2 Samuel · chapter 12 · verse 22
2 Samuel 12:22 in Kannada
ಅದಕ್ಕವನು--ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಕರ್ತನು ನನಗೆ ದಯಮಾಡುವನೇನೋ ಎಂದು ಉಪವಾಸಮಾಡಿ ಅತ್ತೆನು.
Adakkavanu--maguvu jeevadinda iruvaaga adu badukuva haage kartanu nanage dayamaaduvaneno endu upavaasamaadi attenu.
2 Samuel 12:22 in English
- King James Version (KJV)
- And he said, While the child was yet alive, I fasted and wept: for I said, Who can tell [whether] GOD will be gracious to me, that the child may live?
- World English Bible (WEB)
- He said, “While the child was yet alive, I fasted and wept; for I said, ‘Who knows whether the LORD will not be gracious to me, that the child may live?’
- American Standard Version (ASV)
- And he said, While the child was yet alive, I fasted and wept: for I said, Who knoweth whether Jehovah will not be gracious to me, that the child may live?
- Bible in Basic English (BBE)
- And he said, While the child was still living I went without food and gave myself up to weeping: for I said, Who is able to say that the Lord will not have mercy on me and give the child life?
- Darby Translation (DBY)
- And he said, While the child was yet alive, I fasted and wept; for I thought, Who knows? [perhaps] Jehovah will be gracious to me, that the child may live.
- Webster's Bible (WBS)
- And he said, While the child was yet alive, I fasted, and wept: for I said, Who can tell [whether] God will be gracious to me, that the child may live?
- Young's Literal Translation (YLT)
- And he saith, 'While the lad is alive I have fasted, and weep, for I said, Who knoweth? — Jehovah doth pity me, and the lad hath lived;
Read in context
- 20ಆಗ ದಾವೀದನು ನೆಲದಿಂದ ಎದ್ದು ಸ್ನಾನಮಾಡಿ ತೈಲವನ್ನು ಹಚ್ಚಿಕೊಂಡ ವನಾಗಿ ಬದಲಿ ವಸ್ತ್ರಗಳನ್ನು ಧರಿಸಿಕೊಂಡು ಕರ್ತನ ಮಂದಿರಕ್ಕೆ ಹೋಗಿ ಆತನನ್ನು ಆರಾಧಿಸಿ ತನ್ನ ಮನೆಗೆ ಬಂದನು. ಅವನು ಕೇಳಿದಾಗ ಅವರು ಅವನ ಮುಂದೆ ಇಟ್ಟ ರೊಟ್ಟಿ ತಿಂದನು.
- 21ಅವನ ಸೇವಕರು ಅವನಿಗೆ --ಇದೇನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದಿ; ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದಿ ಅಂದರು.
- 22ಅದಕ್ಕವನು--ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಕರ್ತನು ನನಗೆ ದಯಮಾಡುವನೇನೋ ಎಂದು ಉಪವಾಸಮಾಡಿ ಅತ್ತೆನು.
- 23ಆದರೆ ಈಗ ಸತ್ತಿದೆ ಯಲ್ಲಾ; ನಾನು ಉಪವಾಸ ಮಾಡುವದು ಯಾಕೆ? ನಾನು ಅದನ್ನು ತಿರಿಗಿ ಬರಮಾಡಬಲ್ಲೆನೋ? ನಾನು ಅದರ ಬಳಿಗೆ ಹೋಗುವೆನು; ಆದರೆ ಅದು ನನ್ನ ಬಳಿಗೆ ತಿರಿಗಿ ಬರುವದಿಲ್ಲ ಅಂದನು.
- 24ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು.
Cross references
- Isaiah 38:1–3 ಯೆಶಾಯ 38:1–3ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು. ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ-- ಓ ಕರ್ತನೇ, ನಾನು ನಿನ್ನ ಮುಂದೆ ಸತ್ಯವಾಗಿಯೂ ಯಥಾರ್ಥ ಹೃದಯದಿಂದಲೂ ನಡೆದು ನಿನ್ನ ದೃಷ್ಟಿ ಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಪು ಮಾಡಿಕೋ ಎಂದು ಬೇಡಿಕೊಂಡು ವ್ಯಥೆಪಟ್ಟು ಅತ್ತನು.
- Isaiah 38:5 ಯೆಶಾಯ 38:5ನೀನು ಹೋಗಿ ಹಿಜ್ಕೀ ಯನಿಗೆ ಹೇಳತಕ್ಕದ್ದೇನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸುತ್ತೇನೆ.
- Jonah 3:9–10 ಯೋನ 3:9–10ದೇವರು ತಿರುಗಿ ಕೊಂಡು ಪಶ್ಚಾತ್ತಾಪಪಟ್ಟು ನಾವು ನಾಶವಾಗದ ಹಾಗೆ ತನ್ನ ಕೋಪದ ಉರಿಯನ್ನು ಬಿಟ್ಟಾನೇನೋ ಯಾರು ಬಲ್ಲರು ಅಂದನು.ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ. ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.
- Joel 1:14 ಯೋವೇಲ 1:14ಉಪವಾಸವನ್ನು ಪರಿಶುದ್ಧ ಮಾಡಿರಿ; ಪವಿತ್ರ ಸಂಘವನ್ನು ಕರೆಯಿರಿ; ಹಿರಿಯ ರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ದೇವರಾದ ಕರ್ತನ ಆಲಯದಲ್ಲಿ ಕೂಡಿಸಿ ಕರ್ತನಿಗೆ ಮೊರೆಯಿ ಡಿರಿ.
- Jonah 1:6 ಯೋನ 1:6ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.
- Joel 2:14 ಯೋವೇಲ 2:14ಆತನು ತಿರುಗಿಕೊಂಡು ಪಶ್ಚಾತ್ತಾಪಪಟ್ಟು ತನ್ನ ಹಿಂದೆ ಆಶೀರ್ವಾದವನ್ನು ಅಂದರೆ ನಿಮ್ಮ ದೇವರಾದ ಕರ್ತನಿಗಾಗಿ ಆಹಾರ ದರ್ಪಣೆಯನ್ನೂ ಪಾನದರ್ಪಣೆಯನ್ನೂ ಉಳಿಸುವ ನೇನೋ ಯಾರು ಬಲ್ಲರು?
- Amos 5:15 ಆಮೋಸ 5:15ಕೆಟ್ಟದ್ದನ್ನು ದ್ವೇಷಿಸಿರಿ; ಒಳ್ಳೇದನ್ನು ಪ್ರೀತಿಸಿರಿ ಮತ್ತು ಬಾಗಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ; ಒಂದು ವೇಳೆ ಸೈನ್ಯಾಧಿಪತಿಯಾದ ಕರ್ತನು ಯೋಸೇ ಫನ ಉಳಿದವರನ್ನು ಕನಿಕರಿಸಬಹುದು.
- James 4:9–10 ಯಾಕೋಬನು 4:9–10ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ. ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.