Amos · chapter 2 · verse 6
Amos 2:6 in Kannada
ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅವರನ್ನು ದಂಡನೆಯಿಂದ ತಪ್ಪಿಸುವದಿಲ್ಲ. ಅವರು ನೀತಿವಂತರನ್ನು ಬೆಳ್ಳಿಗೆ ಬಡವರನ್ನು ಕೆರಗಳ ಜೋಡಿಗೆ ಮಾರಿದರು.
Kartanu heege heluttaane--israayelina mooru mattu naalkara aparaadhagala nimittavaagi naanu avarannu dandaneyinda tappisuvadilla. Avaru neetivantarannu bellige badavarannu keragala jodige maaridaru.
Amos 2:6 in English
- King James Version (KJV)
- Thus saith the LORD; For three transgressions of Israel, and for four, I will not turn away [the punishment] thereof; because they sold the righteous for silver, and the poor for a pair of shoes;
- World English Bible (WEB)
- The LORD says: “For three transgressions of Israel, yes, for four, I will not turn away its punishment, because they have sold the righteous for silver, and the needy for a pair of sandals;
- American Standard Version (ASV)
- Thus saith Jehovah: For three transgressions of Israel, yea, for four, I will not turn away the punishment thereof; because they have sold the righteous for silver, and the needy for a pair of shoes—
- Bible in Basic English (BBE)
- These are the words of the Lord: For three crimes of Israel, and for four, I will not let its fate be changed; because they have given the upright man for silver, and the poor for the price of two shoes;
- Darby Translation (DBY)
- Thus saith Jehovah: For three transgressions of Israel, and for four, I will not revoke its sentence; because they have sold the righteous for silver, and the needy for a pair of shoes;
- Webster's Bible (WBS)
- Thus saith the LORD; For three transgressions of Israel, and for four, I will not turn away [their punishment] : because they sold the righteous for silver, and the poor for a pair of shoes;
- Young's Literal Translation (YLT)
- Thus said Jehovah: For three transgressions of Israel, And for four, I do not reverse it, Because of their selling for silver the righteous, And the needy for a pair of sandals.
Read in context
- 4ಕರ್ತನು ಹೀಗೆ ಹೇಳುತ್ತಾನೆ--ಯೆಹೂದದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ಅದಕ್ಕಾಗುವ ದಂಡನೆಯನ್ನು ತಪ್ಪಿಸುವದಿಲ್ಲ; ಅವರು ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳುಗಳೇ ಇವರನ್ನು ತಪ್ಪಿಗಸ್ತರನ್ನಾಗಿ ಮಾಡಿವೆ.
- 5ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು; ಅದು ಯೆರೂಸಲೇಮಿನ ಅರಮನೆ ಗಳನ್ನು ನುಂಗಿ ಬಿಡುವದು.
- 6ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅವರನ್ನು ದಂಡನೆಯಿಂದ ತಪ್ಪಿಸುವದಿಲ್ಲ. ಅವರು ನೀತಿವಂತರನ್ನು ಬೆಳ್ಳಿಗೆ ಬಡವರನ್ನು ಕೆರಗಳ ಜೋಡಿಗೆ ಮಾರಿದರು.
- 7ಅವರು ಬಡವರ ತಲೆಯ ಮೇಲಿರುವ ಭೂಮಿಯ ಧೂಳನ್ನು ಆಶಿಸಿ ದೀನರ ಮಾರ್ಗವನ್ನು ತಪ್ಪಿಸುತ್ತಾರೆ; ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಗೊಳಿಸುವದಕ್ಕೆ ತಂದೆ ಮಗ ಇಬ್ಬರೂ ಒಬ್ಬ ಯೌವನಸ್ಥಳ ಬಳಿಗೆ ಹೋಗುತ್ತಾರೆ.
- 8ಅವರು ಅಡ ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ ಮತ್ತು ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿ ಯುತ್ತಾರೆ. ಬಳಿಯಲ್ಲೂ ಮಲಗುತ್ತಾರೆ ಮತ್ತು ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿ ಯುತ್ತಾರೆ.
Cross references
- Joel 3:3 ಯೋವೇಲ 3:3ನನ್ನ ಜನರಿ ಗೋಸ್ಕರ ಚೀಟು ಹಾಕಿ ಹುಡುಗನನ್ನು ಸೂಳೆಗಾಗಿ ಕೊಟ್ಟು, ಹುಡುಗಿಯನ್ನು ದ್ರಾಕ್ಷಾರಸಕ್ಕಾಗಿ ಮಾರಿ ಅವರು ಕುಡಿಯುವ ಹಾಗೆ ಮಾರಿದ್ದಾರಲ್ಲಾ?
