Acts · chapter 19 · verse 3
Acts 19:3 in Kannada
ಆಗ ಅವನು ಅವರಿಗೆ--ನೀವು ಯಾವದಕ್ಕಾಗಿ ಬಾಪ್ತಿಸ್ಮ ಮಾಡಿಸಿಕೊಂಡಿರಿ ಎಂದು ಕೇಳಿದನು. ಅದಕ್ಕವರು--ಯೋಹಾನನ ಬಾಪ್ತಿಸ್ಮಕ್ಕನುಸಾರವಾಗಿ ಮಾಡಿಸಿ ಕೊಂಡೆವು ಎಂದು ಹೇಳಿದರು.
Aaga avanu avarige--neevu yaavadakkaagi baaptisma maadisikondiri endu kelidanu. Adakkavaru--yohaanana baaptismakkanusaaravaagi maadisi kondevu endu helidaru.
Acts 19:3 in English
- King James Version (KJV)
- And he said unto them, Unto what then were ye baptized? And they said, Unto John’s baptism.
- World English Bible (WEB)
- He said, “Into what then were you baptized?” They said, “Into John’s baptism.”
- American Standard Version (ASV)
- And he said, Into what then were ye baptized? And they said, Into John’s baptism.
- Bible in Basic English (BBE)
- And he said, What sort of baptism did you have? And they said, The baptism of John.
- Darby Translation (DBY)
- And he said, To what then were ye baptised? And they said, To the baptism of John.
- Webster's Bible (WBS)
- And he said to them, Into what then were ye baptized? And they said, Into John's baptism.
- Young's Literal Translation (YLT)
- and he said unto them, 'To what, then, were ye baptized?' and they said, 'To John's baptism.'
Read in context
- 1ಇದಾದ ಮೇಲೆ ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮೇಲ್ಭಾ ಗದ ತೀರಗಳನ್ನು ದಾಟಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡನು.
- 2ಅವರಿಗೆ--ನೀವು ನಂಬಿದಾಗ ಪವಿತ್ರಾತ್ಮನನ್ನು ಹೊಂದಿದಿರೋ ಎಂದು ಕೇಳಿದ್ದಕ್ಕೆ ಅವರು ಅವನಿಗೆ--ಪವಿತ್ರಾತ್ಮನು ಇದ್ದಾ ನೆಂಬದು ನಾವು ಕೇಳಲೇ ಇಲ್ಲ ಅಂದರು.
- 3ಆಗ ಅವನು ಅವರಿಗೆ--ನೀವು ಯಾವದಕ್ಕಾಗಿ ಬಾಪ್ತಿಸ್ಮ ಮಾಡಿಸಿಕೊಂಡಿರಿ ಎಂದು ಕೇಳಿದನು. ಅದಕ್ಕವರು--ಯೋಹಾನನ ಬಾಪ್ತಿಸ್ಮಕ್ಕನುಸಾರವಾಗಿ ಮಾಡಿಸಿ ಕೊಂಡೆವು ಎಂದು ಹೇಳಿದರು.
- 4ಆಗ ಪೌಲನು--ನಿಜವಾಗಿಯೂ ಯೋಹಾನನು ತನ್ನ ಹಿಂದೆ ಬರುವಾತ ನನ್ನು ಅಂದರೆ ಕ್ರಿಸ್ತ ಯೇಸುವನ್ನು ನಂಬಬೇಕೆಂದು ಜನರಿಗೆ ಹೇಳಿ ಮಾನಸಾಂತರದ ಬಾಪ್ತಿಸ್ಮದಿಂದ ಬಾಪ್ತಿಸ್ಮ ಮಾಡಿಸಿದನು ಎಂದು ಹೇಳಿದನು.
- 5ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡರು.
Cross references
- Acts 18:25 ಅಪೊಸ್ತಲರ ಕೃತ್ಯಗಳು 18:25ಇವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದ ವನಾಗಿದ್ದನು; ಆತ್ಮದಲ್ಲಿ ಆಸಕ್ತನಾಗಿದ್ದ ಇವನು ಯೋಹಾನನು ಮಾಡಿಸಿದ ಬಾಪ್ತಿಸ್ಮವನ್ನು ಮಾತ್ರ ಬಲ್ಲವನಾಗಿದ್ದನು. ಆದಾಗ್ಯೂ ಕರ್ತನ ವಿಷಯಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸುತ್ತಿದ್ದನು.
