Acts · chapter 11 · verse 4
Acts 11:4 in Kannada
ಆದರೆ ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿ ನಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ--
Aadare petranu nadeda sangatiyannu avarige modali ninda kramavaagi vivarisi heliddenandare--
Acts 11:4 in English
- King James Version (KJV)
- But Peter rehearsed [the matter] from the beginning, and expounded [it] by order unto them, saying,
- World English Bible (WEB)
- But Peter began, and explained to them in order, saying,
- American Standard Version (ASV)
- But Peter began, and expounded [the matter] unto them in order, saying,
- Bible in Basic English (BBE)
- But Peter gave them an account of it all in order, saying to them,
- Darby Translation (DBY)
- But Peter began and set forth [the matter] to them in order, saying,
- Webster's Bible (WBS)
- But Peter rehearsed [the matter] from the beginning, and expounded [it] by order to them, saying,
- Young's Literal Translation (YLT)
- And Peter having begun, did expound to them in order saying,
Read in context
- 2ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿ ಯವರು ಅವನ ಕೂಡ ವಿವಾದಿಸುತ್ತಾ--
- 3ನೀನು ಸುನ್ನತಿಯಿಲ್ಲದವರ ಬಳಿಗೆ ಹೋಗಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಕೇಳಿದರು.
- 4ಆದರೆ ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿ ನಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ--
- 5ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿ ದ್ದಾಗ ಪರವಶನಾಗಿದ್ದ ನನಗೆ ಒಂದು ದರ್ಶನ ವಾಯಿತು; ಅದೇನಂದರೆ, ಆಕಾಶದಿಂದ ನಾಲ್ಕು ಮೂಲೆಗಳಿಂದ ದೊಡ್ಡ ಜೋಳಿಗೆಯಂತಿರುವ ಒಂದು ಪಾತ್ರೆಯು ಇಳಿಸಲ್ಪಟ್ಟು ನನ್ನ ಬಳಿಗೆ ಬಂತು.
- 6ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೊಡಿದಾಗ ಭೂಮಿಯ ಮೇಲಿರುವ ನಾಲ್ಕು ಕಾಲು ಗಳುಳ್ಳ ಪಶುಗಳನ್ನೂ ಕಾಡು ಮೃಗಗಳನ್ನೂ ಹರಿ ದಾಡುವ ಕ್ರಿಮಿಕೀಟಗಳನ್ನೂ ಆಕಾಶದ ಪಕ್ಷಿಗಳನ್ನೂ ಕಂಡೆನು.
Cross references
- Luke 1:3 ಲೂಕನು 1:3ಅತ್ಯುತ್ತಮನಾದ ಥೆಯೊಫಿಲನೇ, ಮೊದಲಿ ನಿಂದಲೂ ಎಲ್ಲವುಗಳನ್ನು ಪೂರ್ಣವಾಗಿ ತಿಳಿದುಕೊಂಡಿ ರುವ ನಾನು ಸಹ ಅವುಗಳನ್ನು ಕ್ರಮವಾಗಿ ನಿನಗೆ ಬರೆಯುವದು ಒಳ್ಳೇದೆಂದು ನನಗೆ ತೋಚಿತು;
- Acts 14:27 ಅಪೊಸ್ತಲರ ಕೃತ್ಯಗಳು 14:27ಅವರು ಬಂದಾಗ ಸಭೆಯನ್ನು ಕೂಡಿಸಿ ದೇವರು ತಮ್ಮೊಂದಿಗಿದ್ದು ಮಾಡಿದ್ದೆಲ್ಲವನ್ನೂ ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲನ್ನು ತೆರೆ ದದ್ದನ್ನೂ ವಿವರವಾಗಿ ಹೇಳಿದರು.ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಬಹುಕಾಲ ಇದ್ದರು.
- Proverbs 15:1 ಜ್ಞಾನೋಕ್ತಿಗಳು 15:1ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತು ಗಳು ಕೋಪವನ್ನು ಎಬ್ಬಿಸುತ್ತವೆ.
