2 Chronicles · chapter 34 · verse 29
2 Chronicles 34:29 in Kannada
ಆಗ ಅರಸನು ಕರೇ ಕಳುಹಿಸಿ ಯೆಹೂದದ ಯೆರೂಸಲೇಮಿನ ಹಿರಿಯರೆಲ್ಲರನ್ನು ತನ್ನ ಬಳಿಯಲ್ಲಿ ಕೂಡಿಸಿದನು.
Aaga arasanu kare kaluhisi yehoodada yeroosalemina hiriyarellarannu tanna baliyalli koodisidanu.
2 Chronicles 34:29 in English
- King James Version (KJV)
- Then the king sent and gathered together all the elders of Judah and Jerusalem.
- World English Bible (WEB)
- Then the king sent and gathered together all the elders of Judah and Jerusalem.
- American Standard Version (ASV)
- Then the king sent and gathered together all the elders of Judah and Jerusalem.
- Bible in Basic English (BBE)
- Then the king sent and got together all the responsible men of Judah and of Jerusalem.
- Darby Translation (DBY)
- And the king sent and gathered all the elders of Judah and of Jerusalem.
- Webster's Bible (WBS)
- Then the king sent and convened all the elders of Judah and Jerusalem.
- Young's Literal Translation (YLT)
- And the king sendeth and gathereth all the elders of Judah and Jerusalem,
Read in context
- 27ನೀನು ಈ ಸ್ಥಳಕ್ಕೆ ವಿರೋಧ ವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ಆತನ ಮುಂದೆ ನಿನ್ನನ್ನು ತಗ್ಗಿಸಿಕೊಂಡಿ. ನಿನ್ನನ್ನು ನನ್ನ ಮುಂದೆ ತಗ್ಗಿಸಿ ಕೊಂಡು ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದರಿಂದ ನಾನು ಅವನ ಮೊರೆಯನ್ನು ಕೇಳಿದೆನೆಂದು ಕರ್ತನು ಹೇಳುತ್ತಾನೆ.
- 28ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ಸಮಾಧಾನದಿಂದ ನಿನ್ನ ಸಮಾ ಧಿಗೆ ಸೇರಿಸಲ್ಪಡುವಿ. ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ನೋಡುವದಿಲ್ಲ ಎಂದು ಕರ್ತನು ಹೇಳುತ್ತಾನೆ ಎಂದು ಹೇಳಿದಳು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ಹೇಳಿದರು.
- 29ಆಗ ಅರಸನು ಕರೇ ಕಳುಹಿಸಿ ಯೆಹೂದದ ಯೆರೂಸಲೇಮಿನ ಹಿರಿಯರೆಲ್ಲರನ್ನು ತನ್ನ ಬಳಿಯಲ್ಲಿ ಕೂಡಿಸಿದನು.
- 30ಆಗ ಅರಸನೂ ಯೆಹೂದದ ಸಮಸ್ತ ಮನುಷ್ಯರೂ ಯೆರೂಸಲೇಮಿನ ನಿವಾಸಿಗಳೂ ಯಾಜ ಕರೂ ಲೇವಿಯರೂ ಹಿರಿಕಿರಿಯರಾದ ಸಮಸ್ತ ಜನರೂ ಕರ್ತನ ಆಲಯಕ್ಕೆ ಹೋದರು. ಅವನು ಕರ್ತನ ಆಲಯದಲ್ಲಿ ಕಂಡುಕೊಂಡ ಒಡಂಬಡಿಕೆಯ ಪುಸ್ತಕದ ಮಾತುಗಳನ್ನೆಲ್ಲಾ ಅವರು ಕೇಳುವ ಹಾಗೆ ಓದಿದನು.
- 31ಅರಸನು ತನ್ನ ಸ್ಥಳದಲ್ಲಿ ನಿಂತುಕೊಂಡು ಕರ್ತನನ್ನು ಹಿಂಬಾಲಿಸುವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನೂ ತನ್ನ ಪೂರ್ಣಹೃದಯದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳ ಹಾಗೆ ಮಾಡುವದಕ್ಕೂ ಕರ್ತನ ಮುಂದೆ ಒಡಂಬಡಿಕೆ ಮಾಡಿದನು.
Cross references
- 2 Kings 23:1–3 2 ಅರಸುಗಳು 23:1–3ಅರಸನು ಹೇಳಿಕಳುಹಿಸಿದ್ದರಿಂದ ಯೆಹೂದದ, ಯೆರೂಸಲೇಮಿನ, ಹಿರಿಯರೆಲ್ಲ ರನ್ನು ಅವನ ಬಳಿಗೆ ಕೂಡಿಸಿದರು. ಆಗ ಅರಸನೂ ಅವನ ಸಂಗಡ ಯೆಹೂದದ ಜನರೆಲ್ಲರೂ ಯೆರೂ ಸಲೇಮಿನ ನಿವಾಸಿಗಳೆಲ್ಲರೂ ಯಾಜಕರೂ ಪ್ರವಾದಿ ಗಳೂ ಹಿರಿಕಿರಿಯರಾದ ಎಲ್ಲಾ ಜನರೂ ಕರ್ತನ ಆಲಯಕ್ಕೆ ಹೋದರು. ಅವರು ಕೇಳುವ ಹಾಗೆ ಕರ್ತನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಪುಸ್ತಕದ ಮಾತುಗಳನೆಲ್ಲಾ ಅವನು ಓದಿದನು. ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.
- 1 Chronicles 29:2–9 1 ಪೂರ್ವಕಾಲವೃತ್ತಾಂತ 29:2–9ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ ಬಂಗಾರದ ಕೆಲಸ ಕ್ಕೋಸ್ಕರ ಬಂಗಾರವನ್ನೂ ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ ತಾಮ್ರದ ಕೆಲಸಕ್ಕೋಸ್ಕರ ತಾಮ್ರವನ್ನೂ ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ ಮರದ ಕೆಲಸ ಕ್ಕೋಸ್ಕರ ಮರವನ್ನೂ ನೆಡುವ ನಿಮಿತ್ತ ಗೋಮೇಧಿಕ ಕಲ್ಲುಗಳನ್ನೂ ಕಾಡಿಗೆ ಬಣ್ಣವಾದಂಥ ಚಿತ್ರವಾದಂಥ ಕಲ್ಲುಗಳನ್ನೂ ಸಕಲ ಅಮೂಲ್ಯವಾದ ಕಲ್ಲುಗಳನ್ನೂ ಅಮೃತ ಶಿಲೆಗಳನ್ನೂ ಬಹಳವಾಗಿ ಸಿದ್ಧಮಾಡಿದ್ದೇನೆ. ಇದಲ್ಲದೆ ನನಗೆ ನನ್ನ ದೇವರ ಮನೆಯ ಮೇಲೆ ಪ್ರೀತಿ ಇರುವದರಿಂದ ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು ನನ್ನ ಸ್ವಸ್ಥಿತಿಯಿಂದ ಬಂಗಾರವನ್ನೂ ಬೆಳ್ಳಿಯನ್ನೂ ನನ್ನ ದೇವರ ಮನೆಗೆ ಕೊಟ್ಟಿದ್ದೇನೆ. ಮನೆಗಳ ಗೋಡೆಗಳನ್ನು ಹೊದಗಿಸು ವದಕ್ಕೆ ಒಫೀರ್ ಬಂಗಾರದಲ್ಲಿ ಮೂರು ಸಾವಿರ ಬಂಗಾರದ ತಲಾಂತುಗಳನ್ನೂ ಏಳು ಸಾವಿರ ಚೊಕ್ಕ ಬೆಳ್ಳಿಯ ತಲಾಂತುಗಳನ್ನೂ ಬಂಗಾರವನ್ನು ಬಂಗಾ ರದ ಕೆಲಸಕ್ಕೂ ಬೆಳ್ಳಿಯನ್ನು ಬೆಳ್ಳಿಯ ಕೆಲಸಕ್ಕೂ ಕೈ ಕೆಲಸದವರಿಂದ ಮಾಡುವ ಎಲ್ಲಾ ಕೆಲಸಕ್ಕೂ ಕೊಟ್ಟಿ ದ್ದೇನೆ. ಇದಲ್ಲದೆ ಇಂದು ತನ್ನ ಸೇವೆಯನ್ನು ಕರ್ತನಿಗೆ ಒಪ್ಪಿಸುವವನು ಯಾರು ಅಂದನು. ಆಗ ಪಿತೃಗಳ ಪ್ರಧಾನರೂ ಇಸ್ರಾಯೇಲ್ ಗೋತ್ರಗಳ ಪ್ರಧಾನರೂ ಸಹಸ್ರಗಳ ಶತಗಳ ಅಧಿಪತಿಗಳೂ ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು ಕರ್ತನ ಮನೆಯ ಸೇವೆಗೋಸ್ಕರ ಬಂಗಾರ ದಲ್ಲಿ ಐದು ಸಾವಿರ ತಲಾಂತುಗಳನ್ನೂ ಬೆಳ್ಳಿಯಲ್ಲಿ ಹತ್ತು ಸಾವಿರ ತಲಾಂತುಗಳನ್ನೂ ತಾಮ್ರದಲ್ಲಿ ಹದಿ ನೆಂಟು ಸಾವಿರ ತಲಾಂತುಗಳನ್ನೂ ಕಬ್ಬಿಣದಲ್ಲಿ ಲಕ್ಷ ತಲಾಂತುಗಳನ್ನೂ ಕೊಟ್ಟರು. ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವು ಗಳನ್ನು ಕರ್ತನ ಮನೆಯ ಬೊಕ್ಕಸಕ್ಕೆ ಕೊಟ್ಟರು. ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ ಜನರು ಸಂತೋಷಪಟ್ಟರು. ಅವರು ಪೂರ್ಣ ಮನಸ್ಸಿನಿಂದ ಮನಃಪೂರ್ವಕವಾಗಿ ಕರ್ತನಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷದಿಂದ ಸಂತೋಷಪಟ್ಟನು.
- 2 Chronicles 30:2 2 ಪೂರ್ವಕಾಲವೃತ್ತಾಂತ 30:2ಯೆರೂಸಲೇಮಿ ನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೇ ತಿಂಗಳಲ್ಲಿ ಪಸ್ಕವನ್ನು ಆಚರಿ ಸಲು ಯೋಚಿಸಿಕೊಂಡರು.
- 1 Samuel 12:23 1 ಸಮುವೇಲನು 12:23ಉತ್ತಮವಾದ ಸರಿಯಾದ ಮಾರ್ಗವನ್ನು ನಿಮಗೆ ಬೋಧಿಸುವೆನು.
- Mark 14:8 ಮಾರ್ಕನು 14:8ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ; ನನ್ನ ಶರೀರವನ್ನು ಹೂಣಿಡುವದಕ್ಕೆ ಅದನ್ನು ಅಭಿಷೇಕಿಸುವದಕ್ಕಾಗಿ ಈಕೆಯು ಮುಂದಾಗಿ ಮಾಡಿದ್ದಾಳೆ.