- Micah 3:2–3 ಮೀಕ 3:2–3ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.
- Amos 5:11–12 ಆಮೋಸ 5:11–12ಆದಕಾರಣ ನೀವು ಬಡವನನ್ನು ತುಳಿದವರಾಗಿ ಗೋಧಿಯ ಹೊರೆಗಳನ್ನು ಅವನಿಂದ ಕಸಿದುಕೊಂಡು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಲ್ಲಾ; ನೀವು ಅವುಗಳಲ್ಲಿ ವಾಸಮಾಡದೆ ಇರುವಿರಿ; ರಮ್ಯವಾದ ದ್ರಾಕ್ಷೆಯತೋಟ ಗಳನ್ನು ನೆಟ್ಟಿರಲ್ಲಾ; ಅವುಗಳ ದ್ರಾಕ್ಷಾರಸವನ್ನು ಕುಡಿ ಯಲಾರಿರಿ. ನಿಮ್ಮ ಅನೇಕ ಅಪರಾಧಗಳನ್ನೂ ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು; ಅವರು ನೀತಿವಂತರನ್ನು ಬಾಧೆಪಡಿಸಿ ಲಂಚವನ್ನು ತೆಗೆದು ಕೊಂಡರು; ಬಾಗಲ ಬಳಿಯಲ್ಲಿರುವ ಬಡವರ ನ್ಯಾಯ ವನ್ನು ತೀರಿಸದೆ ಅವರು ಕಳುಹಿಸಿಬಿಟ್ಟರು.
- Hosea 4:1–2 ಹೋಶೇಯ 4:1–2ಇಸ್ರಾಯೇಲಿನ ಮಕ್ಕಳಾದ ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇಶದ ನಿವಾಸಿಗಳ ಸಂಗಡ ಕರ್ತನಿಗೆ ತರ್ಕವುಂಟು; ದೇಶದಲ್ಲಿ ಸತ್ಯವೂ ಇಲ್ಲ, ಕನಿಕರವೂ ಇಲ್ಲ, ಇಲ್ಲವೆ ದೇವರ ತಿಳುವಳಿ ಕೆಯೂ ಇಲ್ಲ. ಆಣೆಯಿಡುವದೂ ಸುಳ್ಳು ಹೇಳು ವದೂ ಕೊಲ್ಲುವದೂ ಕದಿಯುವದೂ ವ್ಯಭಿಚಾರ ಮಾಡುವದೂ ಹೆಚ್ಚಾಗಿಬಿಟ್ಟಿವೆ; ರಕ್ತಕ್ಕೆ ರಕ್ತ ಸೇರುತ್ತದೆ;
- Isaiah 5:22–23 ಯೆಶಾಯ 5:22–23ದ್ರಾಕ್ಷಾರಸ ಕುಡಿಯುವದರಲ್ಲಿ ಶೂರರೂ ಮದ್ಯ ಮಿಶ್ರಣಗಳಲ್ಲಿ ಸಾಹಸಿಗಳೂ ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ ಮತ್ತು ನೀತಿಯನ್ನು ನೀತಿವಂತನಿಂದ ತೆಗೆದುಹಾಕುವವರಿಗೂ ಅಯ್ಯೋ!
- Joel 3:6 ಯೋವೇಲ 3:6ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ.
- Hosea 4:11–14 ಹೋಶೇಯ 4:11–14ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ. ನನ್ನ ಜನರು ಮರದ ತುಂಡುಗಳಿಗೆ ಆಲೋಚನೆ ಕೇಳುತ್ತಾರೆ; ಅವರ ಕೋಲು ಅವರಿಗೆ ತಿಳಿಸುತ್ತದೆ. ವ್ಯಭಿಚಾರದ ಆತ್ಮಗಳು ಅವರನ್ನು ತಪ್ಪಿಸಿಬಿಟ್ಟಿದೆ; ಅವರು ತಮ್ಮ ದೇವರ ಕೈಕೆಳಗಿರದೆ ವ್ಯಭಿಚಾರ ಮಾಡಿದ್ದಾರೆ. ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸು ತ್ತಾರೆ; ಗುಡ್ಡಗಳ ಮೇಲೆ ಧೂಪವನ್ನು ಸುಡುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ಚೆನ್ನಾಗಿರುವದರಿಂದ ಹಾಗೆ ಮಾಡುತ್ತಾರೆ; ಆದದರಿಂದ ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವರು; ನಿಮ್ಮ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವರು. ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವಾಗಲೂ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವಾಗಲೂ ನಾನು ಶಿಕ್ಷಿಸುವದಿಲ್ಲ. ಯಾಕಂದರೆ ಸೂಳೆಯರ ಸಂಗಡ ತಮ್ಮನ್ನು ಬೇರ್ಪಡಿಸಿಕೊಂಡಿ ದ್ದಾರೆ; ಸೂಳೆಯರ ಸಂಗಡ ಬಲಿಅರ್ಪಿಸುತ್ತಾರೆ; ಆದದರಿಂದ ವಿವೇಕವಿಲ್ಲದ ಜನರು ಬಿದ್ದು ಹೋಗು ವರು.
