Acts · chapter 26 · verse 6
Acts 26:6 in Kannada
ಈಗಲೂ ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ನಿರೀಕ್ಷೆಯ ವಿಷಯದಲ್ಲಿ ನಾನು ವಿಚಾರಿಸಲ್ಪಡು ವವನಾಗಿ ನಿಂತುಕೊಂಡಿದ್ದೇನೆ.
Eegaloo devaru namma pitrugalige maadida vaagdaanada nireeksheya vishayadalli naanu vichaarisalpadu vavanaagi nintukondiddene.
Acts 26:6 in English
- King James Version (KJV)
- And now I stand and am judged for the hope of the promise made of God unto our fathers:
- World English Bible (WEB)
- Now I stand here to be judged for the hope of the promise made by God to our fathers,
- American Standard Version (ASV)
- And now I stand [here] to be judged for the hope of the promise made of God unto our fathers;
- Bible in Basic English (BBE)
- And now I am here to be judged because of the hope given by God's word to our fathers;
- Darby Translation (DBY)
- And now I stand to be judged because of the hope of the promise made by God to our fathers,
- Webster's Bible (WBS)
- And now I stand, and am judged for the hope of the promise made by God to our fathers:
- Young's Literal Translation (YLT)
- and now for the hope of the promise made to the fathers by God, I have stood judged,
Read in context
- 4ನಾನು ಮೊದಲಿನಿಂದಲೂ ಯೆರೂಸಲೇಮಿನಲ್ಲಿರುವ ನನ್ನ ಸ್ವಂತ ಜನಾಂಗದವರ ಮಧ್ಯದಲ್ಲಿ ಬಾಲ್ಯದಿಂದ ನಾನು ಬದುಕಿದ ವಿಧಾನವು ಎಲ್ಲಾ ಯೆಹೂದ್ಯರಿಗೆ ತಿಳಿದದೆ.
- 5ನಮ್ಮ ಮತದ ಬಹು ನಿಷ್ಠೆಯ ಪಂಗಡಕ್ಕನುಸಾರವಾಗಿ ನಾನು ಒಬ್ಬ ಫರಿಸಾಯನಾಗಿ ಬದುಕಿರುವದನ್ನು ಮೊದಲಿನಿಂದಲೂ ತಿಳಿದವರಾದ ಇವರು ಸಾಕ್ಷಿ ಕೊಡಬೇಕೆಂದಿದ್ದರೆ ಕೊಡಲಿ.
- 6ಈಗಲೂ ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ನಿರೀಕ್ಷೆಯ ವಿಷಯದಲ್ಲಿ ನಾನು ವಿಚಾರಿಸಲ್ಪಡು ವವನಾಗಿ ನಿಂತುಕೊಂಡಿದ್ದೇನೆ.
- 7ನಮ್ಮ ಹನ್ನೆರಡು ಗೋತ್ರದವರು ಆಸಕ್ತಿಯಿಂದ ಹಗಲಿರುಳು ದೇವರನ್ನು ಸೇವಿಸುತ್ತಾ ಈ ವಾಗ್ದಾನದ ನೆರವೇರಿಕೆಗಾಗಿ ನಿರೀಕ್ಷಿಸುತ್ತಿದ್ದಾರೆ; ಅಗ್ರಿಪ್ಪ ರಾಜನೇ, ಈ ನಿರೀಕ್ಷೆಯ ವಿಷಯಕ್ಕಾಗಿಯೇ ಯೆಹೂದ್ಯರು ನನ್ನ ಮೇಲೆ ತಪ್ಪುಹೊರಿಸುತ್ತಾರೆ.
- 8ಸತ್ತವರನ್ನು ದೇವರು ಎಬ್ಬಿಸುವನೆಂಬದು ನಂಬಲಾಗದ ಒಂದು ವಿಷಯವೆಂದು ನೀವು ಯಾಕೆ ಯೋಚಿಸುತ್ತೀರಿ?
Cross references
- Titus 2:13 ತೀತನಿಗೆ 2:13ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.
- Acts 24:15 ಅಪೊಸ್ತಲರ ಕೃತ್ಯಗಳು 24:15ಸತ್ತುಹೋದ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವು ಇರುವದೆಂದು ನಾನು ದೇವರ ಕಡೆಗೆ ನಿರೀಕ್ಷೆ ಇಟ್ಟಿದ್ದೇನೆ. ಅದಕ್ಕೆ ಇವರು ಸಹ ಒಪ್ಪಿ ಕೊಳ್ಳುತ್ತಾರೆ.
- Acts 28:20 ಅಪೊಸ್ತಲರ ಕೃತ್ಯಗಳು 28:20ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.
