Acts · chapter 7 · verse 10
Acts 7:10 in Kannada
ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.
Avanige banda ellaa sankatagalinda avanannu bidisi aigupta deshada arasanaada pharohana sammukhadalli dayaa paatranoo jnyaanavullavanoo aagiruvante anugrahi sidanu. Pharohanu avanannu aigupta deshada meleyoo tanna ellaa maneya meleyoo adhikaariyannaagi nemisidanu.
Acts 7:10 in English
- King James Version (KJV)
- And delivered him out of all his afflictions, and gave him favour and wisdom in the sight of Pharaoh king of Egypt; and he made him governor over Egypt and all his house.
- World English Bible (WEB)
- and delivered him out of all his afflictions, and gave him favor and wisdom before Pharaoh, king of Egypt. He made him governor over Egypt and all his house.
- American Standard Version (ASV)
- and delivered him out of all his afflictions, and gave him favor and wisdom before Pharaoh king of Egypt; and he made him governor over Egypt and all his house.
- Bible in Basic English (BBE)
- And made him free from all his troubles, and gave him wisdom and the approval of Pharaoh, king of Egypt, who made him ruler over Egypt and all his house.
- Darby Translation (DBY)
- and delivered him out of all his tribulations, and gave him favour and wisdom in the sight of Pharaoh king of Egypt, and he appointed him chief over Egypt and all his house.
- Webster's Bible (WBS)
- And delivered him from all his afflictions, and gave him favor and wisdom in the sight of Pharaoh king of Egypt; and he made him governor over Egypt, and all his house.
- Young's Literal Translation (YLT)
- and did deliver him out of all his tribulations, and gave him favour and wisdom before Pharaoh king of Egypt, and he did set him — governor over Egypt and all his house.
Read in context
- 8ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.
- 9ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫ ನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. ಆದರೆ ದೇವರು ಅವನ ಸಂಗಡ ಇದ್ದು
- 10ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.
- 11ಆಗ ಐಗುಪ್ತ ಮತ್ತು ಕಾನಾನ್ ದೇಶಗಳಲ್ಲಿ ಎಲ್ಲೆಲ್ಲಿಯೂ ಬರ ಬಂದು ದೊಡ್ಡ ಸಂಕಟವಾಯಿತು; ಆಗ ನಮ್ಮ ಪಿತೃ ಗಳಿಗೆ ಆಹಾರಕ್ಕೇನೂ ಸಿಕ್ಕಲಿಲ್ಲ.
- 12ಆದರೆ ಐಗುಪ್ತ ದೇಶದಲ್ಲಿ ದವಸಧಾನ್ಯ ಉಂಟೆಂಬದನ್ನು ಯಾಕೋ ಬನು ಕೇಳಿ ನಮ್ಮ ಪಿತೃಗಳನ್ನು ಮೊದಲನೆಯ ಸಾರಿ ಅಲ್ಲಿಗೆ ಕಳುಹಿಸಿದನು.
Cross references
- 2 Timothy 4:18 2 ತಿಮೊಥೆಯನಿಗೆ 4:18ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ತಪ್ಪಿಸಿ ತನ್ನ ಪರಲೋಕರಾಜ್ಯಕ್ಕೆ ನನ್ನನ್ನು ಕಾಪಾಡು ವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ. ಆಮೆನ್.
- Proverbs 3:4 ಜ್ಞಾನೋಕ್ತಿಗಳು 3:4ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ.
- Proverbs 2:6 ಜ್ಞಾನೋಕ್ತಿಗಳು 2:6ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
- Genesis 48:16 ಆದಿಕಾಂಡ 48:16ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್ ಇಸಾಕ್ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು.
- Psalm 22:24 ಕೀರ್ತನೆಗಳು 22:24ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು.
- Genesis 42:6 ಆದಿಕಾಂಡ 42:6ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾ ಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರು ವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
- Psalm 34:17–19 ಕೀರ್ತನೆಗಳು 34:17–19ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ. ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ. ನೀತಿವಂತನಿಗೆ ಬರುವ ಕೇಡುಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಕರ್ತನು ಅವನನ್ನು ಬಿಡಿಸುತ್ತಾನೆ.
