2 Chronicles · chapter 6 · verse 25
2 Chronicles 6:25 in Kannada
ಪ್ರಾರ್ಥಿಸಿ ವಿಜ್ಞಾಪನೆ ಮಾಡಿದರೆ ನೀನು ಆಕಾಶದಿಂದ ಕೇಳಿ ನಿನ್ನ ಜನರಾದ ಇಸ್ರಾಯೇಲಿನ ಪಾಪವನ್ನು ಮನ್ನಿಸಿ ನೀನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶಕ್ಕೆ ಅವರನ್ನು ತಿರಿಗಿ ಬರಮಾಡು.
Praarthisi vijnyaapane maadidare neenu aakaashadinda keli ninna janaraada israayelina paapavannu mannisi neenu avarigoo avara tandegaligoo kotta deshakke avarannu tirigi baramaadu.
2 Chronicles 6:25 in English
- King James Version (KJV)
- Then hear thou from the heavens, and forgive the sin of thy people Israel, and bring them again unto the land which thou gavest to them and to their fathers.
- World English Bible (WEB)
- then hear from heaven, and forgive the sin of your people Israel, and bring them again to the land which you gave to them and to their fathers.
- American Standard Version (ASV)
- then hear thou from heaven, and forgive the sin of thy people Israel, and bring them again unto the land which thou gavest to them and to their fathers.
- Bible in Basic English (BBE)
- Then give ear from heaven, and let the sin of your people Israel have forgiveness, and take them back again to the land which you gave to them and to their fathers.
- Darby Translation (DBY)
- then hear thou from the heavens, and forgive the sin of thy people Israel, and bring them again unto the land that thou gavest to them and to their fathers.
- Webster's Bible (WBS)
- Then hear thou from the heavens, and forgive the sin of thy people Israel, and bring them again to the land which thou gavest to them and to their fathers.
- Young's Literal Translation (YLT)
- then Thou dost hear from the heavens, and hast forgiven the sin of Thy people Israel, and caused them to turn back unto the ground that Thou hast given to them, and to their fathers.
Read in context
- 23ಈ ಆಲಯದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆ ಬಂದರೆ ನೀನೇ ದುಷ್ಟನ ಮಾರ್ಗವನ್ನು ಅವನ ತಲೆಯ ಮೇಲೆ ಬರ ಮಾಡಿ ಅವನಿಗೆ ಬದಲು ಕೊಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗಿ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ನೀನು ಆಕಾಶದಿಂದ ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
- 24ನಿನ್ನ ಜನರಾದ ಇಸ್ರಾಯೇಲ್ಯರು ನಿನಗೆ ವಿರೋ ಧವಾಗಿ ಪಾಪಮಾಡಿದ್ದರಿಂದ ತಮ್ಮ ಶತ್ರುವಿನ ಮುಂದೆ ಸೋತು ಹೋದಾಗ ಅವರು ತಿರುಗಿ ಈ ಆಲಯದಲ್ಲಿ ನಿನ್ನ ಮುಂದೆ ನಿನ್ನ ಹೆಸರನ್ನು ಕೊಂಡಾಡಿ
- 25ಪ್ರಾರ್ಥಿಸಿ ವಿಜ್ಞಾಪನೆ ಮಾಡಿದರೆ ನೀನು ಆಕಾಶದಿಂದ ಕೇಳಿ ನಿನ್ನ ಜನರಾದ ಇಸ್ರಾಯೇಲಿನ ಪಾಪವನ್ನು ಮನ್ನಿಸಿ ನೀನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶಕ್ಕೆ ಅವರನ್ನು ತಿರಿಗಿ ಬರಮಾಡು.
- 26ಅವರು ನಿನಗೆ ವಿರೋಧವಾಗಿ ಪಾಪಮಾಡಿ ದ್ದರಿಂದ ಆಕಾಶವು ಮುಚ್ಟಲ್ಪಟ್ಟು ಮಳೆ ಇಲ್ಲದಿರು ವಾಗ ನೀನು ಅವರನ್ನು ಶಿಕ್ಷಿಸಿದ್ದರಿಂದ ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸಿ ನಿನ್ನ ಹೆಸರನ್ನು ಕೊಂಡಾಡಿ ತಮ್ಮ ಪಾಪವನ್ನು ಬಿಟ್ಟು ತಿರುಗಿಕೊಂಡರೆ
- 27ನೀನು ಆಕಾಶದಿಂದ ಕೇಳಿ ನಿನ್ನ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ ಅವರು ನಡೆಯಬೇಕಾದ ಒಳ್ಳೇ ಮಾರ್ಗವನ್ನು ಕಲಿಸಿ ಬಾಧ್ಯೆತೆಯಾಗಿ ನಿನ್ನ ಜನರಿಗೆ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡು.