- Joshua 22:21–31 ಯೆಹೋಶುವ 22:21–31ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ಇಸ್ರಾಯೇಲ್ ಸಹಸ್ರ ಮುಖ್ಯಸ್ಥರಿಗೆ ಪ್ರತ್ಯುತ್ತರವಾಗಿ-- ದೇವಾದಿ ದೇವರಾದ ಕರ್ತನೇ, ದೇವಾದಿ ದೇವರಾದ ಕರ್ತನೇ ತಿಳಿದಿದ್ದಾನೆ. ಇಸ್ರಾಯೇಲ್ಯರಿಗೂ ತಿಳಿಯುವದು. ಇದು ತಿರುಗಿ ಬೀಳುವದರಿಂದಲಾದರೂ ಕರ್ತನಿಗೆ ವಿರೋಧವಾಗಿ ಅಪರಾಧಮಾಡುವದರಿಂದಲಾದರೂ ಆಗಿದ್ದರೆ ನಮ್ಮನ್ನು ಈಹೊತ್ತು ರಕ್ಷಿಸಬಾರದು. ನಾವು ಕರ್ತನ ಕಡೆಗೆ ತಿರುಗಿಕೊಂಡು ದಹನಬಲಿಗಳ ನ್ನಾದರೂ ಆಹಾರ ಸಮರ್ಪಣೆಯನ್ನಾದರೂ ಸಮಾ ಧಾನದ ಬಲಿಗಳನ್ನಾದರೂ ಅದರ ಮೇಲೆ ಅರ್ಪಿಸುವ ದಕ್ಕೋಸ್ಕರ ಯಜ್ಞವೇದಿಯನ್ನು ನಮಗಾಗಿ ಕಟ್ಟಿದ್ದರೆ ಕರ್ತನು ಅದನ್ನು ವಿಚಾರಿಸಲಿ. ಆದರೆ ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ--ಇಸ್ರಾಯೇಲಿನ ದೇವರಾದ ಕರ್ತನಿಗೂ ನಿಮಗೂ ಏನು? ರೂಬೇನನ ಮಕ್ಕಳೇ, ಗಾದನ ಮಕ್ಕಳೇ, ಕರ್ತನು ನಿಮಗೂ ನಮಗೂ ಯೊರ್ದನನ್ನು ಮೇರೆ ಮಾಡಿದ್ದರಿಂದ ಕರ್ತನ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲವೆಂದು ಹೇಳಿ ನಮ್ಮಲ್ಲಿ ನಿಮಗೆ ಭಾಗವು ಇಲ್ಲ ವೆಂದು ಹೇಳಿ ನಮ್ಮ ಮಕ್ಕಳನ್ನು ಕರ್ತನಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು; ಆದದರಿಂದ ನಾವು ದಹನಬಲಿ ಗೋಸ್ಕರವಾದರೂ ಬಲಿಗೋಸ್ಕರವಾದರೂ ಅಲ್ಲ, ಬರುವಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆಕರ್ತನಲ್ಲಿ ನಿಮಗೆ ಭಾಗವಿಲ್ಲವೆಂದು ಹೇಳದೆ ಇರುವ ಹಾಗೆಯೂ ನಾವು ಕರ್ತನ ಸನ್ನಿಧಿಯಲ್ಲಿ ದಹನ ಬಲಿಗಳಿಂದಲೂ ಯಜ್ಞಗಳಿಂದಲೂ ಸಮಾಧಾನದ ಬಲಿಗಳಿಂದಲೂ ಆತನನ್ನು ಸೇವಿಸುವ ಹಾಗೆಯೂ ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿ ಯವರಿಗೂ ಮಧ್ಯದಲ್ಲಿ ಸಾಕ್ಷಿ ಉಂಟಾಗುವ ಹಾಗೆ ಯಜ್ಞವೇದಿಯನ್ನು ಕಟ್ಟಿಕೊಳ್ಳುವದಕ್ಕೆ ಮಾಡಿದೆವು. ನಾವು ಅಂದುಕೊಂಡದ್ದೇನಂದರೆ--ಮುಂದೆ ನಮ ಗಾದರೂ ನಮ್ಮ ಸಂತತಿಯವರಿಗಾದರೂ ಹಾಗೆ ಹೇಳಿದರೆ ಆಗ ದಹನಬಲಿಗಳಿಗಾದರೂ ಬಲಿ ಗಳಿಗಾದರೂ ಅಲ್ಲ, ನಮಗೂ ನಿಮಗೂ ನಡುವೆ ಸಾಕ್ಷಿಗೋಸ್ಕರ ನಮ್ಮ ತಂದೆಗಳು ಮಾಡಿದ ಕರ್ತನ ಬಲಿಪೀಠದ ಹೋಲಿಕೆಯಾದ ಯಜ್ಞವೇದಿಯನ್ನು ನೋಡಿರಿ ಎಂದು ಹೇಳುವರು. ನಮ್ಮ ದೇವರಾದ ಕರ್ತನ ಗುಡಾರದ ಮುಂದೆ ಇರುವ ಆತನ ಯಜ್ಞ ವೇದಿಯನ್ನು ಹೊರತಾಗಿ ನಾವು ದಹನಬಲಿಗಳಿ ಗೋಸ್ಕರವಾಗಿಯೂ ಆಹಾರ ಸಮರ್ಪಣೆಗಳಿ ಗೋಸ್ಕರವಾಗಿಯೂ ಬಲಿಗಳಿಗೋಸ್ಕರವಾಗಿಯೂ ಮತ್ತೊಂದು ಯಜ್ಞವೇದಿಯನ್ನು ಕಟ್ಟಿ ಕರ್ತನಿಗೆ ವಿರೋಧವಾಗಿ ತಿರುಗಿ ಬೀಳುವದೂ ಆತನ ಕಡೆ ಯಿಂದ ಹಿಂತಿರುಗಿ ಹೋಗುವದೂ ನಮಗೆ ದೂರ ವಾಗಿರಲಿ ಅಂದರು. ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್ ಸಹಸ್ರಗಳ ಮುಖ್ಯಸ್ಥರೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಮಕ್ಕಳೂ ಹೇಳಿದ ಮಾತುಗಳನ್ನು ಕೇಳಿ ದಾಗ ಅವರಿಗೆ ಮೆಚ್ಚಿಕೆಯಾಯಿತು. ಯಾಜಕ ನಾಗಿರುವ ಎಲ್ಲಾಜಾರನ ಕುಮಾರನಾದ ಫೀನೆಹಾಸನು ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಮನಸ್ಸೆಯ ಮಕ್ಕಳಿಗೂ--ನೀವು ಕರ್ತನಿಗೆ ವಿರೋಧವಾಗಿ ಈ ಅಪರಾಧವನ್ನು ಮಾಡದೆ ಇರುವದರಿಂದ ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೆಂದು ಇಂದು ಅರಿತಿದ್ದೇವೆ. ಈಗ ನೀವು ಇಸ್ರಾಯೇಲ್ ಮಕ್ಕಳನ್ನು ಕರ್ತನ ಕೈಗೆ ತಪ್ಪಿಸಿದ್ದೀ ಅಂದನು.