2 Peter · chapter 3 · verse 12
2 Peter 3:12 in Kannada
ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
Devara dinada pratyakshateyannu eduru noduttaa aaturapaduva aa dinadalli aakaashagalu benki hatti layavaagi hoguvavu, ati ushnadinda panchabhootagalu uridu karagi hoguvavallave?
2 Peter 3:12 in English
- King James Version (KJV)
- Looking for and hasting unto the coming of the day of God, wherein the heavens being on fire shall be dissolved, and the elements shall melt with fervent heat?
- World English Bible (WEB)
- looking for and earnestly desiring the coming of the day of God, which will cause the burning heavens to be dissolved, and the elements will melt with fervent heat?
- American Standard Version (ASV)
- looking for and earnestly desiring the coming of the day of God, by reason of which the heavens being on fire shall be dissolved, and the elements shall melt with fervent heat?
- Bible in Basic English (BBE)
- Looking for and truly desiring the coming of the day of God, when the heavens will come to an end through fire, and the substance of the earth will be changed by the great heat?
- Darby Translation (DBY)
- waiting for and hastening the coming of the day of God, by reason of which [the] heavens, being on fire, shall be dissolved, and [the] elements, burning with heat, shall melt?
- Webster's Bible (WBS)
- Looking for and hasting to the coming of the day of God, in which the heavens being on fire will be dissolved, and the elements will melt with fervent heat?
- Young's Literal Translation (YLT)
- waiting for and hasting to the presence of the day of God, by which the heavens, being on fire, shall be dissolved, and the elements with burning heat shall melt;
Read in context
- 10ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು.
- 11ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದ ರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.
- 12ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
- 13ಆದಾಗ್ಯೂ ನಾವು ಆತನ ವಾಗ್ದಾನದ ಪ್ರಕಾರ ನೂತನ ಆಕಾಶ ಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.
- 14ಆದಕಾರಣ ಪ್ರಿಯರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವದರಿಂದ ಸಮಾಧಾನ ದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವ ರಾಗಿರ್ರಿ.
Cross references
- 2 Peter 3:10 2 ಪೇತ್ರನು 3:10ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು.
- Isaiah 34:4 ಯೆಶಾಯ 34:4ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.
- Micah 1:4 ಮೀಕ 1:4ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
