2 Kings · chapter 2 · verse 1
2 Kings 2:1 in Kannada
ಕರ್ತನು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.
Kartanu eleeyanannu birugaaliyinda aakaashakke ettikolluvaaga eleeyanu eleeshana sangada gilgaalininda hoguttaa iddanu.
2 Kings 2:1 in English
- King James Version (KJV)
- And it came to pass, when the LORD would take up Elijah into heaven by a whirlwind, that Elijah went with Elisha from Gilgal.
- World English Bible (WEB)
- When the LORD was about to take Elijah up by a whirlwind into heaven, Elijah went with Elisha from Gilgal.
- American Standard Version (ASV)
- And it came to pass, when Jehovah would take up Elijah by a whirlwind into heaven, that Elijah went with Elisha from Gilgal.
- Bible in Basic English (BBE)
- Now when the Lord was about to take Elijah up to heaven in a great wind, Elijah went with Elisha from Gilgal.
- Darby Translation (DBY)
- And it came to pass when Jehovah would take up Elijah into the heavens by a whirlwind, that Elijah went with Elisha from Gilgal.
- Webster's Bible (WBS)
- And it came to pass, when the LORD would take up Elijah into heaven by a whirlwind, that Elijah went with Elisha from Gilgal.
- Young's Literal Translation (YLT)
- And it cometh to pass, at Jehovah's taking up Elijah in a whirlwind to the heavens, that Elijah goeth, and Elisha, from Gilgal,
Read in context
- 1ಕರ್ತನು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.
- 2ಆಗ ಎಲೀಯನು ಎಲೀಷನಿಗೆ--ನೀನು ದಯಮಾಡಿ ಇಲ್ಲಿ ಇರು; ಕರ್ತನು ನನ್ನನ್ನು ಬೇತೇಲಿಗೆ ಕಳುಹಿಸು ತ್ತಾನೆ ಅಂದನು. ಅದಕ್ಕೆ ಎಲೀಷನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.
- 3ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಇಂದು ಕರ್ತನು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು.
Cross references
- Genesis 5:24 ಆದಿಕಾಂಡ 5:24ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು.
- Hebrews 11:5 ಇಬ್ರಿಯರಿಗೆ 11:5ಹನೋಕನು ಮರಣವನ್ನು ಅನುಭವಿಸದೆ ಒಯ್ಯ ಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡು ಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಉಂಟು.
- 1 Kings 19:16–21 1 ಅರಸುಗಳು 19:16–21ಹಜಾಯೇಲನ ಕತ್ತಿಗೆ ತಪ್ಪಿದವನನ್ನು ಯೇಹುವ ಕೊಂದುಹಾಕುವನು; ಯೇಹುವಿನ ಕತ್ತಿಗೆ ತಪ್ಪಿದವನನ್ನು ಎಲೀಷನು ಕೊಂದುಹಾಕುವನು. ಆದರೆ ಬಾಳನಿಗೆ ಬೊಗ್ಗದೆ ಇರುವ ಸಕಲ ಮೊಣ ಕಾಲುಗಳೂ ಅದನ್ನು ಮುದ್ದಿಡದ ಸಕಲ ಬಾಯಿಗಳೂ ಆಗಿರುವ ಏಳು ಸಾವಿರ ಮಂದಿಯನ್ನು ಇಸ್ರಾಯೇ ಲಿನಲ್ಲಿ ನನಗೋಸ್ಕರ ಉಳಿಸಿಕೊಂಡಿದ್ದೇನೆ ಅಂದನು. ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಆಗ ಅವನು ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಓಡಿಹೋಗಿ ಅವನಿಗೆ --ಅಪ್ಪಣೆಯಾದರೆ ನಾನು ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ನಿನ್ನನ್ನು ಹಿಂಬಾಲಿಸುವೆನು ಅಂದನು. ಅವನು ಇವನಿಗೆ--ಹಿಂದಕ್ಕೆ ಹೋಗು; ನಾನು ನಿನಗೆ ಏನು ಮಾಡಿದೆನು ಅಂದನು.ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು. ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು.
- 1 Kings 19:11 1 ಅರಸುಗಳು 19:11ಆಗ ಆತನು--ನೀನು ಹೊರಗೆ ಬಂದು ಬೆಟ್ಟದ ಮೇಲೆ ಕರ್ತನ ಮುಂದೆ ನಿಲ್ಲು ಅಂದನು. ಇಗೋ, ಕರ್ತನು ಹಾದುಹೋದನು; ಕರ್ತನ ಮುಂದೆ ಬೆಟ್ಟಗಳನ್ನು ಭೇದಿಸುವಂಥ, ಗುಡ್ಡ ಗಳನ್ನು ಒಡೆಯುವಂಥ ಮಹಾ ಬಲವಾದ ಗಾಳಿ; ಆ ಗಾಳಿಯಲ್ಲಿ ಕರ್ತನು ಇರಲಿಲ್ಲ. ಗಾಳಿಯ ತರು ವಾಯ ಭೂಕಂಪವು; ಆ ಭೂಕಂಪದಲ್ಲಿ ಕರ್ತನು ಇರಲಿಲ್ಲ.
