2 Corinthians · chapter 11 · verse 18
2 Corinthians 11:18 in Kannada
ಅನೇಕರು ಶಾರೀರಿಕ ರೀತಿಯಲ್ಲಿ ಹೊಗಳಿಕೊಳ್ಳು ವದರಿಂದ ನಾನೂ ಹೊಗಳಿಕೊಳ್ಳುತ್ತೇನೆ.
Anekaru shaareerika reetiyalli hogalikollu vadarinda naanoo hogalikolluttene.
2 Corinthians 11:18 in English
- King James Version (KJV)
- Seeing that many glory after the flesh, I will glory also.
- World English Bible (WEB)
- Seeing that many boast after the flesh, I will also boast.
- American Standard Version (ASV)
- Seeing that many glory after the flesh, I will glory also.
- Bible in Basic English (BBE)
- Seeing that there are those who take credit to themselves after the flesh, I will do the same.
- Darby Translation (DBY)
- Since many boast according to flesh, I also will boast.
- Webster's Bible (WBS)
- Seeing that many glory after the flesh, I will glory also.
- Young's Literal Translation (YLT)
- since many boast according to the flesh, I also will boast:
Read in context
- 16ನನ್ನನ್ನು ಬುದ್ಧಿಹೀನನೆಂದು ಯಾರೂ ನೆನಸಬಾರ ದೆಂದು ತಿರಿಗಿ ನಾನು ಹೇಳುತ್ತೇನೆ ಹಾಗೆ ನೆನಸಿದರೂ ನನ್ನನ್ನು ಬುದ್ಧಿಹೀನನಾಗಿಯಾದರೂ ಸೇರಿಸಿಕೊಳ್ಳಿರಿ; ಯಾಕಂದರೆ ನಾನು ಸಹ ಅಲ್ಪ ಸ್ವಲ್ಪ ಹೊಗಳಿಕೊಳ್ಳ ಬೇಕೆಂದಿದ್ದೇನೆ.
- 17ನಾನು ಈಗ ಆಡುವ ಮಾತುಗಳನ್ನು ಕರ್ತನ ಮಾತಿನ ಪ್ರಕಾರ ಹೇಳದೆ ಭರವಸದಿಂದ ಹೊಗಳಿಕೊಳ್ಳುವ ಬುದ್ಧಿ ಹೀನನಂತೆ ಆಡುತ್ತೇನೆ.
- 18ಅನೇಕರು ಶಾರೀರಿಕ ರೀತಿಯಲ್ಲಿ ಹೊಗಳಿಕೊಳ್ಳು ವದರಿಂದ ನಾನೂ ಹೊಗಳಿಕೊಳ್ಳುತ್ತೇನೆ.
- 19ನೀವು ಬುದ್ಧಿವಂತರಾಗಿದ್ದು ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೀರಲ್ಲಾ.
- 20ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ ಒಬ್ಬನು ನಿಮ್ಮನ್ನು ನುಂಗಿ ಬಿಟ್ಟರೂ ಒಬ್ಬನು ನಿಮ್ಮನ್ನು ಮರುಳುಗೊಳಿಸಿ ಹಿಡಿದರೂ ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ನೀವು ಸಹಿಸಿಕೊಳ್ಳುತ್ತೀರಲ್ಲಾ.
Cross references
- 1 Peter 1:24 1 ಪೇತ್ರನು 1:24ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯನ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವದು, ಅದರ ಹೂವು ಉದುರಿ ಹೋಗು ವದು;ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
- 2 Corinthians 12:9 2 ಕೊರಿಂಥದವರಿಗೆ 12:9ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.
- 2 Corinthians 12:11 2 ಕೊರಿಂಥದವರಿಗೆ 12:11ನಾನು ಹೀಗೆ ಹೊಗಳಿಕೊಳ್ಳುವದರಲ್ಲಿ ಬುದ್ಧಿಹೀನ ನಾದೆನು; ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದಲೇ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು; ಯಾಕಂದರೆ ನಾನು ಏನೂ ಅಲ್ಲದವನಾದರೂ ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ ಯಾವದರಲ್ಲಿಯೂ ನಾನು ಕಡಿಮೆಯಾದವನಲ್ಲ.