- Hosea 8:4–6 ಹೋಶೇಯ 8:4–6ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ. ಓ ಸಮಾ ರ್ಯವೇ, ನಿನ್ನ ಬಸವನನ್ನು ನಾನು ತಳ್ಳಿಹಾಕಿದ್ದೇನೆ; ನನ್ನ ಕೋಪವು ಅವರ ಮೇಲೆ ಉರಿಯುತ್ತದೆ; ಅವರು ನಿರಪರಾಧಿಗಳಾಗದೆ ಇರುವದು ಎಷ್ಟರ ವರೆಗೆ? ಅದು ಇಸ್ರಾಯೇಲ್ಯರಿಂದಲೂ ಆಗಿದೆ; ಕೆಲಸಗಾರನು ಅದನ್ನು ಮಾಡಿದನು, ಆದ್ದರಿಂದ ಅದು ದೇವರಲ್ಲ; ಆದರೆ ಸಮಾರ್ಯದ ಕರುವು ಪುಡಿಪುಡಿಯಾಗಿ ಮುರಿಯಲ್ಪಡುವದು.
- Amos 8:4–6 ಆಮೋಸ 8:4–6ಬಡವರನ್ನು ನುಂಗುವವರೇ, ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ, ಇದನ್ನು ಕೇಳಿರಿ. ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಗೋಧಿ ಯನ್ನು ಇಡುವ ಹಾಗೆ ಸಬ್ಬತ್ತು ಯಾವಾಗ ತೀರುವದೆಂದೂ ಎಫವನ್ನು ಚಿಕ್ಕದಾಗಿಯು ಶೆಕೇಲನ್ನು ದೊಡ್ಡದಾಗಿಯು ಕಳ್ಳತ್ರಾಸುಗಳನ್ನು ಮೋಸಕ್ಕಾಗಿ ಮಾಡೋಣವೆಂದೂ ಬಡವರನ್ನು ಬೆಳ್ಳಿಗೆ ದರಿದ್ರ ರನ್ನು ಕೆರಗಳ ಜೋಡಿಗೆ ಕೊಂಡುಕೊಂಡು ಗೋಧಿಯ ಕಸವನ್ನು ಮಾರೋಣವೆಂದೂ ಹೇಳುತ್ತೀರಲ್ಲಾ?
- 2 Kings 17:7–18 2 ಅರಸುಗಳು 17:7–18ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು-- ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು. ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ.
- Amos 6:3–7 ಆಮೋಸ 6:3–7ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ. ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ. ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ. ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ. ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು; ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು.
- Micah 6:10–16 ಮೀಕ 6:10–16ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ? ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ? ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ. ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು. ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು. ನೀನು ಬೀಜ ಬಿತ್ತಿ ಕೊಯ್ಯದೆ ಇರುವಿ; ಇಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವಿ; ದ್ರಾಕ್ಷಾರಸ ಮಾಡಿ ಕುಡಿಯದೆ ಇರುವಿ.ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ. ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
Original words (Hebrew)
- saith · H559אָמַר ʼâmar
- three · H7969שָׁלוֹשׁ shâlôwsh
- transgressions · H6588פֶּשַׁע peshaʻ
- Israel · H3478יִשְׂרָאֵל Yisrâʼêl
- four · H702אַרְבַּע ʼarbaʻ
- away · H7725שׁוּב shûwb
- sold · H4376מָכַר mâkar
- righteous · H6662צַדִּיק tsaddîyq
- silver · H3701כֶּסֶף keçeph
- poor · H34אֶבְיוֹן ʼebyôwn
- shoes · H5275נַעַל naʻal