಟ್ಟರು.
- 12ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿ ದರು. ಅವರ ವಿಚಾರಣೆಯ ಕರ್ತರು ಯಾರಂದರೆ: ಮೆರಾರಿಯ ಕುಮಾರರಲ್ಲಿ ಲೇವಿಯರಾದ ಯಹತನೂ ಒಬದ್ಯನೂ; ಕೆಹಾತ್ಯರ ಮಕ್ಕಳಲ್ಲಿ ಜೆಕರೀಯನೂ ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವ ರಾದ ಲೇವಿಯರೆಲ್ಲರೂ ಅದನ್ನು ನಡಿಸುತ್ತಾ ಇದ್ದರು.
- 13ಇದಲ್ಲದೆ ಹೊರೆಗಾರರ ಮೇಲೆಯೂ ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ವಿಚಾರಕರಾಗಿದ್ದರು. ಲೇವಿಯವರಲ್ಲಿ ಕೆಲವರು ರಾಯಸದವರೂ ಯಜಮಾನರೂ ದ್ವಾರಪಾಲಕರೂ ಆಗಿದ್ದರು.
- 14ಆದರೆ ಕರ್ತನ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತಕ್ಕೊಂಡು ಬರುವಾಗ ಯಾಜಕ ನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಕರ್ತನ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡನು.
- 15ಆಗ ಹಿಲ್ಕೀಯನು ಪ್ರತ್ಯುತ್ತರ ಕೊಟ್ಟು ರಾಯಸದ ವನಾದ ಶಾಫಾನನಿಗೆ--ಕರ್ತನ ಆಲಯದಲ್ಲಿ ನ್ಯಾಯ ಪ್ರಮಾಣದ ಪುಸ್ತಕವು ನನಗೆ ಸಿಕ್ಕಿತು ಎಂದು ಹೇಳಿ ದನು. ಮತ್ತು ಹಿಲ್ಕೀಯನು ಆ ಪುಸ್ತಕವನ್ನು ಶಾಫಾನ ನಿಗೆ ಒಪ್ಪಿಸಿದನು.
Cross references
- Nehemiah 4:10 ನೆಹೆಮೀಯ 4:10ಆಗ ಯೆಹೂದದವರು--ಹೊರೆ ಹೊರುವವರ ಬಲವು ಕಡಿಮೆಯಾಗಿ ಮಣ್ಣು ಬಹಳವಾಗಿದೆ; ಗೋಡೆಯನ್ನು ನಾವು ಕಟ್ಟಲಾರೆವು ಅಂದರು.
- 2 Chronicles 2:18 2 ಪೂರ್ವಕಾಲವೃತ್ತಾಂತ 2:18ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಹೊರೆಹೊರುವದಕ್ಕೂ ಎಂಭತ್ತು ಸಾವಿರ ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವ ದಕ್ಕೂ ಮೂರು ಸಾವಿರದ ಆರು ನೂರು ಮಂದಿ ಯನ್ನು ಕೆಲಸದವರ ಮೇಲೆ ಮೇಲ್ವಿಚಾರಣೆಗಾಗಿಯೂ ಇರಿಸಿದನು.
- Ezra 7:6–7 ಎಜ್ರನು 7:6–7ಈ ಎಜ್ರನು ಇಸ್ರಾ ಯೇಲ್ ದೇವರಾಗಿರುವ ಕರ್ತನು ಕೊಟ್ಟ ಮೋಶೆಯ ನ್ಯಾಯಪ್ರಮಾಣದಲ್ಲಿ ನುರಿತ ಶಾಸ್ತ್ರಿಯಾಗಿದ್ದನು. ಇವನ ಮೇಲೆ ಅವನ ದೇವರಾಗಿರುವ ಕರ್ತನ ಕೈ ಇದ್ದ ಪ್ರಕಾರವೇ ಅರಸನು ಇವನಿಗೆ ಕೇಳಿದ್ದನ್ನೆಲ್ಲಾ ಕೊಟ್ಟನು. ಇದಲ್ಲದೆ ಇವನ ಸಂಗಡ ಇಸ್ರಾಯೇಲ್ ಮಕ್ಕಳಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ನೆತಿನಿ ಯರಲ್ಲಿಯೂ ಕೆಲವರು ಅರ್ತಷಸ್ತನ ಆಳಿಕೆಯು ಏಳನೇ ವರುಷದಲ್ಲಿ ಯೆರೂಸಲೇಮಿಗೆ ಹೋದರು.
- 2 Chronicles 8:10 2 ಪೂರ್ವಕಾಲವೃತ್ತಾಂತ 8:10ಇವರು ಅರಸ ನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನ ರಾಗಿದ್ದರು. ಜನರನ್ನು ಆಳುವವರು ಇನ್ನೂರ ಐವತ್ತು ಮಂದಿ ಇದ್ದರು.
