2 Kings · chapter 25 · verse 26
2 Kings 25:26 in Kannada
ಆಗ ಹಿರಿ ಕಿರಿಯರಾದ ಎಲ್ಲಾ ಜನರೂ ದಂಡುಗಳ ಅಧಿ ಪತಿಗಳೂ ಎದ್ದು ಐಗುಪ್ತಕ್ಕೆ ಹೋದರು; ಯಾಕಂದರೆ ಕಸ್ದೀಯರಿಗೆ ಭಯಪಟ್ಟರು.
Aaga hiri kiriyaraada ellaa janaroo dandugala adhi patigaloo eddu aiguptakke hodaru; yaakandare kasdeeyarige bhayapattaru.
2 Kings 25:26 in English
- King James Version (KJV)
- And all the people, both small and great, and the captains of the armies, arose, and came to Egypt: for they were afraid of the Chaldees.
- World English Bible (WEB)
- All the people, both small and great, and the captains of the forces arose and came to Egypt; for they were afraid of the Chaldeans.
- American Standard Version (ASV)
- And all the people, both small and great, and the captains of the forces, arose, and came to Egypt; for they were afraid of the Chaldeans.
- Bible in Basic English (BBE)
- Then all the people, small and great, and the captains of the forces, got up and went away to Egypt, for fear of the Chaldaeans.
- Darby Translation (DBY)
- And all the people, both small and great, and the captains of the forces, arose and came to Egypt; for they were afraid of the Chaldeans.
- Webster's Bible (WBS)
- And all the people, both small and great, and the captains of the armies, arose, and came to Egypt: for they were afraid of the Chaldees.
- Young's Literal Translation (YLT)
- And all the people rise, from small even unto great, and the heads of the forces, and come in to Egypt, for they have been afraid of the presence of the Chaldeans.
Read in context
- 24ಆಗ ಗೆದಲ್ಯನು ಅವರಿಗೂ ಅವರ ಜನರಿಗೂ ಆಣೆಯನ್ನಿಟ್ಟು--ನೀವು ಕಸ್ದೀಯರನ್ನು ಸೇವಿಸಲು ಭಯಪಡಬೇಡಿರಿ; ದೇಶದಲ್ಲಿ ವಾಸವಾ ಗಿದ್ದು ಬಾಬೆಲಿನ ಅರಸನನ್ನು ಸೇವಿಸಿರಿ; ಆಗ ನಿಮಗೆ ಒಳ್ಳೇದಾಗಿರುವದು ಅಂದನು.
- 25ಆದರೆ ಏಳನೇ ತಿಂಗಳಲ್ಲಿ ರಾಜ ಸಂತಾನದವನಾದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇ ಲನು ಅವನ ಸಂಗಡ ಹತ್ತು ಮಂದಿ ಬಂದು ಗೆದಲ್ಯ ನನ್ನೂ ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ ಕಸ್ದೀಯರನ್ನೂ ಹೊಡೆದು ಕೊಂದುಹಾಕಿದರು.
- 26ಆಗ ಹಿರಿ ಕಿರಿಯರಾದ ಎಲ್ಲಾ ಜನರೂ ದಂಡುಗಳ ಅಧಿ ಪತಿಗಳೂ ಎದ್ದು ಐಗುಪ್ತಕ್ಕೆ ಹೋದರು; ಯಾಕಂದರೆ ಕಸ್ದೀಯರಿಗೆ ಭಯಪಟ್ಟರು.
- 27ಆದರೆ ಯೆಹೂದದ ಅರಸನಾದ ಯೆಹೋ ಯಾಖೀನನ ಸೆರೆಯ ಮೂವತ್ತೇಳನೇ ವರುಷದ ಹನ್ನೆರಡನೇ ತಿಂಗಳಿನ ಇಪ್ಪತ್ತೇಳನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ಎವಿಲ್ಮೆ ರೋದಕನು ಆಳಲು ಆರಂಭಿಸಿದ ವರುಷದಲ್ಲಿ ಅವನು ಯೆಹೂದದ ಅರಸನಾದ ಯೆಹೋಯಾ ಖೀನನನ್ನು ಸೆರೆಮನೆಯಿಂದ ಬಿಡಿಸಿ
- 28ಅವನ ಸಂಗಡ ಒಳ್ಳೇ ಮಾತುಗಳನ್ನು ಆಡಿ, ಅವನ ಸಿಂಹಾಸನವನ್ನು ಬಾಬೆಲಿನಲ್ಲಿ ತನ್ನ ಸಂಗಡ ಇರುವ ಅರಸುಗಳ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಿ ಅವನ ಸೆರೆ ವಸ್ತ್ರಗಳನ್ನು ಬದಲಾಯಿಸಿದನು.
