2 Corinthians · chapter 2 · verse 1
2 Corinthians 2:1 in Kannada
ಆದರೆ ನಾನು ತಿರಿಗಿ ನಿಮ್ಮ ಬಳಿಗೆ ದುಃಖದಿಂದ ಬರುವದಿಲ್ಲವೆಂದು ನನ್ನಲ್ಲಿ ತೀರ್ಮಾನಿಸಿಕೊಂಡೆನು.
Aadare naanu tirigi nimma balige duhkhadinda baruvadillavendu nannalli teermaanisikondenu.
2 Corinthians 2:1 in English
- King James Version (KJV)
- But I determined this with myself, that I would not come again to you in heaviness.
- World English Bible (WEB)
- But I determined this for myself, that I would not come to you again in sorrow.
- American Standard Version (ASV)
- But I determined this for myself, that I would not come again to you with sorrow.
- Bible in Basic English (BBE)
- But it was my decision for myself, not to come again to you with sorrow.
- Darby Translation (DBY)
- But I have judged this with myself, not to come back to you in grief.
- Webster's Bible (WBS)
- But I determined this with myself, that I would not come again to you in heaviness.
- Young's Literal Translation (YLT)
- And I decided this to myself, not again to come in sorrow unto you,
Read in context
- 1ಆದರೆ ನಾನು ತಿರಿಗಿ ನಿಮ್ಮ ಬಳಿಗೆ ದುಃಖದಿಂದ ಬರುವದಿಲ್ಲವೆಂದು ನನ್ನಲ್ಲಿ ತೀರ್ಮಾನಿಸಿಕೊಂಡೆನು.
- 2ನಾನು ನಿಮ್ಮನ್ನು ದುಃಖ ಪಡಿಸಿದರೆ ನನ್ನನ್ನು ಆನಂದಪಡಿಸುವದಕ್ಕೆ ಯಾರಿ ದ್ದಾರೆ? ನನ್ನಿಂದ ದುಃಖ ಹೊಂದಿದವನೇ ಹೊರತು ಬೇರೆ ಯಾರೂ ಇಲ್ಲವಲ್ಲಾ.
- 3ನಾನು ಬಂದಾಗ ನನ್ನನು ಸಂತೋಷಪಡಿಸತಕ್ಕವರಿಂದ ದುಃಖ ಹೊಂದಬಾರ ದೆಂದೂ ನನ್ನ ಸಂತೋಷವು ನಿಮ್ಮೆಲ್ಲರ ಸಂತೋಷವೇ ಎಂದೂ ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸ ವಿರುವದರಿಂದ ನಾನು ನಿಮಗೆ ಇದನ್ನು ಬರೆದಿದ್ದೇನೆ.
Cross references
- 2 Corinthians 1:23 2 ಕೊರಿಂಥದವರಿಗೆ 1:23ಇದಲ್ಲದೆ ನಿಮ್ಮ ಮೇಲೆ ಕನಿಕರವಿರುವದರಿಂದ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲವೆಂಬದಕ್ಕೆ ನನ್ನ ಪ್ರಾಣದೊಂದಿಗೆ ದೇವರೇ ನನಗೆ ಸಾಕ್ಷಿ.ನಿಮ್ಮ ನಂಬಿಕೆಯ ಮೇಲೆ ನಾವು ದೊರೆತನ ಮಾಡುವದಕ್ಕಾಗಿ ಅಲ್ಲ; ಆದರೆ ನಿಮ್ಮ ಸಂತೋಷಕ್ಕೆ ಸಹಾಯಮಾಡುವವರಾಗಿದ್ದೇವೆ. ಯಾಕಂದರೆ ನೀವು ನಂಬಿಕೆಯಲ್ಲಿ ನಿಂತಿದ್ದೀರಿ.
- 2 Corinthians 13:10 2 ಕೊರಿಂಥದವರಿಗೆ 13:10ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ ಈ ಮಾತುಗಳನ್ನು ಬರೆದಿದ್ದೇನೆ; ನಿಮ್ಮನ್ನು ಕೆಡವಿ ಹಾಕುವದಕ್ಕಲ್ಲ, ಕಟ್ಟುವದಕ್ಕಾಗಿ ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವದಕ್ಕೆ ಅವಕಾಶವಿರ ಬಾರದೆಂದು ಅಪೇಕ್ಷಿಸುತ್ತೇನೆ.
- 2 Corinthians 12:20–21 2 ಕೊರಿಂಥದವರಿಗೆ 12:20–21ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ವಾಗ್ವಾದಗಳು ಹೊಟ್ಟೆಕಿಚ್ಚು ಕೋಪ ಜಗಳ ಚಾಡಿ ಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು. ಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು.
- 2 Corinthians 2:4 2 ಕೊರಿಂಥದವರಿಗೆ 2:4ನಿಮಗೆ ದುಃಖವಾಗಬೇಕಂತಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದು ಕೊಳ್ಳಬೇಕೆಂತಲೇ ನಾನು ಬಹಳ ಕಣ್ಣೀರಿನಿಂದಲೂ ಹೃದಯದ ಬಹುಸಂಕಟದಿಂದಲೂ ವ್ಯಾಕುಲ ದಿಂದಲೂ ನಿಮಗೆ ಬರೆದೆನು.
- 1 Corinthians 4:21 1 ಕೊರಿಂಥದವರಿಗೆ 4:21ನಿಮ್ಮ ಇಷ್ಟವೇನು? ನಾನು ಬೆತ್ತತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯ ಭಾವದಿಂದಲೂ ಕೂಡಿದವನಾಗಿ ಬರಲೋ?
- Acts 11:29 ಅಪೊಸ್ತಲರ ಕೃತ್ಯಗಳು 11:29ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
- 2 Corinthians 7:5–8 2 ಕೊರಿಂಥದವರಿಗೆ 7:5–8ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಏನೂ ವಿಶ್ರಾಂತಿಯಾಗಲಿಲ್ಲ; ಆದರೆ ಎಲ್ಲಾ ಕಡೆಯಲ್ಲಿಯೂ ನಮಗೆ ಕಳವಳವಿತ್ತು ಹೊರಗೆ ಕಲಹ; ಒಳಗೆ ಭಯವಿತ್ತು. ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು. ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು. ನಾನು ಪತ್ರದಿಂದ ನಿಮ್ಮನ್ನು ದುಃಖಪಡಿಸಿದಕ್ಕೆ ನನಗೆ ವ್ಯಸನವಾದರೂ ನಾನು ಪಶ್ಚಾತ್ತಾಪಪಡು ವದಿಲ್ಲ, ಯಾಕಂದರೆ ಆ ಪತ್ರಿಕೆಯು ನಿಮ್ಮನ್ನು ದುಃಖ ಪಡಿಸಿದಾಗ್ಯೂ ಅದು ಸ್ವಲ್ಪ ಕಾಲಕ್ಕೆ ಎಂದು ನಾನು ತಿಳಿಯುತ್ತೇನೆ.
- 2 Corinthians 1:15–17 2 ಕೊರಿಂಥದವರಿಗೆ 1:15–17ಈ ಭರವಸದಿಂದ ನಿಮಗೆ ಎರಡನೆಯ ಪ್ರಯೋಜನವುಂಟಾಗುವಂತೆ ನಾನು ಮೊದಲು ನಿಮ್ಮ ಬಳಿಗೆ ಬರಬೇಕೆಂತಲೂ ತರುವಾಯ ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ತಿರಿಗಿ ಮಕೆದೋನ್ಯದಿಂದ ನಿಮ್ಮ ಬಳಿಗೆ ಬಂದು ನಿಮ್ಮಿಂದ ಯೂದಾಯಕ್ಕೆ ಸಾಗಕಳುಹಿಸಲ್ಪಡುವಂತೆಯೂ ಯೋಚಿಸಿದ್ದೆನು. ಆದದರಿಂದ ನಾನು ಹೀಗೆ ಮನಸ್ಸು ಮಾಡಿದಾಗ ಹಗುರು ಭಾವನೆಯನ್ನು ತೋರಿಸಿದೆನೋ? ಇಲ್ಲವೆ ನಾನು ಉದ್ದೇಶಿಸದವು ಗಳು ಹೌದು, ಹೌದು ಅಂದ ಮೇಲೆ ಅಲ್ಲ, ಅಲ್ಲ ಅನ್ನುವಂತೆ ಮಾನುಷ್ಯ ರೀತಿಯಲ್ಲಿ ಉದ್ದೇಶಿಸು ತ್ತೇನೋ?
- Titus 3:12 ತೀತನಿಗೆ 3:12ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡದರಿಂದ ಅರ್ತೆಮನ ನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವದಕ್ಕೆ ಪ್ರಯತ್ನ ಮಾಡು.
- 1 Corinthians 2:2 1 ಕೊರಿಂಥದವರಿಗೆ 2:2ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯ ಕೂಡದೆಂದು ನಾನು ನಿಮ್ಮಲ್ಲಿ ತಿರ್ಮಾನಿಸಿ ಕೊಂಡೆನು.
- 1 Corinthians 5:3 1 ಕೊರಿಂಥದವರಿಗೆ 5:3ನಾನಂತೂ ದೇಹದಿಂ ದೂರವಾಗಿದ್ದರೂ ಆತ್ಮದಿಂದ ಹತ್ತಿರದಲ್ಲಿದ್ದು ಇಂಥ ಕಾರ್ಯಮಾಡಿದವನನ್ನು ಕುರಿತು ನಿಜವಾಗಿ ಆಗಲೇ ಹತ್ತಿರವಿದ್ದವನಂತೆ ತೀರ್ಪುಮಾಡಿದ್ದೇನೆ.
- Acts 15:2 ಅಪೊಸ್ತಲರ ಕೃತ್ಯಗಳು 15:2ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.