- Psalm 105:19–22 ಕೀರ್ತನೆಗಳು 105:19–22ಆತನ ವಾಕ್ಯವು ಬರುವ ವರೆಗೆ ಕರ್ತನ ಮಾತು ಅವನನ್ನು ಪುಟಕ್ಕೆ ಹಾಕಿತು. ಅರಸನು ಕಳುಹಿಸಿ ಅವನನ್ನು ಬಿಡಿಸಿದನು; ಜನಗಳ ಅಧಿಪತಿಯು ಅವನನ್ನು ಬಿಡುಗಡೆ ಮಾಡಿದನು. ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ ತನ್ನ ಪ್ರಧಾನರನ್ನು ಮನಸ್ಸು ಬಂದ ಹಾಗೆ ಕಟ್ಟುವದಕ್ಕೂ ತನ್ನ ಜ್ಞಾನ ವನ್ನು ಆಲೋಚನಾ ಕರ್ತರಿಗೆ ಕಲಿಸುವದಕ್ಕೂ ಇಟ್ಟನು.
- Genesis 41:12–46 ಆದಿಕಾಂಡ 41:12–46ಮೈಗಾವಲಿನ ಅಧಿಪತಿಗೆ ಸೇವಕ ನಾಗಿದ್ದ ಇಬ್ರಿಯನಾದ ಯೌವನಸ್ಥನು ಅಲ್ಲಿ ನಮ್ಮ ಸಂಗಡ ಇದ್ದನು. ಅವನಿಗೆ ನಾವು ನಮ್ಮ ಕನಸುಗಳನ್ನು ತಿಳಿಸಿದಾಗ ಅವನು ನಮ್ಮ ನಮ್ಮ ಕನಸಿನ ಪ್ರಕಾರ ಅರ್ಥವನ್ನು ಹೇಳಿದನು. ಅವನು ಹೇಳಿದ ಅರ್ಥದಂತೆಯೇ ನಮಗಾಯಿತು. ನನ್ನ್ನ ಉದ್ಯೋಗವು ತಿರಿಗಿ ನನಗೆ ದೊರಕಿತು; ಭಕ್ಷ್ಯ ಕಾರರಲ್ಲಿ ಮುಖ್ಯಸ್ಥನೋ ಗಲ್ಲಿಗೆ ಹಾಕಲ್ಪಟ್ಟನು ಅಂದನು. ಆಗ ಫರೋಹನು ಯೋಸೇಫನನ್ನು ಕರೇ ಕಳುಹಿಸಿದನು. ಅವರು ಅವನನ್ನು ತ್ವರೆಯಾಗಿ ಕಾರಾ ಗೃಹದಿಂದ ಹೊರಗೆ ತಂದರು. ಅವನು ಕ್ಷೌರಮಾಡಿಸಿ ಕೊಂಡವನಾಗಿ ತನ್ನ ವಸ್ತ್ರಗಳನ್ನು ಬದಲಾಯಿಸಿ ಫರೋಹನ ಬಳಿಗೆ ಬಂದನು. ಆಗ ಫರೋಹನು ಯೋಸೇಫನಿಗೆ--ನಾನು ಒಂದು ಕನಸನ್ನು ಕಂಡಿದ್ದೇನೆ; ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ. ನೀನು ಕನಸನ್ನು ಗ್ರಹಿಸಿ ಅದರ ಅರ್ಥವನ್ನು ಹೇಳುತ್ತೀ ಎಂದು ನಿನ್ನ ವಿಷಯವಾಗಿ ನಾನು ಕೇಳಿದ್ದೇನೆ ಅಂದನು. ಯೋಸೇಫನು ಫರೋಹನಿಗೆ ಪ್ರತ್ಯು ತ್ತರವಾಗಿ--ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು ಫರೋಹನಿಗೆ ಸಮಾಧಾನದ ಉತ್ತರವನ್ನು ಕೊಡುವನು ಅಂದನು. ಅದಕ್ಕೆ ಫರೋಹನು ಯೋಸೇಫನಿಗೆ--ನನ್ನ ಕನಸಿನಲ್ಲಿ ಇಗೋ, ನಾನು ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. ಆಗ ಇಗೋ, ಕೊಬ್ಬಿದ ಮಾಂಸವಿದ್ದ ಲಕ್ಷಣವಾದ ಏಳು ಹಸುಗಳು ನದಿಯೊ ಳಗಿಂದ ಏರಿಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು. ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬಡಕಲಾದ ಬೇರೆ ಏಳು ಹಸುಗಳು ಏರಿಬಂದವು. ಅಂಥಾ ಬಡಕಲಾದ ಹಸುಗಳನ್ನು ನಾನು ಐಗುಪ್ತ ದೇಶದಲ್ಲಿ ಎಲ್ಲಿಯೂ ನೋಡಿದ್ದಿಲ್ಲ. ಅವಲಕ್ಷಣ ವಾದ ಮತ್ತು ಬಡಕಲಾದ ಹಸುಗಳು ಮೊದಲನೆಯ ಕೊಬ್ಬಿದ ಆ ಏಳು ಹಸುಗಳನ್ನು ತಿಂದುಬಿಟ್ಟವು; ಇವು ಅವುಗಳನ್ನು ತಿಂದಮೇಲೆ ಅವು ತಿಂದಹಾಗೆ ತೋರಲಿಲ್ಲ. ಆದರೆ ಅವು ಮೊದಲಿನಂತೆ ಬಡಕ ಲಾಗಿಯೇ ಇದ್ದವು. ತರುವಾಯ ನಾನು ಎಚ್ಚೆತ್ತೆನು. ನಾನು ಕನಸಿನಲ್ಲಿ ನೋಡಿದಾಗ ಇಗೋ, ಒಂದೇ ದಂಟಿನಲ್ಲಿ ಒಳ್ಳೇ ಪುಷ್ಟಿಯುಳ್ಳ ಏಳು ತೆನೆಗಳು ಎದ್ದವು. ಇಗೋ, ಮೂಡಣ ಗಾಳಿಯಿಂದ ಬತ್ತಿ ಹೋಗಿ ಬಡಕಲಾದ ಏಳು ತೆನೆಗಳು ಅವುಗಳ ತರುವಾಯ ಮೊಳೆತವು. ಆ ಬಡಕಲಾದ ಏಳು ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ನುಂಗಿದವು. ನಾನು ಇದನ್ನು ಮಂತ್ರವಾದಿಗಳಿಗೆ ತಿಳಿಯಪಡಿಸಿದಾಗ ಅದರ ಅರ್ಥವನ್ನು ನನಗೆ ಹೇಳುವವರು ಯಾರೂ ಇರಲಿಲ್ಲ. ಆಗ ಯೋಸೇಫನು ಫರೋಹನಿಗೆ--ಫರೋ ಹನ ಕನಸು ಒಂದೇ; ದೇವರು ಮಾಡುವದಕ್ಕಿರು ವದನ್ನು ಫರೋಹನಿಗೆ ತಿಳಿಸಿದ್ದಾನೆ. ಆ ಏಳು ಒಳ್ಳೇ ಹಸುಗಳು ಏಳು ವರುಷಗಳು; ಏಳು ಒಳ್ಳೇ ತೆನೆಗಳು ಏಳು ವರುಷಗಳೇ; ಅದು ಒಂದೇ ಕನಸು. ಅವುಗಳ ತರುವಾಯ ಏರಿಬಂದ ಬಡಕಲಾದ ಕೆಟ್ಟ ಏಳು ಹಸುಗಳು ಏಳು ವರುಷಗಳು. ಮೂಡಣ ಗಾಳಿಯಿಂದ ಬತ್ತಿಹೋದ ಏಳು ಬಡಕಲಾದ ತೆನೆಗಳು ಬರವು ಇರುವ ಏಳು ವರುಷಗಳು ಅಂದನು. ನಾನು ಫರೋಹನಿಗೆ ಹೇಳಿದ ಮಾತು ಇದೇ--ದೇವರು ಮಾಡುವದಕ್ಕಿರುವದನ್ನು ಫರೋಹನಿಗೆ ತೋರಿಸಿದ್ದಾನೆ. ಇಗೋ, ಐಗುಪ್ತದೇಶದಲ್ಲೆಲ್ಲಾ ಮಹಾ ಸುಭಿಕ್ಷೆವರುಷಗಳು ಬರುತ್ತವೆ. ಅವುಗಳ ಹಿಂದೆ ಏಳು ವರುಷಗಳ ಬರಗಾಲ ಬರುತ್ತವೆ. ಆಗ ಐಗುಪ್ತದಲ್ಲಿದ್ದ ಸುಭಿಕ್ಷೆಯು ಮರೆಯುವದು. ಇದಲ್ಲದೆ ಬರಗಾಲವು ದೇಶವನ್ನು ನಾಶಮಾಡುವದು. ತರುವಾಯ ಬರಗಾಲವು ಮಹಾಕಠಿಣವಾಗಿರು ವದರಿಂದ ಸುಭಿಕ್ಷೆಯ ಕಾಲದ ನೆನಪು ದೇಶದಲ್ಲಿ ಇರದೆ ಹೋಗುವದು. ಇದಲ್ಲದೆ ಆ ಕನಸು ಫರೋಹನಿಗೆ ಎರಡು ಸಾರಿ ಬಿದ್ದದರಿಂದ ಆ ಕಾರ್ಯವು ದೇವರಿಂದ ಸ್ಥಿರಪಡಿಸಲ್ಪಟ್ಟಿದೆ; ಆದದ ರಿಂದ ದೇವರು ಅದನ್ನು ಬೇಗನೆ ನೆರವೇರಿಸುವನು. ಹೀಗಿರುವದರಿಂದ ಈಗ ಫರೋಹನು ವಿವೇಕಿ ಯಾದ ಬುದ್ಧಿಯುಳ್ಳ ಮನುಷ್ಯನನ್ನು ನೋಡಿ ಅವನನ್ನು ಐಗುಪ್ತದೇಶದ ಮೇಲೆ ನೇಮಿಸಲಿ. ಫರೋಹನು ಅಧಿಕಾರಗಳನ್ನು ನೇಮಿಸಿ ದೇಶದ ಮೇಲಿಟ್ಟು ಸುಭಿಕ್ಷೆಯ ಏಳುವರುಷಗಳಲ್ಲಿ ಐಗುಪ್ತದೇಶದ ಐದರಲ್ಲಿ ಒಂದು ಭಾಗ ಬೆಳೆಯನ್ನು ತಕ್ಕೊಳ್ಳಲಿ. ಅವರು ಮುಂಬರುವ ಈ ಒಳ್ಳೇ ವರುಷಗಳ ಆಹಾರವನ್ನೆಲ್ಲಾ ಕೂಡಿಸಿ ಫರೋಹನ ಕೈಕೆಳಗೆ ಧಾನ್ಯವನ್ನು ಪಟ್ಟಣಗಳಲ್ಲಿ ಇಟ್ಟುಕೊಂಡು ಕಾಯಲಿ. ಐಗುಪ್ತದಲ್ಲಿ ಬರುವದ ಕ್ಕಿರುವ ಬರಗಾಲದ ಏಳು ವರುಷಗಳಲ್ಲಿ ದೇಶವು ಹಾಳಾಗದ ಹಾಗೆ ಆಹಾರವು ದೇಶಕ್ಕೆ ಸಂಗ್ರಹವಾಗಿ ರುವದು ಅಂದನು. ಈ ಮಾತು ಫರೋಹನಿಗೂ ಅವನ ಸೇವಕ ರಿಗೂ ಒಳ್ಳೆಯದೆಂದು ತೋಚಿತು. ಫರೋಹನು ತನ್ನ ಸೇವಕರಿಗೆಯೋಸೇಫನಂತೆ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ ಅಂದನು. ಫರೋಹನು ಯೋಸೇಫನಿಗೆ--ದೇವರು ನಿನಗೆ ಇವುಗಳೆನ್ನಲ್ಲಾ ತೋರಿಸಿದ ಮೇಲೆ ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ. ನೀನೇ ನನ್ನ ಮನೆಯ ಮೇಲಿರಬೇಕು. ನಿನ್ನ ಮಾತಿನ ಪ್ರಕಾರ ನನ್ನ ಜನರೆಲ್ಲಾ ಆಳಲ್ಪಡಲಿ; ಸಿಂಹಾಸನದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು ಅಂದನು. ಇದಲ್ಲದೆ ಫರೋಹನು ಯೋಸೇಫನಿಗೆ--ನೋಡು, ನಾನು ನಿನ್ನನ್ನು ಐಗುಪ್ತದೇಶದ ಮೇಲೆಲ್ಲಾ ನೇಮಿಸಿದ್ದೇನೆ ಅಂದನು. ಇದಲ್ಲದೆ ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು ನಾರುಮಡಿಯ ವಸ್ತ್ರವನ್ನು ತೊಡಿಸಿ ಚಿನ್ನದ ಸರವನ್ನು ಅವನ ಕೊರಳಿಗೆ ಹಾಕಿದನು. ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂರಿಸಿ ದಾಗ--ಅವನ ಮುಂದೆ ಮೊಣಕಾಲೂರಿರಿ ಎಂದು ಜನರು ಕೂಗಿದರು. ಹೀಗೆ ಅವನನ್ನು ಐಗುಪ್ತ ದೇಶದ ಮೇಲೆಲ್ಲಾ ಆಳುವವನನ್ನಾಗಿ ನೇಮಿಸಿದನು. ಇದಲ್ಲದೆ ಫರೋಹನು ಯೋಸೇಫನಿಗೆ--ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಐಗುಪ್ತದೇಶ ದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ ಕಾಲ ನ್ನಾಗಲಿ ಎತ್ತಬಾರದು ಅಂದನು. ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು. ಯೋಸೇಫನು ಐಗುಪ್ತದ ಅರಸನಾದ ಫರೋ ಹನ ಮುಂದೆ ನಿಂತಾಗ ಮೂವತ್ತು ವರುಷದ ವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶವನ್ನೆಲ್ಲಾ ಸಂಚರಿಸಿದನು.