Cross references
- Jeremiah 43:4–7 ಯೆರೆಮೀಯ 43:4–7ಈ ಪ್ರಕಾರ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೂ ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ ಕರ್ತನ ಮಾತಿಗೆ ಕಿವಿಗೊಡಲಿಲ್ಲ. ಆದರೆ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿ ಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವದಕ್ಕೆ ತಿರಿಗಿ ಬಂದ ಯೆಹೂದದಲ್ಲಿ ಉಳಿದವರನ್ನು ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅರಸನ ಕುಮಾರ್ತೆಯ ರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾ ನನು ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ ಪ್ರವಾದಿಯಾದ ಯೆರೆವಿಾಯನನ್ನೂ ನೇರೀಯನ ಮಗನಾದ ಬಾರೂಕನನ್ನೂ ತೆಗೆದುಕೊಂಡು ಐಗುಪ್ತದೇಶಕ್ಕೆ ಹೋದರು. ಅವರು ಕರ್ತನ ಮಾತಿಗೆ ಕಿವಿಗೊಡಲಿಲ್ಲ; ಹೀಗೆ ಅವರು ತಹಪನೇಸಿಗೆ ಬಂದರು.
- Jeremiah 41:16–18 ಯೆರೆಮೀಯ 41:16–18ಆಗ ಕಾರೇಹನ ಮಗನಾದ ಯೋಹಾನಾನನೂ ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದುಹಾಕಿದ ತರುವಾಯ ತಪ್ಪಿಸಿಕೊಂಡ ಉಳಿದ ಜನರೆಲ್ಲರನ್ನು ಅಂದರೆ ಗಿಬ್ಯೋನಿ ನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಕಂಚುಕಿ ಯರನ್ನೂ ಮಿಚ್ಪದಿಂದ ಕರಕೊಂಡು ಹೊರಟು, ಐಗು ಪ್ತಕ್ಕೆ ಹೋಗುವದಕ್ಕೆ ಬೇತ್ಲೆಹೇಮಿನ ಬಳಿಯಲ್ಲಿರುವ ಕಿಮ್ಹಾಮನ ಛತ್ರದಲ್ಲಿ ಕಸ್ದೀಯರ ನಿಮಿತ್ತ ವಾಸ ಮಾಡಿದರು.ಬಾಬೆಲಿನ ಅರಸನು ದೇಶದ ಮೇಲೆ ನೇಮಿಸಿದ್ದ ಅಹೀಕಾಮನ ಮಗನಾದ ಗೆದಲ್ಯನನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ್ದ ರಿಂದಲೇ ಅವರಿಗೆ ಭಯಪಟ್ಟರು. ಬಾಬೆಲಿನ ಅರಸನು ದೇಶದ ಮೇಲೆ ನೇಮಿಸಿದ್ದ ಅಹೀಕಾಮನ ಮಗನಾದ ಗೆದಲ್ಯನನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ್ದ ರಿಂದಲೇ ಅವರಿಗೆ ಭಯಪಟ್ಟರು.