Cross references
- Jeremiah 33:6–13 ಯೆರೆಮೀಯ 33:6–13ಇಗೋ, ನಾನು ಅದಕ್ಕೆ ಕ್ಷೇಮವನ್ನೂ ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಮಾಡಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು. ಯೆಹೂದದ ಸೆರೆಯನ್ನೂ ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ ಅವರನ್ನು ಮುಂಚಿನ ಹಾಗೆ ಕಟ್ಟುವೆನು. ಅವರು ಯಾವದರಿಂದ ನನಗೆ ವಿರೋಧವಾಗಿ ಪಾಪಮಾಡಿದರೋ ಆ ಅಕ್ರಮ ದಿಂದೆಲ್ಲಾ ಅವರನ್ನು ಶುದ್ಧ ಮಾಡುವೆನು; ಅವರು ಎಂಥವುಗಳಿಂದ ನನಗೆ ವಿರೋಧವಾಗಿ ಪಾಪಮಾಡಿ ನನ್ನ ವಿಷಯದಲ್ಲಿ ದ್ರೋಹಿಗಳಾಗಿದ್ದರೋ ಆ ಅಕ್ರಮ ಗಳನ್ನೆಲ್ಲಾ ಮನ್ನಿಸುವೆನು. ಅದು ನನಗೆ ಆನಂದದ ಹೆಸರೂ ನಾನು ಅವರಿಗೆ ಒಳ್ಳೇದನ್ನೆಲ್ಲಾ ಮಾಡುವದನ್ನು ಕೇಳುವ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ಮುಂದೆ ಸ್ತೋತ್ರವೂ ಮಹಿಮೆಯೂ ಆಗುವದು; ನಾನು ಅದಕ್ಕೆ ಉಂಟು ಮಾಡುವ ಮೇಲಿಗಾಗಿಯೂ ಎಲ್ಲಾ ಅಭಿವೃದ್ಧಿಗಾಗಿಯೂ ಅವರು ಹೆದರಿ ನಡುಗುವರು. ಕರ್ತನು ಹೇಳುವದೇನಂದರೆ-- ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತೆಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂ ದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿ ಗಳಲ್ಲಿಯೂ ಇನ್ನು ಮೇಲೆ ಆನಂದದ ಸ್ವರವೂ ಸಂತೋಷದ ಸ್ವರವೂ ಮದಲಿಂಗನ ಸ್ವರವೂ ಮದಲ ಗಿತ್ತಿಯ ಸ್ವರವೂ--ಸೈನ್ಯಗಳ ಕರ್ತನನ್ನು ಕೊಂಡಾಡಿರಿ; ಕರ್ತನು ಒಳ್ಳೆಯವನೇ, ಆತನ ಕೃಪೆ ನಿರಂತರವೇ ಎಂದು ಹೇಳಿ, ಸ್ತೋತ್ರದ ಬಲಿಯನ್ನು ಕರ್ತನ ಆಲ ಯಕ್ಕೆ ತರುವವರ ಸ್ವರವೂ ಕೇಳಲ್ಪಡುವದು; ನಾನು ಮುಂಚಿನ ಹಾಗೆ ದೇಶದ ಸೆರೆಯನ್ನು ತಿರುಗಿಸುತ್ತೇ ನೆಂದು ಕರ್ತನು ಹೇಳುತ್ತಾನೆ. ಸೈನ್ಯಗಳ ಕರ್ತನು ಹೇಳುವದೇನಂದರೆ--ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಇನ್ನು ಮೇಲೆ ತಮ್ಮ ಮಂದೆಗಳನ್ನು ಮಲಗಿಸುವ ಕುರುಬರ ನಿವಾಸಗಳು ಇರುವವು. ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳ ಲ್ಲಿಯೂ ದಕ್ಷಿಣದ ಪಟ್ಟಣಗಳಲ್ಲಿಯೂ ಬೆನ್ಯಾವಿಾನನ ದೇಶದಲ್ಲಿಯೂ ಯೆರೂಸಲೇಮಿನ ಪ್ರದೇಶಗಳ ಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಗಳು ಎಣಿಸುವವನ ಕೈಕೆಳಗೆ ಹಾದು ಹೋಗುವವೆಂದು ಕರ್ತನು ಹೇಳುತ್ತಾನೆ.
