Acts · chapter 1 · verse 3
Acts 1:3 in Kannada
ಆತನು ಶ್ರಮೆಯನ್ನನುಭವಿಸಿದ ಮೇಲೆ ದೃಢವಾದ ಅನೇಕ ಪ್ರಮಾಣಗಳಿಂದ ತಾನು ಜೀವಂತನಾಗಿ ದ್ದನೆಂದು ಅಪೊಸ್ತಲರಿಗೆ ತನ್ನನ್ನು ತೋರಿಸಿಕೊಂಡು ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತನಾಡುತ್ತಿದ್ದನು.
Aatanu shrameyannanubhavisida mele drudhavaada aneka pramaanagalinda taanu jeevantanaagi ddanendu apostalarige tannannu torisikondu naalvattu divasagala tanaka avarige kaanisikolluttaa devara raajyakke sambandhapatta vishayagalannu maatanaaduttiddanu.
Acts 1:3 in English
- King James Version (KJV)
- To whom also he shewed himself alive after his passion by many infallible proofs, being seen of them forty days, and speaking of the things pertaining to the kingdom of God:
- World English Bible (WEB)
- To these he also showed himself alive after he suffered, by many proofs, appearing to them over a period of forty days and speaking about God’s Kingdom.
- American Standard Version (ASV)
- to whom he also showed himself alive after his passion by many proofs, appearing unto them by the space of forty days, and speaking the things concerning the kingdom of God:
- Bible in Basic English (BBE)
- And to whom he gave clear and certain signs that he was living, after his death; for he was seen by them for forty days, and gave them teaching about the kingdom of God:
- Darby Translation (DBY)
- to whom also he presented himself living, after he had suffered, with many proofs; being seen by them during forty days, and speaking of the things which concern the kingdom of God;
- Webster's Bible (WBS)
- To whom also he showed himself alive after his passion, by many infallible proofs, being seen by them forty days, and speaking of the things pertaining to the kingdom of God:
- Young's Literal Translation (YLT)
- to whom also he did present himself alive after his suffering, in many certain proofs, through forty days being seen by them, and speaking the things concerning the reign of God.
Read in context
- 1ಓ ಥೆಯೊಫಿಲನೇ, ಯೇಸು ತಾನು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮನ ಮುಖಾಂತರ ಆಜ್ಞೆಗಳನ್ನು ಕೊಟ್ಟ ತರುವಾಯ
- 2ಆತನು ಮೇಲಕ್ಕೆ ಎತ್ತಲ್ಪಟ್ಟ ದಿವಸದ ವರೆಗೆ ತಾನು ಮಾಡುವದಕ್ಕೂ ಬೋಧಿಸುವದಕ್ಕೂ ಪ್ರಾರಂಭಿಸಿದ್ದೆಲ್ಲವನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು.
- 3ಆತನು ಶ್ರಮೆಯನ್ನನುಭವಿಸಿದ ಮೇಲೆ ದೃಢವಾದ ಅನೇಕ ಪ್ರಮಾಣಗಳಿಂದ ತಾನು ಜೀವಂತನಾಗಿ ದ್ದನೆಂದು ಅಪೊಸ್ತಲರಿಗೆ ತನ್ನನ್ನು ತೋರಿಸಿಕೊಂಡು ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತನಾಡುತ್ತಿದ್ದನು.
- 4ಆತನು ಅವರೊಂದಿಗೆ ಕೂಡಿಕೊಂಡಿದ್ದಾಗ--ನೀವು ಯೆರೂಸಲೇಮಿನಿಂದ ಹೊರಟುಹೋಗದೆ ನನ್ನಿಂದ ಕೇಳಿದ ತಂದೆಯ ವಾಗ್ದಾನಕೋಸ್ಕರ ಕಾಯ ಬೇಕೆಂದು ಅವರಿಗೆ ಅಪ್ಪಣೆಕೊಟ್ಟನು.
- 5ಯಾಕಂದರೆ ಯೋಹಾನನು ನಿಜವಾಗಿಯೂ ನೀರಿನಿಂದ ಬಾಪ್ತಿಸ್ಮ ಮಾಡಿಸಿದನು; ಆದರೆ ನೀವು ಇನ್ನು ಸ್ವಲ್ಪ ದಿವಸ ಗಳಲ್ಲಿಯೇ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಹೇಳಿದನು.
