2 Corinthians · chapter 7 · verse 2
2 Corinthians 7:2 in Kannada
ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.
Nammannu serisikolliri; naavu yaarigoo anyaayamaadalilla. Yaarannoo kedisalilla, yaarannoo vanchisalilla.
2 Corinthians 7:2 in English
- King James Version (KJV)
- Receive us; we have wronged no man, we have corrupted no man, we have defrauded no man.
- World English Bible (WEB)
- Open your hearts to us. We wronged no one. We corrupted no one. We took advantage of no one.
- American Standard Version (ASV)
- Open your hearts to us: we wronged no man, we corrupted no man, we took advantage of no man.
- Bible in Basic English (BBE)
- Let your hearts be open to us: we have done no man wrong, no man has been damaged by us, we have made no profit out of any man,
- Darby Translation (DBY)
- Receive us: we have injured no one, we have ruined no one, we have made gain of no one.
- Webster's Bible (WBS)
- Receive us; we have wronged no man, we have corrupted no man, we have defrauded no man.
- Young's Literal Translation (YLT)
- receive us; no one did we wrong; no one did we waste; no one did we defraud;
Read in context
- 1ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.
- 2ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.
- 3ನಿಮ್ಮ ಮೇಲೆ ತಪ್ಪು ಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ; ಯಾಕಂದರೆ ನಿಮ್ಮೊಂದಿಗೆ ಸಾಯುವದಕ್ಕೂ ಬದುಕು ವದಕ್ಕೂ ನೀವು ನಮ್ಮ ಹೃದಯಗಳಲ್ಲಿದ್ದೀರೆಂದು ಮೊದಲೇ ಹೇಳಿದ್ದೇನೆ.
- 4ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.
Cross references
- Acts 20:33 ಅಪೊಸ್ತಲರ ಕೃತ್ಯಗಳು 20:33ನಾನು ಯಾರ ಬೆಳ್ಳಿಯನ್ನಾಗಲಿ ಇಲ್ಲವೆ ಭಂಗಾರವನ್ನಾಗಲಿ ಇಲ್ಲವೆ ವಸ್ತ್ರವನ್ನಾಗಲಿ ಬಯಸಲಿಲ್ಲ.
- 2 Corinthians 11:9 2 ಕೊರಿಂಥದವರಿಗೆ 11:9ನಾನು ನಿಮ್ಮಲ್ಲಿದ್ದು ಕೊರತೆಯುಳ್ಳವನಾಗಿದ್ದಾಗ ಯಾರ ಮೇಲೆಯೂ ಭಾರಹಾಕಲಿಲ್ಲ; ಮಕೆದೋನ್ಯ ದಿಂದ ಬಂದ ಸಹೋದರರು ನನಗೆ ಬೇಕಾದದ್ದೆಲ್ಲವನ್ನು ಕೊಟ್ಟರು; ನಾನು ನಿಮಗೆ ಯಾವದರಲ್ಲಿಯೂ ಭಾರವಾಗಿರಬಾರದೆಂದು ನೋಡಿಕೊಳ್ಳುತ್ತಿದ್ದೆನು, ಇನ್ನು ಮೇಲೆಯೂ ನೋಡಿಕೊಳ್ಳುವೆನು.
- 2 Corinthians 6:12–13 2 ಕೊರಿಂಥದವರಿಗೆ 6:12–13ನಿಮ್ಮ ಮೇಲಿರುವ ನಮ್ಮ ಪ್ರೀತಿಯು ಸಂಕೋಚವಾದದ್ದಲ್ಲ, ನಮ್ಮ ವಿಷಯದಲ್ಲಿ ನಿಮ್ಮ ಪ್ರೀತಿಯೇ ಸಂಕೋಚ ವಾದದ್ದು. ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ).
- Matthew 10:40 ಮತ್ತಾಯನು 10:40ನಿಮ್ಮನ್ನು ಅಂಗೀಕರಿಸಿಕೊಳ್ಳುವವನು ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ; ಮತ್ತು ನನ್ನನ್ನು ಅಂಗೀಕರಿಸಿ ಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನು ಅಂಗೀಕರಿಸಿ ಕೊಳ್ಳುತ್ತಾನೆ.
- Numbers 16:15 ಅರಣ್ಯಕಾಂಡ 16:15ಆಗ ಮೋಶೆಯು ಬಹಳ ವಾಗಿ ಕೋಪಿಸಿಕೊಂಡು ಕರ್ತನಿಗೆ--ಅವರ ಬಲಿಯನ್ನು ನೀನು ಗೌರವಿಸಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ; ಇಲ್ಲವೆ ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ ಎಂದು ಹೇಳಿದನು.
- 2 Corinthians 12:14–18 2 ಕೊರಿಂಥದವರಿಗೆ 12:14–18ಇಗೋ, ನಾನು ನಿಮ್ಮ ಬಳಿಗೆ ಬರುವದಕ್ಕೆ ಸಿದ್ಧವಾಗಿರುವದು ಇದು ಮೂರನೆಯ ಸಾರಿ; ನಾನು ನಿಮಗೆ ಭಾರವಾಗಿ ರುವದಿಲ್ಲ; ನಾನು ನಿಮ್ಮ ಸೊತ್ತನು ಆಶಿಸದೆ ನಿಮ್ಮನ್ನೇ ಆಶಿಸುತ್ತೇನೆ. ಯಾಕಂದರೆ ಮಕ್ಕಳು ತಂದೆತಾಯಿ ಗಳಿಗೋಸ್ಕರ ಆಸ್ತಿಯನ್ನು ಕೂಡಿಸಿಡುವದು ತಕ್ಕದ್ದಲ್ಲ, ತಂದೆತಾಯಿಗಳು ಮಕ ನಾನಂತೂ ನನಗಿರುವದನ್ನು ನಿಮಗೋಸ್ಕರ ಅತಿ ಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತೀರಿ. ಅದಿರಲಿ, ನಾನು ನಿಮಗೆ ಭಾರವಿಲ್ಲದ ವನಾಗಿದ್ದಾಗ್ಯೂ ಯುಕ್ತಿಯುಳ್ಳವನಾಗಿ ನಾನು ನಿಮ್ಮನ್ನು ಉಪಾಯದಿಂದ ಹಿಡಿದೆನು. ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾವನ ಮೂಲಕವಾಗಿಯಾಗಲಿ ನಿಮ್ಮಿಂದ ನಾನು ಲಾಭ ಪಡೆದುಕೊಂಡೆನೋ? ನಾನು ತೀತನನ್ನು ಅಪೇಕ್ಷಿಸಿ ಅವನ ಜೊತೆಯಲ್ಲಿ ಒಬ್ಬ ಸಹೋದರನನ್ನು ಕಳುಹಿಸಿಕೊಟ್ಟೆನು; ತೀತನು ನಿಮ್ಮಿಂದ ಏನಾದರೂ ಲಾಭವನ್ನು ಪಡೆದು ಕೊಂಡನೋ? ನಾವಿಬ್ಬರೂ ಒಂದೇ ಆತ್ಮನಿಂದ ನಡೆಯಲಿಲ್ಲವೋ? ನಾವು ಒಂದೇ ತರವಾದ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?
- Romans 16:18 ರೋಮಾಪುರದವರಿಗೆ 16:18ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
- 1 Samuel 12:3–4 1 ಸಮುವೇಲನು 12:3–4ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು. ಅವರು--ನೀನು ನಮಗೆ ವಂಚನೆ ಮಾಡಲಿಲ್ಲ, ನಮ್ಮನ್ನು ಹಿಂಸಿಸಲಿಲ್ಲ; ನೀನು ಯಾವನ ಕೈಯಿಂದ ಏನಾದರೂ ತಕ್ಕೊಳ್ಳಲಿಲ್ಲ ಅಂದರು.