- Genesis 13:15 ಆದಿಕಾಂಡ 13:15ನೀನು ನೋಡುವ ದೇಶ ವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
- Exodus 6:8 ವಿಮೋಚನಕಾಂಡ 6:8ನಾನು ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಕೊಡುವೆನೆಂದು ನನ್ನ ಕೈಯ ನ್ನೆತ್ತಿ ಪ್ರಮಾಣಮಾಡಿದ ದೇಶದಲ್ಲಿ ನಿಮ್ಮನ್ನು ಬರ ಮಾಡಿ ಅದನ್ನು ನಿಮಗೆ ಸ್ವಾಸ್ಥ್ಯವಾಗಿ ಕೊಡುವೆನೆಂದು ಹೇಳಿದ ಕರ್ತನು ನಾನೇ ಎಂದು ಹೇಳು ಅಂದನು.
- Psalm 106:40–47 ಕೀರ್ತನೆಗಳು 106:40–47ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು. ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು. ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು. ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು. ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು. ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
- Ezra 1:1–6 ಎಜ್ರನು 1:1–6ಯೆರೆವಿಾಯನ ಮುಖಾಂತರ ಕರ್ತನು ಹೇಳಿದ ವಾಕ್ಯವು ಈಡೇರುವ ಹಾಗೆ ಪಾರಸಿಯ ಅರಸನಾದ ಕೋರೆಷನ ಮೊದಲನೇ ವರುಷದಲ್ಲಿ ಕರ್ತನು ಪಾರಸಿಯ ಅರಸನಾದ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇನಂದರೆ-- ಪಾರಸಿಯ ಅರಸನಾದ ಕೋರೆಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾಗಿರುವ ಕರ್ತನು ಭೂಮಿಯ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದಲ್ಲಿರುವ ಯೆರೂಸಲೇಮಿನಲ್ಲಿ ತನಗೆ ಮನೆಯನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮೊಳಗೆ ಯಾರಿದ್ದೀರಿ? ಅವನ ಸಂಗಡ ಅವನ ದೇವರು ಇರಲಿ. ಅವನು ಯೆಹೂದದಲ್ಲಿ ರುವ ಯೆರೂಸಲೇಮಿಗೆ ಹೋಗಲಿ. ಯೆರೂಸಲೇಮಿನಲ್ಲಿರುವ ಇಸ್ರಾಯೇಲಿನ ದೇವರಾದ ಕರ್ತನ ಆಲಯವನ್ನು ಕಟ್ಟಲಿ (ಆತನೇ ದೇವರು). ಇದಲ್ಲದೆ ಯಾವ ಸ್ಥಳದಲ್ಲಾದರೂ ಯಾವನಾದರೂ ಪರದೇಶಸ್ಥ ನಾಗಿ ಉಳಿದಿದ್ದರೆ ಅವನ ಸ್ಥಳದ ಮನುಷ್ಯರು ಯೆರೂ ಸಲೇಮಿನಲ್ಲಿರುವ ದೇವರ ಆಲಯಕ್ಕೆ ಕೊಡುವ ಉಚಿತವಾದ ಕಾಣಿಕೆ ಅಲ್ಲದೆ ಅವನಿಗೆ ಬೆಳ್ಳಿಯಿಂದ ಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗ ಳಿಂದಲೂ ಸಹಾಯಮಾಡಲಿ ಅಂದನು. ಆಗ ಯೆಹೂದ, ಬೆನ್ಯಾವಿಾನ್ ತಂದೆಗಳ ಮುಖ್ಯ ಸ್ಥರೂ ಯಾಜಕರೂ ಲೇವಿಯರೂ ಯೆರೂಸಲೇಮಿನ ಲ್ಲಿರುವ ಕರ್ತನ ಆಲಯವನ್ನು ಕಟ್ಟುವದಕ್ಕೆ ಹೋಗಲು ಕರ್ತನಿಂದ ಪ್ರೇರೇಪಿಸಲ್ಪಟ್ಟವರೆಲ್ಲರೂ ಎದ್ದರು. ಅವರ ಸುತ್ತಲಿರುವವರೆಲ್ಲರೂ ಮನಃ ಪೂರ್ವಕವಾದ ಎಲ್ಲಾ ಕಾಣಿಕೆಗಳ ಹೊರತಾಗಿ ಬೆಳ್ಳಿಯ ಸಾಮಾನು ಗಳಿಂದಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗಳಿಂದಲೂ ಬೆಲೆಯುಳ್ಳವುಗಳಿಂದಲೂ ಅವರಿಗೆ ಸಹಾಯ ಮಾಡಿದರು.
- Joshua 21:43 ಯೆಹೋಶುವ 21:43ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು.