2 Corinthians · chapter 5 · verse 7
2 Corinthians 5:7 in Kannada
(ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ).
(naavu noduvavaraagi nadeyade nambuvavaraagiye nadeyutteve).
2 Corinthians 5:7 in English
- King James Version (KJV)
- (For we walk by faith, not by sight:)
- World English Bible (WEB)
- for we walk by faith, not by sight.
- American Standard Version (ASV)
- (for we walk by faith, not by sight);
- Bible in Basic English (BBE)
- (For we are walking by faith, not by seeing,)
- Darby Translation (DBY)
- (for we walk by faith, not by sight;)
- Webster's Bible (WBS)
- (For we walk by faith, not by sight:)
- Young's Literal Translation (YLT)
- for through faith we walk, not through sight —
Read in context
- 5ಅದಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು ತಾನೇ ನಮಗೆ ಆತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.
- 6ಹೀಗಿರುವದರಿಂದ ಶರೀರದ ಮನೆಯಲ್ಲಿರುವ ವರೆಗೂ ನಾವು ಕರ್ತನಿಗೆ ದೂರವಾಗಿದ್ದೇವೆಂದು ಬಲ್ಲವರಾಗಿ ನಾವು ಯಾವಾಗಲೂ ಭರವಸವುಳ್ಳವ ರಾಗಿದ್ದೇವೆ;
- 7(ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ).
- 8ನಾವು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವದು ಉತ್ತಮವೆಂದು ಆಶಿಸಿ ಭರವಸವುಳ್ಳವರಾಗಿದ್ದೇವೆ.
- 9ಆದದರಿಂದ ನಾವು (ದೇಹವೆಂಬ ಮನೆಯಲ್ಲಿದ್ದರೂ ಸರಿಯೇ) ಅದನ್ನು ಬಿಟ್ಟಿ ದ್ದರೂ ಸರಿಯೇ, ಆತನನ್ನು ಮೆಚ್ಚಿಸುವವರಾಗಿರಬೇಕೆಂದು ನಾವು ಪ್ರಯಾಸ ಪಡುತ್ತೇವೆ.
Cross references
- Hebrews 11:1–27 ಇಬ್ರಿಯರಿಗೆ 11:1–27ನಂಬಿಕೆಯು ನಿರೀಕ್ಷಿಸುವವುಗಳ ನಿಜ ಲಕ್ಷಣವೂ ಕಾಣದವುಗಳ ನಿದರ್ಶನವೂ ಆಗಿದೆ. ಹಿರಿಯರು ನಂಬಿಕೆಯಿಂದಲೇ ಒಳ್ಳೇ ಸಾಕ್ಷಿ ಹೊಂದಿದರು. ನಂಬಿಕೆಯಿಂದಲೇ ಲೋಕಗಳು ದೇವರ ಮಾತಿನಿಂದ ನಿರ್ಮಿತವಾದವೆಂದು ನಾವು ತಿಳುಕೊಂಡದ್ದರಿಂದ ಕಾಣಿಸುವವುಗಳು ದೃಶ್ಯ ವಸ್ತು ಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ. ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞ ಕ್ಕಿಂತ ಅತಿ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮ ರ್ಪಿಸಿದನು. ಅದರ ಮೂಲಕ ಅವನು ನೀತಿವಂತ ನೆಂದು ಸಾಕ್ಷಿ ಹೊಂದಿದನು: ದೇವರು ಅವನ ಕಾಣಿಕೆಗಳ ವಿಷಯವಾಗಿ ಸಾಕ್ಷಿಕೊಟ್ಟನು; ಅವನು ಸತ್ತವನಾಗಿದ್ದರೂ ಅದರಿಂದ ಇನ್ನೂ ಮಾತನಾಡುತ್ತಾನೆ. ಹನೋಕನು ಮರಣವನ್ನು ಅನುಭವಿಸದೆ ಒಯ್ಯ ಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡು ಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಉಂಟು. ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ಯಾಕಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ, ತನ್ನನ್ನು ಜಾಗ್ರತೆಯಾಗಿ ಹುಡುಕು ವವನಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬು ವದು ಅವಶ್ಯ. ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು. ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು. ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು. ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು. ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು. ಆದದರಿಂದ ಮೃತಪ್ರಾಯನಾಗಿದ್ದ ಒಬ್ಬ ನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಉಸುಬಿನಂತೆ ಅಸಂಖ್ಯ ವಾಗಿಯೂ ಹುಟ್ಟಿದರು. ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು. ಇಂಥ ಮಾತುಗಳನ್ನಾಡುವವರು ತಾವು ಒಂದು ದೇಶವನ್ನು ಹುಡುಕುವವರೆಂದು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ತಾವು ಹೊರಟು ಬಂದಿದ್ದ ದೇಶದ ಮೇಲೆ ನಿಜವಾಗಿ ಮನಸ್ಸಿಟ್ಟವರಾಗಿದ್ದರೆ ತಿರಿಗಿ ಅಲ್ಲಿಗೆ ಹೋಗುವದಕ್ಕೆ ಅವರಿಗೆ ಅವಕಾಶವಿತ್ತು. ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ. ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು. ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು. ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು. ನಂಬಿಕೆಯಿಂದಲೇ ಇಸಾಕನು ಮುಂದೆ ಬರ ಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು. ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. ಯೋಸೇಫನು ಸಾಯುವಾಗ ಇಸ್ರಾಯೇಲಿನ ಮಕ್ಕಳು ಹೊರಡುವದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು. ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರು ವದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. ಮೋಶೆಯು ದೊಡ್ಡವ ನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿ ಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪ ಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವಜನರೊಂದಿಗೆ ಕಷ್ಟವನ್ನನುಭವಿಸುವದನ್ನೇ ಆರಿಸಿ ಕೊಂಡನು. ಐಗುಪ್ತದಲ್ಲಿನ ಐಶ್ವರ್ಯಗಳಿಗಿಂತಲೂ ಕ್ರಿಸ್ತನ ವಿಷಯವಾದ ನಿಂದೆಯು ಅಧಿಕ ಐಶ್ವರ್ಯ ವೆಂದೆಣಿಸಿಕೊಂಡನು; ಯಾಕಂದರೆ ಪ್ರತಿಫಲದ ಬಹು ಮಾನವನ್ನು ಅವನು ಗೌರವಿಸಿದನು. ನಂಬಿಕೆ ಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತ ದೇಶವನ್ನು ತೊರೆದುಬಿಟ್ಟನು. ಯಾಕಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.