Cross references
- 1 Corinthians 15:5–7 1 ಕೊರಿಂಥದವರಿಗೆ 15:5–7ತರುವಾಯ ಆತನು ಕೇಫನಿಗೂ ಆಮೇಲೆ ಹನ್ನೆರಡು ಮಂದಿಗೂ ಕಾಣಿಸಿ ಕೊಂಡನು. ಇದಾದ ಮೇಲೆ ಒಂದೇ ಸಮಯದಲ್ಲಿ ಐನೂರಕ್ಕಿಂತ ಹೆಚ್ಚು ಸಹೋದರರಿಗೆ ಆತನು ಕಾಣಿಸಿ ಕೊಂಡನು; ಇದರಲ್ಲಿ ಹೆಚ್ಚು ಜನರು ಇಂದಿನವರೆಗೂ ಇದ್ದಾರೆ; ಆದರೆ ಕೆಲವರು ನಿದ್ರೆಹೋಗಿದ್ದಾರೆ. ತರುವಾಯ ಆತನು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು.
- Acts 13:31 ಅಪೊಸ್ತಲರ ಕೃತ್ಯಗಳು 13:31ಆತನು ಯೆರೂಸಲೇಮಿಗೆ ಗಲಿಲಾಯ ದಿಂದ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿವಸಗಳ ಪರ್ಯಂತರ ಕಾಣಿಸಿಕೊಂಡನು. ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ.
- John 20:26 ಯೋಹಾನನು 20:26ತಿರಿಗಿ ಎಂಟು ದಿವಸಗಳಾದ ಮೇಲೆ ಆತನ ಶಿಷ್ಯರು ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಆಗ ಬಾಗಲುಗಳು ಮುಚ್ಚಿರಲಾಗಿ ಯೇಸು ಬಂದು ಮಧ್ಯದಲ್ಲಿ ನಿಂತು--ನಿಮಗೆ ಸಮಾಧಾನ ವಾಗಲಿ ಅಂದನು.
- 1 John 1:1 1 ಯೋಹಾನನು 1:1ಆದಿಯಿಂದ ಇದ್ದದ್ದನ್ನೂ ಆ ಜೀವ ವಾಕ್ಯದ ವಿಷಯವಾಗಿ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದೇವೆ.
- John 21:14 ಯೋಹಾನನು 21:14ಯೇಸು ಸತ್ತವರೊಳಗಿಂದ ಎದ್ದ ಮೇಲೆ ತನ್ನ ಶಿಷ್ಯರಿಗೆ ತನ್ನನ್ನು ತೋರಿಸಿಕೊಂಡದ್ದು ಇದು ಮೂರನೆಯ ಸಾರಿ.
- John 21:1 ಯೋಹಾನನು 21:1ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--
- Matthew 28:9 ಮತ್ತಾಯನು 28:9ಅವರು ಆತನ ಶಿಷ್ಯರಿಗೆ ತಿಳಿಸು ವದಕ್ಕೆ ಹೋಗುತ್ತಿದ್ದಾಗ ಇಗೋ, ಯೇಸು ಅವರನ್ನು ಸಂಧಿಸಿ--ಶುಭವಾಗಲಿ ಅಂದನು. ಆಗ ಅವರು ಬಂದು ಆತನ ಪಾದಗಳನ್ನು ಹಿಡಿದು ಆತನನ್ನು ಆರಾಧಿಸಿದರು.
- Luke 17:20–21 ಲೂಕನು 17:20–21ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಲು ಆತನು ಅವರಿಗೆ ಪ್ರತ್ಯುತ್ತರವಾಗಿ--ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವದಿಲ್ಲ. ಇದಲ್ಲದೆ--ಇಗೋ, ಇಲ್ಲಿದೆ! ಇಲ್ಲವೆ ಅಗೋ, ಅಲ್ಲಿದೆ ಎಂದು ಅವರು ಹೇಳುವದಕ್ಕಾಗು ವದಿಲ್ಲ; ಯಾಕಂದರೆ ಇಗೋ, ದೇವರ ರಾಜ್ಯವು ನಿಮ್ಮೊಳಗೆ ಇದೆ ಅಂದನು.
