2 Kings · chapter 24 · verse 19
2 Kings 24:19 in Kannada
ಅವನು ಯೆಹೋಯಾಕೀಮನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ ದನು.ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.
Avanu yehoyaakeemanu maadida ellaadara prakaara kartana drushtige kettaddannu maadi danu.kartanu avarannu tanna sammukhadinda dobbi haakuva varege yeroosalemina mattu yehoodada mele untaada aatana kopada nimitta chidkeeyanu baabelina arasana mele tirugibiddanu.
2 Kings 24:19 in English
- King James Version (KJV)
- And he did [that which was] evil in the sight of the LORD, according to all that Jehoiakim had done.
- World English Bible (WEB)
- He did that which was evil in the LORD’s sight, according to all that Jehoiakim had done.
- American Standard Version (ASV)
- And he did that which was evil in the sight of Jehovah, according to all that Jehoiakim had done.
- Bible in Basic English (BBE)
- He did evil in the eyes of the Lord, as Jehoiakim had done.
- Darby Translation (DBY)
- And he did evil in the sight of Jehovah, according to all that Jehoiakim had done.
- Webster's Bible (WBS)
- And he did [that which was] evil in the sight of the LORD, according to all that Jehoiakim had done.
- Young's Literal Translation (YLT)
- and he doth the evil thing in the eyes of Jehovah according to all that Jehoiakim did,
Read in context
- 17ಬಾಬೆಲಿನ ಅರ ಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯ ನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಚಿದ್ಕೀಯ ಎಂಬ ಹೆಸರನ್ನಿಟ್ಟನು.
- 18ಚಿದ್ಕೀಯನು ಆಳಲು ಆರಂಭಿಸಿದಾಗ ಇಪ್ಪ ತ್ತೊಂದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ಲಿಬ್ನದ ಯೆರೆವಿಾಯನ ಮಗಳಾಗಿದ್ದ ಹಮೂಟಲ್ ಎಂಬ ವಳು.
- 19ಅವನು ಯೆಹೋಯಾಕೀಮನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ ದನು.ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.
- 20ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.
Cross references
- 2 Kings 23:37 2 ಅರಸುಗಳು 23:37ಅವನು ತನ್ನ ತಂದೆಗಳು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
- 2 Chronicles 36:12 2 ಪೂರ್ವಕಾಲವೃತ್ತಾಂತ 36:12ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು.
- Jeremiah 37:1–21 ಯೆರೆಮೀಯ 37:1–21ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಅರಸನಾಗಿ ಇಟ್ಟ ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದ ಲಾಗಿ ಯೋಷೀಯನ ಮಗನಾದ ಚಿದ್ಕೀಯನು ಅರಸ ನಾಗಿ ಆಳಿದನು. ಆದರೆ ಕರ್ತನು ಪ್ರವಾದಿಯಾದ ಯೆರೆವಿಾಯನಿಂದ ಹೇಳಿಸಿದ ವಾಕ್ಯಗಳಿಗೆ ಅವನೂ ಅವನ ಸೇವಕರೂ ದೇಶದ ಜನರೂ ಕಿವಿಗೊಡಲಿಲ್ಲ. ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ ಪ್ರವಾದಿಯಾದ ಯೆರೆವಿಾಯನ ಬಳಿಗೆ ಕಳುಹಿಸಿ--ನಮ್ಮ ದೇವರಾದ ಕರ್ತನಿಗೆ ನಮಗೋಸ್ಕರ ಪ್ರಾರ್ಥನೆ ಮಾಡೆಂದು ಹೇಳಿಸಿದನು. ಆಗ ಯೆರೆವಿಾಯನು ಜನರೊಳಗೆ ಬರುತ್ತಾ ಹೋಗುತ್ತಾ ಇದ್ದನು; ಯಾಕಂದರೆ ಅವರು ಅವನನ್ನು ಸೆರೆಮನೆಯಲ್ಲಿ ಇಡಲಿಲ್ಲ. ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತು; ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ ಯೆರೂಸಲೇಮನ್ನು ಬಿಟ್ಟುಹೋದರು. ಆಗ ಕರ್ತನ ವಾಕ್ಯವು ಪ್ರವಾದಿಯಾದ ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ನನ್ನ ಬಳಿಯಲ್ಲಿ ವಿಚಾರಿಸುವದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನಂದರೆ--ಇಗೋ, ನಿಮ್ಮ ಸಹಾಯಕ್ಕೆ ಹೊರಟ ಫರೋಹನ ಸೈನ್ಯವು ಅದರ ಸ್ವದೇಶವಾದ ಐಗುಪ್ತಕ್ಕೆ ಹಿಂತಿರುಗುವದು. ಕಸ್ದೀಯರು ತಿರುಗಿಕೊಂಡು ಈ ಪಟ್ಟಣಕ್ಕೆ ವಿರೋಧ ವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡುವರು. ಕರ್ತನು ಹೀಗೆ ಹೇಳುತ್ತಾನೆ--ಕಸ್ದೀ ಯರು ನಿಜವಾಗಿ ನಮ್ಮನ್ನು ಬಿಟ್ಟುಹೋಗುವರೆಂದು ನಿಮಗೆ ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ. ನಿಮ್ಮ ಸಂಗಡ ಯುದ್ಧ ಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿ ದ್ದಾಗ್ಯೂ ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು. ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ ಯೆರೂಸಲೇಮನ್ನು ಬಿಟ್ಟು ಹೋದಮೇಲೆ ಯೆರೆವಿಾಯನು ಬೆನ್ಯಾವಿಾನನ ದೇಶಕ್ಕೆ ಹೋಗು ವದಕ್ಕೂ ಜನರ ಮಧ್ಯದಿಂದ ತನ್ನ ಪಾಲನ್ನು ತಕ್ಕೊಳ್ಳು ವದಕ್ಕೂ ಯೆರೂಸಲೇಮಿನಿಂದ ಹೊರಟನು. ಆಗ ಅವನು ಬೆನ್ಯಾವಿಾನನ ಬಾಗಲಲ್ಲಿ ಇರುವಾಗ ಅಲ್ಲಿ ಹೆನನ್ಯನ ಮಗನಾದ ಶೆಲೆಮ್ಯನ ಮಗನಾದ ಇರೀಯ ನೆಂಬ ಪಹರೆಯ ನಾಯಕನು ಇದ್ದನು; ಇವನು ಪ್ರವಾದಿಯಾದ ಯೆರೆವಿಾಯನನ್ನು--ನೀನು ಕಸ್ದೀ ಯರ ಕಡೆಗೆ ಬೀಳುತ್ತಿ ಎಂದು ಹೇಳಿ ಹಿಡಿದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ--ಸುಳ್ಳು; ನಾನು ಕಸ್ದೀಯರ ಕಡೆಗೆ ಬೀಳುವವನಲ್ಲ ಅಂದನು. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆವಿಾ ಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು. ಆಗ ಪ್ರಧಾನರು ಯೆರೆವಿಾಯನ ಮೇಲೆ ಕೋಪಗೊಂಡು ಅವನನ್ನು ಹೊಡೆದು ಲೇಖಕನಾದ ಯೋನಾತಾನನ ಮನೆಯ ಬಂಧನದಲ್ಲಿ ಇಟ್ಟರು; ಯಾಕಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು. ಯೆರೆವಿಾಯನು ನೆಲಮಾಳಿಗೆಯಲ್ಲಿಯೂ ಸಣ್ಣಕೋಣೆಯಲ್ಲಿಯೂ ಪ್ರವೇಶಿಸಿ ಬಹಳ ದಿವಸ ಅಲ್ಲಿ ಇದ್ದ ಮೇಲೆ ಅರಸನಾದ ಚಿದ್ಕೀಯನು ಅವನನ್ನು ಹೊರಗೆ ತನ್ನ ಮನೆಯಲ್ಲಿ ಕರತರಿಸಿ--ರಹಸ್ಯವಾಗಿ ಕರ್ತನಿಂದ ವಾಕ್ಯ ಉಂಟೋ ಎಂದು ಅವನನ್ನು ಕೇಳಿದನು; ಉಂಟು ಎಂದು ಯೆರೆವಿಾಯನು ಹೇಳಿ ರಹಸ್ಯವಾಗಿ ನೀನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವಿ ಅಂದನು. ಇದಲ್ಲದೆ ಯೆರೆವಿಾಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇ ನಂದರೆ--ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ ನಿನ್ನ ಸೇವಕರಿಗೂ ಈ ಜನರಿಗೂ ವಿರೋಧವಾಗಿ ಏನು ಅಡ್ಡಿ ಮಾಡಿದ್ದೇನೆ? ಇದಲ್ಲದೆ ಬಾಬೆಲಿನ ಅರಸನು ನಿಮ್ಮ ಮೇಲೆಯೂ ಈ ದೇಶದ ಮೇಲೆಯೂ ಬರುವದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? ಆದದರಿಂದ ಈಗ ಕಿವಿಗೊಡು, ಅರಸನಾದ ನನ್ನೊ ಡೆಯನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀ ಕಾರವಾಗಲಿ, ಲೇಖಕನಾದ ಯೋನಾತಾನನ ಮನೆ ಯಲ್ಲಿ ನಾನು ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ ಅಂದನುಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು. ಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು.
- Ezekiel 21:25 ಯೆಹೆಜ್ಕೇಲನು 21:25ದುಷ್ಟನಾದ ಭ್ರಷ್ಟ ಇಸ್ರಾಯೇಲನ ಪ್ರಭುವೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
- Jeremiah 24:8 ಯೆರೆಮೀಯ 24:8ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ ಐಗುಪ್ತದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆಂದು ಕರ್ತನು ಹೇಳುತ್ತಾನೆ.