- 2 Corinthians 4:18 2 ಕೊರಿಂಥದವರಿಗೆ 4:18ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು.
- Romans 8:24–25 ರೋಮಾಪುರದವರಿಗೆ 8:24–25ನಾವು ನಿರೀಕ್ಷೆಯಿಂದ ರಕ್ಷಣೆಯನ್ನು ಹೊಂದುವವ ರಾಗಿದ್ದೇವೆ; ಕಾಣುವಂಥ ನಿರೀಕ್ಷೆಯು ನಿರೀಕ್ಷೆಯಲ್ಲ; ಒಬ್ಬನು ಎದುರು ನೋಡುವದು ಪ್ರತ್ಯಕ್ಷವಾಗಿದ್ದರೆ ಇನ್ನು ನಿರೀಕ್ಷಿಸುವದು ಯಾಕೆ? ಕಾಣದಿರುವದನ್ನು ನಾವು ನಿರೀಕ್ಷಿಸುವದಾಗಿದ್ದರೆ ಅದಕ್ಕಾಗಿ ನಾವು ತಾಳ್ಮೆ ಯಿಂದ ಕಾದುಕೊಂಡಿರುತ್ತೇವೆ.
- 1 Peter 1:8 1 ಪೇತ್ರನು 1:8ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
- Hebrews 10:38 ಇಬ್ರಿಯರಿಗೆ 10:38ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
- Galatians 2:20 ಗಲಾತ್ಯದವರಿಗೆ 2:20ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಆದಾಗ್ಯೂ ನಾನು ಜೀವಿ ಸುತ್ತೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ದೇವಕುಮಾರನ ಮೇಲಣ ನಂಬಿಕೆ ಯಲ್ಲಿಯೇ, ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು.
- 1 Peter 5:9 1 ಪೇತ್ರನು 5:9ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರಿಗೂ ಅಂಥ ಬಾಧೆಗಳೇ ಸಂಭವಿಸುತ್ತವೆಯೆಂದು ನಿಮಗೆ ತಿಳಿದದೆಯಲ್ಲಾ.
- 1 Corinthians 13:12 1 ಕೊರಿಂಥದವರಿಗೆ 13:12ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು; ಈಗ ನಾನು ಅಪೂರ್ಣವಾಗಿ ತಿಳಿದಿದ್ದೇನೆ. ತರುವಾಯ ದೇವರು ನನ್ನನ್ನು ತಿಳಿದು ಕೊಂಡಂತೆಯೇ ನಾನೂ ತಿಳಿದುಕೊಳ್ಳುತ್ತೇನೆ.ಹೀಗೆ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಆದರೆ ಇವುಗಳಲ್ಲಿ ದೊಡ್ಡದು ಪ್ರೀತಿಯೇ.
- 2 Corinthians 1:24 2 ಕೊರಿಂಥದವರಿಗೆ 1:24ನಿಮ್ಮ ನಂಬಿಕೆಯ ಮೇಲೆ ನಾವು ದೊರೆತನ ಮಾಡುವದಕ್ಕಾಗಿ ಅಲ್ಲ; ಆದರೆ ನಿಮ್ಮ ಸಂತೋಷಕ್ಕೆ ಸಹಾಯಮಾಡುವವರಾಗಿದ್ದೇವೆ. ಯಾಕಂದರೆ ನೀವು ನಂಬಿಕೆಯಲ್ಲಿ ನಿಂತಿದ್ದೀರಿ.
- Deuteronomy 12:9 ಧರ್ಮೋಪದೇಶಕಾಂಡ 12:9ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ವಿಶ್ರಾಂತಿಗೂ ಸ್ವಾಸ್ತ್ಯಕ್ಕೂ ನೀವು ಇನ್ನೂ ಸೇರಲಿಲ್ಲ;