- 1 Chronicles 23:4–5 1 ಪೂರ್ವಕಾಲವೃತ್ತಾಂತ 23:4–5ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು. ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
- 1 Chronicles 26:1–19 1 ಪೂರ್ವಕಾಲವೃತ್ತಾಂತ 26:1–19ದ್ವಾರಪಾಲಕರ ವರ್ಗಗಳನ್ನು ಕುರಿತು ಏನಂದರೆ--ಕೊರಹೀಯರೊಳಗೆ ಆಸಾ ಫನ ಕುಮಾರರಲ್ಲಿ ಒಬ್ಬನಾಗಿರುವ ಕೋರೆಯನ ಮಗನಾದ ಮೆಷೆಲೆಮ್ಯನು. ಮೆಷೆಲೆಮ್ಯನ ಕುಮಾ ರರು--ಚೊಚ್ಚಲ ಮಗನು ಜೆಕರ್ಯನು, ಎರಡನೆ ಯವನು ಎದೀಯಯೇಲನು, ಮೂರನೆ ಯವನು ಜೆಬದ್ಯನು, ನಾಲ್ಕನೆಯವನು ಯತ್ನಿಯೇಲನು, ಐದನೆ ಯವನು ಎಲಾಮನು, ಆರನೆಯವನು ಯೆಹೋ ಹಾನಾನನು, ಏಳನೆಯವನು ಎಲ್ಯೆಹೋಯೇನೈ. ಇದಲ್ಲದೆ ಒಬೇದೆದೋಮನ ಕುಮಾರರು-- ಚೊಚ್ಚಲ ಮಗನು ಶೆಮಾಯನು, ಎರಡನೆಯವನು ಯೆಹೋಜಾಬಾದನು, ಮೂರನೆಯವನು ಯೋವಾ ಹನು, ನಾಲ್ಕನೆಯವನು ಸಾಕಾರನು, ಐದನೆಯವನು ನೆತನೇಲನು ಆರನೆಯವನು ಅವ್ಮೆಾಯೇಲನು, ಏಳನೆಯವನು ಇಸ್ಸಾಕಾರನು, ಎಂಟನೆಯವನು ಪೆಯುಲ್ಲೆತೈನು. ದೇವರು ಅವನನ್ನು ಆಶೀರ್ವದಿ ಸಿದನು. ಅದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಕುಮಾರರು ಹುಟ್ಟಿದರು; ಅವರು ಪರಾಕ್ರಮಶಾಲಿಗಳಾಗಿದ್ದರು. ಶೆಮಾಯನ ಕುಮಾರರು ಯಾರಂದರೆ--ಒತ್ನೀಯು, ರೆಫಾಯೇಲನು, ಒಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು. ಇವರೆಲ್ಲರು ಒಬೇದೆದೋಮನ ಕುಮಾ ರರು; ಇವರೂ ತಮ್ಮ ಕುಮಾರರೂ ತಮ್ಮ ಸಹೋ ದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೇದೆ ದೋಮನವರು ಅರವತ್ತೆರಡು ಮಂದಿಯಾಗಿದ್ದರು. ಮೆಷೆಲೆಮ್ಯನಿಗೂ ಬಲವುಳ್ಳ ಕುಮಾರರೂ ಸಹೋ ದರರೂ ಹದಿನೆಂಟು ಮಂದಿಯಾಗಿದ್ದರು. ಇದಲ್ಲದೆ ಮೆರಾರಿಯ ಮಕ್ಕಳಲ್ಲಿರುವ ಹೋಸನಿಗೆ ಮಕ್ಕಳಿದ್ದರು; ಮುಖ್ಯನಾದವನು ಶಿಮ್ರಿಯು; (ಅವನು ಚೊಚ್ಚಲ ಮಗನಲ್ಲ) ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು; ಎರಡನೆಯವನು ಹಿಲ್ಕೀಯನು, ಮೂರನೆಯವನು ಟೆಬಲ್ಯನು, ನಾಲ್ಕನೆ ಯವನು ಜೆಕರ್ಯನು; ಹೋಸನ ಸಮಸ್ತ ಕುಮಾರರೂ ಹದಿಮೂರು ಮಂದಿಯಾಗಿದ್ದರು. ಇದರಲ್ಲಿ ದ್ವಾರಪಾಲಕರ ವರ್ಗಗಳು ಕರ್ತನ ಮನೆಯಲ್ಲಿ ಸೇವಿಸುವದಕ್ಕೆ ವರ್ಗವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲ್ಪಟ್ಟಿದ್ದವು. ಅವರು ಕಿರಿ ಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಲು ಬಾಗಲುಗಳಿಗೂ ಚೀಟುಗಳನ್ನು ಹಾಕಿದರು. ಮೂಡಣ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗನೂ ಬುದ್ಧಿಯುಳ್ಳ ಆಲೋಚನೆ ಯುಳ್ಳವನಾಗಿರುವ ಜೆಕರ್ಯನಿಗೋಸ್ಕರ ಚೀಟುಗ ಳನ್ನು ಹಾಕಿದರು; ಅವನ ಚೀಟು ಉತ್ತರ ಭಾಗಕ್ಕೆ ಬಿತ್ತು. ಒಬೇದೆದೋಮನಿಗೆ ದಕ್ಷಿಣ ಭಾಗಕ್ಕೆ ಬಿತ್ತು. ಅವನ ಕುಮಾರರಿಗೆ ಶುಪ್ಪೀಮ್ ಎಂಬ ಮನೆ ಬಂತು. ಶುಪ್ಪೀಮನಿಗೂ ಹೋಸನಿಗೂ ಪಶ್ಚಿಮದಲ್ಲಿರುವ ಶಲ್ಲೆಕೆತೆಂಬ ಬಾಗಲು ಬಂತು. ಹೋಗುವ ರಾಜ ಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು. ಮೂಡಣ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಶುಪ್ಪೀಮಿನ ಬಳಿಯಲ್ಲಿ ಇಬ್ಬರಿ ಬ್ಬರಾಗಿಯೂ ಪಶ್ಚಿಮ ಭಾಗವಾದ ಪರ್ಬರಿಗೆ ಹೋಗುವ ರಾಜ ಮಾರ್ಗದಲ್ಲಿ ನಾಲ್ಕು ಮಂದಿಯೂ ಪರ್ಬರಿನ ಬಳಿಯಲ್ಲಿ ಇಬ್ಬರು ಇದ್ದರು. ಕೋರ ಹೀಯರು ಮೆರಾರೀಯರ ಕುಮಾರರಲ್ಲಿಯೂ ವಿಭಾ ಗಿಸಿದ ದ್ವಾರಪಾಲಕರ ವರ್ಗಗಳು ಇವೇ.