- Jeremiah 42:14–22 ಯೆರೆಮೀಯ 42:14–22ನೀವು--ಇಲ್ಲ, ನಾವು ಐಗುಪ್ತದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧ ವನ್ನು ನೋಡುವದಿಲ್ಲ, ತುತೂರಿಯ ಶಬ್ದವನ್ನು ಕೇಳುವ ದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವದಿಲ್ಲ, ಅಲ್ಲಿ ವಾಸಮಾಡುವೆವೆಂದು ಹೇಳುವದಾದರೆ ಈಗ ಯೆಹೂದದ ಶೇಷವೇ, ಕರ್ತನ ವಾಕ್ಯವನ್ನು ಕೇಳಿರಿ; ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ನಿಮ್ಮ ಮುಖಗಳನ್ನು ಐಗುಪ್ತಕ್ಕೆ ಹೋಗುವ ಹಾಗೆ ತಿರುಗಿಸಿ ನೀವು ಅಲ್ಲಿ ತಂಗುವದಕ್ಕೆ ಹೋದರೆ, ಆಗ ಆಗುವದೇನಂದರೆ --ನೀವು ಭಯಪಡುವ ಕತ್ತಿಯು ಆ ಐಗುಪ್ತದೇಶದಲ್ಲಿ, ನಿಮ್ಮನ್ನು ಹಿಡಿಯುವದು; ನೀವು ಹೆದರಿಕೊಳ್ಳುವ ಕ್ಷಾಮವು ಆ ಐಗುಪ್ತದೇಶಕ್ಕೆ ನಿಮ್ಮನ್ನು ಹಿಂದಟ್ಟುವದು, ಅಲ್ಲೇ ಸಾಯುವಿರಿ. ಹೌದು, ಐಗುಪ್ತಕ್ಕೆ ಹೋಗಿ ಅಲ್ಲಿ ವಾಸಿಸುವ ಹಾಗೆ ತಮ್ಮ ಮುಖಗಳನ್ನು ತಿರುಗಿಸುವ ಮನುಷ್ಯರಿಗೆಲ್ಲಾ ಹೀಗಾಗುವದು; ಅವರು ಕತ್ತಿಯಿ ಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯು ವರು; ನಾನು ಅವರ ಮೇಲೆ ಬರಮಾಡುವ ಕೇಡಿಗೆ ತಪ್ಪಿಸಿಕೊಂಡು ಉಳಿಯುವವನು ಒಬ್ಬನೂ ಅವರೊಳಗೆ ಇರುವದಿಲ್ಲ. ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕೋಪವೂ ನನ್ನ ಉರಿಯೂ ಹೇಗೆ ಯೆರೂಸಲೇಮಿನ ನಿವಾಸಿಗಳ ಮೇಲೆ ಹೊಯ್ಯಲ್ಪಟ್ಟಿತೋ ಹಾಗೆಯೇ ನೀವು ಐಗುಪ್ತಕ್ಕೆ ಹೋದರೆ ನನ್ನ ಉರಿಯು ನಿಮ್ಮ ಮೇಲೆ ಹೊಯ್ಯಲ್ಪ ಡುವದು; ನೀವು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವಿರಿ; ಈ ಸ್ಥಳವನ್ನು ನೀವು ತಿರುಗಿ ನೋಡುವದಿಲ್ಲ. ಯೆಹೂದದ ಶೇಷವೇ, ಕರ್ತನು ನಿಮ್ಮ ವಿಷಯ ಹೇಳಿದ್ದೇನಂದರೆ--ಐಗುಪ್ತಕ್ಕೆ ಹೋಗ ಬೇಡಿರಿ; ನಾನು ಈ ಹೊತ್ತು ನಿಮಗೆ ಸಾಕ್ಷಿ ಕೊಟ್ಟಿದ್ದೇ ನೆಂದು ಚೆನ್ನಾಗಿ ತಿಳುಕೊಳ್ಳಿರಿ. ನಿಶ್ಚಯವಾಗಿ ಸ್ವಂತ ಪ್ರಾಣಗಳಿಗೆ ವಿರೋಧವಾಗಿ ಮೋಸಮಾಡಿದ್ದೀರಿ; ನಮಗೋಸ್ಕರ ನಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡೆಂದೂ ನಮ್ಮ ದೇವರಾದ ಕರ್ತನು ಏನೇನು ಹೇಳುವನೋ ಅದನ್ನು ನಮಗೆ ತಿಳಿಸು, ಆಗ ನಾವು ಮಾಡುವೆವೆಂದೂ ಹೇಳಿ, ನನ್ನನ್ನು ನಿಮ್ಮ ದೇವರಾದ ಕರ್ತನ ಬಳಿಗೆ ಕಳುಹಿಸಿದಿರಿ. ನಾನು ಈ ಹೊತ್ತು ಅದನ್ನು ನಿಮಗೆ ತಿಳಿಸಿದ್ದೇನೆ; ಆದರೆ ನೀವು ನಿಮ್ಮ ದೇವರಾದ ಕರ್ತನ ಶಬ್ದವನ್ನಾದರೂ ಆತನು ಯಾವದರ ವಿಷಯ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೋ ಅದರಲ್ಲಿ ಯಾವದನ್ನಾದರೂ ಕೇಳ ಲಿಲ್ಲವಾದರೆನೀವು ವಾಸಿಸುವದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರೆಂದು ಈಗ ನೀವು ನಿಶ್ಚಯವಾಗಿ ತಿಳುಕೊಳ್ಳಿರಿ ಅಂದನು. ನೀವು ವಾಸಿಸುವದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರೆಂದು ಈಗ ನೀವು ನಿಶ್ಚಯವಾಗಿ ತಿಳುಕೊಳ್ಳಿರಿ ಅಂದನು.