- Matthew 3:1–17 ಮತ್ತಾಯನು 3:1–17ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ-- ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು. ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ. ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು. ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡಿ ಯೊರ್ದನಿನಲ್ಲಿ ಅವನಿಂದ ಬಾಪ್ತಿಸ್ಮ ಮಾಡಿಕೊಂಡರು. ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ; ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು. ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು. ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು. ಆಗ ಯೇಸು ಯೋಹಾನನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದ ನಿಗೆ ಬಂದನು. ಆದರೆ ಯೋಹಾನನು ಆತನನ್ನು ತಡೆದು--ನಾನು ನಿನ್ನಿಂದ ಬಾಪ್ತಿಸ್ಮ ಮಾಡಿಸಿ ಕೊಳ್ಳುವದು ಅಗತ್ಯವಿರಲಾಗಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು. ಆಗ ಅವನು ಒಪ್ಪಿಕೊಂಡನು. ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ, ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು.ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು. ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು.
- Luke 3:1–38 ಲೂಕನು 3:1–38ಕೈಸರನಾದ ತಿಬೇರಿಯನ ಆಳಿಕೆಯ ಕಾಲದ ಹದಿನೈದನೇ ವರುಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾ ಯಕ್ಕೆ ಚತುರಾಧಿಪತಿಯೂ ಅವನ ಸಹೋದರನಾದ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾ ಧಿಪತಿಯೂ ಅನ್ನನು ಮತ್ತು ಕಾಯಫನು ಮಹಾ ಯಾಜಕರೂ ಆಗಿದ್ದಾಗ ಅಡವಿಯಲ್ಲಿದ್ದ ಜಕರೀಯನ ಮಗನಾದ ಯೋಹಾನನ ಬಳಿಗೆ ದೇವರ ವಾಕ್ಯವು ಬಂತು. ಅವನು ಯೊರ್ದನಿನ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು ಪಾಪಗಳ ಪರಿಹಾರಕ್ಕಾಗಿ ಮಾನ ಸಾಂತರದ ಬಾಪ್ತಿಸ್ಮವನ್ನು ಸಾರಿ ಹೇಳುವವನಾದನು. ಪ್ರವಾದಿಯಾದ ಯೆಶಾಯನ ವಾಕ್ಯಗಳ ಪುಸ್ತಕ ದಲ್ಲಿ--ಕರ್ತನ ಮಾರ್ಗವನ್ನು ಸಿದ್ಧ ಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂದೂ ಪ್ರತಿಯೊಂದು ತಗ್ಗು ಮುಚ್ಚಿಸಲ್ಪಡುವದು, ಪ್ರತಿಯೊಂದು ಬೆಟ್ಟವು ತಗ್ಗಿಸಲ್ಪಡುವದು, ಡೊಂಕಾದವುಗಳು ನೆಟ್ಟಗಾಗುವವು ಮತ್ತು ಕೊರಕಲಾದ ದಾರಿಗಳು ಸಮವಾಗುವವು; ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು. ಆಗ ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ--ಓ ಸರ್ಪಗಳ ಸಂತತಿಯವರೇ, ಬರುವದಕ್ಕಿರುವ ಕೋಪದಿಂದ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಎಚ್ಚರಿಸಿದವರಾರು? ಹಾಗಾದರೆ ಮಾನಸಾ ಂತರಕ್ಕೆ ಯೋಗ್ಯವಾದ ಫಲಗಳನ್ನು ಫಲಿಸಿರಿ,--ಅಬ್ರಹಾಮನು ನಮಗೆ ತಂದೆಯಾಗಿದ್ದಾನೆಂದು ನಿಮ್ಮೊಳಗೆ ಅಂದುಕೊಳ್ಳುವದಕ್ಕೆ ಆರಂಭಿಸಬೇ ಡಿರಿ; ಯಾಕಂದರೆ--ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು. ಆಗ ಜನರು ಅವನಿಗೆ--ಹಾಗಾದರೆ ನಾವೇನು ಮಾಡಬೇಕು ಎಂದು ಕೇಳಿದರು. ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು. ತರುವಾಯ ಸುಂಕದವರು ಸಹ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಬಂದು ಅವನಿಗೆ--ಬೋಧಕನೇ, ನಾವೇನು ಮಾಡಬೇಕು ಎಂದು ಕೇಳಿದರು. ಅದಕ್ಕವನು ಅವರಿಗೆ-- ನಿಮಗೆ ನೇಮಿಸಲ್ಪಟ್ಟದ್ದಕ್ಕಿಂತ ಹೆಚ್ಚೇನೂ ತೆಗೆದು ಕೊಳ್ಳಬೇಡಿರಿ ಅಂದನು. ಅದರಂತೆಯೇ ಸೈನಿ ಕರು--ನಾವೇನು ಮಾಡತಕ್ಕದ್ದು ಎಂದು ಕೇಳಿದ್ದಕ್ಕೆ ಅವನು ಅವರಿಗೆ--ಯಾರನ್ನೂ ಹಿಂಸಿಸಬೇಡಿರಿ; ಇಲ್ಲವೆ ಯಾರ ಮೇಲೆಯೂ ಸುಳ್ಳಾಗಿ ದೂರು ಹೇಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರ್ರಿ ಎಂದು ಹೇಳಿದನು. ಆಗ ಜನರು ಕ್ರಿಸ್ತನನ್ನು ಎದುರು ನೋಡುವವರಾಗಿದ್ದರಿಂದ ಯೋಹಾನನು ಆ ಕ್ರಿಸ್ತನಾ ಗಿರಬಹುದೋ ಇಲ್ಲವೋ ಎಂದು ಎಲ್ಲರೂ ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು. ಆಗ ಯೋಹಾನನು ಪ್ರತ್ಯುತ್ತರವಾಗಿ ಅವರೆಲ್ಲ ರಿಗೆ--ನಾನಂತೂ ನಿಮಗೆ ನೀರಿನ ಬಾಪ್ತಿಸ್ಮ ಮಾಡಿಸು ವದು ನಿಜವೇ; ಆದರೆ ನನಗಿಂತ ಶಕ್ತನೊಬ್ಬನು ಬರು ತ್ತಾನೆ; ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಿಂದಲೂ ಬೆಂಕಿಯಿಂ ದಲೂ ನಿಮಗೆ ಬಾಪ್ತಿಸ್ಮ ಮಾಡಿಸುವನು ಆತನ ಮೊರವು ಆತನ ಕೈಯಲ್ಲಿದೆ. ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಡುವನು ಎಂದು ಹೇಳಿದನು. ಅವನು ಇನ್ನೂ ಅನೇಕ ವಿಷಯಗಳಿಂದ ಎಚ್ಚರಿಸಿ ಜನರಿಗೆ ಸಾರಿದನು. ಆದರೆ ಚತುರಾಧಿಪತಿಯಾದ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡ ತಿಯಾದ ಹೆರೋದ್ಯಳಿಗಾಗಿಯೂ ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿಯೂ ಯೋಹಾ ನನು ಅವನನ್ನು ಗದರಿಸಿದ್ದರಿಂದ ಅವನು ಯೋಹಾ ನನನ್ನು ಸೆರೆಯಲ್ಲಿ ಹಾಕಿ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ಮೇಲೆ ಇದನ್ನು ಕೂಡಿಸಿದನು. ಜನರೆಲ್ಲಾ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ ಆದದ್ದೇನಂದರೆ ಯೇಸು ಸಹ ಬಾಪ್ತಿಸ್ಮ ಮಾಡಿಸಿಕೊಂಡು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಲ್ಪಟ್ಟಿತು. ಆಗ ಪರಿಶುದ್ಧಾತ್ಮನು ಪಾರಿವಾಳದ ದೇಹಾಕಾರದಲ್ಲಿ ಇಳಿ ದನು; --ನೀನು ಪ್ರಿಯನಾಗಿರುವ ನನ್ನ ಮಗನು; ನಿನ್ನಲ್ಲಿ ನಾನು ಆನಂದಿಸುತ್ತೇನೆ ಎಂಬ ಧ್ವನಿಯು ಪರ ಲೋಕದೊಳಗಿಂದ ಬಂತು. ಯೇಸು ಹೆಚ್ಚು ಕಡಿಮೆ ಮೂವತ್ತು ವರುಷದ ವನಾದನು; ಆತನು ಯೋಸೇಫನ ಮಗನೆಂದು (ಎಣಿಸಲ್ಪಟ್ಟನು); ಯೋಸೇಫನು ಹೇಲೀಯ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಯನ್ನಾಯನ ಮಗನು; ಇವನು ಯೋಸೇಫನ ಮಗನು; ಇವನು ಮತ್ತಥೀಯನ ಮಗನು; ಇವನು ಆಮೋಸನ ಮಗನು; ಇವನು ನಹೂಮನ ಮಗನು; ಇವನು ಎಸ್ಲಿಯ ಮಗನು; ಇವನು ನಗ್ಗಾಯನ ಮಗನು; ಇವನು ಮಹಾಥನ ಮಗನು; ಇವನು ಮತ್ತಥೀಯನ ಮಗನು; ಇವನು ಶಿಮೀಯ ಮಗನು; ಇವನು ಯೋಸೇಫನ ಮಗನು; ಇವನು ಯೂದನ ಮಗನು; ಇವನು ಯೋಹಾನನ ಮಗನು; ಇವನು ರೇಸನ ಮಗನು; ಇವನು ಜೆರುಬಾ ಬೆಲನ ಮಗನು; ಇವನು ಸಲಥಿಯೇಲನ ಮಗನು; ಇವನು ನೇರಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಅದ್ದಿಯ ಮಗನು; ಇವನು ಕೊಸಾಮನ ಮಗನು; ಇವನು ಎಲ್ಮದಾಮನ ಮಗನು; ಇವನು ಏರನ ಮಗನು; ಇವನು ಯೋಸೇಯನ ಮಗನು; ಇವನು ಎಲಿಯೇಜರನ ಮಗನು; ಇವನು ಯೋರೈಮನ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಸಿಮಿ ಯೋನನ ಮಗನು; ಇವನು ಯೂದನ ಮಗನು; ಇವನು ಯೋಸೇಫನ ಮಗನು; ಇವನು ಯೋನಾಮನ ಮಗನು; ಇವನು ಎಲಿಯಕೀಮನ ಮಗನು; ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು; ಇವನು ಇಷಯನ ಮಗನು; ಇವನು ಓಬೇದನ ಮಗನು; ಇವನು ಬೋವಜನ ಮಗನು; ಇವನು ಸಲ್ಮೋನನ ಮಗನು; ಇವನು ನಹಸ್ಸೋನನ ಮಗನು; ಇವನು ಅಮ್ಮಿನಾದಾಬನ ಮಗನು; ಇವನು ಅರಾಮನ ಮಗನು; ಇವನು ಎಸ್ರೋಮನ ಮಗನು; ಇವನು ಪೆರೆಸನ ಮಗನು; ಇವನು ಯೂದನ ಮಗನು; ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು; ಇವನು ಸೆರೂಗನ ಮಗನು; ಇವನು ರೆಗೂವನ ಮಗನು; ಇವನು ಪೆಲೆಗನ ಮಗನು; ಇವನು ಹೇಬೆರನ ಮಗನು; ಇವನು ಸಾಲನ ಮಗನು; ಇವನು ಕಯಿನಾನನ ಮಗನು; ಇವನು ಅರ್ಫಕ್ಷಾದನ ಮಗನು; ಇವನು ಶೇಮನ ಮಗನು; ಇವನು ನೋಹನ ಮಗನು; ಇವನು ಲಾಮೆಕನ ಮಗನು; ಇವನು ಮೆತೂಷಲನ ಮಗನು; ಇವನು ಹನೋಕನ ಮಗನು; ಇವನು ಯೆರೆದನ ಮಗನು; ಇವನು ಮಹಲಲೇಲನ ಮಗನು; ಇವನು ಕಾಯಿನನ ಮಗನು;ಇವನು ಎನೋಷನ ಮಗನು; ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು. ಇವನು ಎನೋಷನ ಮಗನು; ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು.
- Matthew 28:19 ಮತ್ತಾಯನು 28:19ಆದದರಿಂದ ನೀವು ಹೋಗಿ ಎಲ್ಲಾ ಜನಾಂಗಗಳಿಗೆ ಬೋಧಿಸಿ ತಂದೆಯ, ಮಗನ, ಪರಿಶುದ್ಧಾತ್ಮನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿರಿ;ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
- Acts 8:16 ಅಪೊಸ್ತಲರ ಕೃತ್ಯಗಳು 8:16(ಯಾಕಂದರೆ ಪವಿತ್ರಾತ್ಮನು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿ ನಲ್ಲಿ ಬಾಪ್ತಿಸ್ಮವನ್ನು ಮಾತ್ರ ಮಾಡಿಸಿಕೊಂಡಿದ್ದರು).
- 1 Corinthians 12:13 1 ಕೊರಿಂಥದವರಿಗೆ 12:13ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ.