Acts · chapter 2 · verse 35
Acts 2:35 in Kannada
ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ.
Naanu ninna virodhi galannu ninna paadapeethavaagi maaduva tanaka neenu nanna balagadeyalli kootukondiru endu taane heluttaane.
Acts 2:35 in English
- King James Version (KJV)
- Until I make thy foes thy footstool.
- World English Bible (WEB)
- until I make your enemies a footstool for your feet.”’
- American Standard Version (ASV)
- Till I make thine enemies the footstool of thy feet.
- Bible in Basic English (BBE)
- Till I put all those who are against you under your feet.
- Darby Translation (DBY)
- until I have put thine enemies [to be] the footstool of thy feet.
- Webster's Bible (WBS)
- Until I make thy foes thy footstool.
- Young's Literal Translation (YLT)
- till I make thy foes thy footstool;
Read in context
- 33ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ.
- 34ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ--
- 35ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ.
- 36ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
- 37ಅವರು ಇದನ್ನು ಕೇಳಿ ತಮ್ಮ ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಪೇತ್ರನಿಗೂ ಉಳಿದ ಅಪೊಸ್ತಲರಿಗೂ--ಜನರೇ, ಸಹೋದರರೇ, ನಾವು ಏನು ಮಾಡಬೇಕು ಎಂದು ಕೇಳಿದರು.
Cross references
- Romans 16:20 ರೋಮಾಪುರದವರಿಗೆ 16:20ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ತುಳಿದುಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.
- Isaiah 60:14 ಯೆಶಾಯ 60:14ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು.
- Isaiah 59:18 ಯೆಶಾಯ 59:18ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು; ತನ್ನ ವೈರಿ ಗಳಿಗೆ ಕ್ರೋಧವನ್ನೂ ತನ್ನ ಶತ್ರುಗಳಿಗೂ ದ್ವೀಪಗ ಳಿಗೂ ಪ್ರತಿಫಲವನ್ನು ಸಲ್ಲಿಸುವನು.
- Revelation 20:8–15 ಪ್ರಕಟನೆ 20:8–15ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು. ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ದೇವರ ಬಳಿಯಿಂದ ಬೆಂಕಿಯು ಪರಲೋಕ ದೊಳಗಿಂದ ಇಳಿದು ಬಂದು ಅವರನ್ನು ನುಂಗಿಬಿಟ್ಟಿತು. ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು; ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು. ಆಮೇಲೆ ಬೆಳ್ಳಗಿರುವ ಮಹಾಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಅವುಗಳಿಗೆ ಸ್ಥಳವಿಲ್ಲದಂತಾಯಿತು. ಇದಲ್ಲದೆ ಸತ್ತವರಾದ ಚಿಕ್ಕವರೂ ದೊಡ್ಡವರೂ ದೇವರ ಮುಂದೆ ನಿಂತಿರುವದನ್ನು ನಾನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಜೀವಗ್ರಂಥವೆಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. ಆಮೇಲೆ ಮೃತ್ಯುವೂ ನರಕವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಇದೇ ಎರಡನೆಯ ಮರಣವು.ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು. ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
- Isaiah 63:4–6 ಯೆಶಾಯ 63:4–6ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
- Psalm 72:9 ಕೀರ್ತನೆಗಳು 72:9ಆತನ ಮುಂದೆ ಅರಣ್ಯ ನಿವಾಸಿಗಳು ಎರಗುವರು; ಆತನ ಶತ್ರುಗಳು ಧೂಳನ್ನು ನೆಕ್ಕುವರು.
- Luke 20:16–18 ಲೂಕನು 20:16–18ಅವನು ಬಂದು ಈ ಒಕ್ಕಲಿಗರನ್ನು ಸಂಹರಿಸಿ ದ್ರಾಕ್ಷೇತೋಟ ವನ್ನು ಬೇರೆಯವರಿಗೆ ಕೊಡುವನು ಅಂದನು. ಅವರು ಇದನ್ನು ಕೇಳಿ--ಹಾಗೆ ಎಂದಿಗೂ ಆಗಬಾರದು ಅಂದರು. ಆಗ ಆತನು ಅವರನ್ನು ನೋಡಿ--ಹಾಗಾದರೆ ಮನೇ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂದು ಬರೆದಿರು ವದು ಏನು? ಯಾವನಾದರೂ ಆ ಕಲ್ಲಿನ ಮೇಲೆ ಬಿದ್ದರೆ ತುಂಡುತುಂಡಾಗುವನು. ಆದರೆ ಇದು ಯಾರ ಮೇಲೆ ಬೀಳುವದೋ ಅವನನ್ನು ಅದು ಅರೆದು ಪುಡಿಪುಡಿ ಮಾಡುವದು ಅಂದನು.
- Psalm 18:40–42 ಕೀರ್ತನೆಗಳು 18:40–42ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ. ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ. ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.
- Genesis 3:15 ಆದಿಕಾಂಡ 3:15ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು, ಕಚ್ಚುವಿ ಅಂದನು.
- Psalm 21:8–12 ಕೀರ್ತನೆಗಳು 21:8–12ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು. ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು. ನೀನು ಅವರ ಫಲವನ್ನು ಭೂಮಿಯೊಳ ಗಿಂದಲೂ ಅವರ ಸಂತತಿಯನ್ನು ಮನುಷ್ಯನ ಮಕ್ಕ ಳೊಳಗಿಂದಲೂ ನಾಶಮಾಡುವಿ. ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು. ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ: ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿ.ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.
- Isaiah 49:23 ಯೆಶಾಯ 49:23ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.