- Matthew 21:43 ಮತ್ತಾಯನು 21:43ಆದದರಿಂದ ನಾನು ನಿಮಗೆ ಹೇಳುವದೇನಂದರೆ--ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವದು.
- Acts 28:31 ಅಪೊಸ್ತಲರ ಕೃತ್ಯಗಳು 28:31ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.
- 1 Thessalonians 2:12 1 ಥೆಸಲೊನೀಕದವರಿಗೆ 2:12ತನ್ನ ರಾಜ್ಯಕ್ಕೂ ಪ್ರಭಾವಕ್ಕೂ ಕರೆದ ದೇವರಿಗೆ ನೀವು ಯೋಗ್ಯರಾಗಿ ನಡೆಯಬೇಕೆಂದು ಖಂಡಿತವಾಗಿ ಹೇಳುತ್ತಾ ಇದ್ದೆವೆಂಬದು ನಿಮಗೆ ತಿಳಿದದೆ.
- John 20:1–21 ಯೋಹಾನನು 20:1–21ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲಿರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯಿಂದ ಕಲ್ಲು ತೆಗೆದುಹಾಕಲ್ಪಟ್ಟಿರುವದನ್ನು ಕಂಡಳು. ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಆ ಬೇರೆ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ--ಕರ್ತನನ್ನು ಅವರು ಸಮಾಧಿ ಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ ಅಂದಳು. ಆದದರಿಂದ ಪೇತ್ರನೂ ಮತ್ತೊಬ್ಬ ಶಿಷ್ಯನೂ ಹೊರಟು ಸಮಾಧಿಗೆ ಬಂದರು. ಹೀಗೆ ಅವರಿಬ್ಬರೂ ಜೊತೆಯಾಗಿ ಓಡಿದರು; ಆ ಬೇರೆ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲು ಸಮಾಧಿಗೆ ಬಂದನು. ಅವನು ಬೊಗ್ಗಿಕೊಂಡು ಒಳಗೆ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವದನ್ನು ಕಂಡನು. ಆದಾಗ್ಯೂ ಅವನು ಒಳಗೆ ಹೋಗಲಿಲ್ಲ. ಆಮೇಲೆ ಸೀಮೋನ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ ನಾರುಬಟ್ಟೆಗಳು ಬಿದ್ದಿರುವದನ್ನೂ ಆತನ ತಲೆಯ ಮೇಲಿದ್ದ ಕೈವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಸುತ್ತಿ ಒಂದು ಕಡೆಯಲ್ಲಿ ಬೇರೆ ಇರುವದನ್ನೂ ಕಂಡನು. ಆಗ ಮೊದಲು ಸಮಾಧಿಗೆ ಬಂದ ಆ ಬೇರೆ ಶಿಷ್ಯನು ಸಹ ಒಳಗೆ ಹೋಗಿ ನೋಡಿ ನಂಬಿದನು. ಯಾಕಂದರೆ ಆತನು ಸತ್ತವರೊಳಗಿಂದ ತಿರಿಗಿ ಎದ್ದೇಳುವದು ಅಗತ್ಯವೆಂಬ ಬರಹವು ಅವರಿಗೆ ಇನ್ನೂ ತಿಳಿದಿರಲಿಲ್ಲ. ತರು ವಾಯ ಆ ಶಿಷ್ಯರು ತಮ್ಮ ಸ್ವಂತ ಮನೆಗೆ ಹೊರಟು ಹೋದರು. ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು; ಆಕೆಯು ಅಳುತ್ತಾ ಸಮಾಧಿಯೊಳಗೆ ಬೊಗ್ಗಿ ನೋಡಿದಾಗ ಯೇಸು ವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಬಿಳೀವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೂತರು, ಒಬ್ಬನು ತಲೆಯ ಕಡೆಗೂ ಮತ್ತೊಬ್ಬನು ಪಾದಗಳ ಕಡೆಗೂ, ಕೂತಿರುವದನ್ನು ಕಂಡಳು. ಅವರು ಆಕೆಗೆ--ಸ್ತ್ರೀಯೇ, ನೀನು ಯಾಕೆ ಅಳುತ್ತೀ ಎಂದು ಕೇಳಲು ಆಕೆಯು ಅವರಿಗೆ--ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ; ಆತನನ್ನು ಅವರು ಎಲ್ಲೀ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ ಅಂದಳು. ಆಕೆಯು ಹೀಗೆ ಹೇಳಿದ ಮೇಲೆ ಹಿಂದಕ್ಕೆ ತಿರುಗಿ ಯೇಸು ನಿಂತಿರುವದನ್ನು ಕಂಡಳು; ಆದರೆ ಆತನು ಯೇಸು ಎಂದು ಆಕೆಗೆ ತಿಳಿಯಲಿಲ್ಲ. ಯೇಸು ಆಕೆಗೆ--ಸ್ತ್ರೀಯೇ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ ಅನ್ನಲು ಆಕೆಯು ಆತನು ತೋಟಗಾರನೆಂದು ನೆನಸಿ ಆತನಿಗೆ--ಅಯ್ಯಾ, ನೀನು ಆತನನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದರೆ ಆತನನ್ನು ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು; ನಾನು ಆತನನ್ನು ತೆಗೆದುಕೊಂಡು ಹೋಗುತ್ತೇ ಯೇಸು ಆಕೆಗೆ--ಮರಿಯಳೇ ಅನ್ನಲು ಆಕೆಯು ತಿರುಗಿಕೊಂಡು ಆತನಿಗೆ--ರಬ್ಬೂನಿ ಅಂದಳು,ಅಂದರೆ ಬೋಧಕನೇ ಎಂಬದು. ಯೇಸು ಆಕೆಗೆ--ನನ್ನನ್ನು ಮುಟ್ಟಬೇಡ; ಯಾಕಂದರೆ ನಾನು ಇನ್ನೂ ನನ್ನ ತಂದೆಯ ಬಳಿಗೆ ಏರಿಹೋಗಲಿಲ್ಲ; ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವ ರಿಗೆ--ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ಹೇಳು ಆಗ ಮಗ್ದಲದ ಮರಿಯಳು ಬಂದು ತಾನು ಕರ್ತನನ್ನು ನೋಡಿದಳೆಂದೂ ಆತನು ಈ ಸಂಗತಿಗಳನ್ನು ತನಗೆ ಹೇಳಿದನೆಂದೂ ಶಿಷ್ಯರಿಗೆ ಹೇಳಿದಳು. ಅದೇ ವಾರದ ಮೊದಲನೆಯ ದಿನದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿ ಬಂದಿದ್ದ ಮನೆಯ ಬಾಗಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು-- ನಿಮಗೆ ಸಮಾಧಾನವಾಗಲಿ ಎಂದು ಅವರಿಗೆ ಹೇಳಿ ದನು. ಆತನು ಹೀಗೆ ಹೇಳಿದ ಮೇಲೆ ತನ್ನ ಕೈಗಳನ್ನೂ ಪಕ್ಕೆಯನ್ನೂ ಅವರಿಗೆ ತೋರಿಸಿದನು; ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು. ಯೇಸು ತಿರಿಗಿ ಅವರಿಗೆ--ನಿಮಗೆ ಸಮಾಧಾನ ವಾಗಲಿ; ನನ್ನ ತಂದೆಯು ನನ್ನನ್ನು ಕಳುಹಿಸಿದ ಮೇರೆಗೆ ನಾನೂ ನಿಮ್ಮನ್ನು ಕಳುಹಿಸುತ್ತೇನೆ ಅಂದನು.
Original words (Greek)
- whom · G3739ὅς hós
- also · G2532καί kaí
- shewed · G3936παρίστημι parístēmi
- himself · G1438ἑαυτοῦ heautoû
- alive · G2198ζάω záō
- after · G3326μετά metá
- his · G846αὐτός autós
- passion · G3958πάσχω páschō
- by · G1722ἐν en
- many · G4183πολύς polýs
- proofs · G5039τεκμήριον tekmḗrion
- seen · G3700ὀπτάνομαι optánomai
- of · G1223διά diá
- them · G846αὐτός autós
- forty · G5062τεσσαράκοντα tessarákonta
- days · G2250ἡμέρα hēméra
- and · G2532καί kaí
- speaking · G3004λέγω légō
- to · G4012περί perí
- kingdom · G932βασιλεία basileía
- God · G2316θεός theós