- Joshua 5:9 ಯೆಹೋಶುವ 5:9ಕರ್ತನು ಯೆಹೋಶು ವನಿಗೆ--ಈ ದಿನ ಐಗುಪ್ತದ ನಿಂದೆಯನ್ನು ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ ಅಂದನು. ಆದದರಿಂದ ಆ ಸ್ಥಳವು ಇಂದಿನ ವರೆಗೂ ಗಿಲ್ಗಾಲ್ ಎಂದು ಹೇಳಲ್ಪಡುವದು.
- Joshua 4:19 ಯೆಹೋಶುವ 4:19ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಮೂಡಣ ಮೇರೆಯಾದ ಗಿಲ್ಗಾಲಿನಲ್ಲಿ ಇಳಿದು ಕೊಂಡರು.
- 1 Kings 18:12 1 ಅರಸುಗಳು 18:12ನಾನು ನಿನ್ನನ್ನು ಬಿಟ್ಟು ಹೋಗುವಾಗ ಆಗುವದೇನಂದರೆ, ಕರ್ತನ ಆತ್ಮನು ನಾನರಿಯದ ಸ್ಥಳಕ್ಕೆ ನಿನ್ನನ್ನು ಒಯ್ಯು ವನು. ನಾನು ಬಂದು ಅಹಾಬನಿಗೆ ತಿಳಿಸಿದಾಗ ಅವನು ನಿನ್ನನ್ನು ಕಾಣದೆ ಹೋದರೆ ನನ್ನನ್ನು ಕೊಂದುಹಾಕು ವನು. ಆದರೆ ನಿನ್ನ ಸೇವಕನಾದ ನಾನು ನನ್ನ ಚಿಕ್ಕತನ ದಿಂದ ಕರ್ತನಿಗೆ ಭಯಪಡುತ್ತೇನೆ.
- 2 Kings 2:11 2 ಅರಸುಗಳು 2:11ಅವರು ನಡೆದು ಬಂದು ಮಾತನಾಡಿಕೊಂಡಿರುವಾಗ ಆದದ್ದೇನಂದರೆ, ಇಗೋ, ಬೆಂಕಿಯ ರಥವೂ ಬೆಂಕಿಯ ಕುದುರೆ ಗಳೂ ಅವರಿಬ್ಬರನ್ನು ವಿಂಗಡಿಸಿದವು; ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.
- 2 Kings 4:38 2 ಅರಸುಗಳು 4:38ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ ದೇಶ ದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಕ್ಕಳು ಅವನ ಮುಂದೆ ಕುಳಿತಿರುವಾಗ ಅವನು ತನ್ನ ಸೇವಕನಿಗೆನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು ಪ್ರವಾದಿಗಳ ಮಕ್ಕಳಿಗೋಸ್ಕರ ಆಹಾರವನ್ನು ಬೇಯಿಸು ಅಂದನು.
- Acts 1:9 ಅಪೊಸ್ತಲರ ಕೃತ್ಯಗಳು 1:9ಇವುಗಳನ್ನು ಹೇಳಿದ ಮೇಲೆ ಅವರು ನೋಡುತ್ತಿರುವಾಗ ಆತನು ಮೇಲಕ್ಕೆ ಎತ್ತಲ್ಪಟ್ಟನು; ಮೋಡವು ಅವರ ದೃಷ್ಟಿಗೆ ಮರೆಮಾಡಿ ಆತನನ್ನು ಸ್ವೀಕರಿಸಿತು.
- 1 Kings 19:4 1 ಅರಸುಗಳು 19:4ಆದರೆ ಅವನು ಅರಣ್ಯದಲ್ಲಿ ಒಂದು ದಿವಸದ ಪ್ರಯಾಣ ಮಾಡಿ ಷಿಟ್ಟೀಮ್ ಮರದ ಕೆಳಗೆ ಕುಳಿತು ತಾನು ಸಾಯಬೇಕೆಂದು ಬೇಡಿ ಕೊಂಡು--ಕರ್ತನೇ, ಈಗ ಸಾಕು; ನನ್ನ ಪ್ರಾಣವನ್ನು ತೆಗೆದುಕೋ. ಯಾಕಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ ಅಂದನು.
- Luke 9:51 ಲೂಕನು 9:51ಇದಾದಮೇಲೆ ಯೇಸು ತಾನು ಮೇಲಕ್ಕೆ ಅಂಗೀ ಕರಿಸಲ್ಪಡುವ ಸಮಯವು ಬಂದಾಗ ಯೆರೂಸಲೇಮಿಗೆ ಹೋಗುವದಕ್ಕಾಗಿ ಆತನು ತನ್ನ ಮುಖವನ್ನು ದೃಢಮಾಡಿಕೊಂಡು