- Daniel 7:13–14 ದಾನಿಯೇಲನು 7:13–14ನಾನು ಕಂಡ ರಾತ್ರಿಯ ದರ್ಶನದಲ್ಲಿ ಇಗೋ, ಮನುಷ್ಯ ಕುಮಾರನಂತಿರುವ ಒಬ್ಬನು ಆಕಾಶದ ಮೇಘಗಳ ಸಂಗಡ ಪೂರ್ವಿಕನ ಬಳಿಗೆ ಸವಿಾಪಿಸಿದನು. ಅವನನ್ನು ಆತನ ಬಳಿಗೆ ಕರೆತಂದರು. ಆತನನ್ನು ಸಕಲ ಪ್ರಜೆ, ಜನಾಂಗ, ಭಾಷೆಗಳವರು ಸೇವಿಸುವ ಹಾಗೆ ಆತನಿಗೆ ಅಧಿಕಾರವು ಮಹತ್ವವು ರಾಜ್ಯವು ಕೊಡಲ್ಪಟ್ಟವು. ಈತನ ಅಧಿಕಾರವು ಎಂದಿಗೂ ಮುಗಿಯದ ನಿತ್ಯ ಅಧಿಕಾರವುಳ್ಳದ್ದು. ಈತನ ರಾಜ್ಯವು ನಾಶವಾಗದಂತ ರಾಜ್ಯವಾಗಿದೆ.
- Romans 15:8 ರೋಮಾಪುರದವರಿಗೆ 15:8ಹೀಗಿರುವದರಿಂದ ಪಿತೃ ಗಳಿಗೆ ಮಾಡಿದ ವಾಗ್ದಾನಗಳನ್ನು ದೃಢಪಡಿಸುವದಕ್ಕೆ ದೇವರ ಸತ್ಯಕ್ಕಾಗಿ ಯೇಸು ಕ್ರಿಸ್ತನು ಸುನ್ನತಿಯವರಿಗೆ ಸೇವಕನಾಗಿದ್ದನೆಂದು ನಾನು ಹೇಳುತ್ತೇನೆ.
- Acts 23:6 ಅಪೊಸ್ತಲರ ಕೃತ್ಯಗಳು 23:6ಆದರೆ ಒಂದು ಭಾಗ ಸದ್ದುಕಾಯರೂ ಮತ್ತೊಂದು ಭಾಗ ಫರಿಸಾಯರೂ ಇರುವದನ್ನು ಪೌಲನು ಗ್ರಹಿಸಿದಾಗ--ಜನರೇ, ಸಹೋದರರೇ, ನಾನು ಫರಿಸಾಯನು, ಒಬ್ಬ ಫರಿಸಾಯನ ಮಗನು; ನಿರೀಕ್ಷೆಯ ವಿಷಯವಾಗಿಯೂ ಸತ್ತವರ ಪುನರುತ್ಥಾನದ ವಿಷಯವಾಗಿಯೂ ನಾನು ವಿಚಾರಣೆ ಮಾಡಲ್ಪಡುತ್ತಿದ್ದೇನೆ ಎಂದು ಆಲೆ
- Zechariah 13:7 ಜೆಕರ್ಯ 13:7ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ.
- Isaiah 9:6–7 ಯೆಶಾಯ 9:6–7ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು. ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Micah 5:2 ಮೀಕ 5:2ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.
- Genesis 22:18 ಆದಿಕಾಂಡ 22:18ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
- Genesis 26:4 ಆದಿಕಾಂಡ 26:4ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯಲ್ಲಿ ಭೂಮಿಯ ಜನಾಂಗ ಗಳೆಲ್ಲಾ ಆಶೀರ್ವದಿಸಲ್ಪಡುವವು.
- Job 19:25–27 ಯೋಬನು 19:25–27ನನ್ನ ವಿಮೋಚಕನು ಜೀವಿಸುತ್ತಾನೆಂದೂ ಆತನು ಕಡೆಯ ದಿನದಲ್ಲಿ ಭೂಮಿಯ ಮೇಲೆ ನಿಲ್ಲುವನೆಂದೂ ತಿಳಿದಿದ್ದೇನೆ; ನನ್ನ ಚರ್ಮದ ಹುಳಗಳು ಈ ದೇಹ ವನ್ನು ನಾಶಪಡಿಸಿದಾಗ್ಯೂ ನಾನು ನನ್ನ ಶರೀರದಿಂದ ದೇವರನ್ನು ನೋಡುವೆನು. ಆತನನ್ನು ನನಗೆ ನಾನೇ ದೃಷ್ಟಿಸುವೆನು; ನನ್ನ ಕಣ್ಣುಗಳೇ ನೋಡುವವು, ಬೇರೆ ಯವರಲ್ಲ.; ನನ್ನೊಳಗೆ ನನ್ನ ಅಂತರಿಂದ್ರಿಯಗಳು ಲಯವಾಗಿವೆ.