- 1 Chronicles 15:18 1 ಪೂರ್ವಕಾಲವೃತ್ತಾಂತ 15:18ಅವರ ಸಂಗಡ ಎರಡನೇ ತರಗತಿಯ ತಮ್ಮ ಸಹೋದರರಾಗಿರುವ ಜೆಕರ್ಯ ನನ್ನೂ ಬೇನ್ನನ್ನೂ ಯಾಜೀಯೇಲನನ್ನೂ ಶೆವಿಾರಾ ಮೋತನನ್ನೂ ಯೆಹೀಯೇಲನನ್ನೂ ಉನ್ನಿಯನ್ನೂ ಎಲೀಯಾಬನನ್ನೂ ಬೆನಾಯನನ್ನೂ ಮಾಸೇಯನನ್ನೂ ಮತ್ತಿತ್ಯನನ್ನೂ ಎಲೀಫೆಲೇಹುವನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಒಬೇದೆದೋಮನನ್ನೂ ಯೆಗೀ ಯೇಲನನ್ನೂ ನೇಮಿಸಿದರು.
- Jeremiah 8:8 ಯೆರೆಮೀಯ 8:8ಹೀಗಿರಲು--ನಾವು ಜ್ಞಾನಿಗಳು, ಕರ್ತನ ನ್ಯಾಯ ಪ್ರಮಾಣವು ನಮ್ಮ ಸಂಗಡ ಇದೆ ಎಂದು ನೀವು ಹೇಳುವದು ಹೇಗೆ? ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ. ಶಾಸ್ತ್ರಿಗಳ ಲೇಖ ನಿಯು ವ್ಯರ್ಥವಾಗಿದೆ.
- 1 Chronicles 26:29–30 1 ಪೂರ್ವಕಾಲವೃತ್ತಾಂತ 26:29–30ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಕುಮಾರರೂ ಪಾರುಪತ್ಯಗಾರರಿಗೋಸ್ಕರವೂ ನ್ಯಾಯಾಧಿಪತಿಗಳಿ ಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ಇಡಲ್ಪಟ್ಟಿದ್ದರು. ಹೆಬ್ರೋನ್ಯರಲ್ಲಿ ಬಲವುಳ್ಳವರಾದ ಹಷಬ್ಯನೂ ಅವನ ಸಹೋದರರೂ ಕರ್ತನ ಸಮಸ್ತ ಕಾರ್ಯ ಗಳಲ್ಲಿಯೂ ಅರಸನ ಸೇವೆಯಲ್ಲಿಯೂ ಸಾವಿರದ ಏಳುನೂರು ಮಂದಿ ಪಶ್ಚಿಮವಾಗಿ ಯೊರ್ದನಿನ ಈಚೆ ಯಲ್ಲಿ ಇಸ್ರಾಯೇಲ್ಯರೊಳಗೆ ಅಧಿಪತಿಗಳಾಗಿದ್ದರು.
- 1 Chronicles 16:42 1 ಪೂರ್ವಕಾಲವೃತ್ತಾಂತ 16:42ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
- Matthew 26:3 ಮತ್ತಾಯನು 26:3ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
- 2 Chronicles 8:14 2 ಪೂರ್ವಕಾಲವೃತ್ತಾಂತ 8:14ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ ಅವರ ಸೇವೆಗೆ ಯಾಜಕರ ಸರದಿ ಗಳನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ ಯಾಜಕರ ಮುಂದೆ ಸ್ತುತಿಸುವದಕ್ಕೂ ಸೇವೆಮಾಡು ವದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ ಸೇವೆಯ ಬಾಗಲಲ್ಲಿ ತಮ್ಮ ಸರದಿಗಳಾಗಿ ದ್ವಾರಪಾಲಕರನ್ನೂ ನೇಮಿಸಿದನು. ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.