- 2 Thessalonians 3:7–9 2 ಥೆಸಲೊನೀಕದವರಿಗೆ 3:7–9ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ; ನಾವು ನಿಮ್ಮಲ್ಲಿ ಅಕ್ರಮವಾಗಿ ನಡೆಯಲಿಲ್ಲ; ಇಲ್ಲವೆ ನಾವು ಸುಮ್ಮನೆ (ಹಣಕೊಡದೆ) ಯಾರ ಬಳಿಯಲ್ಲಿಯೂ ಊಟಮಾಡ ಲಿಲ್ಲ; ನಿಮ್ಮಲ್ಲಿ ಒಬ್ಬರಿಗೂ ನಾವು ಭಾರವಾಗಬಾರ ದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸ ದಿಂದಲೂ ದುಡಿದೆವು. ನಿಮ್ಮಿಂದ ಪೋಷಣೆ ಹೊಂದು ವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ. ನೀವು ನಮ್ಮನ್ನು ಅನುಸರಿಸುವದಕ್ಕಾಗಿ ನಿಮಗೆ ಮಾದರಿ ಯಾಗಿರೋಣವೆಂದೇ ಮಾಡಿದೆವು;
- 1 Thessalonians 2:10 1 ಥೆಸಲೊನೀಕದವರಿಗೆ 2:10ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ಶುದ್ಧರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬದಕ್ಕೆ ನೀವು ಸಾಕ್ಷಿಗಳು. ದೇವರೂ ಸಾಕ್ಷಿ.
- Matthew 10:14 ಮತ್ತಾಯನು 10:14ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ ನೀವು ಆ ಮನೆಯಿಂದಾಗಲೀ ಪಟ್ಟಣದಿಂದಾಗಲೀ ಹೊರಡುವಾಗ ನಿಮ್ಮ ಪಾದಗಳ ಧೂಳನ್ನು ಝಾಡಿಸಿ ಬಿಡಿರಿ.
- 1 Thessalonians 2:3–6 1 ಥೆಸಲೊನೀಕದವರಿಗೆ 2:3–6ಯಾಕಂದರೆ ನಮ್ಮ ಬೋಧನೆಯು ಮೋಸ ವಲ್ಲ, ಅಶುದ್ಧವಲ್ಲ, ವಂಚನೆಯಲ್ಲ; ದೇವರು ನಮ್ಮನ್ನು ನಂಬಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿದನಲ್ಲಾ. ಆದದರಿಂದ ನಾವು ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ. ನಿಮಗೆ ತಿಳಿದಿ ರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಯನ್ನು ಮಾಡುವವರಾಗಿ ಕಾಣಬಂದಿಲ್ಲ. ದ್ರವ್ಯಾಶೆಯನ್ನು ಮರೆಮಾಡುವದಕ್ಕಾಗಿ ವೇಷವನ್ನು ಹಾಕಿಕೊಂಡವ ರಾಗಿಲ್ಲ; ಇದಕ್ಕೆ ದೇವರೇ ಸಾಕ್ಷಿ. ಇದಲ್ಲದೆ ನಾವು ಕ್ರಿಸ್ತನ ಅಪೊಸ್ತಲರಾಗಿರುವದರಿಂದ ನಮ್ಮನ್ನು ಸಂರಕ್ಷಿ ಸುವ ಭಾರವನ್ನು ನಿಮ್ಮ ಮೇಲೆ ಹಾಕಬಹುದಾಗಿದ್ದರೂ ಮನುಷ್ಯರಿಂದ ಬರುವ ಮಾನವನ್ನು ನಿಮ್ಮಿಂದಾಗಲೀ ಇತರರಿಂದಾಗಲೀ ಹೊಂದಲಪೇ ಕ್ಷಿಸುವವರಾಗಿಲ್ಲ.