- Psalm 40:1–3 ಕೀರ್ತನೆಗಳು 40:1–3ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು. ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು. ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
- Psalm 37:40 ಕೀರ್ತನೆಗಳು 37:40ಕರ್ತನು ಅವರಿಗೆ ಸಹಾಯಮಾಡಿ ಅವರನ್ನು ತಪ್ಪಿಸುವನು; ದುಷ್ಟರಿಂದ ಅವರನ್ನು ತಪ್ಪಿಸಿ ರಕ್ಷಿಸುವನು; ಅವರು ಆತನಲ್ಲಿ ಭರವಸವಿಟ್ಟಿದ್ದಾರೆ.
- Revelation 7:14 ಪ್ರಕಟನೆ 7:14ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.
Original words (Greek)
- And · G2532καί kaí
- delivered · G1807ἐξαιρέω exairéō
- him · G846αὐτός autós
- of · G1537ἐκ ek
- all · G3956πᾶς pâs
- his · G846αὐτός autós
- afflictions · G2347θλῖψις thlîpsis
- and · G2532καί kaí
- gave · G1325δίδωμι dídōmi
- him · G846αὐτός autós
- favour · G5485χάρις cháris
- and · G2532καί kaí
- wisdom · G4678σοφία sophía
- of · G1726ἐναντίον enantíon
- Pharaoh · G5328Φαραώ Pharaṓ
- king · G935βασιλεύς basileús
- Egypt · G125Αἴγυπτος Aígyptos
- and · G2532καί kaí
- made · G2525καθίστημι kathístēmi
- him · G846αὐτός autós
- governor · G2233ἡγέομαι hēgéomai
- over · G1909ἐπί epí
- Egypt · G125Αἴγυπτος Aígyptos
- and · G2532καί kaí
- all · G3650ὅλος hólos
- his · G846αὐτός autós
- house · G3624οἶκος oîkos