- 1 Corinthians 4:10 1 ಕೊರಿಂಥದವರಿಗೆ 4:10ನಾವಂತೂ ಕ್ರಿಸ್ತನ ನಿಮಿತ್ತ ಹುಚ್ಚರಾಗಿದ್ದೇವೆ. ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ; ನಾವು ಬಲಹೀನರು, ಆದರೆ ನೀವು ಬಲಿಷ್ಠರು; ನೀವು ಗೌರವವುಳ್ಳವರು, ಆದರೆ ನಾವು ಹೀನೈಸಲ್ಪಟ್ಟವರು.
- 2 Corinthians 11:21–23 2 ಕೊರಿಂಥದವರಿಗೆ 11:21–23ನಾವು ಬಲವಿಲ್ಲದವರೋ ಎಂಬಂತೆ ಅವ ಮಾನದ ವಿಷಯವಾಗಿ ನಾನು ಮಾತನಾಡುತ್ತೇನೆ. ಹೇಗಿದ್ದರೂ ಯಾವನಾದರೂ ಧೈರ್ಯವುಳ್ಳವ ನಾಗಿದ್ದರೆ (ನಾನು ಬುದ್ಧಿಹೀನನಂತೆ ಮಾತ ನಾಡುತ್ತೇನೆ) ನಾನು ಸಹ ಧೈರ್ಯವುಳ್ಳವನಾಗಿದ್ದೇನೆ. ಅವರು ಇಬ್ರಿಯರೋ? ನಾನೂ ಇಬ್ರಿಯನು; ಅವರು ಇಸ್ರಾಯೇಲ್ಯರೊ? ನಾನೂ ಇಸ್ರಾಯೇ ಲ್ಯನು; ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು; ಅವರು ಕ್ರಿಸ್ತನ ಸೇವಕರೋ? (ನಾನು ಬುದ್ಧಿಹೀನನಂತೆ ಮಾತನಾಡು ತ್ತೇನೆ) ಅವರಿಗಿಂತ ನಾನು ಹೆಚ್ಚಾಗಿ ಸೇವೆ ಮಾಡುವವ ನಾಗಿದ್ದೇನೆ; ಹೆಚ್ಚಾಗಿ ಪ್ರಯಾಸಪಟ್ಟೆನು. ಮಿತಿವಿಾರಿ ಪೆಟ್ಟುಗಳನ್ನು ತಿಂದೆನು; ಹೆಚ್ಚಾಗಿ ಸೆರೆಮನೆಗಳಲ್ಲಿ ಬಿದ್ದೆನು; ಅನೇಕ ಸಾರಿ ಮರಣಗಳಲ್ಲಿ ಸಿಕ್ಕಿಕೊಂಡೆನು.
- 2 Corinthians 11:12 2 ಕೊರಿಂಥದವರಿಗೆ 11:12ಆದರೆ ನನ್ನನ್ನು ನಿಂದಿಸುವದಕ್ಕೆ ಆಸ್ಪದವನ್ನು ಹುಡುಕುವವರಿಗೆ ಯಾವ ಎಡೆಯೂ ಸಿಕ್ಕದಂತೆ ನಾನು ಮಾಡುವದನ್ನು ಇನ್ನು ಮುಂದೆಯೂ ಮಾಡುವೆನು; ಅವರು ಯಾವದರಲ್ಲಿ ಹೊಗಳು ತ್ತಾರೋ ಅದರಲ್ಲಿ ನಮ್ಮಂತೆಯೇ ಕಂಡುಬರಲಿ.