- Titus 2:13 ತೀತನಿಗೆ 2:13ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.
- 2 Peter 3:7 2 ಪೇತ್ರನು 3:7ಆದರೆ ಈಗಿನ ಆಕಾಶಗಳೂ ಭೂಮಿಯೂ ಅದೇ ವಾಕ್ಯದಿಂದ ಭದ್ರವಾಗಿ ಇಡಲ್ಪಟ್ಟಿದ್ದು ನ್ಯಾಯ ತೀರ್ವಿಕೆಯ ದಿನದವರೆಗೂ ಭಕ್ತಿಹೀನರ ನಾಶನಕ್ಕಾಗಿ ಬೆಂಕಿಯು ಕಾದಿಡಲ್ಪಟ್ಟಿದೆ ಎಂಬದು.
- Isaiah 64:1–12 ಯೆಶಾಯ 64:1–12ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ, ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು! ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು. ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ. ಸಂತೋಷಪಟ್ಟು ನೀತಿಯನ್ನು ಕೈಕೊಳ್ಳುವವನನ್ನೂ ನಿನ್ನ ಮಾರ್ಗಗಳಲ್ಲಿ ನಿನ್ನನ್ನು ಜ್ಞಾಪಕಮಾಡುವವ ನನ್ನೂ ನೀನು ಎದುರುಗೊಳ್ಳುತ್ತೀ; ಇಗೋ, ನೀನು ರೌದ್ರನಾಗಿರುವಿ, ಯಾಕಂದರೆ ನಾವು ರಕ್ಷಿಸಲ್ಪಡದ ಹಾಗೆ ಪಾಪದಲ್ಲಿ ಮುಂದುವರಿದೆವು. ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ. ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ. ಆದರೆ ಈಗ ಓ ಕರ್ತನೇ, ನಮ್ಮ ತಂದೆಯು ನೀನೇ; ನಾವು ಮಣ್ಣು, ನೀನು ನಮ್ಮ ಕುಂಬಾರನು; ನಾವೆ ಲ್ಲರೂ ನಿನ್ನ ಕೈಕೆಲಸವೇ. ಓ ಕರ್ತನೇ, ಅತ್ಯಧಿಕ ವಾಗಿ ರೌದ್ರನಾಗಬೇಡ; ಎಂದೆಂದಿಗೂ ಅಕ್ರಮ ವನ್ನು ಜ್ಞಾಪಕಮಾಡಬೇಡ; ಇಗೋ, ನೋಡು, ನಾವು ಬೇಡುತ್ತೇವೆ ದೃಷ್ಟಿಯಿಡು; ನಾವೆಲ್ಲರೂ ನಿನ್ನ ಜನರೇ. ನಿನ್ನ ಪರಿಶುದ್ಧ ಪಟ್ಟಣಗಳು ಅಡವಿ ಯಾದವು; ಚೀಯೋನು ಅಡವಿಯಾಯಿತು; ಯೆರೂ ಸಲೇಮು ಹಾಳಾಯಿತು. ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಮತ್ತು ಸುಂದರ ವಾದ ಮನೆ ಬೆಂಕಿಯಿಂದ ಸುಟ್ಟುಹೋಯಿತು; ನಮ್ಮ ಸೊಗಸಾದವುಗಳೆಲ್ಲಾ ನಾಶವಾದವು.ಇವು ಹೀಗಿರಲಾಗಿ ಕರ್ತನೇ, ನಿನ್ನನ್ನು ಬಿಗಿಹಿಡುಕೊಳ್ಳು ತ್ತೀಯೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿಯೋ? ಇವು ಹೀಗಿರಲಾಗಿ ಕರ್ತನೇ, ನಿನ್ನನ್ನು ಬಿಗಿಹಿಡುಕೊಳ್ಳು ತ್ತೀಯೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿಯೋ?
- 1 Corinthians 1:7–8 1 ಕೊರಿಂಥದವರಿಗೆ 1:7–8ಹೀಗಿ ರಲಾಗಿ ನೀವು ಯಾವದರಲ್ಲಿಯೂ ಕೊರತೆಯಿಲ್ಲದವರಾಗಿದ್ದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣಕ್ಕಾಗಿ ಎದುರು ನೋಡುವವರಾಗಿದ್ದೀರಿ. ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ಯಾರೂ ನಿಮ್ಮ ಮೇಲೆ ತಪ್ಪುಹೊರಿಸದಂತೆ ಆತನು ನಿಮ್ಮನ್ನು ಕಡೇವರೆಗೂ ದೃಢಪಡಿಸುವನು.
- Psalm 50:3 ಕೀರ್ತನೆಗಳು 50:3ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.
- Revelation 6:13–14 ಪ್ರಕಟನೆ 6:13–14ಅಂಜೂರದ ಮರವು ಬಿರುಗಾಳಿಯಿಂದ ಅಲ್ಲಾಡಿಸ ಲ್ಪಟ್ಟು ಅಕಾಲದಲ್ಲಿ ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು. ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿ ಬಿಟ್ಟಿತು; ಎಲ್ಲಾ ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚದರಿದವು.
- Isaiah 2:1–22 ಯೆಶಾಯ 2:1–22ಆಮೋಚನ ಮಗನಾದ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ: ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು. ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು. ಆತನು ಅನೇಕ ಜನಾಂಗ ಗಳ ಮಧ್ಯದಲ್ಲಿ ನ್ಯಾಯ ತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವನು; ಅವರು ತಮ್ಮ ಕತ್ತಿಗಳನ್ನು ನೇಗಿಲಿನ ಗುಳಗಳನ್ನಾಗಿಯೂ ತಮ್ಮ ಈಟಿಗಳನ್ನು ಕುಡುಗೋ ಲುಗಳನ್ನಾಗಿಯೂ ಬಡಿಯುವರು; ಜನಾಂಗಕ್ಕೆ ವಿರೋ ಧವಾಗಿ ಜನಾಂಗವು ಕತ್ತಿಯನ್ನು ಎತ್ತದು; ಇಲ್ಲವೆ ಇನ್ನು ಮೇಲೆ ಯುದ್ಧಾಭ್ಯಾಸವು ಇರುವದೇ ಇಲ್ಲ. ಓ ಯಾಕೋಬಿನ ಮನೆತನದವರೇ, ಬನ್ನಿರಿ, ಕರ್ತನ ಬೆಳಕಿನಲ್ಲಿ ನಡೆಯೋಣ. ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ. ಅವರ ದೇಶವು ಬೆಳ್ಳಿ ಬಂಗಾರಗ ಳಿಂದಲೂ ತುಂಬಿದೆ, ಅವರ ಬೊಕ್ಕಸಗಳಿಗೆ ಮಿತಿ ಯಿಲ್ಲ; ಅವರ ದೇಶವು ಕುದುರೆಗಳಿಂದಲೂ ತುಂಬಿದೆ, ಅವರ ರಥಗಳಿಗೆ ಮಿತಿಯೇ ಇಲ್ಲ. ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ; ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನೇ ಆರಾಧಿಸುವರು. ನೀಚನು ಹಿಗ್ಗಿಕೊಳ್ಳುತ್ತಾನೆ, ಉತ್ತಮನು ತಗ್ಗಿಸಿಕೊಳ್ಳು ತ್ತಾನೆ; ಆದಕಾರಣ ಅವರನ್ನು ಮನ್ನಿಸಬೇಡ. ಕರ್ತನ ಭಯಕ್ಕೂ ಆತನ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ, ದೂಳಿನಲ್ಲಿ ನೀನು ಅಡಗಿಕೋ. ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು. ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು. ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ ಮತ್ತು ಬಾಷಾನಿನ ಎಲ್ಲಾ ಏಲಾಮರಗಳ ಮೇಲೆಯೂ ಎಲ್ಲಾ ಎತ್ತರವಾದ ಪರ್ವತಗಳ ಮತ್ತು ಎತ್ತರವಾಗಿ ರುವ ಗುಡ್ಡಗಳ ಮೇಲೆಯೂ ಎಲ್ಲಾ ಎತ್ತರವಾದ ಗೋಪುರಗಳ ಭದ್ರವಾದ ಎಲ್ಲಾ ಗೋಡೆಗಳ ಮೇಲೆ ಯೂ ಎಲ್ಲಾ ತಾರ್ಷೀಷ್ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಎಲ್ಲಾ ಚಿತ್ರಗಳ ಮೇಲೆಯೂ ಆ ದಿನವು ಬರುವದು. ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು. ಆತನು ವಿಗ್ರಹಗಳನ್ನು ಸಂಪೂರ್ಣ ವಾಗಿ ಇಲ್ಲದಂತೆ ಮಾಡಿಬಿಡುವನು. ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿಸಲು ಏಳು ವಾಗ ಕರ್ತನಿಗೂ ಆತನ ಮಹಿಮೆಗೂ ಆತನ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಭೂಮಿಯ ಗವಿಗ ಳಿಗೂ ಅವರು ಸೇರಿಕೊಳ್ಳುವರು. ಆ ದಿನದಲ್ಲಿ ಮನುಷ್ಯನು ಅಡ್ಡಬೀಳುವದಕ್ಕೋಸ್ಕರ ತಾವು ಮಾಡಿ ಕೊಂಡ ಬೆಳ್ಳಿಯ ವಿಗ್ರಹಗಳನ್ನೂ ಚಿನ್ನದ ವಿಗ್ರಹ ಗಳನ್ನೂ ಇಲಿ ಬಾವಲಿಗಳಿಗೆ ಬಿಸಾಡಿಬಿಡುವನು. ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿ ಸಲು ಏಳುವಾಗ ಕರ್ತನ ಭಯಕ್ಕೂ ಆತನ ಮಹಿ ಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಹೋಗುವರು.ಉಸಿರು ಮೂಗಿನಲ್ಲಿ ಇರುವ ವರೆಗೆ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಎಷ್ಟರವ ನೆಂದು ಎಣಿಸಬಹುದು? ಉಸಿರು ಮೂಗಿನಲ್ಲಿ ಇರುವ ವರೆಗೆ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಎಷ್ಟರವ ನೆಂದು ಎಣಿಸಬಹುದು?
- Jude 1:21 ಯೂದನು 1:21ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಗೋಸ್ಕರ ಎದುರು ನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.
- Philippians 1:6 ಫಿಲಿಪ್ಪಿಯವರಿಗೆ 1:6ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ಯೇಸು ಕ್ರಿಸ್ತನ ದಿನದವರೆಗೆ ಸಿದ್ದಿಗೆ ತರುವನೆಂದು ನನಗೆ ಭರವಸ ವುಂಟು.
Original words (Greek)
- for · G4328προσδοκάω prosdokáō
- and · G2532καί kaí
- unto · G4692σπεύδω speúdō
- coming · G3952παρουσία parousía
- day · G2250ἡμέρα hēméra
- God · G2316θεός theós
- wherein · G1223διά diá
- heavens · G3772οὐρανός ouranós
- fire · G4448πυρόω pyróō
- dissolved · G3089λύω lýō
- and · G2532καί kaí
- elements · G4747στοιχεῖον stoicheîon
- melt · G5080τήκω tḗkō
- heat · G2741καυσόω kausóō