- 2 Corinthians 12:5–6 2 ಕೊರಿಂಥದವರಿಗೆ 12:5–6ಅಂಥವನನ್ನು ಕುರಿತು ಹೆಚ್ಚಳಪಡುವೆನು, ನನ್ನನ್ನು ಕುರಿತಾದರೋ ನನ್ನ ನಿರ್ಬಲಾವಸ್ಥೆಗಳಲ್ಲಿಯೇ ಹೊರತು ಬೇರೆ ಹೆಚ್ಚಳ ಪಡುವದಿಲ್ಲ. ಹೊಗಳಿಕೊಳ್ಳುವದಕ್ಕೆ ನನಗೆ ಮನಸ್ಸಿ ದ್ದರೂ ನಾನು ಬುದ್ದಿಹೀನನಾಗುವದಿಲ್ಲ. ಯಾಕಂದರೆ ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾವನೂ ನನ್ನಲ್ಲಿ ಕಾಣುವದಕ್ಕಿಂತಲೂ ನನ್ನಿಂದ ಕೇಳುವದ ಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕುರಿತು ಎಣಿಸದಂತೆ ನಾನು ಮೌನವಾಗಿರುವೆನು;
- 2 Corinthians 10:12–18 2 ಕೊರಿಂಥದವರಿಗೆ 10:12–18ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವದಕ್ಕಾಗಲಿ ಅವರಿಗೆ ಹೋಲಿಸಿ ಕೊಳ್ಳುವದಕ್ಕಾಗಲಿ ನಮಗೆ ಧೈರ್ಯ ಸಾಲದು; ಅವರಂತೂ ತಮ್ಮೊಳಗೆ ತಮ್ಮ ತಮ್ಮನ್ನು ಅಳತೆ ಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ. ನಾವಾದರೊ ಮೇರೆ ತಪ್ಪಿ ಹೊಗಳಿಕೊಳ್ಳದೆ ದೇವರು ನಮಗೆ ಹಂಚಿಕೊಟ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ; ಈ ಮೇರೆ ಯೊಳಗಿದ್ದು ನಿಮ್ಮ ಪರ್ಯಂತರಕ್ಕೂ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ನಿಮ್ಮ ಬಳಿಗೆ ಬಂದ ನಾವು ನಿಮ್ಮನ್ನು ತಲುಪಲಿಲ್ಲವೋ ಎಂಬಂತೆ ಮೇರೆಯನ್ನು ಅತಿಕ್ರಮಿಸಿದವರಲ್ಲ. ನಾವು ಮೇರೆತಪ್ಪಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತಕ್ಕೊಂಡು ಇವು ನಮ್ಮವು ಎಂದು ಹೊಗಳಿಕೊಳ್ಳುವವರಲ್ಲ; ಆದರೆ ನಿಮ್ಮ ನಂಬಿಕೆಯು ಹೆಚ್ಚಿದ ಹಾಗೆಲ್ಲಾ ನಿಮ್ಮ ಮೂಲಕ ನಮ್ಮ ಮೇರೆಯೊಳಗೆ ಇನ್ನೂ ಅಭಿವೃದ್ಧಿ ಹೊಂದುವೆವು; ನಿಮಗೆ ಆಚೆ ಇರುವ ಸೀಮೆಗಳಲ್ಲಿ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆ ನಮಗುಂಟು; ಆದರೆ ಮತ್ತೊಬ್ಬರ ಮೇರೆಯಲ್ಲಿ ಸಿದ್ಧವಾಗಿರುವವುಗಳು ನಮಗೆ ಸಿಕ್ಕಿದವುಗಳೆಂದು ನಾವು ಹೆಚ್ಚಳಪಡುವದಿಲ್ಲ. ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು. ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
- Philippians 3:3–4 ಫಿಲಿಪ್ಪಿಯವರಿಗೆ 3:3–4ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ. ನಾನಾದರೋ ಶರೀರ ಸಂಬಂಧವಾದವು ಗಳಲ್ಲಿ ಭರವಸವಿಟ್ಟರೂ ಇಡಬಹುದು, ಬೇರೆ ಯಾವ ನಾದರೂ ಶರೀರ ಸಂಬಂಧವಾದವುಗಳಲ್ಲಿ ಭರವಸವಿಡ ಬಹುದೆಂದು ಯೋಚಿಸುವದಾದರೆ ನಾನು ಅವನಿ ಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
- Jeremiah 9:23–24 ಯೆರೆಮೀಯ 9:23–24ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ. ಆದರೆ ಹೆಚ್ಚಳ ಪಡುವವನು ಇದರಲ್ಲಿ ಹೆಚ್ಚಳಪಡಲಿ; ಯಾವದರಲ್ಲಿ ಅಂದರೆ ಕರ್ತನಾದ ನಾನು ಭೂಮಿಯಲ್ಲಿ ಕೃಪೆಯನ್ನೂ ನ್ಯಾಯವನ್ನೂ ನೀತಿಯನ್ನೂ ನಡಿಸುವವನಾಗಿದ್ದೇ ನೆಂದು ನನ್ನನ್ನು ಗ್ರಹಿಸಿ ತಿಳುಕೊಳ್ಳುವದರಲ್ಲಿಯೇ; ಇವುಗಳಲ್ಲಿ ನಾನು ಸಂತೋಷ ಪಡುತ್ತೇನೆಂದು ಕರ್ತನು ಅನ್ನುತ್ತಾನೆ.